ಯುವ ನಿಧಿ ಯೋಜನೆಗೆ ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭ! ಈ ದಾಖಲೆಗಳು ಕಡ್ಡಾಯ
ಅಂತೂ ರಾಜ್ಯ ಸರ್ಕಾರ ಘೋಷಣೆ ಮಾಡಿದ 5 ಗ್ಯಾರಂಟಿ (guarantee schemes) ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಬಹುತೇಕ ಯಶಸ್ಸು ಸಾಧಿಸಿದೆ ಎನ್ನಬಹುದು
ಈಗ ರಾಜ್ಯದ ಎಲ್ಲಾ ಯುವಕರ ಚಿತ್ತ ಯುವನಿಧಿ ಯೋಜನೆಯತ್ತ. ಹೌದು ನಾಲ್ಕನೇ ಗ್ಯಾರಂಟಿ ಯೋಜನೆಯಾಗಿರುವ ಯುವ ನಿಧಿ ಯೋಜನೆಯ (Yuva Nidhi Yojana) ಅಡಿಯಲ್ಲಿ ನಿರುದ್ಯೋಗಿ ಯುವಕ (employed person) ಯುವಕರಿಗೆ ಪ್ರತಿ ತಿಂಗಳು ಭತ್ಯೆ ನೀಡಲು ಸರ್ಕಾರ ಮುಂದಾಗಿದ್ದು, ಫಲಾನುಭವಿ ಯುವಕರು ಎರಡು ವರ್ಷಗಳ ವರೆಗೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಬಹಳ ದಿನದಿಂದ ಕಾದು ಕುಳಿತಿದ್ದ ಯುವ ನಿಧಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.
ಆಧಾರ್ ಉಚಿತ ಸೇವೆ, ಗಡುವು ಮಾರ್ಚ್ 14ರ ತನಕ ಮತ್ತೊಮ್ಮೆ ವಿಸ್ತರಣೆ
ಯುವ ನಿಧಿ ಯೋಜನೆ ಯಾವಾಗಿನಿಂದ ಆರಂಭ! (Yuva Nidhi scheme will start)
ಸರ್ಕಾರ ನೀಡಿರುವ ಮಾಹಿತಿಯಂತೆ ಜನವರಿ 2024 ರಿಂದ ಪ್ರತಿಫಲಾನುಭವಿ ಯುವಕ ಯುವತಿಯರಿಗೆ ತಿಂಗಳ ನಿರುದ್ಯೋಗ ಭತ್ಯೆ (Unemployment Allowance) ಜಮಾ ಮಾಡಲಾಗುವುದು ಇದಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕವು ಫಿಕ್ಸ್ ಆಗಿದ್ದು, ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಹಾಗಾಗಿ ಅರ್ಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎರಡು ವರ್ಷಗಳ ಕಾಲ ಸುಲಭವಾಗಿ ತಮ್ಮ ತಿಂಗಳ ಖರ್ಚು ನಿಭಾಯಿಸಲು 3000ಗಳನ್ನು ಪಡೆದುಕೊಳ್ಳಬಹುದು.
ಯುವನಿಧಿ ಯೋಜನೆ ಪ್ರಯೋಜನಗಳು (Yuva Nidhi scheme benefits)
*ಯುವನಿಧಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲಿರುವ ಯೋಜನೆ ಆಗಿದೆ.
*ಯುವನಿಧಿ ಯೋಜನೆಗೆ ಪದವಿ (degree) ಮುಗಿಸಿದ ಹಾಗೂ ಡಿಪ್ಲೋಮಾ (diploma) ಮುಗಿಸಿರುವ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು.
*ಅರ್ಜಿ ಸಲ್ಲಿಸಲು ಬಯಸುವ ಯುವಕರು 2022 – 23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮೋ ಮುಗಿಸಿರಬೇಕು.
*2022 23ರಲ್ಲಿ ತೇರ್ಗಡೆ ಹೊಂದಿದ್ದು ಆರು ತಿಂಗಳವರೆಗೆ ಯಾವುದೇ ಕೆಲಸ ಸಿಗದೇ ಇದ್ದರೆ ನಿರುದ್ಯೋಗ ಭತ್ಯೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
*ನಿರುದ್ಯೋಗ ಮಾಸಿಕ ಭತ್ಯೆಯನ್ನು, ಪದವಿ ಮುಗಿಸಿರುವ ನಿರುದ್ಯೋಗಿಗಳಿಗೆ 3,000 ರೂ. ಹಾಗೂ ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿಗಳಿಗೆ 1500 ರೂ. ನೀಡಲಾಗುವುದು.
*ಯುವನಿಧಿ ಯೋಜನೆಯ ಅಡಿಯಲ್ಲಿ ಸಿಗುವ ಮಾಸಿಕ ಭತ್ಯೆ ಎರಡು ವರ್ಷಗಳ ಅವಧಿಯವರೆಗೆ ಮಾತ್ರ ಲಭ್ಯವಾಗಲಿದೆ. ಒಂದು ವೇಳೆ ಎರಡು ವರ್ಷಗಳ ಒಳಗೆ ನೌಕರಿ ಸಿಕ್ಕರೆ ತಕ್ಷಣ ಸರ್ಕಾರಕ್ಕೆ ತಿಳಿಸಬೇಕು ಹಾಗೂ ಅಂತವರನ್ನು ಯುವನಿಧಿ ಯೋಜನೆಯಿಂದ ಹೊರಗಿಡಲಾಗುತ್ತದೆ.
*ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕದ ಹಾಗೂ ಕನ್ನಡಿಗ ಅಭ್ಯರ್ಥಿ ಆಗಿರಬೇಕು.
*ಡಿಸೆಂಬರ್ 21 ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಸೇವಾ ಸಿಂಧು ಪೋರ್ಟಲ್ (seva Sindhu portal) ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸದ್ಯ ಮಾಹಿತಿ ಲಭ್ಯವಾಗಿದೆ
*ಅರ್ಜಿ ಸಲ್ಲಿಸಲು ಬಯಸುವವರು ತಾವು ನಿರುದ್ಯೋಗಿಗಳು ಎಂದು ಸ್ವಯಂ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು ಇನ್ನು ನೌಕರಿ ಸಿಕ್ಕರು ಸಿಗಲಿಲ್ಲ ಎಂದು ಸುಳ್ಳು ಹೇಳಿಕೆ ನೀಡಿ ಹಣವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆ ಅಂತವರಿಗೆ ಬಾರಿ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
*ಸುಮಾರು 5 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಈ ಸಲಹೆಗಳೊಂದಿಗೆ ಪಡೆಯಿರಿ ಇನ್ನಷ್ಟು ಬೆನಿಫಿಟ್
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ! (How to apply)
ಡಿಸೆಂಬರ್ 21ರಿಂದ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಜನವರಿ 2024 ರಿಂದ ಫಲಾನುಭವಿಗಳ ಖಾತೆಗೆ (Bank Account) ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು https://sevasindhu.karnataka.gov.in ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ ಸರಿಯಾದ ಮಾಹಿತಿಗಳನ್ನು ನೀಡಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ 15 ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ 4ನೇ ಕಂತಿನ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Documents)
ಆಧಾರ್ ಕಾರ್ಡ್ (Aadhaar Card)
ಬ್ಯಾಂಕ್ ಖಾತೆಯ ವಿವರ (Bank Account Details)
ಪದವೀ ತೇರ್ಗಡೆ ಹಾಗೂ ಡಿಪ್ಲೋಮೋ ಮುಗಿಸಿರುವ ಬಗ್ಗೆ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪ್ರಮಾಣ ಪತ್ರ ಒದಗಿಸಬೇಕು.
ನಿರುದ್ಯೋಗಿ ಸ್ವಯಂ ಘೋಷಣ ಪತ್ರ.
ಯಾವುದೇ ಪದವಿ ಅಥವಾ ಡಿಪ್ಲೋಮೋ ಉತ್ತೀರ್ಣರಾದ ದಿನದಿಂದ ಮುಂದಿನ ಆರು ತಿಂಗಳವರೆಗಿನ ಬ್ಯಾಂಕ್ ಸ್ಟೇಟ್ಮೆಂಟ್ (bank statement) ಒದಗಿಸಬೇಕು.
ಇನ್ನು ಯಾವುದೇ ಉದ್ಯೋಗದಲ್ಲಿ ಇರುವವರು ಅರ್ಜಿ ಸಲ್ಲಿಸುವಂತಿಲ್ಲ.
ಅಪ್ರೆಂಟಿಸ್ ಗಳು ಅರ್ಜಿ ಸಲ್ಲಿಸುವಂತಿಲ್ಲ.
ರೇಷನ್ ಕಾರ್ಡ್ ವಿತರಣೆಯಲ್ಲಿ ಬಿಗ್ ಅಪ್ಡೇಟ್! ಈಗ ಪಡಿತರ ಪಡೆಯೋದು ಇನ್ನಷ್ಟು ಸುಲಭ
Application submission for Yuva Nidhi Yojana starts from December 21