ಡಿಸೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ನಿಮಗೂ ಜಮಾ ಆಗಿದ್ಯಾ ಚೆಕ್ ಮಾಡಿಕೊಳ್ಳಿ
Monthly Pension : ಕಂದಾಯ ಇಲಾಖೆ ಸಾಮಾಜಿಕ ಭದ್ರತೆ ಮತ್ತು ಯೋಜನೆಗಳ ನಿರ್ದೇಶಾಲಯ (Directorate of social security and pension) ಡಿಸೆಂಬರ್ ತಿಂಗಳ ಪಿಂಚಣಿ ಹಣವನ್ನು ಜಮಾ ಮಾಡಿದ್ದು ನಿಮ್ಮ ಖಾತೆಗೆ (Bank Account) ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಕಂಪ್ಯೂಟರ್ ಮೂಲಕ ತಿಳಿದುಕೊಳ್ಳಬಹುದು, ಒಂದು ವೇಳೆ ಹಣ ಜಮಾ ಆಗದೇ ಇದ್ದಲ್ಲಿ ನೀವು ತಕ್ಷಣ ದೂರು ಸಲ್ಲಿಸಬೇಕು.
ಪಿಂಚಣಿ ಹಣವನ್ನು ರಾಜ್ಯ ಸರಕಾರದ ಕಂದಾಯ ಇಲಾಖೆ ಸಾಮಾಜಿಕ ಭದ್ರತೆ (DSSP) ಮತ್ತು ಯೋಜನೆಗಳ ನಿರ್ದೇಶಾಲಯ 77,63,513 ಫಲಾನುಭವಿಗಳ ಖಾತೆಗೆ ಜಮಾ (Money Deposit) ಮಾಡಿದೆ. ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ, ಈ ಬಗ್ಗೆ ಲೇಖನದಲ್ಲಿ ಇದೆ ಇನ್ನಷ್ಟು ಮಾಹಿತಿ.
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರವೇ ಕೊಡುತ್ತೆ 2.5 ಲಕ್ಷ ಸಬ್ಸಿಡಿ ಸಾಲ
ರಾಜ್ಯದಲ್ಲಿ ಯಾವ ಯೋಜನೆಗಳ ಅಡಿಯಲ್ಲಿ ಪಿಂಚಣಿ ನೀಡಲಾಗುತ್ತೆ ಗೊತ್ತಾ? (Pension schemes provided by State Government)
ವಿಧವಾ ಪಿಂಚಣಿ ಯೋಜನೆ – ರೂಪಾಯಿ 800.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ರೂ.1200
ವಿಕಲ ಚೇತನರಿಗೆ ಪಿಂಚಣಿ – ರೂ.1200 ರಿಂದ 4000 ವರೆಗೆ.
ಸಂಧ್ಯಾ ಸುರಕ್ಷಾ ಯೋಜನೆ ರೂ. 1200
ಮನಸ್ವಿನಿ ಮತ್ತು ಮೈತ್ರಿ ಯೋಜನೆ ತಲಾ ರೂ.800
ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡು ರೈತರ ಪತ್ನಿಯರಿಗೆ ಪಿಂಚಣಿ ರೂ. 800
ಎಂಡೋಸಲ್ಫಾನ್ ಸಂತ್ರಸ್ತರಿಗೆ ರೂ.2000 ರೂ. 4000
ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ, ರೂ. 10,000 ಹೀಗೆ ಬೇರೆ ಬೇರೆ ರೀತಿಯ ಪಿಂಚಣಿ ಯೋಜನೆಗಳು ರಾಜ್ಯದಲ್ಲಿ ಲಭ್ಯವಿದೆ.
ಅಕ್ರಮ ಭೂ ಒತ್ತುವರಿ ತೆರವಿಗೆ ಮಾಸ್ಟರ್ ಪ್ಲಾನ್! ಸರ್ಕಾರಿ ಜಮೀನು ತಂಟೆಗೆ ಹೋದೀರಿ ಹುಷಾರ್
ಮೊಬೈಲ್ ಮೂಲಕವೇ ಪಿಂಚಣಿ ಹಣ ಜಮಾ ಆಗಿರುವ ಮಾಹಿತಿ ತಿಳಿದುಕೊಳ್ಳಿ! (Check your status)
https://dssp.karnataka.gov.in/dssp/Beneficiary_Status.aspx ಈ ವೆಬ್ಸೈಟ್ನಲ್ಲಿ ನಿಮ್ಮ ಬೆನಿಫಿಷಿಯರಿ ಐಡಿ (beneficiary id) ಅನ್ನು ಹಾಕಿ ಪಿಂಚಣಿ ಹಣದ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದಾಗಿದೆ.
ನಿಮ್ಮ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ! ಪ್ರಾಂಚೈಸಿ ಪಡೆಯಿರಿ
ಒಂದು ವೇಳೆ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಬ್ಯಾಂಕ್ ನಲ್ಲಿ ಖಾತೆಯ ಜೊತೆಗೆ ಆಧಾರ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿ. ಒಂದು ವೇಳೆ ಆಗದೆ ಇದ್ದರೆ ಬ್ಯಾಂಕಿಗೆ ಹೋಗಿ ದಾಖಲೆಗಳನ್ನು ನೀಡಿ ಆಧಾರ ಲಿಂಕ್ ಹಾಗೂ ಕೆ ವೈ ಸಿ (KYC) ಮಾಡಿಸಿಕೊಳ್ಳಬೇಕಾಗುತ್ತದೆ. ಹಣ ವರ್ಗಾವಣೆ ಆಗದೆ ಇದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ದೂರು ಸಲ್ಲಿಸಬಹುದು.
December pension money transfer, Check if you are credited too