ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಶೀಘ್ರವೇ ಸಿಗಲಿದೆ ಹೊಸ ಪಡಿತರ ಚೀಟಿ; ಬಿಗ್ ಅಪ್ಡೇಟ್
ಎಲ್ಲ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ (Aadhaar card) ಜೊತೆ ರೇಶನ್ ಕಾರ್ಡ್ (ration card) ಕೂಡ ಮುಖ್ಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರವು (Congress government) ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ ಮಾತಿನಂತೆ ಐದರಲ್ಲಿ ನಾಲ್ಕು ಗ್ಯಾರಂಟಿ (guarantee schemes) ಯೋಜನೆಗಳನ್ನು ಜಾರಿಗೆ ತಂದಿದೆ.
ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಹೀಗೆ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಎಲ್ಲ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ (Aadhaar card) ಜೊತೆ ರೇಶನ್ ಕಾರ್ಡ್ (ration card) ಕೂಡ ಮುಖ್ಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ.
ಹಾಗಾಗಿ ಜನರು ಪಡಿತರ ಚೀಟಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೊಸ ಕಾರ್ಡ್ ಮಾಡಿಸುವವರು ಹಾಗೂ ಇದ್ದ ಪಡಿತರ ಕಾರ್ಡ್ ತಿದ್ದುಪಡಿ (ration card correction) ಮಾಡಲಾರದೆ ಒದ್ದಾಡುತ್ತಿದ್ದರು. ಇದನ್ನು ಅರಿತ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದೆ.
ಗೃಹಲಕ್ಷ್ಮಿ ಅರ್ಜಿ ಅಗಸ್ಟ್ 15ಕ್ಕಿಂತ ಮೊದಲು ಸಲ್ಲಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ಸೂಚನೆ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಸಿಹಿ ಸುದ್ದಿ: (good news for new ration card applicant)
ಎಲ್ಲ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಅವಶ್ಯವಾಗಿರುವುದರಿಂದ ರಾಜ್ಯದಲ್ಲಿ ಪಡಿತರ ಚೀಟಿ ಮಾಡಿಸಲು ಜನರು ಮುಗಿ ಬೀಳುತ್ತಿದ್ದಾರೆ. ಯಾಕೆಂದರೆ ನಾವು ಸಹ ಎಲ್ಲ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬೇಕು ಎಂದು ಜನರು ಬಯಸುತ್ತಿದ್ದಾರೆ.
ಸರ್ಕಾರವು ಸಹ ತಮ್ಮ ಯೋಜನೆಗಳನ್ನು ಎಲ್ಲರಿಗೂ ತಲುಪಿಸಬೇಕು ಎನ್ನುವ ಉದ್ದೇಶದಿಂದ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಲು ಅನುಮತಿ ನೀಡಿದೆ. ಇದೀಗ ರಾಜ್ಯ ಸರ್ಕಾರದ ಕಡೆಯಿಂದ ಹೊಸ ಅಪ್ಡೇಟ್ ಬಂದಿದೆ.
ಮಹಿಳೆಯರಿಗೆ ಹೊಸ ಸ್ಕೀಮ್! ಭೂಮಿ ಖರೀದಿಗೆ ಸರ್ಕಾರ ನೀಡುತ್ತೆ 25 ಲಕ್ಷ ಸಬ್ಸಿಡಿ ಸಾಲ
ಹೊಸ ಎಪಿಎಲ್- ಬಿಪಿಎಲ್ ಕಾರ್ಡ್ ವಿಲೇ ಆರಂಭ: (APL BPL card distribution started)
ಈ ಹಿಂದೆ ಯಾರು ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದಾರೋ ಅಂತವರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ ಸರ್ಕಾರ. ಅಲ್ಲದೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಎಲ್ಲ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಹೊಸ ಪಡಿತರ ಚೀಟಿ ನೀಡಲು ರಾಜ್ಯ ಸರ್ಕಾರ ಆಹಾರ ಇಲಾಖೆ ನಿರ್ಧರಿಸಿದೆ.
ಗೃಹಲಕ್ಷ್ಮಿ 4ನೇ ಕಂತಿನ ಬಿಗ್ ಅಪ್ಡೇಟ್; ಯೋಜನೆಯಲ್ಲಿ ಹೊಸ ಹೊಸ ಬದಲಾವಣೆಗಳು
ಶೀಘ್ರವೇ ಸಿಗಲಿದೆ ಹೊಸ ಪಡಿತರ ಚೀಟಿ
ರಾಜ್ಯದ ಆಹಾರ ಇಲಾಖೆ ಈಗಾಗಲೇ 20 ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳನ್ನು ವಿಲೇವಾರಿ ಮಾಡಲಾಗಿದೆ. ಹೊಸ ಪಡಿತರ ಚೀಟಿ ನೀಡಿ ಎಂದು ಸುಮಾರು 3 ಲಕ್ಷಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ.
ಅಲ್ಲದೆ ಈಗಲೂ ಸಹ ಅರ್ಜಿ ಸಲ್ಲಿಸುತ್ತಿದ್ದು, ಹೀಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಆಹಾರ ಇಲಾಖೆ ಅಧಿಕಾರಿಗಳು (department officers) ಸಹ ಬಂದ ಅರ್ಜಿಗಳನ್ನು (application distribution) ವಿಲೇವಾರಿ ಮಾಡುತ್ತಿದ್ದಾರೆ. ಹಾಗಾಗಿ ಸದ್ಯವೇ ಹೊಸ ಪಡಿತರ ಚೀಟಿಗಳು ಫಲಾನುಭವಿಗಳಿಗೆ ಸಿಗಲಿದೆ ಎನ್ನಲಾಗುತ್ತಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ಇನ್ನು ಹೆಚ್ಚು ಸಮಯ ಕಾಯುವ ಅಗತ್ಯವಿಲ್ಲ. ಅಲ್ಲದೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರೂ ಸಹ ಚಿಂತಿಸುವ ಅಗತ್ಯವಿಲ್ಲ. ಸರ್ಕಾರಕ್ಕೆ ನಿಮ್ಮ ಸಮಸ್ಯೆಯ ಅರಿವಿದ್ದು, ಆದಷ್ಟು ಶೀಘ್ರ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿ ವಿತರಣಾ ಕಾರ್ಯ ನಡೆಯಲಿದೆ. ಡಿಸೆಂಬರ್ ಅಂತ್ಯದ ಒಳಗೆ ಬಹುತೇಕ ಅರ್ಜಿಯ ಅರ್ಧದಷ್ಟಾದರೂ ಪಡಿತರ ಚೀಟಿ ವಿಲೇವಾರಿ ಆಗುವ ನಿರೀಕ್ಷೆ ಇದೆ.
ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಪಡಿತರ ಚೀಟಿ ತಿದ್ದುಪಡಿಗೂ ಅವಕಾಶ
Those who applied for ration card will get new ration card soon