ಗೃಹಲಕ್ಷ್ಮಿ ಯೋಜನೆ ಅನರ್ಹರ ಪಟ್ಟಿ ಬಿಡುಗಡೆ; ಇವರಿಗೆ ಸಿಗೋಲ್ಲ 2,000 ರೂಪಾಯಿ
ಯೋಜನೆ ಹಣ ಖಾತೆಗೆ (Bank Account) ಜಮಾ ಆಗಬೇಕು, ಆದರೆ 100% ಸಕ್ಸಸ್ ಆಗಿ ಎಲ್ಲರ ಖಾತೆಗೂ ಹಣ ಜಮಾ (Money Deposit) ಮಾಡಲು ಸಾಧ್ಯವಾಗುತ್ತಿಲ್ಲ
ಅನ್ನಭಾಗ್ಯ ಯೋಜನೆಯ (Annabhagya scheme) ಹಣ ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಎರಡು ಕೂಡ ಫಲಾನುಭವಿ ಕುಟುಂಬದ ಯಜಮಾನರ ಖಾತೆಗೆ (Bank Account) ಜಮಾ ಆಗಬೇಕು, ಆದರೆ 100% ಸಕ್ಸಸ್ ಆಗಿ ಎಲ್ಲರ ಖಾತೆಗೂ ಹಣ ಜಮಾ (Money Deposit) ಮಾಡಲು ಸಾಧ್ಯವಾಗುತ್ತಿಲ್ಲ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರ ನೇತೃತ್ವದ ಪರಿಶೀಲನ ಸಭೆ ಕೂಡ ನಡೆಸಲಾಗಿದೆ, ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕೂಡ ಉಪಸ್ಥಿತರಿದ್ದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಎಲ್ಲಾ ಮಾಹಿತಿಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತಲುಪಿಸಿದ್ದಾರೆ.
ಈ ಕೆಲಸ ಮಾಡಿ! ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ
ಡಿಸೆಂಬರ್ ತಿಂಗಳ ಒಳಗೆ ಹಣ ಬರಲು ಹೀಗೆ ಮಾಡಿ!
ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಡಿಸೆಂಬರ್ ತಿಂಗಳ (end of December month) ಕೊನೆಯ ದಿನಾಂಕದ ಒಳಗೆ ಸಂದಾಯವಾಗುತ್ತದೆ.
ಆದಾಗ್ಯೂ ನಿಮ್ಮ ಖಾತೆಗೆ ಇನ್ನೂ ಹಣ ಜಮಾ ಆಗದೆ ಇದ್ದರೆ ತಕ್ಷಣ ಈ ಕೆಲಸ ಮಾಡಿ. ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣವು ಬಾರದೇ ಇದ್ದರೆ ಅಥವಾ ಯಾವುದಾದರೂ ಒಂದು ಕಂತಿನ ಹಣ ಬಾರದೆ ಇದ್ದರೆ, ತಕ್ಷಣ ನೀವು ಗ್ರಾಮ ಪಂಚಾಯತ್ ನಲ್ಲಿ ಅಧಾಲತ್ ಅಡಿಯಲ್ಲಿ ದೂರು ಸಲ್ಲಿಸಬಹುದು
ಆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ (Gram Panchayat) ಸಿಬ್ಬಂದಿಗಳೇ ಮಹಿಳೆಯರ ಮನೆಗೆ ಖುದ್ದಾಗಿ ಹೋಗಿ ಅವರ ಸಮಸ್ಯೆ ತಿಳಿದು, ಖಾತೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿ ಅವರ ಖಾತೆಗೆ ಹಣ ಬರುವಂತೆ ಮಾಡಬೇಕು, ಅಷ್ಟೇ ಅಲ್ಲದೆ ಯಾವ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎನ್ನುವ ವಿವರವನ್ನು ಸರ್ಕಾರಕ್ಕೆ ನೀಡಬೇಕು.
ಅದೇ ರೀತಿ ಅಂಗನವಾಡಿ ಸಹಾಯಕಿಯರು ಕೂಡ ಗ್ರಾಮದಲ್ಲಿ ಇರುವ ಪ್ರತಿ ಫಲಾನುಭವಿ ಮಹಿಳೆಯರ ಮನೆಗೆ ಹೋಗಿ ಯಾರ ಖಾತೆಗೆ ಹಣ ಬಂದಿಲ್ಲ ಎನ್ನುವುದನ್ನು ಚೆಕ್ ಮಾಡಬೇಕು ಹಾಗೂ ಅಂತಹ ಮಹಿಳೆಯರನ್ನ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅವರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಗಿದೆ.
ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ ಹೀಗೆ ಚೆಕ್ ಮಾಡಿ
ಇಂಥವರು ಇನ್ನು ಮುಂದೆ ಕಳೆದುಕೊಳ್ಳುತ್ತಿದ್ದಾರೆ ರೇಷನ್ ಕಾರ್ಡ್!
ರಾಜ್ಯದಲ್ಲಿ ಸುಮಾರು 3.26 ಲಕ್ಷ ಬಿಪಿಎಲ್ ಕಾರ್ಡ್ (BPL card) ಬಳಕೆದಾರರು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿಲ್ಲ, ಕೇವಲ ಆರೋಗ್ಯ ಪ್ರಯೋಜನ ಪಡೆದುಕೊಳ್ಳಲು ಹಾಗೂ ಪಿಂಚಣಿ (pension) ಹಣಕ್ಕಾಗಿ ಮಾತ್ರ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ ಅವರ ರೇಷನ್ ಕಾರ್ಡ್ ರದ್ದು ಪಡಿಸುವ (ration card cancellation) ಕೆಲಸವನ್ನು ಸರ್ಕಾರ ಮಾಡಲಿದೆ
ಮೊದಲಿಗೆ ಇಂತಹ ಕಾರ್ಡ್ ಹೊಂದಿರುವ ಕುಟುಂಬದವರ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಕಳೆದ ಆರು ತಿಂಗಳಿನಿಂದ ಯಾಕೆ ಪಡಿತರ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ತನಿಖೆ ಮಾಡಿ ನಂತರ ಅಧಿಕಾರಿಗಳು ಅಂತಹ Ration Card ಅಮಾನತುಗೊಳಿಸುತ್ತಾರೆ. ಸರಿಯಾದ ಕಾರಣ ನೀಡಿದರೆ ಮಾತ್ರ ಪುನಹ ಬಿಪಿಎಲ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು! ಸರ್ಕಾರ ಖಡಕ್ ವಾರ್ನಿಂಗ್; ತಕ್ಷಣ ಈ ಕೆಲಸ ಮಾಡಿ
15 ದಿನಗಳಲ್ಲಿ ಪಡಿತರ ಕಾರ್ಡ್ ವಿತರಣೆ!
ಸರ್ಕಾರಕ್ಕೆ ಲಕ್ಷಗಟ್ಟಲೆ ಪಡಿತರ ಕಾರ್ಡು ಪಡೆದುಕೊಳ್ಳಲು ಅರ್ಜಿಗಳು ಸಂದಾಯವಾಗಿವೆ. ಕಳೆದ ಎರಡು ವರ್ಷಗಳಿಂದ ಹೊಸ ಪಡಿತರ ಕಾರ್ಡ್ ವಿತರಣೆ ಕೂಡ ಆಗಿಲ್ಲ. ಈಗ ಪಡಿತರ ಕಾರ್ಡ್ ಅರ್ಜಿ ಪರಿಶೀಲನೆ ನಡೆಸಲಾಗಿದ್ದು ಮುಂದಿನ ಹದಿನೈದು ದಿನಗಳಲ್ಲಿ ಹೊಸ ಪಡಿತರ ಕಾರ್ಡ್ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದೇವೆ, ಜೊತೆಗೆ ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ನೀಡುತ್ತಿರುವ ಹಣವನ್ನು ಸ್ಥಗಿತಗೊಳಿಸಿ ಅಕ್ಕಿಯನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಇನ್ನು ಮುಂದೆ ಅರ್ಜಿ ಸಲ್ಲಿಸುವ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರು ತಮಗೆ ರೇಷನ್ ಕಾರ್ಡ್ ಯಾಕೆ ಬೇಕು ಎನ್ನುವ ಮಾಹಿತಿಯನ್ನು ನೀಡಬೇಕು, ಅಂದ್ರೆ ತಾವು ಕೇವಲ ಗುರುತಿನ ಚೀಟಿಯಾಗಿ ಪಡಿತರ ಕಾರ್ಡ್ ಪಡೆದುಕೊಳ್ಳುತ್ತಿದ್ದೇವೆಯೇ ಅಥವಾ ಪಡಿತರ ವಸ್ತುಗಳನ್ನ ಪಡೆದುಕೊಳ್ಳಲು ರೇಷನ್ ಕಾರ್ಡ್ ಬಳಸುತ್ತಿದ್ದೇವೆಯೇ ಎನ್ನುವುದನ್ನು ಅರ್ಜಿ ಫಾರ್ಮ್ ನಲ್ಲಿಯೇ ನಮೂದಿಸಬೇಕು ಎಂದು ಸರ್ಕಾರ ತಿಳಿಸಿದೆ.
ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಸಿಗಲಿದೆ ಗೃಹಲಕ್ಷ್ಮಿ ಡಿಸೆಂಬರ್ ತಿಂಗಳಿನ ಹಣ!
ಇನ್ನು ಡಿಸೆಂಬರ್ ತಿಂಗಳ ಕೊನೆಯ ಒಳಗೆ ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಭರವಸೆಯನ್ನು ಸರ್ಕಾರ ನೀಡಿದೆ.
ಈ ಹಿನ್ನೆಲೆಯಲ್ಲಿ ಇದುವರೆಗೆ ಯಾರಿಗೆ ಹಣ ಬಂದಿಲ್ಲವೋ ಅಂತವರ ಖಾತೆಗೆ ಈ ವರ್ಷದ ಕೊನೆಯಲ್ಲಾದರೂ ಬಂಪರ್ ಗಿಫ್ಟ್ ಸಿಗಬಹುದು ಎನ್ನುವುದನ್ನು ಕಾದು ನೋಡಬೇಕು.
Gruha Lakshmi Yojana Ineligible List Released, They will not get 2,000 rupees