ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋರಿಗೂ ಈಗ ಹಣ ಬಂದಿದೆ! ಬ್ಯಾಂಕ್ ಖಾತೆ ನೋಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಡಿಯಲ್ಲಿ ಯಾರ ಖಾತೆಗೆ (Bank Account) ಹಣ ವರ್ಗಾವಣೆ ಆಗಿಲ್ಲವೋ ಅಂತವರಿಗೆ ಪೆಂಡಿಂಗ್ ಹಣ (pending amount) ವನ್ನು ಪಾವತಿ ಮಾಡುವುದಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ, ಈ ಹಿನ್ನೆಲೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳು (technical error) ಇದ್ದು ಅವುಗಳ ನಿವಾರಣೆಯಲ್ಲಿ ಸರ್ಕಾರ ತೊಡಗಿದೆ.
ಕೆಲವು ವಿಶೇಷ ಅಧಿಕಾರಿಗಳನ್ನು ನೇಮಿಸುವುದರ ಜೊತೆಗೆ ಗೃಹಲಕ್ಷ್ಮಿ ಹಣವನ್ನು ಫಲಾನುಭವಿ ಮಹಿಳೆಯರಿಗೆ ಸಂದಾಯ ಮಾಡಲು ಸರ್ಕಾರ ನಿರ್ಧರಿಸಿದೆ, ಮೊದಲ ಕಂತಿನ ಹಣ ಕೆಲವು ಮಹಿಳೆಯರಿಗೆ ಬಿಡುಗಡೆ ಆಗಿತ್ತು. ಇನ್ನು ಎರಡನೇ ಕಂತಿನ ಹಣವು ಸಾಕಷ್ಟು ಜನರಿಗೆ ಲಭ್ಯವಾಗಿದೆ.
ಮೂರನೇ ಕಂತು ಕಳೆದು ಈಗ 15 ಜಿಲ್ಲೆಗಳಲ್ಲಿ ನಾಲ್ಕನೇ ಕಂತಿನ ಹಣವು ಬಿಡುಗಡೆ ಆಗಿದ್ದು, ಹಂತ ಹಂತವಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಹಣ ಬರುವಂತೆ (Money Deposit) ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಕೃಷಿ ಮಾಡೋ ಮಹಿಳೆಯರಿಗೆ ಭೂಮಿ ಖರೀದಿಗೆ ಸರ್ಕಾರದಿಂದ 25 ಲಕ್ಷ ಸಬ್ಸಿಡಿ ಸಾಲ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದು!
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಗ್ಯಾರಂಟಿ ಯೋಜನೆಗಳು (Karnataka government guarantee scheme) ಕೂಡ ಅರ್ಹ ಜನರಿಗೆ ಆರ್ಥಿಕ ಸಪೋರ್ಟ್ (financial support) ನೀಡುತ್ತದೆ
ಅದರಲ್ಲೂ ಗೃಹಲಕ್ಷ್ಮಿ ಯೋಜನೆ ವಿಶೇಷವಾಗಿ ಮಹಿಳೆಯರಿಗಾಗಿಯೇ ರೂಪಿತಗೊಂಡಿದ್ದು ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಿದೆ. ಆದ್ರೆ ಸಾಕಷ್ಟು ಜನರ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ ಎನ್ನುವುದು ಮಹಿಳೆಯರ ಬಹಳ ದೊಡ್ಡ ದೂರು. ಡಿಸೆಂಬರ್ 31ರ ಒಳಗೆ ಪ್ರತಿ ಫಲಾನುಭವಿಗಳ ಖಾತೆಗೆ (Bank Account) ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ.
ಉದ್ಯೋಗ ಸಿಕ್ಕಿಲ್ವಾ? ಹಾಗಾದ್ರೆ ನಿರುದ್ಯೋಗಿಗಳಿಗೆ ಸರ್ಕಾರವೇ ಕೊಡುತ್ತೆ 3,000 ರೂಪಾಯಿ
ಮೊಬೈಲ್ ಮೂಲಕವೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! (Check your status in mobile application)
ಗೃಹಲಕ್ಷ್ಮಿ ಯೋಜನೆ ಆರಂಭವಾಗುತ್ತಿದ್ದ ಹಾಗೆ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ( DBT ) ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ನ್ನು ಸರ್ಕಾರ ಬಿಡುಗಡೆ ಮಾಡಿತ್ತು
ಆದರೆ ಈ ಅಪ್ಲಿಕೇಶನ್ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಇದೀಗ ಮೊಬೈಲ್ ಅಪ್ಲಿಕೇಶನ್ ನಲ್ಲಿ ಕೆಲವು ಡೆವಲಪ್ಮೆಂಟ್ ಮಾಡಲಾಗಿದ್ದು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಮಾತ್ರವಲ್ಲದೆ ಸರ್ಕಾರದಿಂದ ಡಿ ಬಿ ಟಿ ಆಗುವ ಎಲ್ಲಾ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಬಹುದು.
ಇದಕ್ಕಾಗಿ ನೀವು ಡಿ ಬಿ ಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ನಂತರ ನಿಮ್ಮ ಆಧಾರ್ ಸಂಖ್ಯೆ ನೀಡಿ ಓಟಿಪಿ (OTP) ಕಳುಹಿಸಿ ಲಾಗಿನ್ ಆಗಬೇಕು. ಬಳಿಕ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಸಾಧ್ಯವಿದೆ.
ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
ಹಣ ಮಂಜೂರು ಆಗಿಲ್ಲ ಎನ್ನುವವರು ಹೀಗೆ ಮಾಡಿ!
ಸರ್ಕಾರ ಆದಷ್ಟೂ ಪ್ರಯತ್ನ ಪಡುತ್ತಿದ್ದರು ಕೂಡ ಕೆಲವು ತಾಂತ್ರಿಕ ದೋಷಗಳಿಂದಾಗಿ ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಡಿಸೆಂಬರ್ 20 ನೇ ತಾರೀಖಿನ ಒಳಗೆ ಮಹಿಳೆಯರಿಗೆ ಹಣ ವರ್ಗಾವಣೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ, ನಾಲ್ಕನೇ ಕಂತಿನ ಹಣ, ಉತ್ತರ ಕನ್ನಡ ಕಲ್ಬುರ್ಗಿ, ಮಂಗಳೂರು ಮೈಸೂರು ಸೇರಿದಂತೆ ಸುಮಾರು ಹದಿನೈದು ಜಿಲ್ಲೆಗಳಿಗೆ ವರ್ಗಾವಣೆ ಆಗಿದೆ.
ಇನ್ನು ಯಾರ ಖಾತೆಗೆ ಇದುವರೆಗೆ ಹಣ ಬಂದಿಲ್ಲವೂ ಅಂತವರ ಬ್ಯಾಂಕ್ ಅಕೌಂಟ್ ನಲ್ಲಿ ಸಮಸ್ಯೆ ಇರುವುದರಿಂದಾಗಿ ಹಣ ವರ್ಗಾವಣೆ ಆಗುತ್ತಿಲ್ಲ ಬ್ಯಾಂಕ್ ಆಧಾರ್ ಸೀಡಿಂಗ್ (Aadhaar seeding) ಮಾಡಿಕೊಳ್ಳಲು ಆಗದೆ ಇದ್ದಲ್ಲಿ ಅಥವಾ ಹೆಸರಿನಲ್ಲಿ ವ್ಯತ್ಯಾಸ ಇದ್ದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.
ಆದರೆ ಎಲ್ಲಾ ಮಾಹಿತಿ ಹಾಗೂ ದಾಖಲೆಗಳು ಸರಿಯಾಗಿವೆ. ಆದರೂ ಹಣ ವರ್ಗಾವಣೆ ಆಗುತ್ತಿಲ್ಲ ಯಾಕೆ ಎನ್ನುವ ಮಹಿಳೆಯರು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ (nationalised bank) ಗಳಲ್ಲಿ ಅಥವಾ ಅಂಚೆ ಕಚೇರಿ (post office) ಯಲ್ಲಿ ಹೊಸ ಖಾತೆ ತೆರೆದು ನೋಡಿ. ಕೇವಲ 2 ರಿಂದ 3 ದಿನಗಳಲ್ಲಿ ಹಣ ಜಮಾ ಆಗುತ್ತದೆ, ಆಗಿರುವ ಉದಾಹರಣೆಗಳು ಇವೆ.. ಹಾಗಾಗಿ ಇದೊಂದು ಪ್ರಯತ್ನವನ್ನ ಮಹಿಳೆಯರು ಮಾಡಬಹುದು.
ಗೃಹಲಕ್ಷ್ಮಿ ಹಣ ಏಕೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬುದಕ್ಕೆ ಕೊನೆಗೂ ಸಿಕ್ತು ಉತ್ತರ
Many Pending Beneficiaries received Gruha Lakshmi Scheme money now