Karnataka NewsBangalore News

ಇಂತಹವರಿಗೆ ಅನ್ನಭಾಗ್ಯ ಹಣ ₹170 ರೂಪಾಯಿ ಸಿಗೋಲ್ಲ! ಯೋಜನೆಯಲ್ಲಿ ಬಿಗ್ ಟ್ವಿಸ್ಟ್

ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು ಇಲಾಖೆಯ ಜಂಟಿ ನಿರ್ದೇಶಕ ಮೊಹಮ್ಮದ್ ಖೈಜರ್ ಅನ್ನಭಾಗ್ಯ ಯೋಜನೆಯ (Annabhagya scheme) ಡಿ ಬಿ ಟಿ ಗೆ ಸಂಬಂಧಿಸಿದ ಹಾಗೆ ಮಹತ್ವದ ಮಾಹಿತಿ ಒಂದನ್ನು ನೀಡಿದ್ದಾರೆ, ಇನ್ನು ಮುಂದೆ ಈ ಕೆಲಸ ಮಾಡದೆ ಇದ್ದರೆ ನಿಮ್ಮ ಖಾತೆಗೆ ಹಣ (Bank Account) ಜಮಾ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆ ಇಂದು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ (free rice from central government) ಉಚಿತವಾಗಿ ನೀಡಿದರೆ ಪ್ರತಿ ತಿಂಗಳು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170ಗಳನ್ನು ರಾಜ್ಯ ಸರ್ಕಾರ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ.

Money of Annabhagya Yojana for the month of May is released, Check status

ಈ ಯೋಜನೆ ಆರಂಭವಾಗಿ ಕೆಲವು ತಿಂಗಳುಗಳೆ ಕಳೆದಿವೆ ಆದರೂ ಕೂಡ ಇನ್ನೂ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ಜಮಾ (Money Deposit) ಆಗಿದೆಯೇ ಎಂಬುದನ್ನು ನೋಡುವುದಾದರೆ ಉತ್ತರ ಇಲ್ಲ ಎಂಬುದೇ ಆಗಿದೆ.

ಮುಖ್ಯವಾಗಿರುವ ಕಾರಣ ಫಲಾನುಭವಿಗಳ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ (bank account and Aadhar Card link) ಆಗದೆ ಇರುವುದು. ಮ್ಯಾಪಿಂಗ್ ಸೀಡಿಂಗ್ ಹಾಗಿದ್ದರೆ ಮಾತ್ರ ಅಂಥವರ ಖಾತೆಗೆ (Bank Account) ಹಣ ಜಮಾ ಆಗುತ್ತದೆ.

ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರು ಬಿಲ್ ಬಂತಾ? ಹೀಗೆ ಮಾಡಿ ಜೀರೋ ಬಿಲ್ ಬರುತ್ತೆ

ತಾಂತ್ರಿಕ ದೋಷಗಳು ಕಾರಣ (Technical error)

ಸಾಕಷ್ಟು ಜನರ ಖಾತೆಗೆ ಹಣ ವರ್ಗಾವಣೆ ಆಗದೆ ಇರುವುದಕ್ಕೆ ತಾಂತ್ರಿಕ ದೋಷಗಳು ಕೂಡ ಪ್ರಮುಖ ಕಾರಣವಾಗಿವೆ. ಹೌದು, ಸಾಕಷ್ಟು ಜನರ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗದೇ ಇರಲು ಇದು ಕೂಡ ಪ್ರಮುಖ ಕಾರಣವಾಗಿದೆ

ಆದರೆ ಈಗಾಗಲೇ ಸರ್ಕಾರ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಫಲಾನುಭವಿಗಳಿಗೆ ಹಣ ನೀಡುವಲ್ಲಿ ಸಕ್ರಿಯವಾಗಿದೆ. ಅನ್ನಭಾಗ್ಯ ಯೋಜನೆಯ ಹಣವನ್ನು ಆರಂಭದಲ್ಲಿ ಸುಮಾರು 96 ಲಕ್ಷ ಜನರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅಕ್ಟೋಬರ್ ತಿಂಗಳ ಹೊತ್ತಿಗೆ ಒಂದು ಕೋಟಿಗೂ ಹೆಚ್ಚಿನ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ (DBT ) ಆಗಿದೆ, ಅಂದರೆ ಅಷ್ಟರ ಮಟ್ಟಿಗೆ ಜನರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗಿದೆ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಶೀಘ್ರವೇ ಸಿಗಲಿದೆ ಹೊಸ ಪಡಿತರ ಚೀಟಿ; ಬಿಗ್ ಅಪ್ಡೇಟ್

ಅನ್ನ ಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ಲ!

Annabhagya Schemeಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯಲ್ಲಿ ಮೊದಲ ಹೆಸರು ಮಹಿಳೆಯದ್ದೇ ಆಗಿರಬೇಕು ಎನ್ನುವ ನಿಯಮ ಬಂದ ನಂತರ ಪುರುಷರ ಹೆಸರಿನಲ್ಲಿ ಇದ್ದ ರೇಷನ್ ಕಾರ್ಡ್ (ration card) ಕೂಡ ತಿದ್ದುಪಡಿ ಮಾಡಲಾಗಿದೆ

ಇದರಿಂದಾಗಿ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಮಾಡುವ ಸಮಯದಲ್ಲಿ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿತ್ತು. ಏಕಾಏಕಿ ಎಲ್ಲರ ಖಾತೆಯಲ್ಲಿ ಆಗುತ್ತಿರುವ ಈ ಬದಲಾವಣೆಗಳಿಂದಾಗಿ ಸರ್ವರ್ ಸಮಸ್ಯೆ (server problem) ಉಂಟಾಗಿದೆ.

ಅಷ್ಟೇ ಅಲ್ಲದೆ ಇನ್ನೂ ಕೂಡ ಸಾಕಷ್ಟು ಜನ ತಮ್ಮ ಖಾತೆಯನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಂಡಿಲ್ಲ. ಒಂದು ವೇಳೆ ಲಿಂಕ್ ಮಾಡಿಕೊಂಡಿದ್ದರು ಕೂಡ ತಾಂತ್ರಿಕ ದೋಷದಿಂದಾಗಿ ಅದು ಖಾತೆಯಲ್ಲಿ ಕಾಣಿಸುತ್ತಿಲ್ಲ ಹೀಗಾಗಿ ಸರ್ಕಾರದಿಂದ ಹಣ ಜಮಾ ಆಗಿದ್ದರು ಕೂಡ ಬ್ಯಾಂಕ್ ಖಾತೆಗೆ ಬಂದು ತಲುಪಿಲ್ಲ.

ಗೃಹಲಕ್ಷ್ಮಿ ಅರ್ಜಿ ಅಗಸ್ಟ್ 15ಕ್ಕಿಂತ ಮೊದಲು ಸಲ್ಲಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ಸೂಚನೆ

ಸಮಸ್ಯೆ ಪರಿಹಾರವಾಗದೆ ಇದ್ದರೆ ಸಿಗುವುದಿಲ್ಲ 170 ರೂ. ಹಣ!

ಸರ್ಕಾರದ ಕೆಲಸದ ಜೊತೆಗೆ ನಿಮ್ಮ ಪ್ರಯತ್ನ ಕೂಡ ಬೇಕು ಇಲ್ಲವಾದರೆ ಹಣ ಜಮಾ ಮಾಡಲು ಸಾಧ್ಯವಿಲ್ಲ ಎಂದು ಮಹಮದ್ ಖೈಜರ್ (Mohammed Kaiser) ತಿಳಿಸಿದ್ದಾರೆ. ಯಾರ ಖಾತೆಗೆ ಹಣ ಬಂದಿಲ್ಲವೋ ಅವರು ಆಹಾರ ಇಲಾಖೆಗೆ ದೂರು ಸಲ್ಲಿಸಬಹುದು.

ಇನ್ನು ಸಾಕಷ್ಟು ರೇಷನ್ ಕಾರ್ಡ್ ಹೊಂದಿರುವವರಿಗೆ ಮೊದಲ ಕಂತಿನ ಹಣ ಬಂದಿದ್ದರು ಎರಡನೇ ಕಂತಿನಿಂದ ಹಣ ಬರುವುದು ನಿಂತು ಹೋಗಿದೆ. ಇದಕ್ಕೆ ಮುಖ್ಯವಾದ ಕಾರಣ ರೇಷನ್ ಕಾರ್ಡ್ ರದ್ದು ಪಡಿ (ration card cancellation) ಆಗಿತ್ತು

ಇನ್ನು ಈಗಾಗಲೇ ಸಾಕಷ್ಟು ರೇಷನ್ ಕಾರ್ಡ್ ಅರ್ಜಿಗಳನ್ನ ಸರ್ಕಾರ ತಿರಸ್ಕರಿಸಿದೆ. ಇನ್ನು ಹೊಸ ರೇಷನ್ ಕಾರ್ಡ್ ವಿತರಣೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ 20,000 ರೇಷನ್ ಕಾರ್ಡ್ ವಿಲೇವಾರಿ (ration card distribution) ಮಾಡಲು ಸರ್ಕಾರ ನಿರ್ಧರಿಸಿದೆ

ಇದರ ಜೊತೆಗೆ ಸದ್ಯ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗುವುದಾದರೂ ಕೂಡ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಲು ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಡಿ ಬಿ ಟಿ ಆಗಬೇಕು ಅಂದ್ರೆ ಕೂಡಲೇ ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ.

Such people do not get the Annabhagya Yojana money

Our Whatsapp Channel is Live Now 👇

Whatsapp Channel

Related Stories