ಉದ್ಯೋಗ ಸಿಕ್ಕಿಲ್ವಾ? ಹಾಗಾದ್ರೆ ನಿರುದ್ಯೋಗಿಗಳಿಗೆ ಸರ್ಕಾರವೇ ಕೊಡುತ್ತೆ 3,000 ರೂಪಾಯಿ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಯುವನಿಧಿ ಯೋಜನೆ (Yuva Nidhi scheme) ಕೂಡ ಒಂದು. ಈಗಾಗಲೇ ನಾಲ್ಕು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಈಗ ಐದನೇ ಯೋಜನೆ, ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಮುಹೂರ್ತ ಫಿಕ್ಸ್ ಮಾಡಿದೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೇ ಮಾಹಿತಿ ನೀಡಿದ್ದಾರೆ.
ಯುವನಿಧಿ ಯೋಜನೆಗೆ ಚಾಲನೆ! (Yuva Nidhi scheme)
ಸಿಎಂ ಸಿದ್ದರಾಮಯ್ಯ ಅವರು ತಿಳಿಸಿರುವಂತೆ ಈ ತಿಂಗಳ ಅಂತ್ಯದ ಒಳಗೆ ಅಥವಾ ಜನವರಿ 2024ರ ಮೊದಲ ವಾರದಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುವುದು. ಇದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಡಿಸೆಂಬರ್ 21ರಿಂದ ಆರಂಭವಾಗುವ ನೀರಿಕ್ಷೆ ಇದೆ, ಹಾಗಾಗಿ ಯುವನಿಧಿ ಯೋಜನೆಯ ಅಡಿಯಲ್ಲಿ ಮಾಸಿಕ ಭತ್ಯೆ ಪಡೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಎಲ್ಲಾ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ.
ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
ಯುವ ನಿಧಿ ಯೋಜನೆಯ ಪ್ರಯೋಜನ! (Benefits of Yuva Nidhi Yojana)
*ಪದವಿ ಕೋರ್ಸ್ ಗಳನ್ನು ಮುಗಿಸಿ ಹಾಗೂ ಡಿಪ್ಲೋಮಾ ಕೋರ್ಸ್ ಮುಗಿಸಿ 180 ದಿನಗಳ ವರೆಗೆ ಅಂದರೆ ಆರು ತಿಂಗಳವರೆಗೆ ಉದ್ಯೋಗ ಸಿಗದೇ ಇರುವ ನಿರುದ್ಯೋಗಿ ಯುವಕ ಯುವತಿಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
*ಇದು ಎರಡು ವರ್ಷಗಳ ಅವಧಿಗೆ ಸಿಗುವ ಮಾಸಿಕ ಭತ್ಯೆ ಆಗಿದ್ದು, ನೌಕರಿ ಸಿಗುತ್ತಿದ್ದ ಹಾಗೆ ಅಭ್ಯರ್ಥಿಗಳು ತಮಗೆ ನೌಕರಿ ಸಿಕ್ಕಿರುವ ವಿಷಯವನ್ನು ತಿಳಿಸಿದರೆ, ಅವರ ಖಾತೆಗೆ (Bank Account) ಹಣ ವರ್ಗಾವಣೆ ಮಾಡುವುದನ್ನು ನಿಲ್ಲಿಸಲಾಗುವುದು.
*ಪದವಿ (degree) ತರಗತಿ ಮುಗಿಸಿರುವವರಿಗೆ 3,000 ಹಾಗೂ ಡಿಪ್ಲೋಮೋ ಕೋರ್ಸ್ (diploma courses) ಮಾಡಿರುವವರಿಗೆ 1,500 ಪ್ರತಿ ತಿಂಗಳು ಸರ್ಕಾರ ನೇರವಾಗಿ ಖಾತೆಗೆ ಜಮಾ ಮಾಡಲಿದೆ.
*ಉನ್ನತ ಶಿಕ್ಷಣ (higher education) ವ್ಯಾಸಂಗಕ್ಕೆ ಹೋದವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
*ಅಪ್ರೆಂಟಿಸ್ಗಳು (apprentice) ಅರ್ಜಿ ಹಾಕುವಂತಿಲ್ಲ.
*ಪದವಿ ಮುಗಿದು ಉದ್ಯೋಗ ಪಡೆದವರು ಅರ್ಜಿ ಹಾಕುವಂತಿಲ್ಲ.
*2022 23ನೇ ಸಾಲಿನಲ್ಲಿ ಅಧ್ಯಯನ ಮುಗಿಸಿದವರು ಮಾತ್ರ ಅರ್ಜಿ ಹಾಕಬಹುದು. ಅದಕ್ಕಿಂತ ಹಿಂದಿನ ವರ್ಷ ಪದವಿ ಮುಗಿಸಿದವರು ನಿರುದ್ಯೋಗಿಗಳಾಗಿದ್ದರು ಕೂಡ ಈ ಯೋಜನೆಯ ಫಲಾನುಭವಿಗಳಾಗುವುದಿಲ್ಲ.
ಡಿಸೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ನಿಮಗೂ ಜಮಾ ಆಗಿದ್ಯಾ ಚೆಕ್ ಮಾಡಿಕೊಳ್ಳಿ
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents you needed)
*ಆಧಾರ್ ಕಾರ್ಡ್
*ಪದವಿ ಕೋರ್ಸ್ ಹಾಗೂ ಡಿಪ್ಲೋಮಾ ಮುಗಿಸಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ
*ಪದವಿ ಅಥವಾ ಡಿಪ್ಲೋಮಾ ಮಾರ್ಕ್ಸ್ ಕಾರ್ಡ್
*ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (6 month bank statement)
*ಅಭ್ಯರ್ಥಿಯ ಇತ್ತೀಚಿನ ಫೋಟೋ
*ವಿಳಾಸ ಪುರಾವೆ
*ನಿರುದ್ಯೋಗಿ ಎಂಬುದಕ್ಕೆ ಸ್ವಯಂ ಘೋಷಣಾ ಪತ್ರ
*ಬ್ಯಾಂಕ್ ಖಾತೆಯ ವಿವರ (Bank Account Details)
*ಆದಾಯ ಪ್ರಮಾಣ ಪತ್ರ
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರವೇ ಕೊಡುತ್ತೆ 2.5 ಲಕ್ಷ ಸಬ್ಸಿಡಿ ಸಾಲ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು https://sevasindhu.karnataka.gov.in/ ಸೇವಾ ಸಿಂಧು ಈ ಅಧಿಕೃತ ವೆಬ್ಸೈಟ್ನಲ್ಲಿ (seva Sindhu official website) ಮಾಹಿತಿ ಪಡೆದುಕೊಳ್ಳಿ
ಡಿಸೆಂಬರ್ 21ರಿಂದ 26 ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬಹುದು. ಆದರೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು ಅಥವಾ ಇತರ ಯೋಜನೆಗಳಂತೆ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕೆ ಎನ್ನುವ ಬಗ್ಗೆ ಸರ್ಕಾರ ಇಲ್ಲಿಯವರೆಗೆ ಸ್ಪಷ್ಟನೆ ನೀಡಿಲ್ಲ
ಸದ್ಯದಲ್ಲಿಯೇ ಹೊಸ ಆದಿಸೂಚನೆ ಹೊರಡಿಸುವುದರ ಮೂಲಕ ಯೋಜನೆಯ ಬಗ್ಗೆ ಇನ್ನಷ್ಟು ಸ್ಪಷ್ಟನೆ ನೀಡಬಹುದು. ಯುವ ನಿಧಿ ಯೋಜನೆಯ ಅಡಿಯಲ್ಲಿ ಮಾಸಿಕ ಭತ್ಯೆಯ ಪಡೆದುಕೊಳ್ಳಲು ಬಯಸುವ ಅಭ್ಯರ್ಥಿಗಳು, ಒಂದು ವೇಳೆ ಎರಡು ವರ್ಷಗಳ ಅವಧಿಯ ಒಳಗೆ ನೌಕರಿ ಸಿಕ್ಕರೆ ಅದನ್ನು ಘೋಷಣೆ ಮಾಡದೇ ಹಾಗೆ ಇದ್ದರೆ ಅದು ಸರ್ಕಾರದ ಗಮನಕ್ಕೆ ಬಂದರೆ ಬಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಹಾಗಾಗಿ ಸರ್ಕಾರ ಈಗ ನೀಡುವ ಹಣವನ್ನು ನಿಮ್ಮ ತಿಂಗಳ ವೆಚ್ಚಕ್ಕಾಗಿ ಮೀಸಲಿಟ್ಟುಕೊಂಡು ಉದ್ಯೋಗ ಹುಡುಕುವುದನ್ನು ಮರೆಯಬೇಡಿ.
The government gives 3,000 rupees to the unemployed




