ಈ ಕೆಲಸ ಮಾಡಿ! ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ

ಯಾರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣವಾಗಲಿ ಬಿಡುಗಡೆ ಆಗಿಲ್ಲವೋ ಅಂತವರಿಗೆ ಡಿಸೆಂಬರ್ ಕೊನೆಯ ದಿನಾಂಕದ ಒಳಗೆ ಹಣ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ, ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾಗಿರುವ ಯೋಜನೆಗಳಾಗಿದ್ದು ಯೋಜನೆಗಳು ಜನರಿಗೆ ಹೆಚ್ಚು ಪ್ರಯೋಜನವನ್ನು ನೀಡಿವೆ.
ಅದರ ಜೊತೆಗೆ ಒಂದಷ್ಟು ಗೊಂದಲಗಳನ್ನು ಕೂಡ ಸೃಷ್ಟಿಸಿವೆ. ಯಾಕಂದ್ರೆ ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬರ ಖಾತೆಗೂ (Bank Account) ಕೂಡ ಸಂದಾಯವಾಗುತ್ತಿಲ್ಲ.
ಇದಕ್ಕೆ ಸರ್ಕಾರ ನೀಡಿರುವ ಕಾರಣಗಳು ಸಾಕಷ್ಟಿವೆ, ಅದರ ಜೊತೆಗೆ ಸರ್ಕಾರದಿಂದಲೇ ತಾಂತ್ರಿಕ ದೋಷಗಳ (technical error) ಕಾರಣದಿಂದಾಗಿ ಖಾತೆಗೆ ಹಣ ಜಮಾ (Money Deposit) ಆಗುತ್ತಿಲ್ಲ.
ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ ಹೀಗೆ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇರುವುದಕ್ಕೆ ಇದೇ ಕಾರಣ!
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಮಹಿಳೆಯರು ಕೆಲವು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಮುಖ್ಯವಾಗಿ ಬ್ಯಾಂಕ್ ಖಾತೆಯ ವಿವರವನ್ನು ನೀವು ಅರ್ಜಿ ಸಲ್ಲಿಸುವಾಗ ನೀಡಿದ್ದರೆ ಆ ಬ್ಯಾಂಕ್ ಖಾತೆ ಆಕ್ಟಿವ್ (Bank account active) ಆಗಿರಬೇಕು
ಜೊತೆಗೆ ಇಕೆವೈಸಿ (E-KYC ) ಮುಗಿಸಿರಬೇಕು. ಒಂದು ವೇಳೆ ಯಾರು ಈ ಕೆಲಸ ಮಾಡಿಕೊಂಡಿಲ್ಲವೋ ಅಂತವರ ಖಾತೆಗೆ ಸರ್ಕಾರ ಹಣ ಬಿಡುಗಡೆ ಮಾಡುವುದಿಲ್ಲ. ಆದರೆ ಕೆಲವು ತಾಂತ್ರಿಕ ದೋಷಗಳಿಂದಾಗಿ ಆಧಾರ್ ಸೀಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ.
ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗದೇ ಇದ್ದರೆ ಹತ್ತಿರದ ಅಂಗನವಾಡಿಗೆ ಹೋಗಿ ಅಲ್ಲಿಯ ಶಿಕ್ಷಕಿ ಅಥವಾ ಸಹಾಯಕಿಯ ಸಹಾಯವನ್ನು ಪಡೆದುಕೊಂಡು ಬ್ಯಾಂಕ್ ಗೆ ಹೋಗಿ ನಿಮ್ಮ ಆಧಾರ್ ಸೀಡಿಂಗ್ ಪ್ರಕ್ರಿಯೆ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಒಂದು ವೇಳೆ ಪ್ರಕ್ರಿಯೆ ಪೂರ್ಣಗೊಳ್ಳದೆ ಇದ್ದರೆ ಬ್ಯಾಂಕ್ ಸಿಬ್ಬಂದಿಗಳ ಜೊತೆಗೆ ಮಾತನಾಡಿ ನಿಮ್ಮ ಖಾತೆಗೆ ಕೆವೈಸಿ ಆಗುವಂತೆ ಮಾಡಿಕೊಳ್ಳಿ. ನಂತರದ ದಿನಗಳಲ್ಲಿ ನಿಮ್ಮ ಖಾತೆಗೂ ಸರಕಾರದಿಂದ ನೀಡಲಾಗುವ 2000 ಜಮಾ ಆಗುತ್ತದೆ.
ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು! ಸರ್ಕಾರ ಖಡಕ್ ವಾರ್ನಿಂಗ್; ತಕ್ಷಣ ಈ ಕೆಲಸ ಮಾಡಿ
ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ! (How to check Gruha lakshmi dbt status)

ನಂತರ ಆಧಾರ್ ಸಂಖ್ಯೆ ಹಾಗೂ ಬರುವ ಓಟಿಪಿ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆದರೆ ನಿಮ್ಮ ಖಾತೆಗೆ ಡಿಬಿಟಿ ಆಗಿರುವ ಎಲ್ಲಾ ಯೋಜನೆಯ ಸಂದಾಯವಾಗಿರುವ ಮೊತ್ತದ ಮಾಹಿತಿ ತಿಳಿಯಬಹುದು.
ಜಮೀನು ಸರ್ವೆ ಮಾಡಿಸೋದೆ ಬೇಡ, ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಿ ನಿಮ್ಮ ಜಮೀನು ಅಳತೆ
ಅನ್ನಭಾಗ್ಯ ಯೋಜನೆಯ ಹಣ ಬಾರದೆ ಇರಲು ಇದೇ ಅಸಲಿ ಕಾರಣ!
ಇನ್ನು ಸಾಕಷ್ಟು ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವು ಕೂಡ ಸಂದಾಯವಾಗಿಲ್ಲ, ಇದಕ್ಕೆ ಮುಖ್ಯವಾಗಿರುವ ಕಾರಣ ರೇಷನ್ ಕಾರ್ಡ್ ಕೆ ವೈ ಸಿ ಹಾಗೂ ಬ್ಯಾಂಕ್ ಖಾತೆಗೆ ಕೆವೈಸಿ ಆಗದೆ ಇರುವುದು.
ಡಿಸೆಂಬರ್ 31ರ ಒಳಗೆ ರೇಷನ್ ಕಾರ್ಡ್ ಕೆ ವೈ ಸಿ (E-KYC for ration card) ಆಗದೇ ಇದ್ರೆ ಅಂಥವರ ಖಾತೆಗೆ ಮುಂದಿನ ಕಂತುಗಳು ಕೂಡ ಬಿಡುಗಡೆ ಆಗುವುದಿಲ್ಲ ಹಾಗಾಗಿ ಮೊದಲು ಈ ಪ್ರಕ್ರಿಯೆ ಪೂರ್ಣಗೊಳಿಸಿ.
ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಹೀಗೆ ಚೆಕ್ ಮಾಡಿ! (How to check Anna Bhagya scheme DBT status)
ಆಹಾರ ಇಲಾಖೆಯ (food department) ಅಧಿಕೃತ ವೆಬ್ಸೈಟ್ಗೆ https://ahara.kar.nic.in/ ಭೇಟಿ ನೀಡಿ. ಈ ಸರ್ವಿಸ್ ವಿಭಾಗದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ
ನಿಮ್ಮ ಜಿಲ್ಲೆಯ ಮೇಲಿನ ಲಿಂಕ್ ಕ್ಲಿಕ್ ಮಾಡಿ ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ತಿಂಗಳು ರೇಷನ್ ಕಾರ್ಡ್ ಸಂಖ್ಯೆ ಕ್ಯಾಪ್ಚ ಸಂಖ್ಯೆ ನಮೂದಿಸಿದ ನಂತರ ನಿಮ್ಮ ಬ್ಯಾಂಕ್ ಖಾತೆ ವಿವರ, ಸದಸ್ಯರ ಸಂಖ್ಯೆ, ಜಮಾ ಆಗಿರುವ ಹಣ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಸಿಗಲಿದೆ ಗೃಹಲಕ್ಷ್ಮಿ ಡಿಸೆಂಬರ್ ತಿಂಗಳಿನ ಹಣ!
Do This to Get Gruha Lakshmi Yojana money every month without fail







