ಜಮಾ ಆಗದ ಗೃಹಲಕ್ಷ್ಮಿ ಹಣ ತಲುಪಿಸಲು ಸರಕಾರದ ಮೆಗಾ ಪ್ಲಾನ್! ಪೆಂಡಿಗ್ ಹಣ ರಿಲೀಸ್
ಗೃಹಲಕ್ಷ್ಮಿ ಫಲಾನುಭವಿ (Gruha lakshmi beneficiary) ಮಹಿಳೆಯರು ತಮ್ಮ ಖಾತೆಗೆ (Bank Account) ಹಣ ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ
“ಸರ್ಕಾರದಿಂದ ಪ್ರತಿ ತಿಂಗಳು 2000 ಸಿಗುತ್ತಿರುವುದು ನಿಜಕ್ಕೂ ಉಪಯೋಗವಾಗುತ್ತಿದೆ. ಸಣ್ಣಪುಟ್ಟ ಮನೆ ಖರ್ಚಿಗೆ ಔಷಧ ಖರ್ಚಿಗೆ (for medicine, home maintenance) ಸಹಾಯವಾಗುತ್ತದೆ. ಆದರೆ ಕಳೆದ ತಿಂಗಳು ಬಿಡುಗಡೆಯಾದ ಹಣ ಇನ್ನೂ ಖಾತೆಗೆ (Bank Account) ಬಂದಿಲ್ಲ, ಇದರಿಂದ ಬಹಳ ತೊಂದರೆ ಆಗುತ್ತಿದೆ” ಎಂಬುದು ಮಹಿಳೆಯರ ಅಳಲು.
ಗೃಹಲಕ್ಷ್ಮಿ ಫಲಾನುಭವಿ (Gruha lakshmi beneficiary) ಮಹಿಳೆಯರು ತಮ್ಮ ಖಾತೆಗೆ (Bank Account) ಹಣ ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದು ಒಬ್ಬ ಮಹಿಳೆಯ ಸಮಸ್ಯೆಯಲ್ಲ ಸಾಕಷ್ಟು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಮಹಿಳೆಯರ ಖಾತೆಗೆ ಹಣ ಜಮಾ (Money Deposit) ಮಾಡುವಲ್ಲಿ ಸರ್ಕಾರ ಸಮಸ್ಯೆ ಎದುರಿಸುತ್ತಿದೆ.
ಕೃಷಿ ಭೂಮಿ ಇರುವವರಿಗೆ ಉಚಿತ ಬೋರ್ ವೆಲ್; ಅರ್ಜಿ ಸಲ್ಲಿಕೆಗೆ 2 ದಿನ ಮಾತ್ರ ಬಾಕಿ
ಗೃಹಲಕ್ಷ್ಮಿ ಯೋಜನೆಯ ಹಣ ಎಷ್ಟು ಜನರ ಖಾತೆಗೆ ವರ್ಗಾವಣೆ ಆಗಿದೆ ಗೊತ್ತಾ?
ಸರ್ಕಾರ ಈಗಾಗಲೇ ತಿಳಿಸಿರುವಂತೆ 89.81% ಮಹಿಳೆಯರ ಖಾತೆಗೆ ಮೂರು ಕಂತಿನ ಹಣ ಜಮಾ (free installment) ಆಗಿದೆ, ಆದರೆ ಉಳಿದಂತೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಒಂದೇ ಒಂದು ಕಂತಿನ ಹಣವು ಕೂಡ ಜಮಾ ಆಗಿಲ್ಲ
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ವಿಶೇಷವಾಗಿ ಸಾಕಷ್ಟು ಹೊಸ ಹೊಸ ಉಪಕ್ರಮಗಳನ್ನು ಕೂಡ ಕೈಕೊಂಡು ಮಹಿಳೆಯರ ಖಾತೆಗೆ (Bank Account) ಹಣ ಜಮಾ ಮಾಡಲು ಪ್ರಯತ್ನಿಸುತ್ತಿದೆ, ಆದರೂ ಒಂದಲ್ಲ ಒಂದು ಕಾರಣಕ್ಕೆ ಸರ್ಕಾರದಿಂದ ಬಿಡುಗಡೆಯಾದ ಹಣ ಮಾತ್ರ ಎಲ್ಲಾ ಮಹಿಳೆಯರ ಖಾತೆಯನ್ನು ತಲುಪುತ್ತಿಲ್ಲ.
ಸರ್ಕಾರ ಈವರೆಗೆ ಗೃಹಲಕ್ಷ್ಮಿ ಯೋಜನೆಗಾಗಿ ಸುಮಾರು 2444 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳಲ್ಲಿಯೇ ಅತಿ ಹೆಚ್ಚು ಅನುದಾನವನ್ನು ಹೊಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆಯಾಗಿದೆ.
ಒಟ್ಟು 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರೆ, 1.10 ಕೋಟಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ (Money Transfer) ಆದ್ರೂ ಇನ್ನೂ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವನ್ನು ನೋಡಿಲ್ಲ.
ಇನ್ಮುಂದೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಕೊರಗುವ ಅವಶ್ಯಕತೆ ಇಲ್ಲ! ಇಷ್ಟು ಮಾಡಿ ಸಾಕು
ಸರ್ಕಾರ ಸೂಚಿಸುವ ಪರಿಹಾರ ಏನು? (Solutions suggested by government)
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಬೇಕು ಎನ್ನುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಸಾಕಷ್ಟು ನಿರ್ಧಾರಗಳನ್ನು ಕೂಡ ಕೈಗೊಂಡಿದೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ಡಿಸೆಂಬರ್ ಮುಗಿಯುವುದರ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಮನೆಯ ಖಾತೆಗೆ ಸೇರಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಉಚಿತ ಮನೆ ಸ್ಕೀಮ್; ಸರ್ಕಾರದ ವಸತಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ
ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಸರ್ಕಾರ ಕೈಗೊಂಡಿರುವ ಕ್ರಮಗಳು!
*ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯ ಈಕೆ ವೈ ಸಿ (KYC) ಆಗಿದೆಯಾ ಎನ್ನುವುದನ್ನು ಪುನಃ ಚೆಕ್ ಮಾಡಬೇಕು ಎಂದು ಸರ್ಕಾರ ತಿಳಿಸಿದೆ. ಒಂದು ವೇಳೆ ಈಕೆ ವೈ ಸಿ ಆಗದೆ ಇದ್ದರೆ, ಆಧಾರ್ ಸೀಡಿಂಗ್ ಆಗದೆ ಇದ್ದರೆ ಅಂತಹ ಮಹಿಳೆಯರ ಖಾತೆಗೆ ಎಂದಿಗೂ ಹಣ ಬರಲು ಸಾಧ್ಯವಿಲ್ಲ.
*ಎರಡನೆಯದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಅಂಗನವಾಡಿ ಸಹಾಯಕಿಯರನ್ನು (Anganwadi workers) ನೇಮಕ ಮಾಡಲಾಗಿದೆ. ಅಂಗನವಾಡಿ ಸಹಾಯಕಿಯರು ತಮ್ಮ ಗ್ರಾಮದ ಪ್ರತಿಯೊಬ್ಬ ಮಹಿಳೆಯರ ಮನೆಗೆ ತೆರಳಿ ಅವರ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕು.
ಒಂದು ವೇಳೆ ಜಮಾ ಆಗದೇ ಇದ್ದಲ್ಲಿ ಅಂತಹ ಮಹಿಳೆಯರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಬ್ಯಾಂಕ್ ನ ಖಾತೆಯನ್ನು ಸರಿಪಡಿಸಬೇಕು. ಮಹಿಳೆಯರು ಕೂಡ ತಮ್ಮ ಖಾತೆಗೆ ಹಣ ಬಾರದೆ ಇದ್ದಾಗ ಅಂಗನವಾಡಿ ಸಹಾಯಕಿಯರ ಬಳಿ ತಿಳಿಸಿ ಮಾಹಿತಿ ಪಡೆದುಕೊಳ್ಳಬಹುದು.
*ಮೂರನೆಯದಾಗಿ ಹೆಂಡತಿಯ ಖಾತೆಗೆ ಹಣ ಜಮಾ ಆಗಿಲ್ಲ ಎಂದಾದರೆ ರೇಷನ್ ಕಾರ್ಡ್ (ration card) ನಲ್ಲಿ ಎರಡನೇ ಸದಸ್ಯರಾಗಿ ಗಂಡನ ಹೆಸರು ಇದ್ದರೆ ಅಥವಾ ಎರಡನೇ ಸದಸ್ಯರಾಗಿ ಯಾರ ಹೆಸರು ಇದೆಯೋ ಅವರಿಗೆ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಅಂಥವರ ಖಾತೆ ಕೂಡ ಆಧಾರ್ ಸೀಡಿಂಗ್ (Aadhaar seeding) ಆಗಿರಬೇಕು. ಬ್ಯಾಂಕಿನಲ್ಲಿ ಖಾತೆ ಆಕ್ಟಿವ್ ಇರಬೇಕು.
*ಇನ್ನು ಕೊನೆಯದಾಗಿ ಗೃಹಲಕ್ಷ್ಮಿ ಅದಾಲತ್ (gruhalakshmi Adalat) ನ್ನು ನಡೆಸುತ್ತಿದೆ ಇದರ ಅಡಿಯಲ್ಲಿ ಮಹಿಳೆಯರು ತಮ್ಮ ಖಾತೆಗೆ ಹಣ ಬಾರದೆ ಇದ್ದರೆ ಗ್ರಾಮ ಪಂಚಾಯತ್ (Gram Panchayat) ಸಿಬ್ಬಂದಿಗಳ ಬಳಿ ದೂರು ಸಲ್ಲಿಸಬಹುದು ಆಗ ಸ್ವತಹ ಗ್ರಾಮ ಪಂಚಾಯತ್ ಸಿಬ್ಬಂದಿಗಳೇ ಮಹಿಳೆಯ ಮನೆಗೆ ತೆರಳಿ ಅವರ ಸಮಸ್ಯೆಯನ್ನು ಪರಿಹರಿಸುತ್ತಾರೆ. ಅವರ ಖಾತೆಗೆ ಹಣ ಬರುವಂತೆ ಮಾಡುತ್ತಾರೆ. ಜೊತೆಗೆ ಯಾವ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವ ಮಾಹಿತಿಯನ್ನು ಕೂಡ ಸರ್ಕಾರಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿ ಒದಗಿಸಬೇಕು.
ಇಂತಹವರಿಗೆ ಅನ್ನಭಾಗ್ಯ ಹಣ ₹170 ರೂಪಾಯಿ ಸಿಗೋಲ್ಲ! ಯೋಜನೆಯಲ್ಲಿ ಬಿಗ್ ಟ್ವಿಸ್ಟ್
ಪೆಂಡಿಂಗ್ ಇರುವ ಹಣ ಪಾವತಿ! (Pending money transfer)
ಈ ಮೇಲಿನ ಯಾವುದೇ ಒಂದು ಕ್ರಮ ವರ್ಕೌಟ್ ಆದ್ರೆ ಮಹಿಳೆಯರ ಖಾತೆಗೆ ಡಿಸೆಂಬರ್ ಕೊನೆಯ ಒಳಗೆ ಇಲ್ಲಿಯವರೆಗೆ ಜಮಾ ಆಗದೇ ಇರುವ ಎಲ್ಲಾ ಹಣವನ್ನು ಜಮಾ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ
ಡಿಸೆಂಬರ್ ತಿಂಗಳಿನಲ್ಲಿ ಆರು ಸಾವಿರ ರೂಪಾಯಿಗಳನ್ನು ಫಲಾನುಭವಿ ಮಹಿಳೆಯ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಗೃಹಲಕ್ಷ್ಮಿ ಯೋಜನೆ, ಪ್ರತಿಯೊಬ್ಬ ಮಹಿಳೆಯರ ಖಾತೆಗೆ ತಲುಪಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
The government mega plan to deliver Gruha Lakshmi Scheme money