subsidy loan : ಭೂಮಿ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಸರ್ಕಾರ ನಿಮಗೆ ಸಾತ್ ನೀಡಲಿದೆ. 25 ಲಕ್ಷಗಳ ವರೆಗೆ ಸಬ್ಸಿಡಿ ಸಾಲ (Government Loan for land purchase) ಪಡೆದುಕೊಳ್ಳಲು ಸಾಧ್ಯವಿದೆ, ಇದು ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು ರಾಜ್ಯದ ಸಾಕಷ್ಟು ಜನ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಭೂಮಿ ಖರೀದಿಗೆ ಸರ್ಕಾರದಿಂದ ಸಾಲ ಸೌಲಭ್ಯ! (Government subsidy loan for land purchase)
ಈ ಯೋಜನೆಯ ಪ್ರಮುಖ ಗುರಿ ಮಹಿಳಾ ಕೃಷಿ ಕಾರ್ಮಿಕರು ಹಾಗೂ ರೈತರು ಸ್ವಂತ ಜಮೀನು (Own Property) ಇಲ್ಲದೆ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಇನ್ನು ಮುಂದೆ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ
ಇಂಥವರಿಗಾಗಿಯೇ ಸರ್ಕಾರ ಯೋಜನೆಯನ್ನು ರೂಪಿಸಿದ್ದು 25 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ (Subsidy Loan) ಪಡೆದು ಸ್ವಂತ ಜಮೀನು (own agriculture land) ಖರೀದಿ ಮಾಡಬಹುದು.
ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರು ತಮ್ಮ ವಾಸ ಸ್ಥಳದ 10 ಕಿ.ಮೀ ವ್ಯಾಪ್ತಿಯಲ್ಲಿ ಜಮೀನು ಖರೀದಿಸಲು ಅವಕಾಶ ಮಾಡಿಕೊಡಲಾಗುವುದು. ಕೃಷಿಗೆ ಯೋಗ್ಯವಾದ 2 ಎಕರೆ ಖುಷ್ಕ ಭೂಮಿ ಅಥವಾ ಒಂದು ಎಕರೆ ತರಿ ಭೂಮಿ ಖರೀದಿಸಬಹುದು.
ಉದ್ಯೋಗ ಸಿಕ್ಕಿಲ್ವಾ? ಹಾಗಾದ್ರೆ ನಿರುದ್ಯೋಗಿಗಳಿಗೆ ಸರ್ಕಾರವೇ ಕೊಡುತ್ತೆ 3,000 ರೂಪಾಯಿ
ಯಾವ ಜಿಲ್ಲೆಗೆ ಎಷ್ಟು ಸಬ್ಸಿಡಿ? (Subsidy Loan For These District)
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಿಗೆ ಕೃಷಿ ಭೂಮಿ ಖರೀದಿ ಮಾಡಲು ಮಹಿಳಾ ಹಾಗೂ ಇತರ ರೈತರಿಗೆ 25 ಲಕ್ಷವನ್ನು ಸಾಲವಾಗಿ ನೀಡಲಾಗುವುದು ಹಾಗೂ ಇತರ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುವುದು. ಇದು 50 – 50 ಯೋಜನೆಯಾಗಿದ್ದು, 50% ನಷ್ಟು ಸರ್ಕಾರ ಪಾವತಿಸುತ್ತದೆ. ಹಾಗೂ ಇನ್ನೂ ಮಿಕ್ಕ 50% ನಷ್ಟು ಭೂಮಿ ಖರೀದಿ ಮಾಡಿದವರು ಸಾಲದ ರೂಪದಲ್ಲಿ ತೀರಿಸಬೇಕಾಗುತ್ತದೆ.
ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents for loan sanction)
ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ (income certificate)
ಜಾತಿ ಪ್ರಮಾಣ ಪತ್ರ (cast certificate)
ಕೃಷಿ ಕಾರ್ಮಿಕರ ಪ್ರಮಾಣ ಪತ್ರ
ನಿವಾಸದ ವಿಳಾಸ ಮತ್ತು ಪುರಾವೆ
ರೇಷನ್ ಕಾರ್ಡ್
ಡಿಸೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ನಿಮಗೂ ಜಮಾ ಆಗಿದ್ಯಾ ಚೆಕ್ ಮಾಡಿಕೊಳ್ಳಿ
ಸಾಲ ಸೌಲಭ್ಯ ಪಡೆದುಕೊಳ್ಳಲು ಯಾರು ಅರ್ಜಿ ಸಲ್ಲಿಸಬಹುದು?
ಭೂ ಒಡೆತನ ಯೋಜನೆಯ ಮೂಲಕ ಭೂಮಿ ಖರೀದಿಸಲು ಸಾಲ ಪಡೆದುಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಕೃಷಿ ಕಾರ್ಮಿಕರು ಹಾಗೂ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಈ ಕೆಲವು ನಿಗಮಗಳ ಸಮುದಾಯದವರು ಅರ್ಜಿ ಸಲ್ಲಿಸಬಹುದು.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿ. ರಾಜ್ಯ ತಾಂಡ ಅಭಿವೃದ್ಧಿ ನಿ. ರಾಜ್ಯ ಆದಿಜಾಂಬವ ಅಭಿವೃದ್ಧಿ ನಿ., ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿ., ಎಸ್ ಸಿ ಎಸ್ ಟಿ ಅಲೆಮಾರಿ ಅಭಿವೃದ್ಧಿ ನಿ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿ. ಅಡಿಯಲ್ಲಿ ಬರುವ ಸಮುದಾಯದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ? (How to apply to get loan)
ಭೂ ಒಡೆತನ ಯೋಜನೆಯ ಅಡಿಯಲ್ಲಿ ಭೂಮಿಕರಿಗೆ ಸಾಲ ಸೌಲಭ್ಯ ಪಡೆದುಕೊಳ್ಳಲು
https://sevasindhu.karnataka.gov.in/Sevasindhu/Kannada?ReturnUrl=%2F ಈ ವೆಬ್ ಸೈಟಿಗೆ ಭೇಟಿ ನೀಡಿ. ಹತ್ತಿರದ ಸೇವಾ ಕೇಂದ್ರಗಳಲ್ಲಿಯೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರವೇ ಕೊಡುತ್ತೆ 2.5 ಲಕ್ಷ ಸಬ್ಸಿಡಿ ಸಾಲ
ಕೃಷಿ ಭೂಮಿ ಖರೀದಿ ಮಾಡಲು ಸಾಲ ಸೌಲಭ್ಯ ಮಂಜೂರಾದರೂ ಕೂಡ ಯಾವುದೇ ಹಂತದಲ್ಲಿ ಅವರು ಅನರ್ಹರು ಎಂದು ಸಾಬೀತಾದರೆ ಸಾಲ ಮಂಜೂರಾತಿ ಕ್ಯಾನ್ಸಲ್ ಆಗುತ್ತದೆ.
25 lakh subsidy loan for the purchase of agricultural Land for women
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.