ಇನ್ಮುಂದೆ ಈ ರೈತರು ತಮ್ಮ ಜಮೀನು, ಆಸ್ತಿ ಮಾರಾಟ ಮಾಡುವಂತಿಲ್ಲ! ಖಡಕ್ ಸೂಚನೆ

ದಲಿತರ ಭೂಮಿಯನ್ನು (Property) ವಾಪಸ್ ಕೊಡಿಸುವ ಯೋಜನೆ ಇದಾಗಿದೆ, ಕೆಲವು ಕಟ್ಟುನಿಟ್ಟಿನ ಕ್ರಮವನ್ನು ಕೂಡ ಕಂದಾಯ ಇಲಾಖೆ ಕೈಗೊಂಡಿದೆ.

ಕರ್ನಾಟಕ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳು (guarantee schemes) ಮಾತ್ರವಲ್ಲದೆ ಜನರಿಗೆ ಅನುಕೂಲವಾಗುವಂತಹ ಇನ್ನು ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ

ಅದರಲ್ಲೂ ಈ ಬಾರಿ ಕಂದಾಯ ಇಲಾಖೆ ಬಾಕಿ ಉಳಿದಿರುವ ಸಾಕಷ್ಟು ಕೆಲಸಗಳನ್ನು ಮಾಡಲು ಮುಂದಾಗಿದ್ದು ಇದರ ಜೊತೆಗೆ ರೈತರ ಜಮೀನು ಹಾಗೂ ಇತರ ಆಸ್ತಿ ಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳನ್ನು ತಂದಿದೆ ಹಾಗೂ ಸರ್ಕಾರದ ಭೂಮಿ (government land ) ಕಬಳಿಕೆ ಮೊದಲಾದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ಕ್ರಮವನ್ನು ಕೂಡ ಕಂದಾಯ ಇಲಾಖೆ ಕೈಗೊಂಡಿದೆ.

ಅರ್ಹ ರೇಷನ್ ಕಾರ್ಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಶೀಘ್ರದಲ್ಲೇ ಹೊಸ ಕಾರ್ಡ್ ವಿತರಣೆ

ಇನ್ಮುಂದೆ ಈ ರೈತರು ತಮ್ಮ ಜಮೀನು, ಆಸ್ತಿ ಮಾರಾಟ ಮಾಡುವಂತಿಲ್ಲ! ಖಡಕ್ ಸೂಚನೆ - Kannada News

ಬಡವರ ಜಮೀನು ಉಳಿಸಲು ಪ್ಲಾನ್!

ಭೂಮಿ ವರ್ಗಾವಣೆ ನಿಷೇಧ (PTCL act) ತಿದ್ದುಪಡಿ ವಿಧೇಯಕವನ್ನು ತಕ್ಷಣವೇ ಜಾರಿಗೆ ತರಲು ಸರ್ಕಾರ ಮುಂದಾಗಿದೆ, ಈ ಹಿನ್ನೆಲೆಯಲ್ಲಿ ಬುಡಕಟ್ಟು ಜನರ ಪಾಲಿಗೆ ಸರ್ಕಾರದಿಂದ ಲಭ್ಯವಾಗಿರುವ ಜಮೀನು ಉಳಿಸಲು ಪ್ರಯತ್ನಿಸಲಾಗುವುದು ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣೆ ಬೈರೇಗೌಡ ತಿಳಿಸಿದ್ದಾರೆ.

ದಲಿತರ ಭೂಮಿಯನ್ನು (Property) ವಾಪಸ್ ಕೊಡಿಸುವ ಯೋಜನೆ ಇದಾಗಿದೆ. ವಿಧೇಯಕದಲ್ಲಿ ಹೇಳಲಾಗಿರುವ ಅಂಶಗಳೆಂದರೆ, ಪರಿಶಿಷ್ಟ ಜಾತಿ (SC) ಹಾಗೂ ಪಂಗಡದ (ST) ರೈತರಿಗೆ ಸರ್ಕಾರದಿಂದ ನೀಡಲ್ಪಟ್ಟಿರುವ ಜಮೀನನ್ನು ಬೇರೆಯವರಿಗೆ ಪರಭಾರೆ ಮಾಡುವುದಿದ್ದರೆ ಸರ್ಕಾರದ ಪರ್ಮಿಷನ್ (permission) ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.

ಸರ್ಕಾರದಿಂದ ಸಿಕ್ಕ ಜಮೀನನ್ನು ತಮ್ಮ ಮಕ್ಕಳಿಗೆ ಅಥವಾ ತಮಗೆ ಸಂಬಂಧಿಸಿದವರಿಗೆ ಹಕ್ಕು ಬರೆದುಕೊಡುವುದನ್ನು ಹೊರತುಪಡಿಸಿ ಬೇರೆ ಯಾರಿಗೂ ಕೂಡ ಈ ಜಮೀನು ಮಾರಾಟ ಮಾಡುವಂತಿಲ್ಲ, ಒಂದು ವೇಳೆ ಮಾಡುವುದಾದರೆ ಸರ್ಕಾರದ ಒಪ್ಪಿಗೆ ಬೇಕೇ ಬೇಕು.

ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ? ಈ ಬಾರಿ ಒಟ್ಟಿಗೆ ಸಿಗುತ್ತೆ ₹8,000 ರೂಪಾಯಿ

Agriculture Landಬಡವರ ಬಳಿ ಇರುವ ತುಂಡು ಭೂಮಿಯನ್ನು ಕೂಡ ಕಸಿದುಕೊಳ್ಳಲು ಉಳ್ಳವರು ಪ್ರಯತ್ನಿಸುತ್ತಿದ್ದಾರೆ ಎಂದು ಕೃಷ್ಣಬೈರೇಗೌಡ ತಿಳಿಸಿದರು. ಯಾವುದಾದರೂ ಕಾರಣಕ್ಕೆ ಬಡವರನ್ನು ಹೆದರಿಸಿ ಅಥವಾ ಸಣ್ಣ ಸಾಲವನ್ನು ಕೊಟ್ಟಾದರೂ ಅವರ ಜಮೀನು ಪಡೆದುಕೊಳ್ಳುವ ದೊಡ್ಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಇಂತಹ ಘಟನೆಗಳು ಇನ್ನು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಬೆದರಿಕೆ ಹಾಕಿ ಅವರ ಬಳಿ ಇರುವ ಆಸ್ತಿಯನ್ನು ಸಾಕಷ್ಟು ಜನ ಅತಿ ಕಡಿಮೆ ಬೆಲೆಗೆ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ನಂತರ ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತಾರೆ. ಹಾಗಾಗಿ ಈ ರೀತಿ ಭೂಗಳ್ಳರ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕಾಗಿ ಹಾಗೂ ಬಡವರ ಪಾಲಿನ ಜಮೀನನ್ನು ಅವರಿಗೆ ಉಳಿಸಿಕೊಳ್ಳಲು ಅಧಿನಿಯಮವನ್ನು ಕಂದಾಯ ಇಲಾಖೆ ಹೊರಡಿಸಿದೆ..

ಇಂತಹ ರೈತರಿಗೆ ಸರ್ಕಾರಿ ಜಮೀನು ಮಂಜೂರು! ಸಿಗಲಿದೆ ಹಕ್ಕು ಪತ್ರ; ಆಪ್ ಮೂಲಕ ಭೂಮಿ ಸರ್ವೆ

1978ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ಆಡಳಿತದಲ್ಲಿ ಈ ಒಂದು ಕಾನೂನು ಜಾರಿಗೆ ತರಲು ಪ್ರಯತ್ನಿಸಲಾಗಿತ್ತು. ಆದರೆ ಈಗ ಈ ಕನಸು ಈಡೇರಿದೆ ಎನ್ನಬಹುದು. ಇನ್ನು ಇಂತಹ ಕೇಸುಗಳು ಯಾವುದೇ ನ್ಯಾಯಾಲಯ (court) ದಲ್ಲಿ ಇದ್ದರೂ ಕೂಡ ಈ ಹೊಸ ನಿಯಮ ಎಲ್ಲಾ ಕೇಸ್ ಗಳಿಗೂ ಕೂಡ ಅಪ್ಲೈ ಆಗುತ್ತದೆ.

ಹಾಗಾಗಿ ತಮ್ಮ ಜಮೀನು, ಬೇರೆಯವರ ಆಸೆಗೆ ಕಳೆದುಕೊಂಡಿರುವ ರೈತರು ತಕ್ಷಣವೇ ಈ ಬಗ್ಗೆ ದೂರು ಸಲ್ಲಿಸಬಹುದು, ನಿಮ್ಮ ಪಾಲಿನ ಜಮೀನು ಅಥವಾ ಆಸ್ತಿ (Agriculture Land) ನಿಮಗೆ ಸೇರುವಂತೆ ಸರ್ಕಾರವೇ ಮಾಡುತ್ತದೆ.

ಫ್ರೀ ಬಸ್ ಅಂತ ಬೇಕಾಬಿಟ್ಟಿ ಪ್ರಯಾಣಿಸುವಂತಿಲ್ಲ; ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ

these farmers cannot sell their land and property

Follow us On

FaceBook Google News

these farmers cannot sell their land and property