15 ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ! ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಖುಷಿಯ ಸುದ್ದಿ

Story Highlights

ಕೇವಲ 15 ದಿನಗಳಲ್ಲಿ ಜನರಿಗೆ ಹೊಸ ಪಡಿತರ ಚೀಟಿ (new ration card distribution) ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Covid-19 ಆಯ್ತು ,ಎಲೆಕ್ಷನ್ (election) ಮುಗೀತು ಆದ್ರೆ ರಾಜ್ಯದ ಜನತೆಗೆ ಮಾತ್ರ ರೇಷನ್ ಕಾರ್ಡ್ ವಿತರಣೆ (ration card distribution) ಆಗಿರಲಿಲ್ಲ, ಈಗ ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಅಪ್ಡೇಟ್ ಒಂದನ್ನು ನೀಡಿದೆ

ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನ ಫಿಕ್ಸ್! (New Ration card distribution)

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ (KH Muniyappa) ಹೊಸ ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಅವರು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ (X account ) ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಫಲಾನುಭವಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಅರ್ಜಿದಾರರ (BPL card) ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ, ಕೇವಲ 15 ದಿನಗಳಲ್ಲಿ ಜನರಿಗೆ ಹೊಸ ಪಡಿತರ ಚೀಟಿ (new ration card distribution) ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಎಪಿಎಲ್ ಕಾರ್ಡ್ ಇದ್ದವರಿಗೆ ರಾತ್ರೋರಾತ್ರಿ ಸರ್ಕಾರದ ಹೊಸ ಆದೇಶ! ಹೊಸ ರೂಲ್ಸ್

ಈಗಾಗಲೇ ರಾಜ್ಯಕ್ಕೆ ಸಲ್ಲಿಕೆ ಆಗಿರುವ ರೇಷನ್ ಕಾರ್ಡ್ ಪಡೆದುಕೊಳ್ಳುವ ಅರ್ಜಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು. “ಇನ್ನು 15 ದಿನಗಳಲ್ಲಿ ಪಡಿತರ ಅರ್ಜಿ ಪರಿಶೀಲಿಸಿ ಹೊಸ ಪಡಿತರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಡಿತರ ಚೀಟಿದಾರರಿಗೆ ಹಣದ ಬದಲು ಅಕ್ಕಿ ನೀಡಲು ಪ್ರಯತ್ನಿಸಲಾಗುತ್ತಿದೆ” ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

ಹಳೆಯ ಕಾರ್ಡ್ ಇರುವವರಿಗೆ ಸಂಕಷ್ಟ!

ರಾಜ್ಯಾದ್ಯಂತ ಒಟ್ಟು 1.27 ಕೋಟಿ ಅಧಿಕ ಬಿಪಿಎಲ್, ಅಂತ್ಯೋದಯ ಕಾಡು ಹೊಂದಿರುವ 4.35 ಕೋಟಿಗೂ ಹೆಚ್ಚು ಜನ ಪಡಿತರ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳಲ್ಲಿ ಸುಮಾರು 3.25 ಲಕ್ಷ ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಪಡಿತರ ಪಡೆದುಕೊಳ್ಳುತ್ತಿಲ್ಲ. ಇದರಿಂದಾಗಿ ಸರ್ಕಾರ ಇಂಥವರ ಕಾರ್ಡ್ ಅಮಾನತುಗೊಳಿಸಲು ನಿರ್ಧರಿಸಿದೆ, ಸೂಕ್ತ ಕಾರಣಗಳು ಇಲ್ಲದೆ ಇದ್ದರೆ ಅಂತವರ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆಯು ಇದೆ.

ಯುವನಿಧಿ ಯೋಜನೆಗೆ ಹೊಸ ಹೊಸ ಕಂಡೀಷನ್! ಇಂಥವರಿಗೆ ಮಾತ್ರ ಸಿಗಲಿದೆ ಹಣ

ರೇಷನ್ ಕಾರ್ಡ್ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ? (Check your ration card application status)

BPL Ration Card
ನೀವು ಈಗಾಗಲೇ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರೆ ತಕ್ಷಣ ನಿಮ್ಮ ಅರ್ಜಿ ಸ್ಟೇಟಸ್ ಅನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಿ

ಇದಕ್ಕಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ತೆರೆಯಿರಿ.

ಎಡಭಾಗದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಹೊಸ / ಹಾಲಿ ಪಡಿತರ ಚೀಟಿ ಸ್ಟೇಟಸ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರುವ ಬಗ್ಗೆ ಡಿಬಿಟಿ ಚೆಕ್ ಮಾಡಿಕೊಳ್ಳಿ

ಈಗ ಹೊಸ ಪಡಿತರ ಚೀಟಿ ಗಾಗಿ ಸಲ್ಲಿಸಲಾದ ಅರ್ಜಿ ಸ್ಥಿತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅರ್ಜಿ ಹಾಕುವಾಗ ನಿಮಗೆ ಸಿಕ್ಕ ಎಕ್ನಾಲೆಜ್ಮೆಂಟ್ ಸಂಖ್ಯೆ (acknowledgement number) ಯನ್ನು ಹಾಕಿ ಗೋ ಎಂದು ಕ್ಲಿಕ್ ಮಾಡಿದ,ರೆ ನಿಮ್ಮ ಅರ್ಜಿ ಯಾವ ಸ್ಥಿತಿಯಲ್ಲಿ ಇದೆ, ಪರಿಶೀಲನೆಗೊಂಡಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಒಟ್ಟಿನಲ್ಲಿ ಇನ್ನು 15 ದಿನಗಳಲ್ಲಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎನ್ನುವ ಸರ್ಕಾರದ ನುಡಿಗಳು ಬಿಪಿಎಲ್ ಕಾರ್ಡ್ ಆಕಾಂಕ್ಷಿಗಳಲ್ಲಿ ಮಂದಹಾಸ ಮೂಡಿಸಿದೆ.

New ration card distribution in 15 days, Good news for ration card aspirants

Related Stories