ಸ್ವಂತ ಜಮೀನು ಇಲ್ಲದವರಿಗೆ ಸರ್ಕಾರದಿಂದಲೇ ಸಿಗುತ್ತೆ ಭೂ ಒಡೆತನದ ಹಕ್ಕು; ಅರ್ಜಿ ಸಲ್ಲಿಸಿ

ಸ್ವಉದ್ಯೋಗ (Own Business) ಮಾಡಲು ಅತಿ ಕಡಿಮೆ ದರದಲ್ಲಿ ಸಾಲ ಸೌಲಭ್ಯ (Loan) ನೀಡುವುದು ಸೇರಿದಂತೆ ರೈತರ ಕೃಷಿ ಜಮೀನಿಗೆ (Agriculture Land) ಅಗತ್ಯವಿರುವ ಸೌಲಭ್ಯ ಯೋಜನೆಗಳು ಸದ್ಯ ರಾಜ್ಯ ಸರ್ಕಾರದಿಂದ ಜನರಿಗೆ ಲಭ್ಯವಿದೆ.

Bengaluru, Karnataka, India
Edited By: Satish Raj Goravigere

ಸಮಾಜದಲ್ಲಿ ಕೇವಲ ಒಂದು ವರ್ಗದ ಜನರು ಮಾತ್ರ ಅಭಿವೃದ್ಧಿ ಹೊಂದರೆ ಸಾಧ್ಯವಿಲ್ಲ. ಬಡವರು (poor people), ಮಧ್ಯಮ ವರ್ಗದವರು (middle class family) ಎಲ್ಲರೂ ಕೂಡ ಆರ್ಥಿಕವಾಗಿ ಸಬಲರಾಗಬೇಕು, ಅವರಿಗೆ ಆರೋಗ್ಯದಲ್ಲಿ ಅಥವಾ ಆಹಾರದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳನ್ನು (government schemes) ಜಾರಿಗೆ ತರುತ್ತದೆ

ಅಷ್ಟೇ ಅಲ್ಲದೆ ಎಲ್ಲರಿಗೂ ಸ್ವಂತ ಆಸ್ತಿ ಅಥವಾ ಜಮೀನು (Own Property) ಇಲ್ಲದೆ ಇರುವಾಗ ಅಂತವರಿಗೆ ಉಚಿತವಾಗಿ ಸರ್ಕಾರದ ಜಮೀನನ್ನೇ ನೀಡುವುದರ ಮೂಲಕ ಬಡವರಿಗೆ ಇನ್ನಷ್ಟು ಅನುಕೂಲವನ್ನು ಸರ್ಕಾರ ಮಾಡಿಕೊಟ್ಟಿದೆ.

New scheme for farmer women of agricultural family, loans at low interest

ಸಮಾಜದಲ್ಲಿ ವಾಸಿಸುವ ವರ್ಗದ ಜನರು ತಮ್ಮ ಸ್ವಂತ ಜಮೀನು (own land) ಹೊಂದಿಲ್ಲದೆ ಇದ್ದರೆ ಸರ್ಕಾರದಿಂದಲೇ ಭೂಮಿ ಪಡೆಯಬಹುದು. ಹಾಗಾದ್ರೆ ಯಾರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತೆ ಭೂಮಿಯನ್ನು ಉಚಿತವಾಗಿ ಕೊಡುವ ಯೋಜನೆ ಯಾವುದು? ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ.

PUC ಪಾಸ್ ಆಗಿದ್ರೆ ಸಿಗುತ್ತೆ 42,500 ವೇತನ; ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಆರಂಭ

ಭೂ ಒಡೆತನ ಯೋಜನೆ! (Land tenure scheme)

ಸಮಾಜ ಕಲ್ಯಾಣ ಇಲಾಖೆ (Commissionerate of social welfare) ರಾಜ್ಯದಲ್ಲಿ ವಾಸಿಸುವ ವಿವಿಧ ಪರಿಶಿಷ್ಟ ಜಾತಿ (scheduled cast) ಹಾಗೂ ಪರಿಶಿಷ್ಟ ಪಂಗಡ (schedule tribes) ದವರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದೆ.

ಅದರಲ್ಲೂ ಮುಖ್ಯವಾಗಿ ಬಡ ವರ್ಗದ ಜನರ ಆರ್ಥಿಕ ಏಳ್ಗೆಗಾಗಿ ಸ್ವಉದ್ಯೋಗ (Own Business) ಮಾಡಲು ಅತಿ ಕಡಿಮೆ ದರದಲ್ಲಿ ಸಾಲ ಸೌಲಭ್ಯ (Loan) ನೀಡುವುದು, ಗಂಗಾ ಕಲ್ಯಾಣ ಯೋಜನೆ (Ganga Kalyan Yojana) ಯಂತಹ ಉತ್ತಮ ಯೋಜನೆಗಳ ಮೂಲಕ ರೈತರ ಕೃಷಿ ಜಮೀನಿಗೆ (Agriculture Land) ಅಗತ್ಯವಿರುವ ವಸ್ತುಗಳನ್ನು ಒದಗಿಸುವುದು ಹಾಗೂ ಇತ್ತೀಚಿಗೆ ಭೂ ಒಡೆತನ ಯೋಜನೆಯ ಮೂಲಕ ಸ್ವಂತ ಜಮೀನು ಹೊಂದಲು ಜನರಿಗೆ ಅವಕಾಶ ಮಾಡಿಕೊಡುವುದು ಈ ರೀತಿಯಾದ ಯೋಜನೆಗಳು ಸದ್ಯ ರಾಜ್ಯ ಸರ್ಕಾರದಿಂದ ಜನರಿಗೆ ಲಭ್ಯವಿದೆ. ಹಾಗಾಗಿ ಯೋಜನೆಯ ಅಡಿಯಲ್ಲಿ ಅರ್ಹ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರು ಭೂ ಒಡೆತನದ ಹಕ್ಕನ್ನು ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋರಿಗೂ ಈಗ ಹಣ ಬಂದಿದೆ! ಬ್ಯಾಂಕ್ ಖಾತೆ ನೋಡಿಕೊಳ್ಳಿ

Land tenure schemeಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ ಹಾಗೂ ದಾಖಲೆ! (Eligibility and documents for apply)

*21ರಿಂದ 50 ವರ್ಷದ ಒಳಗಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಭೂ ಒಡೆತನ ಯೋಜನೆಯ ಅಡಿಯಲ್ಲಿ ಸ್ವಂತ ಜಮೀನು ಹೊಂದಲು ಅವಕಾಶ ನೀಡಲಾಗುವುದು.

*ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರು ಹಾಗೂ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

*ಗ್ರಾಮೀಣ ಭಾಗದಲ್ಲಿ 1.5 ಲಕ್ಷ ವಾರ್ಷಿಕ ವರಮಾನ ಹಾಗೂ ನಗರ ಭಾಗದಲ್ಲಿ 2 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

*ವಾಸ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು.

*ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರಾಗಿರುವ ವ್ಯಕ್ತಿಯ ವಾಸಸ್ಥಳದಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಚಿತ ಸರ್ಕಾರಿ ಜಮೀನು ಪಡೆದುಕೊಳ್ಳಲು ಅವಕಾಶವಿದೆ.

ಕೃಷಿ ಮಾಡೋ ಮಹಿಳೆಯರಿಗೆ ಭೂಮಿ ಖರೀದಿಗೆ ಸರ್ಕಾರದಿಂದ 25 ಲಕ್ಷ ಸಬ್ಸಿಡಿ ಸಾಲ

ದಾಖಲೆಗಳು! (Documents)

ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಕೃಷಿ ಕಾರ್ಮಿಕ ಮಹಿಳೆಯಾಗಿದ್ದರೆ ಅಧಿಕೃತ ಪ್ರಮಾಣ ಪತ್ರ
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಬ್ಯಾಂಕ ಖಾತೆಯ ವಿವರ (ಕೆವೈಸಿ ಆಗಿರುವುದು ಕಡ್ಡಾಯ)

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಭೂಕಲ್ಯಾಣ ಯೋಜನೆಯ ಅಡಿ ಉಚಿತ ಸರ್ಕಾರಿ ಜಮೀನು ಪಡೆದುಕೊಳ್ಳಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದ್ದು ಇದಕ್ಕಾಗಿ ನೀವು ಎಲ್ಲಾ ದಾಖಲೆಗಳನ್ನು ಹೊಂದಿದ್ದರೆ ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ ಅಥವಾ ಅಟಲ್ ಜಿ ಜನಸ್ನೇಹಿ ಸೇವಾ ಕೇಂದ್ರ ಮೊದಲಾದ ಹತ್ತಿರದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (contact for more details)

9482300400 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಥವಾ comr.sw@gmail.com ಇದಕ್ಕೆ mail ಕಳುಹಿಸಿ. https://swdservices.karnataka.gov.in/ ಈ ವೆಬ್ ಪೋರ್ಟಲ್ ನಲ್ಲಿ ಮಾಹಿತಿ ಪಡೆಯಬಹುದು.

get the right of land ownership from the government