ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು! ಸರ್ಕಾರ ಖಡಕ್ ವಾರ್ನಿಂಗ್; ತಕ್ಷಣ ಈ ಕೆಲಸ ಮಾಡಿ

ಈ ಕೆಲಸವನ್ನು ಮಾಡುವುದು ಕಡ್ಡಾಯ, ಇಲ್ವಾದ್ರೆ ನಿಮ್ಮ ಖಾತೆಗೆ (Bank Account) ಹಣ ಬರುವ ಯಾವ ಸಾಧ್ಯತೆಯೂ ಇಲ್ಲ

ನಿಮಗೆಲ್ಲಾ ತಿಳಿದಿರುವ ಹಾಗೆ ಆಧಾರ್ ಕಾರ್ಡ್ (Aadhaar Card) ಎನ್ನುವುದು ಎಷ್ಟು ಮುಖ್ಯವಾಗಿರುವಂತಹ ಗುರುತಿನ ಚೀಟಿ ಆಗಿದೆಯೋ ಅದೇ ರೀತಿ ರಾಜ್ಯದಲ್ಲಿ ರೇಷನ್ ಕಾರ್ಡ್ (Ration Card) ಕೂಡ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ

ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ಇರುವವರು ಸರ್ಕಾರದ ಪ್ರತಿಯೊಂದು ಯೋಜನೆಯ (guarantee schemes) ಪ್ರಯೋಜನವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ಯಾರೆಲ್ಲ ಇಂತಹ ಕಾರ್ಡ್ ಹೊಂದಿದ್ದಾರೆಯೋ ಅವರಿಗೆ ಸರ್ಕಾರ ಶಾಕ್ ಕೊಟ್ಟಿದೆ.

15 ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ! ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಖುಷಿಯ ಸುದ್ದಿ

ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು! ಸರ್ಕಾರ ಖಡಕ್ ವಾರ್ನಿಂಗ್; ತಕ್ಷಣ ಈ ಕೆಲಸ ಮಾಡಿ - Kannada News

ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ!

ರೇಷನ್ ಕಾರ್ಡ್ ನಲ್ಲಿ ಬಿಪಿಎಲ್ ಕಾರ್ಡ್ ಅಂತ್ಯೋದಯ ಕಾರ್ಡ್ (antyodaya card) ಹಾಗೂ ಎಪಿಎಲ್ ಕಾರ್ಡ್ (APL Card) ಎಂದು ಮೂರು ವಿಭಾಗಗಳನ್ನು ಮಾಡಲಾಗಿದೆ ಅವುಗಳಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಅನ್ನು ಯಾರು ಹೊಂದಿರುತ್ತಾರೆ, ಅಂತವರಿಗೆ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 5 ಕೆಜಿ ಉಚಿತ ಅಕ್ಕಿ ಹಾಗೂ ರಾಜ್ಯ ಸರಕಾರದಿಂದ 5 ಕೆಜಿ ಉಚಿತ ಅಕ್ಕಿಯ ಬದಲು ಅಕ್ಕಿಗೆ ಸಂದಾಯ ವಾಗುವ ಹಣವನ್ನು ಪ್ರತಿಯೊಬ್ಬರ ಖಾತೆಗೂ ವರ್ಗಾವಣೆ (Money Deposit) ಮಾಡಲಾಗುತ್ತಿದೆ.

ಈಗಾಗಲೇ ಐದು ತಿಂಗಳ ಹಿಂದಿನಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ಹಣ ಜಮಾ ಆಗಬೇಕು ಅಂದ್ರೆ ನೀವು ಈ ಕೆಲಸವನ್ನು ಮಾಡುವುದು ಕಡ್ಡಾಯ, ಇಲ್ವಾದ್ರೆ ನಿಮ್ಮ ಖಾತೆಗೆ (Bank Account) ಹಣ ಬರುವ ಯಾವ ಸಾಧ್ಯತೆಯೂ ಇಲ್ಲ ಎಂದು ಸರ್ಕಾರ ತಿಳಿಸಿದೆ.

ಎಪಿಎಲ್ ಕಾರ್ಡ್ ಇದ್ದವರಿಗೆ ರಾತ್ರೋರಾತ್ರಿ ಸರ್ಕಾರದ ಹೊಸ ಆದೇಶ! ಹೊಸ ರೂಲ್ಸ್

ಅಸಲಿ ರೇಷನ್ ಕಾರ್ಡ್ ಪತ್ತೆಹಚ್ಚಲು ಈ ಕ್ರಮ! (fake ration card)

ಬ್ಯಾಂಕ್ ಖಾತೆಗೆ ಈಕೆವೈಸಿ (E-KYC) ಮಾಡಿಸಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ರೇಶನ್ ಕಾರ್ಡ್ ಈಕೆವೈಸಿ ಮಾಡಿಸಿಕೊಳ್ಳುವುದು, ಇದರಿಂದ ಯಾವುದು ನಕಲಿ ಹಾಗೂ ಯಾವುದು ಅಸಲಿ ರೇಷನ್ ಕಾರ್ಡ್ ಎಂಬುದನ್ನು ಪತ್ತೆಹಚ್ಚಲು ಸರ್ಕಾರಕ್ಕೆ ಸುಲಭವಾಗುತ್ತೆ. ಪ್ರತಿಯೊಬ್ಬ ಫಲಾನುಭವಿಯು ಕೂಡ ಆದಷ್ಟು ಬೇಗ ಕೆವೈಸಿ ಮಾಡಿಸಿಕೊಳ್ಳಬೇಕು ಇಲ್ಲವಾದರೆ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗುವುದಿಲ್ಲ.

ಇಂಥವರಿಗೆ ಇನ್ನು ಮುಂದೆ ಹಣ ಸಿಗುವುದೇ ಡೌಟ್!

BPL Ration Cardಸಾಕಷ್ಟು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು ಸರ್ಕಾರದಿಂದ ನೀಡಲಾಗುತ್ತಿರುವ ಪಡಿತರ ವಸ್ತುಗಳನ್ನ ಪಡೆದುಕೊಳ್ಳುತ್ತಿಲ್ಲ ಬದಲಾಗಿ ಈ ಕಾರ್ಡ್ಗಳನ್ನು ಆರೋಗ್ಯ ಪ್ರಯೋಜನ (health card) ಪಡೆದುಕೊಳ್ಳಲು ಜೊತೆಗೆ ಪಿಂಚಣಿ (pension ) ಹಣವನ್ನು ಪಡೆದುಕೊಳ್ಳಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆ

ಇದೇ ಕಾರಣಕ್ಕೆ ಯಾರು ಪಡಿತರ ವಸ್ತು ತೆಗೆದುಕೊಳ್ಳುತ್ತಿಲ್ಲವೋ ಅಂತವರ ಕಾರ್ಡ್ ಅನ್ನು ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ, ರಾಜ್ಯದಲ್ಲಿ ಒಟ್ಟು 3.26 ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಬಳಕೆದಾರರು ಪಡಿತರ ವಸ್ತುಗಳನ್ನು ತೆಗೆದುಕೊಳ್ಳದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ

ಹೀಗಾಗಿ ಇಂತಹ ಕಾರ್ಡು ಹೊಂದಿರುವವರ ಕುಟುಂಬಕ್ಕೆ ಇನ್ನು ಮುಂದೆ ರೇಷನ್ ಕಾರ್ಡ್ ಪ್ರಯೋಜನ ಸಿಗುವುದಿಲ್ಲ ಎಂದು ಸರ್ಕಾರ ಖಡಕ್ ವಾರ್ನಿಂಗ್ ನೀಡಿದೆ.

ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಸಿಗಲಿದೆ ಗೃಹಲಕ್ಷ್ಮಿ ಡಿಸೆಂಬರ್ ತಿಂಗಳಿನ ಹಣ!

ಅಷ್ಟೇ ಅಲ್ಲದೆ ಇನ್ನು ಮುಂದೆ ಪಡಿತರ ಚೀಟಿಗಾಗಿ ಹೊಸ ಅರ್ಜಿ ತೆಗೆದುಕೊಳ್ಳುವಾಗ ನಾವು ಯಾವ ಕಾರಣಕ್ಕೆ ರೇಷನ್ ಕಾರ್ಡ್ ಪಡೆದುಕೊಳ್ಳುತ್ತಿದ್ದೇವೆ ಎಂಬುದನ್ನ ತಿಳಿಸಬೇಕು ಇದರ ಆಧಾರದ ಮೇಲೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು

ಅಷ್ಟೇ ಅಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು ರೇಷನ್ ಪಡೆದುಕೊಳ್ಳದೆ ಕೇವಲ ಗುರುತಿನ ಆಧಾರಕ್ಕೆ ರೇಷನ್ ಕಾರ್ಡ್ ತೆಗೆದುಕೊಳ್ಳುವುದಿದ್ದರೆ ಅವರಿಗೆ ಮೀಸಲಾಗಿರುವ ರೇಷನ್ ವಸ್ತುಗಳನ್ನು ಫಲಾನುಭವಿ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಕ್ಕೆ ನೀಡಲಾಗುವುದು ಎಂದು ಸರ್ಕಾರ ಚಿಂತನೆ ನಡೆಸಿದೆ.

ಹೀಗಾಗಿ ರೇಷನ್ ಕಾರ್ಡ್ ಬಳಕೆಯಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ನೀವು ಇನ್ನು ಮುಂದೆ ರೇಷನ್ ವಸ್ತುಗಳ ಪ್ರಯೋಜನ ಹಾಗೂ ಸರ್ಕಾರಿ ಯೋಜನೆಯ ಇತರ ಪ್ರಯೋಜನಗಳನ್ನು ಪಡೆದುಕೊಳ್ಳಲು ನಿಮ್ಮ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗಳು ಕೆ ವೈ ಸಿ ಹಾಗೂ ರೇಷನ್ ಕಾರ್ಡ್ ಅನ್ನು ಸರಿಯಾದ ಉಪಯೋಗ ಮಾಡಿಕೊಳ್ಳುವುದು ಅತ್ಯಗತ್ಯ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರುವ ಬಗ್ಗೆ ಡಿಬಿಟಿ ಚೆಕ್ ಮಾಡಿಕೊಳ್ಳಿ

Your ration card can be cancelled, Do this immediately

Follow us On

FaceBook Google News

Your ration card can be cancelled, Do this immediately