ಗೃಹಲಕ್ಷ್ಮಿ 4ನೇ ಕಂತಿನ ಹಣ ಇಂತಹವರಿಗೆ ಸಿಗೋಲ್ಲ; ಗೃಹಿಣಿಯರಿಗೆ ಶುರುವಾಯ್ತು ಆತಂಕ
ಡಿಸೆಂಬರ್ ಅಂತ್ಯದ ಒಳಗೆ ಸಂಪೂರ್ಣ 100% ಮಹಿಳೆಯರ ಖಾತೆಗೆ ಹಣ ಜಮಾ (Money Deposit) ಮಾಡುವುದು ಸರ್ಕಾರದ ಗುರಿ ಮತ್ತು ಸವಾಲು
ಎಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಒಂದು ಯೋಜನೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯಾಗಿದೆ. ರಾಜ್ಯ ಸರ್ಕಾರದ (state government) ಈಗ ಗ್ಯಾರಂಟಿ ಯೋಜನೆ ಆರಂಭವಾಗಿ 5 ತಿಂಗಳು ಕೂಡ ಆಗಿದೆ.
88.85% ನಷ್ಟು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗಿದೆ. ಡಿಸೆಂಬರ್ ಅಂತ್ಯದ ಒಳಗೆ ಸಂಪೂರ್ಣ 100% ಮಹಿಳೆಯರ ಖಾತೆಗೆ ಹಣ ಜಮಾ (Money Deposit) ಮಾಡುವುದು ಸರ್ಕಾರದ ಗುರಿ ಮತ್ತು ಸವಾಲು.
ಎಪಿಎಲ್, ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ! ಇನ್ಮುಂದೆ ಪ್ರತಿ ತಿಂಗಳು ಹೊಸ ಅರ್ಜಿ ಸ್ವೀಕಾರ
ಸರ್ಕಾರಕ್ಕೆ ಸವಾಲು ಹಾಕಿದ ಗೃಹಲಕ್ಷ್ಮಿ ಯೋಜನೆ!
ರಾಜ್ಯ ಸರ್ಕಾರವೇ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ (challenge for government). ಯಾಕೆಂದರೆ ಎಷ್ಟೋ ಮಹಿಳೆಯರ (DBT to women account) ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಇದ್ದರೂ ಕೂಡ ಅಂತವರ ಖಾತೆಗೆ ಹಣ ಜಮಾ ಆಗಿಲ್ಲ
ಇದಕ್ಕೆ ಸರಕಾರದ ಸರ್ವರ್ ಸಮಸ್ಯೆ (server problem) ಅಥವಾ ತಾಂತ್ರಿಕ ದೋಷಗಳು (technical errors) ಪ್ರಮುಖ ಕಾರಣವಾಗಿರುತ್ತದೆ. ಆದರೆ ಇದನ್ನ ಸರಿಪಡಿಸುವಲ್ಲಿ ಸರ್ಕಾರ ನಾಲ್ಕು ತಿಂಗಳಿನಿಂದಲೂ ಪ್ರಯತ್ನಿಸುತ್ತಲೇ ಇದೆ.
ಆದರೆ ಸಂಪೂರ್ಣವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕಾಗಿ ಬೇರೆ ಬೇರೆ ಉಪಕ್ರಮಗಳನ್ನು ಕೂಡ ಸರ್ಕಾರ ಕೈಗೊಂಡಿದೆ.
ರೈತರ ಕೃಷಿ ಸಾಲದ ಭಾರ ಇಳಿಸಿದ ರಾಜ್ಯ ಸರ್ಕಾರ; ಕೈಗೊಂಡಿದೆ ಹೊಸ ಕ್ರಮ!
4ನೇ ಕಂತಿನ ಹಣ ಖಾತೆಗೆ ವರ್ಗಾವಣೆ ಆಗುವುದಿಲ್ಲವೇ!
ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೂರು ಕಂತಿನ ಹಣವನ್ನು ತಲಾ 2,000 ರೂಪಾಯಿಗಳಂತೆ ಮಹಿಳೆಯರ ಖಾತೆಗೆ ತಲುಪಿಸಿದೆ. ಇದೀಗ ನಾಲ್ಕನೇ ಕಂತಿನ ಹಣವು ಬಿಡುಗಡೆ (4th installment released) ಆಗಿದೆ
ಆದರೆ ಸರ್ಕಾರ ಈ ಹಿಂದೆಯೇ ತಿಳಿಸಿರುವಂತೆ ಗೃಹಿಣಿಯರ ಖಾತೆಯಲ್ಲಿ ಸಮಸ್ಯೆ ಇರುವುದರಿಂದ ಪಡಿತರ ಚೀಟಿಯಲ್ಲಿ ಇರುವ ಎರಡನೇ ಸದಸ್ಯನ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು, ಅಂದರೆ ಮನೆಯ ಒಡತಿಯ ಬದಲು ಮನೆಯ ಯಜಮಾನನ ಖಾತೆಗೆ ಹಣ ಜಮಾ (Money Transfer) ಆಗುತ್ತದೆ.
ಆದರೆ ಆ ಯಜಮಾನನ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಕೆವೈಸಿ (E-KYC ) ಆಗಿದ್ದು ಆಕ್ಟಿವ್ ಆಗಿರುವ ಖಾತೆಗೆ ಮಾತ್ರ ಹಣ ವರ್ಗಾವಣೆ ಆಗಲಿದೆ. ಹಾಗಾಗಿ ಮೂರು ಕಂತಿನ ಹಣ ಸಿಗದೆ ಇದ್ದರೂ ಕೂಡ ಮಹಿಳೆಯರು ನಾಲ್ಕನೇ ಕಂತಿನ ಹಣವನ್ನು ತಮ್ಮ ಯಜಮಾನರ ಖಾತೆಗೆ ಸರ್ಕಾರ ವರ್ಗಾಯಿಸಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
ಈ 15 ಜಿಲ್ಲೆಗಳ ಮಹಿಳೆಯರಿಗೆ ಗೃಹಲಕ್ಷ್ಮಿ 4ನೇ ಕಂತಿನ ಹಣ ಜಮಾ! ಖಾತೆ ಚೆಕ್ ಮಾಡಿಕೊಳ್ಳಿ
15 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಜಮಾ!
ನಾಲ್ಕನೇ ಕಂತಿನ ಹಣ ಅಂದರೆ ನವೆಂಬರ್ ತಿಂಗಳ ಹಣ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಆರಂಭದಲ್ಲಿ 15 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿದೆ
ಪ್ರತಿದಿನ ಒಂದಷ್ಟು ಜಿಲ್ಲೆಗಳಿಗೆ ಹಣ ವರ್ಗಾವಣೆ ಮಾಡುತ್ತಾ ಬರಲಾಗುತ್ತದೆ, ಹಾಗಾಗಿ ಡಿಸೆಂಬರ್ 20ನೇ ತಾರೀಕಿನ ಒಳಗೆ ಫಲಾನುಭವಿಗಳ ಖಾತೆಗೆ ಹಣ ಸಂಪೂರ್ಣವಾಗಿ ವರ್ಗಾವಣೆ ಆಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.
ಈ ಕೆಳಗೆ 15 ಜಿಲ್ಲೆಗಳ ಹೆಸರು ಕೊಡಲಾಗಿದ್ದು ನಿಮ್ಮ ಜಿಲ್ಲೆಗೂ ವರ್ಗಾವಣೆ ಆಗಿದೆ ನೋಡಿಕೊಳ್ಳಿ. ಒಂದು ವೇಳೆ ನಿಮ್ಮ ಜಿಲ್ಲೆಯ ಹೆಸರು ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದಕ್ಕೆ ಎಸ್ಎಂಎಸ್ ಬಾರದೇ ಇದ್ದರೂ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಿ.
ರೇಷನ್ ಕಾರ್ಡ್ ವಿತರಣೆಯಲ್ಲಿ ಬಿಗ್ ಅಪ್ಡೇಟ್! ಈಗ ಪಡಿತರ ಪಡೆಯೋದು ಇನ್ನಷ್ಟು ಸುಲಭ
4ನೇ ಹಣ ಜಮಾ ಆಗಿರುವ 15 ಜಿಲ್ಲೆಗಳು!
ಚಿತ್ರದುರ್ಗ, ಬೆಂಗಳೂರು
ಕೋಲಾರ, ಮಂಡ್ಯ
ಬೆಳಗಾವಿ, ಬಾಗಲಕೋಟೆ
ಧಾರವಾಡ, ಹಾಸನ
ಬಿಜಾಪುರ, ಉತ್ತರ ಕನ್ನಡ
ದಾವಣಗೆರೆ, ಗದಗ
ರಾಯಚೂರು, ಕಲಬುರಗಿ
ಮೈಸೂರು.
Gruha Lakshmi 4th installment money is not available to such people