ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ? ಈ ಬಾರಿ ಒಟ್ಟಿಗೆ ಸಿಗುತ್ತೆ ₹8,000 ರೂಪಾಯಿ

ಡಿಸೆಂಬರ್ 31ರ ಒಳಗೆ ಯಾವ ಮಹಿಳೆಯರು ಕೂಡ ಗೃಹಲಕ್ಷ್ಮಿ (Gruha lakshmi scheme) ಹಣ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುವಂತಿಲ್ಲ

ಡಿಸೆಂಬರ್ 31ರ ಒಳಗೆ ಯಾವ ಮಹಿಳೆಯರು ಕೂಡ ಗೃಹಲಕ್ಷ್ಮಿ (Gruha lakshmi scheme) ಹಣ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುವಂತಿಲ್ಲ. ಯಾಕಂದ್ರೆ ಈ ದಿನಾಂಕದ ಒಳಗೆ ಪ್ರತಿಯೊಬ್ಬರಿಗೂ ಕೂಡ ಹಣ ಜಮಾ (DBT) ಆಗುತ್ತದೆ

ಅಷ್ಟೇ ಅಲ್ಲದೆ ಒಂದು ತಿಂಗಳ ಕಂತಿನ ಹಣ ಬಂದಿಲ್ಲ ಎರಡನೇ ತಿಂಗಳ ಕಂತಿನ ಹಣ ಬಂದಿಲ್ಲ ಎಂದು ಬೇಸರ ಪಟ್ಟುಕೊಳ್ಳುವ ಮಹಿಳೆಯರಿಗೆ ನಾಲ್ಕು ತಿಂಗಳ ಒಟ್ಟು 8,000ಗಳನ್ನು ಡಿಸೆಂಬರ್ ತಿಂಗಳಿನಲ್ಲಿ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.

ಅರ್ಹ ರೇಷನ್ ಕಾರ್ಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಶೀಘ್ರದಲ್ಲೇ ಹೊಸ ಕಾರ್ಡ್ ವಿತರಣೆ

ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ? ಈ ಬಾರಿ ಒಟ್ಟಿಗೆ ಸಿಗುತ್ತೆ ₹8,000 ರೂಪಾಯಿ - Kannada News

ಇಷ್ಟು ಜನರಿಗೆ ಇನ್ನೂ ಬಂದಿಲ್ಲ ಗೃಹಲಕ್ಷ್ಮಿ ಹಣ!

ಕರ್ನಾಟಕ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಹುತೇಕ ಎಲ್ಲರಿಗೂ ಸಿಕ್ಕಿದೆ, ಸುಮಾರು 20% ಅಷ್ಟು ಜನರಿಗೆ ಮಾತ್ರ ಹಣ ಸಂದಾಯವಾಗಿಲ್ಲ.

ಗ್ರಹಿಣಿಯರ ಖಾತೆಗೆ (Bank Account) ಆಧಾರ್ ಸೀಡಿಂಗ್ (Aadhaar seeding) ಆಗದೇ ಇರುವುದು ಹಾಗೂ ಕೆಲವು ತಾಂತ್ರಿಕ ದೋಷ (technical error) ಗಳಿಂದಾಗಿಯೂ ಕೂಡ ಹಣ ವರ್ಗಾವಣೆ ಆಗಿಲ್ಲ

ಈಗಾಗಲೇ ಸಚಿವೆ ತಿಳಿಸಿರುವಂತೆ, ಕಡೆಯಿಂದ ಕೆಲವು ತಾಂತ್ರಿಕ ದೋಷಗಳು ಮಹಿಳೆಯರ ಖಾತೆಗೆ ಹಣ ಹೋಗುವುದನ್ನ ತಡೆಹಿಡಿದಿವೆ ಆದರೆ ಇದೆಲ್ಲವನ್ನು ಸದ್ಯದಲ್ಲಿಯೇ ಪರಿಹರಿಸಲಿದ್ದೇವೆ ಎಂದು ಹೇಳಿದ್ದಾರೆ.

ಇಂತಹ ರೈತರಿಗೆ ಸರ್ಕಾರಿ ಜಮೀನು ಮಂಜೂರು! ಸಿಗಲಿದೆ ಹಕ್ಕು ಪತ್ರ; ಆಪ್ ಮೂಲಕ ಭೂಮಿ ಸರ್ವೆ

2,000ರೂ. ಅಲ್ಲ 8,000 ರೂ. ಜಮಾ ಆಗುತ್ತೆ!

Gruha Lakshmi Yojanaನಮ್ಮ ಖಾತೆಯಲ್ಲಿ ಎಲ್ಲವೂ ಸರಿಯಾಗಿದೆ ಆದರೂ ಹಣ ಮಾತ್ರ ಬಂದಿಲ್ಲ. ಎಂದು ಹೇಳುವ ಮಹಿಳೆಯರ ಸಂಖ್ಯೆಯು ಕೂಡ ಜಾಸ್ತಿಯೇ ಇದೆ. ಆದರೆ ಇಂಥವರ ಖಾತೆಗೆ ಯಾಕೆ ಹಣ ಬಂದಿಲ್ಲ (Money Deposit) ಎನ್ನುವುದಕ್ಕೆ ಸೂಕ್ತ ಕಾರಣ ಸರ್ಕಾರದ ಬಳಿಯೂ ಇಲ್ಲ

ಬಹುಶಹ ತಾಂತ್ರಿಕ ದೋಷಗಳು ಮಾತ್ರ ಇದಕ್ಕೆ ಕಾರಣ ಆಗಿರಬಹುದು ಎಂದು ಸರ್ಕಾರವು ಊಹಿಸಿದ್ದು ಇದೆಲ್ಲವನ್ನು ಸದ್ಯದಲ್ಲಿಯೇ ಸರಿಪಡಿಸುತ್ತೇವೆ ಹಾಗೂ ಇದುವರೆಗೆ ಮಹಿಳೆಯರ ಖಾತೆಗೆ ಹಣ ಬಾರದೆ ಇದ್ದರೆ ಡಿಸೆಂಬರ್ 31ರ ಒಳಗೆ 2000 ಬದಲಿಗೆ ನಾಲ್ಕು ಕಂತುಗಳ ಹಣವನ್ನು ಸೇರಿಸಿ 8 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ

ಆದರೆ ಇದೇ ಮಾತನ್ನು ಈ ಹಿಂದೆಯೂ ಸರ್ಕಾರ ಹೇಳಿತ್ತು. 6,000ಗಳನ್ನ ಮಹಿಳೆಯರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿತ್ತು ಆದರೆ ಒಂದೇ ಒಂದು ಕಂತಿನ ಹಣವು ಯಾವ ಮಹಿಳೆಯರ ಖಾತೆಗೆ ಬಂದಿಲ್ಲವೋ ಅಂತವರಿಗೆ ಈಗಲೂ ಕೂಡ ಹಣ ಸಂದಾಯವಾಗುತ್ತಿಲ್ಲ. ಇದಕ್ಕೆಲ್ಲ ತಕ್ಕ ಪರಿಹಾರವನ್ನು ಸರ್ಕಾರ ಹುಡುಕಲೇ ಬೇಕಿದೆ.

ಫ್ರೀ ಬಸ್ ಅಂತ ಬೇಕಾಬಿಟ್ಟಿ ಪ್ರಯಾಣಿಸುವಂತಿಲ್ಲ; ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ

ಅನ್ನಭಾಗ್ಯ ಹಣ ಬಂದವರಿಗೆ ಮಿಸ್ ಆಗದೆ ಗೃಹಲಕ್ಷ್ಮಿ ಹಣ ಬರುತ್ತೆ!

Annabhagya Schemeಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಖಾತೆಗೆ ಜಮಾ ಆಗಿರುವುದರ ಬಗ್ಗೆ ಸ್ಟೇಟಸ್ (DBT status) ತಿಳಿದುಕೊಳ್ಳುವಷ್ಟು ಸುಲಭವಾಗಿ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ

ಆದರೆ ಒಂದು ವೇಳೆ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದೆ (Money Transfer) ಎಂದಾದರೆ ಮಿಸ್ ಆಗದೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬಂದೇ ಬರುತ್ತೆ. ಸ್ವಲ್ಪ ವಿಳಂಬವಾದರೂ ಸರಿ ಖಾತೆಗೆ ಹಣ ಬರುತ್ತೆ.

ಅನ್ನಭಾಗ್ಯ ಯೋಜನೆಗೆ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಒಂದೇ ಖಾತೆಯಾಗಿದ್ದರೆ ಯಾರು ಯೋಚನೆ ಮಾಡುವ ಅಗತ್ಯವೇ ಇಲ್ಲ, ಡಿಸೆಂಬರ್ 31ರ ಒಳಗೆ ಅಥವಾ ಜನವರಿ ಮೊದಲ ವಾರದಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಕೂಡ ಗೃಹಲಕ್ಷ್ಮಿಯ ಹಣ ಬಂದು ಸೇರುತ್ತದೆ.

ಗೃಹಲಕ್ಷ್ಮಿ ಯೋಜನೆ ಅನರ್ಹರ ಪಟ್ಟಿ ಬಿಡುಗಡೆ; ಇವರಿಗೆ ಸಿಗೋಲ್ಲ 2,000 ರೂಪಾಯಿ

ಇನ್ನು ಗೃಹಲಕ್ಷ್ಮಿಯ ಹಣವನ್ನು ಸರ್ಕಾರ ಮೊದಲ ಹಾಗೂ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಿದಷ್ಟು ಬೇಗ ರಿಲೀಸ್ ಮಾಡಿಲ್ಲ. ಈ ಬಾರಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲು ಸಾಕಷ್ಟು ವಿಳಂಬ ಆಗುತ್ತಿದೆ

ಅದೇನೆ ಆಗಿದ್ದರು ಸರ್ಕಾರ ಹಣವನ್ನು ಬಿಡುಗಡೆ ಮಾಡುತ್ತೆ ಆದರೆ ಅನುದಾನದ ಹಣ ಬರಲು ವಿಳಂಬವಾಗುತ್ತಿದೆ ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಜಿಲ್ಲೆಗೆ ಮೊದಲು ಬಿಡುಗಡೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ

ಯಾಕೆಂದರೆ ಅನ್ನಭಾಗ್ಯ ಯೋಜನೆಯಂತೆ ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಲ್ಲಾವಾರು ಹಣವನ್ನು ಬಿಡುಗಡೆ ಮಾಡಲಾಗುವುದಿಲ್ಲ. ಹಾಗಾಗಿ ನಾಲ್ಕನೇ ಕಂತಿನ ಹಣ ಡಿಸೆಂಬರ್ ಅಂತ್ಯದ ಒಳಗೆ ಅಥವಾ ಜನವರಿ ಮೊದಲ ವಾರ ಎಲ್ಲ ಮಹಿಳೆಯರ ಖಾತೆಗೆ ಜಮಾ ಆಗುವ ನಿರೀಕ್ಷೆ ಇದೆ.

ಈ ಕೆಲಸ ಮಾಡಿ! ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ

together 8,000 rupees will Deposit, For who Still Not Get Gruha Lakshmi Scheme Money

Follow us On

FaceBook Google News

together 8,000 rupees will Deposit, For who Still Not Get Gruha Lakshmi Scheme Money