ಆಹಾರ ಇಲಾಖೆ (food department) ತನ್ನ ಅಧಿಕೃತ ಜಾಲತಾಣದಲ್ಲಿ ಇದುವರೆಗೆ ಸಲ್ಲಿಕೆಯಾಗಿರುವ ಅರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ (Ration card list) ಮಾಡಿದ್ದು ಇಂಥವರಿಗೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದೆ.
ಹೊಸ ಪಡಿತರ ಚೀಟಿ (new ration card) ಪಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಇದುವರೆಗೆ ಸುಮಾರು ಮೂರು ಲಕ್ಷದಷ್ಟು ಅರ್ಜಿಗಳು (applications) ಸಂದಾಯವಾಗಿವೆ ಆದರೆ ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ಸರ್ಕಾರ ಮಾಡಿರಲಿಲ್ಲ
ಫ್ರೀ ಬಸ್ ಅಂತ ಬೇಕಾಬಿಟ್ಟಿ ಪ್ರಯಾಣಿಸುವಂತಿಲ್ಲ; ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ
ಎಲೆಕ್ಷನ್ ಹಾಗೂ ಇತರ ಕಾರಣಗಳನ್ನು ಹೇಳಿ ರೇಷನ್ ಕಾರ್ಡ್ ವಿತರಣೆಯನ್ನು ಮಾತ್ರ ಮುಂದೂಡಲಾಗಿತ್ತು, ಆದರೆ ಈಗ ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆ ಆಗಿರುವ ಹಿನ್ನೆಲೆಯಲ್ಲಿ ಹೊಸ ಅರ್ಜಿಗಳನ್ನು ಪರಿಶೀಲಿಸಿ ಡಿಸೆಂಬರ್ ತಿಂಗಳ ಕೊನೆಯ ದಿನಾಂಕದ ಒಳಗೆ ವಿತರಣೆ ಕಾರ್ಯ ಆರಂಭಿಸುವುದಾಗಿ ತಿಳಿಸಿದೆ.
ಅರ್ಜಿದಾರರಿಗೆ ಗುಡ್ ನ್ಯೂಸ್!
ಈಗಾಗಲೇ ಆಹಾರ ಇಲಾಖೆಗೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸದ್ಯದಲ್ಲಿಯೇ ವಿಲೇವಾರಿ ಆಗದೆ ಇರುವ ಅರ್ಜಿಗಳ ಪರಿಶೀಲನೆ ಯೊಂದಿಗೆ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ (new ration card distribution) ಮಾಡಲಾಗುವುದು ಹಾಗೂ ಫಲಾನುಭವಿಗಳ ಲಿಸ್ಟ್ ಕೂಡ ಆಹಾರ ಇಲಾಖೆ ವೆಬ್ಸೈಟ್ನಲ್ಲಿ ಚೆಕ್ ಮಾಡಬಹುದು.
ಇಂತಹ ರೈತರಿಗೆ ಸರ್ಕಾರಿ ಜಮೀನು ಮಂಜೂರು! ಸಿಗಲಿದೆ ಹಕ್ಕು ಪತ್ರ; ಆಪ್ ಮೂಲಕ ಭೂಮಿ ಸರ್ವೆ
ರೇಷನ್ ಕಾರ್ಡ್ ಫಲಾನುಭವಿಗಳ ಲಿಸ್ಟ್ ಚೆಕ್ ಮಾಡುವುದು ಹೇಗೆ!
ವಿತರಣೆ ಆಗದೆ ಇರುವ ಹಾಗೂ ಸದ್ಯದಲ್ಲಿಯೇ ವಿತರಣೆ ಮಾಡಲಾಗುವ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಫಲಾನುಭವಿಗಳು ತಮ್ಮ ಹೆಸರು ಇದೆಯಾ ಎಂಬುದನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ನಲ್ಲಿ ಚೆಕ್ ಮಾಡಬಹುದು.
ಗೃಹಲಕ್ಷ್ಮಿ ಯೋಜನೆ ಅನರ್ಹರ ಪಟ್ಟಿ ಬಿಡುಗಡೆ; ಇವರಿಗೆ ಸಿಗೋಲ್ಲ 2,000 ರೂಪಾಯಿ
*ಮೊದಲಿಗೆ ಈ ಸರ್ವಿಸ್ ವಿಭಾಗದಲ್ಲಿ ಎಡ ಭಾಗದಲ್ಲಿ ಕಾಣುವ ಈ ಪಡಿತರ ಚೀಟಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ಅಲ್ಲಿ ನಿಮಗೆ ವಿತರಣೆಯಾಗದ ಹೊಸ ಪಡಿತರ ಚೀಟಿ ಲಿಸ್ಟ್ ಎಂಬುದು ಕಾಣಿಸುತ್ತದೆ.
*ಈಗ ನೀವು ನಿಮ್ಮ ಜಿಲ್ಲೆ ಗ್ರಾಮ ಹಾಗೂ ಮತದಾರ ವಿವರಗಳನ್ನು ನೀಡಿ ಗೋ ಎಂದು ಕ್ಲಿಕ್ ಮಾಡಿದರೆ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ.
*ಈಗ ವಿತರಣೆ ಆಗದೇ ಇರುವ ಹೊಸ ರೇಷನ್ ಕಾರ್ಡ್ ಲಿಸ್ಟ್ನಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದು, ಮೊದಲ ಪುಟದಲ್ಲಿ ನಿಮ್ಮ ಹೆಸರು ಬಾರದೇ ಇದ್ದಲ್ಲಿ ನಾಲ್ಕನೇ ಪುಟದವರೆಗೂ ನೀವು ಚೆಕ್ ಮಾಡಬಹುದು. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ನಿಮ್ಮ ಕೈ ಸೇರಲಿದೆ ಎಂದು ಅರ್ಥ.
Release of list of eligible ration card candidates, New card issuance soon
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.