ರಾಜ್ಯ ಸರ್ಕಾರ (State government) ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಂಡ ಮಹಿಳೆಯರು ನಿಜಕ್ಕೂ ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ತಿಂಗಳ ಸಣ್ಣಪುಟ್ಟ ಅಗತ್ಯಗಳನ್ನು ಈ 2000 ರೂಪಾಯಿ ಪೂರೈಸುತ್ತಿದೆ ಎಂದು ಸರ್ಕಾರವನ್ನು ಮನಸಾರೆ ಹೊಗಳಿದ್ದಾರೆ. ಇನ್ನು ಹಲವರು ಅರ್ಜಿ ಸಲ್ಲಿಸಿ ತಮ್ಮ ಖಾತೆಗೆ (Bank Account) ಮಾತ್ರ ಹಣ ಜಮಾ ಆಗಿಲ್ವಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸರಕಾರಕ್ಕೆ ಈಗಾಗಲೇ ಲಕ್ಷಾಂತರ ಮಹಿಳೆಯರಿಂದ ದೂರು ಸಂದಾಯವಾಗಿದೆ.

Gruha Lakshmi money will not be missed for any reason henceforth

ರೇಷನ್ ಕಾರ್ಡ್ ವಿತರಣೆಯಲ್ಲಿ ಬಿಗ್ ಅಪ್ಡೇಟ್! ಈಗ ಪಡಿತರ ಪಡೆಯೋದು ಇನ್ನಷ್ಟು ಸುಲಭ

ಹೊಸ ಉಪಕ್ರಮ ಕೈಕೊಂಡ ಸರ್ಕಾರ! (New initiative by government)

ಗೃಹಲಕ್ಷ್ಮಿ ಯೋಜನೆ 100% ಸಕ್ಸಸ್ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶ, ಅತಿ ಹೆಚ್ಚು ಅನುದಾನ ಪಡೆದುಕೊಂಡು ಬಿಡುಗಡೆ ಆಗಿರುವ ಯೋಜನೆ ಬಹುತೇಕ ಫಲಾನುಭವಿಗಳಿಗೆ ತಲುಪಿದ್ದರು ಕೂಡ ಅರ್ಜಿ ಸಲ್ಲಿಸಿರುವ ಇನ್ನೂ ಲಕ್ಷಾಂತರ ಮಹಿಳೆಯರು ಹಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 5,96,268 ಮಹಿಳೆಯರ ಖಾತೆ ಆಧಾರ್ ಕಾರ್ಡ್ಗೆ ಲಿಂಕ್ (Aadhaar Card link) ಆಗಿಲ್ಲ. 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ (Bank Account) ಆಧಾರ್‌ನೊಂದಿಗೆ ಸದ್ಯ ಲಿಂಕ್ ಆಗಿದೆ. ಹಾಗಾಗಿ ಅಂಥವರಿಗೆ ಹಣ ಜಮಾ ಆಗಿದೆ.

ಉಳಿದ ಮಹಿಳೆಯರಿಗೆ ಸದ್ಯದಲ್ಲಿ ಆಹಾರ ಇಲಾಖೆ ಸೂಚಿಸಿರುವಂತೆ ಅಂಗನವಾಡಿ ಸಹಾಯಕಿಯರು ಅಥವಾ ಗ್ರಾಮ ಪಂಚಾಯತ್ (Gram Panchayat) ಸಿಬ್ಬಂದಿಗಳು ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ತಾವೇ ಸ್ವತ: ಪರಿಹರಿಸಿ ಅಂತಹ ಮಹಿಳೆಯರ ಖಾತೆಗೂ ಹಣ ಜಮಾ ಆಗುವಂತೆ ಮಾಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ; ಇದು ನಿಜಕ್ಕೂ ಖುಷಿಯ ವಿಚಾರ

ಈ ಜಿಲ್ಲೆಗಳಲ್ಲಿ 4ನೇ ಕಂತಿನ ಹಣ ಜಮಾ! (4th installment released)

Gruha Lakshmi Yojana

ಜಮಾ ಆಗದ ಗೃಹಲಕ್ಷ್ಮಿ ಹಣ ತಲುಪಿಸಲು ಸರಕಾರದ ಮೆಗಾ ಪ್ಲಾನ್! ಪೆಂಡಿಗ್ ಹಣ ರಿಲೀಸ್

ಕೆಲವರು ಮೂರು ಕಂತಿನ ಹಣವನ್ನು ಪಡೆದುಕೊಂಡಿದ್ದರೆ ಇನ್ನೂ ಕೆಲವರು ಒಂದೇ ಒಂದು ಕಂತಿನ ಹಣವನ್ನು ಪಡೆದುಕೊಂಡಿಲ್ಲ. ಆದರೆ ಸಲ್ಲಿಕೆ ಆಗಿರುವ ಕೋಟ್ಯಂತರ ಅರ್ಜಿಗಳಲ್ಲಿ ಬಹುತೇಕ ಫಲಾನುಭವಿಗಳು ಮೂರು ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ.

ಯಾರ್ಯಾರಿಗೆ ಇದುವರೆಗೆ ಹಣ ಸಂದಾಯ ಆಗಿಲ್ಲವೋ ಅಂತವರ ಖಾತೆಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಡಿಸೆಂಬರ್ ಅಂತ್ಯದ ವೇಳೆಗೆ 6,000ಗಳನ್ನು ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಕೆಲವರ ಖಾತೆಗೆ ಹಣ (Money Deposit) ಸಂದಾಯವಾಗಿದೆ.

ಗೃಹಲಕ್ಷ್ಮಿಯ 4ನೇ ಕಂತಿನ ಹಣ ಜಮಾ ಆಗಿದ್ದು ಮೊದಲ ಹಂತದಲ್ಲಿ 15 ಜಿಲ್ಲೆಗಳಿಗೆ ಹಣ ಬಿಡುಗಡೆ ಆಗಿದೆ ಇನ್ನು ಡಿಸೆಂಬರ್ 20ನೇ ತಾರೀಕಿನ ಒಳಗಡೆ ಪ್ರತಿಯೊಬ್ಬರ ಖಾತೆಗೂ ಕೂಡ ನಾಲ್ಕನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ.

ಈ ಕೆಳಗೆ 15 ಜಿಲ್ಲೆಗಳ ಹೆಸರುಗಳನ್ನು ತಿಳಿಸಲಾಗಿದ್ದು ನಿಮ್ಮ ಜಿಲ್ಲೆಯು ಇಲ್ಲಿ ಲಿಸ್ಟ್ ನಲ್ಲಿ ಇದ್ದರೆ ತಕ್ಷಣವೇ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯನ್ನು ಪರೀಕ್ಷಿಸಿಕೊಳ್ಳಿ.

ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿಕೊಳ್ಳಿ

4ನೇ ಕಂತಿನ ಹಣ ಜಮಾ ಆಗಿರುವ ಜಿಲ್ಲೆಗಳು

ಚಿತ್ರದುರ್ಗ, ಬೆಂಗಳೂರು, ಕೋಲಾರ, ಮಂಡ್ಯ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾಸನ, ಬಿಜಾಪುರ, ಉತ್ತರ ಕನ್ನಡ, ದಾವಣಗೆರೆ, ಗದಗ, ರಾಯಚೂರು, ಕಲಬುರಗಿ, ಮೈಸೂರು.

Gruha lakshmi Scheme 4th installment money deposited for these 15 districts