ಕರ್ನಾಟಕ ರಾಜ್ಯ ಸರ್ಕಾರ (State government) ಈಗಾಗಲೇ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ, ಇದರ ಜೊತೆಗೆ ರಾಜ್ಯದಲ್ಲಿ ಇರುವ ನಿರುದ್ಯೋಗ ಸಮಸ್ಯೆಯು (unemployed problems) ಹೋಗಲಾಡಿಸಬೇಕು ಹಾಗೂ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವ ಕಾರಣಕ್ಕೆ ಸರ್ಕಾರದ ಬೇರೆಬೇರೆ ಇಲಾಖೆಯಲ್ಲಿ ಅಗತ್ಯ ಇರುವ ಹುದ್ದೆಗಳ ಭರ್ತಿಗೆ ಸೂಚನೆ ಹೊರಡಿಸಿದೆ.
ಹಾಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಕರ್ಷಕ ವೇತನ ಪಡೆಯಬಹುದು ಜೊತೆಗೆ ಸರ್ಕಾರಿ ನೌಕರಿ ಆಗಿರುವುದರಿಂದ ಕಾಯಂ ನೌಕರಿಯನ್ನು ಕೂಡ ಪಡೆಯಬಹುದು.
ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋರಿಗೂ ಈಗ ಹಣ ಬಂದಿದೆ! ಬ್ಯಾಂಕ್ ಖಾತೆ ನೋಡಿಕೊಳ್ಳಿ
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನೂತನ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ (Village accountant recruitment 2023) ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅಂದರೆ ಕೋವಿಡ್ ಸಮಯದಿಂದಲೂ ಕಂದಾಯ ಇಲಾಖೆಯಲ್ಲಿ ಯಾವುದೇ ರೀತಿಯ ನೇಮಕಾತಿ ಆಗಿಲ್ಲ ಈ ಹಿನ್ನೆಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುತ್ತಿದೆ.
ದ್ವಿತೀಯ ಪಿಯುಸಿ (2nd PUC) ಮುಗಿಸಿರುವವರು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಅವಕಾಶ ಪಡೆದುಕೊಳ್ಳಬಹುದು. ಅದರಲ್ಲೂ ಯಾರು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸುತ್ತಾರೋ ಅಂತವರಿಗೆ ಈ ಹುದ್ದೆಗಳನ್ನು ನೀಡಲಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ನೂರಕ್ಕೆ ನೂರರಷ್ಟು ಅಂಕ ತೆಗೆದು ಪಾಸ್ ಆಗುತ್ತಾರೆ ಹಾಗಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.
ಇದೆಲ್ಲವನ್ನ ಪರಿಹರಿಸುವ ಸಲುವಾಗಿ ಕೆಲವು ಹೊಸ ಆಯ್ಕೆ ನೀತಿಯನ್ನು ರೂಪಿಸಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇನ್ನು ಮುಂದೆ ಗ್ರಾಮ ಲೆಕ್ಕಾಧಿಕಾರಿ ಎನ್ನುವ ಹೆಸರನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಮೊದಲಿಗಿಂತಲೂ ವಿಭಿನ್ನವಾಗಿದ್ದು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಪರಿಗಣಿಸಿ ಅವರಿಗೆ ಲಿಖಿತ ಪರೀಕ್ಷೆ ನೇರ ಸಂದರ್ಶನ ಮಾಡಲಾಗುತ್ತದೆ ಹಾಗೂ ಸೂಕ್ತ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.
ಕೃಷಿ ಮಾಡೋ ಮಹಿಳೆಯರಿಗೆ ಭೂಮಿ ಖರೀದಿಗೆ ಸರ್ಕಾರದಿಂದ 25 ಲಕ್ಷ ಸಬ್ಸಿಡಿ ಸಾಲ
ಸದ್ಯ ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ಪಟ್ಟಿ ಬಿಡುಗಡೆ ಮಾಡಿದ್ದು ನಿಮ್ಮ ಊರಿನಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
ಇದರ ಜೊತೆಗೆ ದ್ವಿತೀಯ ಪಿಯುಸಿ ಮುಗಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಗಳ (competitive exam) ಬಗ್ಗೆ ಸ್ವಲ್ಪ ಗಮನ ಹರಿಸಿ ಇದರಿಂದ ಯಾವಾಗ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ ಆಗ ನೀವು ಸರಿಯಾದ ಉತ್ತರ ನೀಡುವ ಮೂಲಕ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಉದ್ಯೋಗ ಸಿಕ್ಕಿಲ್ವಾ? ಹಾಗಾದ್ರೆ ನಿರುದ್ಯೋಗಿಗಳಿಗೆ ಸರ್ಕಾರವೇ ಕೊಡುತ್ತೆ 3,000 ರೂಪಾಯಿ
ಬೆಂಗಳೂರು ನಗರ – 56, ಬೆಂಗಳೂರು ಗ್ರಾಮಾಂತರ – 70, ರಾಮನಗರ – 92, ತುಮಕೂರು – 129, ಚಿಕ್ಕಮಗಳೂರು – 41, ಮೈಸೂರು – 112, ಚಿಕ್ಕಬಳ್ಳಾಪುರ – 47, ಮಂಡ್ಯ – 108, ಚಾಮರಾಜನಗರ – 99, ಹಾಸನ – 96, ಕೊಡಗು – 8, ದಕ್ಷಿಣ ಕನ್ನಡ – 90, ಉಡುಪಿ – 40, ಬೆಳಗಾವಿ – 116, ವಿಜಯಪುರ – 11, ಬಾಗಲಕೋಟೆ – 46, ಧಾರವಾಡ – 29, ಗದಗ – 54, ಹಾವೇರಿ – 61, ಉತ್ತರ ಕನ್ನಡ – 14, ಬೀದರ್ – 44, ರಾಯಚೂರು – 23, ಕಲ್ಬುರ್ಗಿ – 121, ಕೊಪ್ಪಳ – 33, ಯಾದಗಿರಿ – 18, ಬಳ್ಳಾರಿ – 34, ವಿಜಯನಗರ – 24 ಒಟ್ಟು 1839 ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
ಆಯ್ಕೆಯಾದ ಅಭ್ಯರ್ಥಿಗಳಿಗೆ 21,000 ದಿಂದ 42,500 ವರೆಗೆ ತಿಂಗಳ ವೇತನ ನೀಡಲಾಗುವುದು. ಇದರ ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲಾ ಪ್ರಯೋಜನಗಳನ್ನು ಕೂಡ ಪಡೆಯಬಹುದು. 18 ರಿಂದ 35 ವರ್ಷ ವಯಸ್ಸಿನ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆದರೆ ಎಸ್ ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರದಿಂದ ಅರ್ಜಿ ಸಲ್ಲಿಸುವಿಕೆಯ ಬಗ್ಗೆ ಅಧಿಸೂಚನೆ ಹೊರಡಲಿದೆ.
Recruitment for the posts of Village Accountant has started