ಸ್ವಂತ ಜಮೀನು ಹೊಂದಿರುವ ರೈತರಿಗೆ ಸಿಹಿ ಸುದ್ದಿ! ಸಿಗಲಿದೆ ಡಿಜಿಟಲ್ ಜಮೀನು ಪತ್ರ

ಸ್ವಂತ ಜಮೀನು (own agriculture land) ಹೊಂದಿರುವವರಿಗೆ ಕಂದಾಯ ಇಲಾಖೆ ಪ್ರಮುಖ ಸುದ್ದಿ ಒಂದನ್ನು ನೀಡಿದೆ

Bengaluru, Karnataka, India
Edited By: Satish Raj Goravigere

ರೈತ (farmers) ದೇಶದ ಜೀವಾಳ. ಆದರೆ ರೈತ ತನ್ನ ಜೀವನವನ್ನು ಸಾಕಷ್ಟು ಬಾರಿ ಸಂಕಷ್ಟದಲ್ಲೇ ಕಳೆಯಬೇಕಾಗುತ್ತದೆ. ಇದಕ್ಕೆ ಮುಖ್ಯವಾದ ಕಾರಣ ರೈತರ ಬೆಳೆ ಎನ್ನುವುದು ಅವಲಂಬಿತವಾಗಿರುವುದು ಮಳೆಯ ಮೇಲೆ.

ಅತಿವೃಷ್ಟಿ ಅಥವಾ ಅನಾವೃಷ್ಟಿ ಆದಾಗ ರೈತರ ಬೆಳೆ ನಾಶವಾಗುತ್ತದೆ, ಸಾಕಷ್ಟು ಬಾರಿ ಬೆಳೆ ಚೆನ್ನಾಗಿ ಬಂದಿದ್ದರು ಕೂಡ ಅದಕ್ಕೆ ತಕ್ಕದಾದ ಬೆಲೆ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ರೈತರು ಕೃಷಿಗಾಗಿ ಮಾಡಿಕೊಂಡಿರುವ ಸಾಲ (Loan) ತೀರಿಸಲು ಕೂಡ ಕಷ್ಟ ಪಡಬೇಕಾದ ಪರಿಸ್ಥಿತಿ ಬರುತ್ತದೆ.

Wrong name on your land Documents, Change easily like this

ಈ ಕಾರಣಕ್ಕೆ ರೈತರ ಸಂಕಷ್ಟವನ್ನು ಪರಿಹರಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.

ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆಗೆ ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ!

ಜಮೀನು ಹೊಂದಿರುವವರಿಗೆ ಸಿಹಿ ಸುದ್ದಿ ಕೊಟ್ಟ ಕಂದಾಯ ಇಲಾಖೆ! (Revenue department good news for farmers)

ಸ್ವಂತ ಜಮೀನು (own agriculture land) ಹೊಂದಿರುವವರಿಗೆ ಕಂದಾಯ ಇಲಾಖೆ ಪ್ರಮುಖ ಸುದ್ದಿ ಒಂದನ್ನು ನೀಡಿದೆ, ಸಾಕಷ್ಟು ಜನ ರೈತರು ತಮ್ಮ ಸ್ವಂತ ಜಮೀನು ಹೊಂದಿರುತ್ತಾರೆ ಆದರೆ ಹಲವು ವರ್ಷಗಳಿಂದ ಅಥವಾ ತಲೆತಲಾಂತರಗಳಿಂದ ಒಂದೇ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರು ತಮ್ಮ ಜಮೀನು ಪತ್ರವನ್ನು (Property Documents) ಹೊಂದಿರುವುದಿಲ್ಲ.

ಅದು ಅವರದ್ದೇ ಸ್ವಂತ ಜಮೀನು ಆಗಿದ್ದರೂ ಕೂಡ ತಮ್ಮ ಜಮೀನಿನ ಬಗ್ಗೆ ಎಲ್ಲಾ ಮಾಹಿತಿಗಳು ರೈತರ ಬಳಿ ಇರುವುದಿಲ್ಲ, ಉದಾಹರಣೆಗೆ ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಇದೆಯೇ?

ಜಮೀನಿನ ಸುತ್ತ ಇರುವ ಜಮೀನು ಯಾರದ್ದು? ಜಮೀನಿನ ಸುತ್ತ ಎಷ್ಟು ಮರಗಳಿವೆ, ಹೀಗೆ ಮೊದಲಾದ ಮಾಹಿತಿಗಳನ್ನು ತಿಳಿದುಕೊಳ್ಳಲು ರೈತರ ಬಳಿ ಅವರ ಜಮೀನಿನ ದಾಖಲೆ ಇರಬೇಕು. ಜಮೀನಿನ ಸರ್ವೇ ನಂಬರ್ (survey number) ಇದ್ರೆ ಸಾಕು ಆ ಜಮೀನಿನ ಬಗ್ಗೆ ಎಲ್ಲಾ ಮಾಹಿತಿಗಳು ಕೂಡ ಲಭ್ಯವಾಗುತ್ತದೆ

ಗೃಹಲಕ್ಷ್ಮಿ ಹಣ ಕೊನೆಗೂ ಸಿಗದೇ ಇದ್ರೆ, ನಿಮ್ಮ ಗಂಡನ ಖಾತೆಗೆ ಬರುವಂತೆ ಮಾಡಿಕೊಳ್ಳಿ!

Property Documentsಆದರೆ ಬಹಳ ಹಳೆಯ ಜಮೀನು ಹೊಂದಿರುವ ರೈತರು ತಮ್ಮ ಯಾವುದೇ ದಾಖಲೆಗಳನ್ನು ಕೂಡ ಇಟ್ಟುಕೊಂಡಿರುವುದಿಲ್ಲ ಇಂತಹ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಜಮೀನಿನ ವಾಜ್ಯಗಳಾದಾಗ ತಮ್ಮ ಜಮೀನು ಇದು ಎಂದು ಸಾಬೀತುಪಡಿಸಿಕೊಳ್ಳಲು ಬೇಕಾಗಿರುವ ದಾಖಲೆಗಳು ಕೂಡ ಇರುವುದಿಲ್ಲ, ಇನ್ನು ಮುಂದೆ ಇಂತಹ ಸಮಸ್ಯೆ ರೈತರಿಗೆ ಆಗಬಾರದು ಎನ್ನುವ ಕಾರಣಕ್ಕೆ ಕಂದಾಯ ಇಲಾಖೆ ಮಹತ್ವದ ಅಭಿಯಾನ ಒಂದನ್ನು ಕೈಗೊಳ್ಳಲು ಮುಂದಾಗಿದೆ.

20,000 ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಗ್ರೀನ್ ಸಿಗ್ನಲ್; ನಿಮ್ಮ ಹೆಸರು ಇದೆಯಾ ನೋಡಿಕೊಳ್ಳಿ

ಸರ್ವೆ ನಂಬರ್ಗಳ ಡಿಜಿಟಲೀಕರಣ! (Survey number digitalisation)

ಕಂದಾಯ ಇಲಾಖೆಯಲ್ಲಿ ಎಲ್ಲಾ ರೈತರ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಇರುತ್ತವೆ. ಆದರೆ ಪುಸ್ತಕದ ರೂಪದಲ್ಲಿ ಇರುವ ಇದ್ಯಲ್ಲ ದಾಖಲೆಗಳನ್ನು ಡಿಜಿಟಲೀಕರಣ (utilization of documents) ಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ.

ಸುಮಾರು 1.2 ಕೋಟಿ ರೈತರ ಸರ್ವೇ ನಂಬರ್ ಗಳನ್ನು ಡಿಜಿಟಲ್ ಮಾಡಿಸಿ ರೈತರಿಗೆ ನೀಡಲು ಮಹತ್ತರವಾದ ಅಭಿಯಾನ ಕೈಗೊಂಡಿರುವುದಾಗಿ ಕಂದಾಯ ಇಲಾಖೆ ತಿಳಿಸಿದೆ.

ಕಂಪ್ಯೂಟರ್ನಲ್ಲಿಯೇ ತಿಳಿದುಕೊಳ್ಳಿ ಜಮೀನಿನ ಬಗೆಗಿನ ಮಾಹಿತಿ!

ಪ್ರಸ್ತುತ ಕಂದಾಯ ಇಲಾಖೆಯ ಸಚಿವರಾಗಿರುವ ಕೃಷ್ಣಭೈರೇಗೌಡ ಅವರು ರೈತರಿಗೆ ಖುಷಿ ನೀಡುವಂತಹ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ, ಇನ್ನು ಮುಂದೆ ರೈತರು ಕಂಪ್ಯೂಟರ್ ಅಥವಾ ಮೊಬೈಲ್ ಸಹಾಯದಿಂದ ತಮ್ಮ ಜಮೀನಿನ ಬಗ್ಗೆ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಸರ್ಕಾರದಿಂದ ಸಿಗುವಂತಹ ಸಾಲ ಸೌಲಭ್ಯಗಳನ್ನು (Loan Facility) ಪಡೆದುಕೊಳ್ಳಲು ಕೂಡ ಇದು ಸಹಾಯಕವಾಗಲಿದೆ.

ರೈತರ ಜಮೀನಿಗೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಈ ಹೊಸ ಕ್ರಮವನ್ನು ಕೈಗೊಂಡಿದೆ, ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಕೆಲವು ತಾಲೂಕುಗಳ ರೈತರ ಸರ್ವೆ ನಂಬರ್ ಡಿಜಿಟಲೀಕರಣ ಗೊಳಿಸಲಾಗುತ್ತದೆ. ಹಾಗೂ ಇದನ್ನ ರೈತರಿಗೆ ನೀಡಲಾಗುತ್ತದೆ.

ಈ ಯೋಜನೆ ಸಕ್ಸಸ್ ಆದರೆ ಮುಂದೆ ಯಾವುದೇ ಸಮಸ್ಯೆ ಇಲ್ಲದೆ ರೈತರು ತಮ್ಮ ಜಮೀನಿನ ಮಾಹಿತಿ ಪಡೆದುಕೊಳ್ಳಲು ರಾಜ್ಯಾದ್ಯಂತ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ.

ಇಂಥವರ ಬಳಿ ಬಿಪಿಎಲ್ ಕಾರ್ಡ್ ಇದ್ರೂ ವೇಸ್ಟ್, ಇನ್ಮುಂದೆ ಸಿಗಲ್ಲ ಯಾವುದೇ ಯೋಜನೆ ಹಣ

2024 ಡಿಸೆಂಬರ್ ಹೊತ್ತಿಗೆ ಅಂದರೆ ಇನ್ನೂ ಒಂದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ಜಮೀನು ಹೊಂದಿರುವ ರೈತ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಇನ್ನು ಮುಂದೆ ರೈತರು ಯಾವುದೇ ಹಳೆಯ ಪುಸ್ತಕದ ರೂಪದ ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ, ರೈತರ ಜಮೀನಿಗೆ (Agriculture Land) ಸಂಬಂಧಪಟ್ಟ ಮಾಹಿತಿಗಳನ್ನು ಸ್ಕ್ಯಾನ್ ಮಾಡಿ ಸರ್ಕಾರದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ

ಇದನ್ನು ಯಾವಾಗ ಬೇಕಾದರೂ ರೈತರು ಎಲ್ಲಿ ಬೇಕಾದರೂ ಡೌನ್ಲೋಡ್ (download) ಮಾಡಿಕೊಂಡು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕಂದಾಯ ಇಲಾಖೆ ತಿಳಿಸಿದೆ.

Good news for farmers who have their own land, You will get a digital land deed