ಯುವನಿಧಿ ಯೋಜನೆಗೆ ಹೊಸ ಹೊಸ ಕಂಡೀಷನ್! ಇಂಥವರಿಗೆ ಮಾತ್ರ ಸಿಗಲಿದೆ ಹಣ
ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದ್ದು, ಐದನೇ ಗ್ಯಾರಂಟಿ ಯೋಜನೆಯ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ ನಿರುದ್ಯೋಗ ಭತ್ಯೆ ಯಾರಿಗೆ ಸಿಗುತ್ತೆ? ಯಾರು ಯಾವಾಗ ಹೇಗೆ ಅಪ್ಲೈ ಮಾಡಬೇಕು?
ಬಿಪಿಎಲ್ ಕಾರ್ಡ್ ಹೊಂದಿದ್ರೆ ಮಾತ್ರ ನಿರುದ್ಯೋಗ ಭತ್ಯೆ ಕೊಡಲಾಗುವುದೇ, ನಿರುದ್ಯೋಗ ಭತ್ಯೆ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಈ ಬಗ್ಗೆ ಅಪ್ಡೇಟ್ ಇಲ್ಲಿದೆ
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರುವ ಬಗ್ಗೆ ಡಿಬಿಟಿ ಚೆಕ್ ಮಾಡಿಕೊಳ್ಳಿ
ಯುವ ನಿಧಿ ಯೋಜನೆಗೆ ಚಾಲನೆ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ!
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈಗಾಗಲೇ ತಿಳಿಸಿರುವಂತೆ ಡಿಸೆಂಬರ್ 26 ರಿಂದ ಯುವನಿಧಿ ಯೋಜನೆಯ (Yuva Nidhi scheme) ಆರಂಭ. ರಾಜ್ಯದಲ್ಲಿ ವಾಸಿಸುವ ನಿರುದ್ಯೋಗಿ ಯುವಕ (unemployed youth) ಯುವತಿಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು.
ಡಿಸೆಂಬರ್ 26 ರಿಂದ ಆರಂಭವಾಗುವ ಅರ್ಜಿ ಪ್ರಕ್ರಿಯೆಯನ್ನು ಮುಗಿಸಿ 2024ರ ಆರಂಭದಲ್ಲಿ ನಿರುದ್ಯೋಗ ಭತ್ಯೆ (unemployment allowance) ಪಡೆದುಕೊಳ್ಳಬಹುದು.
ಯುವನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ತಿಳಿದುಕೊಳ್ಳಿ! (Who can apply for Yuva Nidhi scheme)
*ಸರ್ಕಾರ ಈಗಾಗಲೇ ತಿಳಿಸಿರುವ ಪ್ರಕಾರ ಯುವ ನೀತಿ ಯೋಜನೆಯ ಅಡಿಯಲ್ಲಿ ಯುವಕ ಹಾಗೂ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು.
*2022 23ನೇ ಸಾಲಿನಲ್ಲಿ ಪದವಿ (Degree) ಹಾಗೂ ಡಿಪ್ಲೋಮಾ (Diploma) ಮುಗಿಸಿರುವ, ಆರು ತಿಂಗಳವರೆಗೆ ಕೆಲಸ ಸಿಗದೇ ಇರುವ ಯುವಕರು ನಿರುದ್ಯೋಗ ಭತ್ಯೆ ಪಡೆಯಲು ಅರ್ಹರು.
ಪದವಿ ಶಿಕ್ಷಣ (Education) ಮುಗಿಸಿರುವ ಯುವಕ ಯುವತಿಯರಿಗೆ ಪ್ರತಿ ತಿಂಗಳು ತಲಾ ಮೂರು ಸಾವಿರ ರೂಪಾಯಿ ಹಾಗೂ ಡಿಪ್ಲೋಮೋ ಮುಗಿಸಿರುವವರಿಗೆ ಪ್ರತಿ ತಿಂಗಳು 1500 ನಿರುದ್ಯೋಗ ಭತ್ಯೆ ನೀಡಲಾಗುವುದು.
*ಈ ಯೋಜನೆ ಮುಂದಿನ ಎರಡು ವರ್ಷಗಳ ವರೆಗೆ ಚಾಲ್ತಿಯಲ್ಲಿ ಇರಲಿದ್ದು ಎರಡು ವರ್ಷದ ಒಳಗೆ ಯುವಕ ಯುವತಿಯರು ಕೆಲಸವನ್ನು ಪಡೆದುಕೊಳ್ಳಬೇಕು.
2022 – 23ನೇ ಸಾಲಿನಲ್ಲಿ ಉತ್ತೀರ್ಣರಾಗಿ ಆರು ತಿಂಗಳು ಕಳೆದರೂ ಉದ್ಯೋಗ ಸಿಗದೇ ಇರುವ ಯಾವುದೇ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು.
ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯಲು ತಕ್ಷಣವೇ ಅರ್ಜಿ ಸಲ್ಲಿಸಿ
ಇಂಥವರಿಗೆ ಯುವನಿಧಿ ನಿರುದ್ಯೋಗ ಭತ್ಯೆ ಸಿಗುವುದಿಲ್ಲ!
2022 23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸದಲ್ಲಿ (Higher Education) ತೊಡಗಿರುವವರಿಗೆ ಈ ಯೋಜನೆಯ ಹಣ ಸಿಗುವುದಿಲ್ಲ.
ಅದೇ ರೀತಿ ಅಪ್ರೆಂಟಿಸ್ಗಳಿಗೆ (apprentice) ಈ ಯೋಜನೆ ಅಪ್ಲೈ ಆಗುವುದಿಲ್ಲ.
ಯೋಜನೆಯ ಆರ್ಥಿಕ ನೆರವು ಪಡೆದುಕೊಳ್ಳುತ್ತಿರುವ ಯುವಕ ಯುವತಿಯರಿಗೆ ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಸಿಗುವುದಿಲ್ಲ.
ಸ್ವಂತ ಉದ್ಯಮ (Own Business) ಮಾಡುತ್ತಿರುವವರಿಗೆ ನಿರುದ್ಯೋಗ ಭತ್ಯೆ ಸಿಗುವುದಿಲ್ಲ.
ಪದವಿ ಶಿಕ್ಷಣ ಮುಗಿಸಿ ತಕ್ಷಣ ಕೆಲಸಕ್ಕೆ ಸೇರಿದವರಿಗೆ ಹಣ ಬರುವುದಿಲ್ಲ.
ಮುಂದಿನ ತಿಂಗಳಿನಿಂದ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ!
ಯುವನಿಧಿ ಯೋಜನೆ ಹಣ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents)
ಸದ್ಯದಲ್ಲಿಯೇ ಈ ಯೋಜನೆಗೆ ಚಾಲನೆ ಸಿಗಲಿದ್ದು ಡಿಸೆಂಬರ್ 26 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳು ಇವೆ. ಅರ್ಜಿ ಸಲ್ಲಿಸಲು ಬಯಸುವ ಯುವಕ ಯುವತಿಯರು ತಮ್ಮ 2022 23ನೇ ಸಾಲಿನಲ್ಲಿ ಪದವಿ (degree) ಅಥವಾ ಡಿಪ್ಲೋಮೋ (diploma) ಮುಗಿಸಿರುವುದಕ್ಕೆ ಮಾರ್ಕ್ಸ್ ಕಾರ್ಡ್, ಕಳೆದ ಆರು ತಿಂಗಳ ಬ್ಯಾಂಕ್ನ ವಹಿವಾಟಿನ ಪ್ರತಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
ಇನ್ನು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಸರ್ಕಾರ ಇನ್ನಷ್ಟು ಸ್ಪಷ್ಟನೆಯನ್ನು ನೀಡಬೇಕಿದೆ.
ಗೃಹಲಕ್ಷ್ಮಿ ಪಟ್ಟಿ ಬಿಡುಗಡೆ! ಇಂತಹ ಮಹಿಳೆಯರಿಗೆ ಡಿಸೆಂಬರ್ 20ರ ಒಳಗೆ ಹಣ ಜಮಾ
New condition for Yuva Nidhi scheme, Only such people will get money