ರೇಷನ್ ಕಾರ್ಡ್ ವಿತರಣೆಯಲ್ಲಿ ಬಿಗ್ ಅಪ್ಡೇಟ್! ಈಗ ಪಡಿತರ ಪಡೆಯೋದು ಇನ್ನಷ್ಟು ಸುಲಭ

ಎಪಿಎಲ್ (APL card) ಬಿಪಿಎಲ್ (BPL card) ಹಾಗೂ ಅಂತ್ಯೋದಯ (antyodaya card) ಎನ್ನುವ ಮೂರು ವಿಭಾಗಗಳನ್ನು ಮಾಡಿ ಫಲಾನುಭವಿ ಜನರಿಗೆ ಆಯಾ ಕಾರ್ಡ್ ವಿತರಣೆ ಮಾಡಲಾಗುತ್ತದೆ

ಪಡಿತರ ಚೀಟಿ (ration card) ಯಲ್ಲಿ ಎಪಿಎಲ್ (APL card) ಬಿಪಿಎಲ್ (BPL card) ಹಾಗೂ ಅಂತ್ಯೋದಯ (antyodaya card) ಎನ್ನುವ ಮೂರು ವಿಭಾಗಗಳನ್ನು ಮಾಡಿ ಫಲಾನುಭವಿ ಜನರಿಗೆ ಆಯಾ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಬಿಪಿಎಲ್ ಕಾರ್ಡ್ ಹೊಂದಿರುವವರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಾರೆ ಎನ್ನಬಹುದು, ಬಡತನ ರೇಖೆಗಿಂತ ಕೆಳಗಿನವರಿಗೆ ತಮ್ಮ ಹಸಿವನ್ನು ನಿವಾರಿಸಿಕೊಳ್ಳಲು ಸರಕಾರದಿಂದ ಸಿಗುವ ಉಚಿತ ಪಡಿತರ ಪಡೆಯಲು ಬಿಪಿಎಲ್ ಕಾರ್ಡ್ ನ ಅಗತ್ಯವಿದೆ.

ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ಜನ ಬಿಪಿಎಲ್ ಕಾರ್ಡ್ ಹೊಂದಿದ್ದು ಪ್ರತಿ ತಿಂಗಳು ಸರ್ಕಾರದಿಂದ ಲಭ್ಯವಾಗುವ ಉಚಿತ ಪಡಿತರ ಪಡೆದುಕೊಳ್ಳುತ್ತಿದ್ದಾರೆ.

ರೇಷನ್ ಕಾರ್ಡ್ ವಿತರಣೆಯಲ್ಲಿ ಬಿಗ್ ಅಪ್ಡೇಟ್! ಈಗ ಪಡಿತರ ಪಡೆಯೋದು ಇನ್ನಷ್ಟು ಸುಲಭ - Kannada News

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಇದು ನಿಜಕ್ಕೂ ಖುಷಿಯ ವಿಚಾರ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ (guarantee schemes by Karnataka Government) ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ದಾರರಿಗೆ ಉತ್ತಮ ಅವಕಾಶ ನೀಡಲಾಗಿದೆ.

ಯಾಕೆಂದರೆ 5 ಕೆಜಿ ಉಚಿತ ಅಕ್ಕಿಯ ಬದಲು ಹಣವನ್ನೇ ನೇರವಾಗಿ ಫಲಾನುಭವಿಗಳ ಖಾತೆಗೆ (DBT) ಜಮಾ ಮಾಡಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಅಪ್ಡೇಟ್ಸ್ ಲೇಖನದಲ್ಲಿದೆ ಮುಂದೆ ಓದಿ.

ಬಿಪಿಎಲ್ ಕಾರ್ಡ್ ಹೊಂದಿದ್ರೆ ಸ್ಮಾರ್ಟ್ ಕಾರ್ಡ್ ಸಿಗುತ್ತೆ! (Smart card for BPL card holders)

ಎಲ್ಲರಿಗೂ ತಿಳಿದಿರುವಂತೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬೇಕು ಅಂದ್ರೆ ವ್ಯಕ್ತಿಯ ಥಂಬ್ ಇಂಪ್ರೆಶನ್ (thumb impression) ಅಂದರೆ ಬಯೋಮೆಟ್ರಿಕ್ ವ್ಯವಸ್ಥೆ (biometric system) ಮಾಡಲಾಗಿದೆ

ಇತ್ತೀಚಿನ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಜನರ ಥಂಬ್ ಇಂಪ್ರೆಶನ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದನ್ನ ಗಮನಿಸಿರುವ ಸರ್ಕಾರ ಮತ್ತೊಂದು ಹೊಸ ಉಪಕ್ರಮ ಕೈಗೊಂಡಿದ್ದು ಸದ್ಯದಲ್ಲಿಯೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸ್ಮಾರ್ಟ್ ಕಾರ್ಡ್ ಒಂದನ್ನು ವಿತರಣೆ ಮಾಡಲು ನಿರ್ಧರಿಸಿದೆ. ಈ ಮೂಲಕ ಬಯೋಮೆಟ್ರಿಕ್ ಸಾಧ್ಯವಾಗದೆ ಇದ್ದರೆ ಸ್ಮಾರ್ಟ್ ಕಾರ್ಡ್ ನಲ್ಲಿ ಸ್ಕ್ಯಾನ್ ಮಾಡುವುದರ ಮೂಲಕ ಪಡಿತರ ಪಡೆದುಕೊಳ್ಳಬಹುದು.

ರದ್ದಾಗುತ್ತೆ ಇಂತಹವರ ರೇಷನ್ ಕಾರ್ಡ್! ತಪ್ಪಿಸಲು ತಕ್ಷಣ ಈ ಕೆಲಸ ಮಾಡಲು ಸೂಚನೆ

90% ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ! (Annabhagya scheme)

Annabhagya Schemeರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿಎಂ ಸಿದ್ದರಾಮಯ್ಯ (CM siddaramaiah) ಅವರನ್ನ ಅನ್ನ ರಾಮಯ್ಯ ಎಂದೇ ಕರೆಯಲಾಗುತ್ತೆ ಯಾಕೆಂದರೆ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

ಐದು ಕೆಜಿ ಅಕ್ಕಿಯ ಬದಲು 5 ಕೆಜಿ ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ ಈ ಯೋಜನೆಯಲ್ಲಿ ಬಹುತೇಕ ಯಶಸ್ಸನ್ನು ಕಂಡಿರುವ ಸರ್ಕಾರ ಇಲ್ಲಿಯವರೆಗೆ ಶೇಕಡ 90ರಷ್ಟು ಜನರಿಗೆ ಹಣ ವರ್ಗಾವಣೆ (Money Deposit) ಮಾಡಿದೆ.

ಇನ್ನು ಕೇವಲ ಏಳು ಲಕ್ಷ ಜನರಿಗೆ ಮಾತ್ರ ಡಿಬಿಟಿ ಸಂದಾಯವಾಗಿಲ್ಲ ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದೆ ಇರುವುದು, ಇ – ಕೆ ವೈ ಸಿ ಮಾಡಿಸಿಕೊಳ್ಳದೆ ಇರುವುದು ಹೀಗೆ ಕೆಲವು ಕಾರಣಗಳಿಂದಾಗಿ ಇಂತವರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ನವೆಂಬರ್ ತಿಂಗಳ ಹಣ ಕೂಡ ಬಿಡುಗಡೆ ಆಗಿದ್ದು ಬಹುತೇಕ ಎಲ್ಲರ ಖಾತೆಗೂ ಹಣ (Money Transfer) ತಲುಪುತ್ತಿದೆ.

ಜಮಾ ಆಗದ ಗೃಹಲಕ್ಷ್ಮಿ ಹಣ ತಲುಪಿಸಲು ಸರಕಾರದ ಮೆಗಾ ಪ್ಲಾನ್! ಪೆಂಡಿಗ್ ಹಣ ರಿಲೀಸ್

ಹೊಸ ಬಿಪಿಎಲ್ ಕಾರ್ಡ್ ವಿತರಣೆ! (New BPL card distribution)

BPL Ration Cardಇಲಾಖೆಗೆ ಈವರೆಗೆ ಸಂದಾಯವಾಗಿರುವ ಒಟ್ಟು ಮೂರು ಲಕ್ಷ ಪಡಿತರ ಚೀಟಿ ಅರ್ಜಿಗಳನ್ನು ಈಗಾಗಲೇ ಪರಿಶೀಲನೆ ನಡೆಸಿ 20 ಸಾವಿರ ಬಿಪಿಎಲ್ ಕಾರ್ಡ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ತೀರ ಅಗತ್ಯ ಇರುವ ಕುಟುಂಬಗಳಿಗೆ ಮಾತ್ರ ಸದ್ಯ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ

ಅಲ್ಲವೇ ಸರ್ಕಾರ ಈಗಾಗಲೇ ತಿಳಿಸಿರುವಂತೆ ತನ್ನ ಬಳಿ ಇರುವ ಎಲ್ಲಾ ಅರ್ಜಿಗಳನ್ನ ಪರಿಶೀಲಿಸಿ ವಿತರಣೆ ಮಾಡುವವರೆಗೂ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಸುಮಾರು ಒಂದು ಲಕ್ಷ ಅರ್ಜಿಗಳನ್ನ ಸರ್ಕಾರ ತಿರಸ್ಕರಿಸಿದೆ ಎನ್ನಲಾಗಿದೆ.

ಕೃಷಿ ಭೂಮಿ ಇರುವವರಿಗೆ ಉಚಿತ ಬೋರ್ ವೆಲ್; ಅರ್ಜಿ ಸಲ್ಲಿಕೆಗೆ 2 ದಿನ ಮಾತ್ರ ಬಾಕಿ

Big Update on Ration Card Distribution, Now getting ration is even easier

Follow us On

FaceBook Google News

Big Update on Ration Card Distribution, Now getting ration is even easier