ಅನ್ನಭಾಗ್ಯ ಯೋಜನೆಯ ₹680 ರೂಪಾಯಿ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರದ (state government) ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ (Annabhagya scheme) ಕೂಡ ಒಂದು, ಕೇಂದ್ರ ಸರ್ಕಾರ ಉಚಿತವಾಗಿ (Central Government free rice) ಕೊಡುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯದಲ್ಲಿ ವಾಸಿಸುವ ಫಲಾನುಭವಿ ಜನರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ರಾಜ್ಯ ಸರ್ಕಾರವು ಕೊಡುವುದಾಗಿ ಭರವಸೆ ನೀಡಿತ್ತು
ಅಂದರೆ ಹತ್ತು ಕೆಜಿ ಉಚಿತ ಅಕ್ಕಿಯನ್ನು ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರು ಪಡೆಯಬಹುದಾಗಿತ್ತು. ಆದರೆ ಸರ್ಕಾರಕ್ಕೆ ಮಾತ್ರ ಇದುವರೆಗೆ ಹೆಚ್ಚುವರಿ ಅಕ್ಕಿಯನ್ನು ಒದಗಿಸಲು ಸಾಧ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ ಇನ್ಮುಂದೆ ನಿಮ್ಮ ಬಳಿ ಇರಬೇಕು ಪಿಂಕ್ ಕಾರ್ಡ್!
ಎಲ್ಲರಿಗೂ ತಿಳಿದಿರುವಂತೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಐದು ಕೆಜಿ ಅಕ್ಕಿಗೆ 170ಗಳನ್ನು ಸರ್ಕಾರ ಜಮಾ ಮಾಡುತ್ತಿದೆ, ಆದರೆ ಮನೆಯಲ್ಲಿ ಎಷ್ಟು ಸದಸ್ಯರಿದ್ದಿರೋ ಅಷ್ಟು ಸದಸ್ಯರಿಗೆ ತಲಾ 170 ರೂಪಾಯಿಗಳು ಪ್ರತಿ ತಿಂಗಳು ಜಮಾ (Money Deposit) ಆಗುತ್ತದೆ, ಈ ಎಲ್ಲಾ ಹಣವು ಕೆವೈಸಿ (KYC) ಆಗಿರುವ ಖಾತೆಗೆ ಸಂದಾಯವಾಗುತ್ತದೆ.
ಕಳೆದ ನಾಲ್ಕು ತಿಂಗಳಿನಿಂದಲೂ ಸರ್ಕಾರ ಅಕ್ಕಿ ಒದಗಿಸುವ ಬಗ್ಗೆ ಮಾತನಾಡುತ್ತಲೇ ಇದೆ, ಆದರೆ ಹೆಚ್ಚುವರಿ ಅಕ್ಕಿ ಒದಗಿಸಲು ಸಾಧ್ಯವಾಗದೆ ಈಗಲೂ ಕೂಡ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಇದೀಗ ನಾಲ್ಕನೇ ಕಂತಿನ ಹಣ ಹಂತ ಹಂತವಾಗಿ ಪ್ರತಿ ಜಿಲ್ಲೆಗೂ ತಲುಪುತ್ತಿದೆ. ನಿಮ್ಮ ಖಾತೆಗೂ ಕೂಡ ನವೆಂಬರ್ ತಿಂಗಳ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಡಿ ಬಿಟಿ ಕರ್ನಾಟಕ ಮೊಬೈಲ್ ಆಪ್ (DBT Karnataka – mobile application) ಮೂಲಕ ಚೆಕ್ ಮಾಡಬಹುದು. ಅಥವಾ ಅಧಿಕೃತ ವೆಬ್ ಸೈಟ್ ಗೆ ಹೋಗಿ ಚೆಕ್ ಮಾಡಬಹುದು.
ಬಡವರಿಗೆ ಮನೆ ಭಾಗ್ಯ! ಕೇವಲ 1 ಲಕ್ಷ ಪಾವತಿಸಿದರೆ ಸಿಗುತ್ತೆ ಸರ್ಕಾರದಿಂದ ಮನೆ
DBT ಸ್ಟೇಟಸ್ ಚೆಕ್ ಮಾಡುವುದು ಹೇಗೆ ? (How to check DBT status)

*ಈ ಸರ್ವಿಸ್ (E- service) ವಿಭಾಗಕ್ಕೆ ಹೋಗಿ ಎಡ ಭಾಗದಲ್ಲಿ ಕಾಣುವ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಮೂರನೆಯ ಹಂತವಾಗಿ ಡಿ ಬಿ ಟಿ ಸ್ಟೇಟಸ್ ಚೆಕ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
*ಬಳಿಕ ಜಿಲ್ಲಾವಾರು ವಿಭಜನೆ ಮಾಡಲಾಗಿರುವ ಬೇರೆ ಬೇರೆ ಜಿಲ್ಲೆಯ ಹೆಸರುಗಳು ಕಾಣಿಸುತ್ತವೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಆ ಜಿಲ್ಲೆಯ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
*ಈಗ ಡಿ ಬಿ ಟಿ ವರ್ಗಾವಣೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
*ಹೊಸ ಪುಟ ತರೆದುಕೊಳ್ಳುತ್ತದೆ ಅಲ್ಲಿ ನೀವು ವರ್ಷ ತಿಂಗಳು ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕ್ಯಾಪ್ಚರ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿ.
*ಇಷ್ಟು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯ ವಿವರ, ಮನೆಯಲ್ಲಿ ಎಷ್ಟು ಸದಸ್ಯರಿದ್ದೀರಿ, ಎಷ್ಟು ಹಣ ಸಿಗುತ್ತದೆ ಎಂಬ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ರೇಷನ್ ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್; ಕಾರ್ಡ್ ವಿತರಣೆ ಬಗ್ಗೆ ಹೊಸ ಅಪ್ಡೇಟ್
ಈವರೆಗೆ ಸಾಕಷ್ಟು ಜನರು ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸಿಕೊಂಡಿಲ್ಲ, ಆಧಾರ್ ಸೀಡಿಂಗ್ (Aadhaar seeding) ಆಗದೆ ಇರುವ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ ಹಾಗಾಗಿ ಈಗಲೂ ಕೂಡ ನೀವು ನಿಮ್ಮ ಖಾತೆಯಲ್ಲಿ ಬೇಕಾಗಿರುವ ಈ ಬದಲಾವಣೆಯನ್ನು ಮಾಡಿಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಆದರೂ ಹಣ ಬರುವಂತೆ ಮಾಡಿಕೊಳ್ಳಬಹುದು
ತಕ್ಷಣ ಬ್ಯಾಂಕಿಗೆ ಹೋಗಿ ಕೆವೈಸಿ ಮಾಡಿಸಿ ಜೊತೆಗೆ ರೇಷನ್ ಕಾರ್ಡ್ ಕೆವೈಸಿ ಕೂಡ ಬಹಳ ಮುಖ್ಯವಾಗಿದ್ದು ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಸಿಕೊಳ್ಳಬಹುದು.
ಹಣದ ಬದಲು ಚುನಾವಣಾ ಪ್ರಣಾಳಿಕೆಯಲ್ಲಿ ಹೊರಡಿಸಿರುವಂತೆ ಅಕ್ಕಿಯನ್ನು ಉಚಿತವಾಗಿ ಒದಗಿಸಬೇಕು ಎನ್ನುವ ಸಲುವಾಗಿ ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ. ಮಾಹಿತಿಯ ಪ್ರಕಾರ ಮುಂದಿನ ತಿಂಗಳು ಬಿಳಿ ಅಕ್ಕಿ (white rice) ಯ ಬದಲು ಕುಚ್ಚಲಕ್ಕಿ (brown rice) ಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ವಸತಿ ಯೋಜನೆ! ಮನೆ ಇಲ್ಲದವರಿಗೆ ಸರ್ಕಾರವೇ ನೀಡುತ್ತೆ ಮನೆ; ಸರ್ಕಾರದಿಂದ ಸಿಹಿ ಸುದ್ದಿ
680 rupees deposit of Annabhagya Yojana, Check your Bank account



