ಇನ್ನೂ ಗ್ರಹಲಕ್ಷ್ಮಿ ಹಣ ಪಡೆಯದವರಿಗಾಗಿ ಹೊಸ ಮಾರ್ಗಸೂಚಿ ಪ್ರಕಟ! ಇಲ್ಲಿದೆ ಮಾಹಿತಿ

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಪ್ರತಿಶತ ನೂರರಷ್ಟು ಯಶಸ್ವಿಯಾಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈಗಲೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಪರಿಶೀಲನ ಸಭೆ ನಡೆಸಿ ಮಹಿಳೆಯರಿಗೆ ಗೃಹಲಕ್ಷ್ಮಿ ಪ್ರತಿ ಕಂತಿನ ಹಣ ಜಮಾ (Money Deposit) ಆಗಲು ಮಾಸ್ಟರ್ ಪ್ಲಾನ್ ಮಾಡಿದೆ ರಾಜ್ಯ ಸರ್ಕಾರ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ ನಡೆಸುವುದು! (Camp in Gram Panchayat)

ಅರ್ಜಿ ಸಲ್ಲಿಸಿದ ಬಹುತೇಕ ಎಲ್ಲಾ ಗೃಹಿಣಿಯರಿಗೆ ಹಣ ವರ್ಗಾವಣೆ DBT ಮಾಡಲಾಗಿದೆ. ಆದರೆ ಕೆಲವು ತಾಂತ್ರಿಕ ದೋಷಗಳ ಕಾರಣದಿಂದ ಎಲ್ಲರ ಖಾತೆಗೆ (Bank Account) ಮಾತ್ರ ಹಣ ಜಮಾ ಆಗುತ್ತಿಲ್ಲ. ಈ ಕಾರಣಕ್ಕಾಗಿ ಡಿಸೆಂಬರ್ ಅಂತ್ಯದ ಒಳಗೆ ಪ್ರತಿಯೊಬ್ಬರಿಗೂ ಕೂಡ ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ಕ್ಯಾಂಪ್ ಒಂದನ್ನು ನಡೆಸಿ ಮಹಿಳೆಯರ ಖಾತೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸಿಕೊಡಬೇಕು ಎಂದು ತೀರ್ಮಾನಿಸಲಾಗಿದೆ.

ರೇಷನ್ ಕಾರ್ಡ್ ಅಕ್ರಮ ತಡೆಯಲು ಮಾಸ್ಟರ್ ಪ್ಲಾನ್! ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್

ಕ್ಯಾಂಪ್ ನ ಮುಖ್ಯ ಅಂಶಗಳು!

*ಗ್ರಾಮಮಟ್ಟದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಯಾಂಪ್ ನಡೆಯುತ್ತದೆ.

*ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ದೋಷಗಳು ಹಾಗೂ ಬ್ಯಾಂಕಿಂಗ್ ಸಮಸ್ಯೆಯನ್ನು ನಿವಾರಿಸಲು ಆಯೋಜಿಸಲಾಗಿದೆ.

*ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (India post payment bank officer) ಸಿಬ್ಬಂದಿ ಹಾಗೂ ಇತರ ಬ್ಯಾಂಕ್ ಗಳ ಸಿಬ್ಬಂದಿ ಕ್ಯಾಂಪ್ನಲ್ಲಿ ಭಾಗವಹಿಸಲಿದ್ದಾರೆ.

*ಸ್ಥಳೀಯ ಸೇವಾ ಕೇಂದ್ರಗಳ ಗಣಕ ನಿಯಂತ್ರಿಕ ಸಿಬ್ಬಂದಿ, EDCS ತಂಡ ಈ ಕ್ಯಾಂಪ್ ನಲ್ಲಿ ಭಾಗವಹಿಸಬೇಕು.

ಅನ್ನಭಾಗ್ಯ ಯೋಜನೆಯ ₹680 ರೂಪಾಯಿ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

Gruha Lakshmi Yojanaಕ್ಯಾಂಪ್ನಿಂದ ಮಹಿಳೆಯರಿಗೆ ಏನು ಉಪಯೋಗ?

*ಹಳೆಯ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸುವುದು

*ಹೊಸ ಬ್ಯಾಂಕ್ ಖಾತೆ ತೆರೆಯುವುದು

*ಆಧಾರ್ ಲಿಂಕ್ ಮಾಡಿಸುವುದು

*ಗೃಹಲಕ್ಷ್ಮಿ ಅರ್ಜಿ ಸ್ಥಿತಿ ಪರಿಶೀಲಿಸುವುದು

*ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹಣ ಬಾರದೆ ಇರಲು ಇರುವ ಇತರ ಕಾರಣಗಳನ್ನು ಗುರುತಿಸಿ ಪರಿಹರಿಸುವುದು.

ಈ ಕ್ಯಾಂಪ್ ನಡೆಯುವ ಬಗ್ಗೆ ಗ್ರಾಮೀಣ ಕಾರ್ಯ ನಿರ್ವಾಹಕ ಸಿಬ್ಬಂದಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಬೇಕು, ಜಾಹೀರಾತು (advertisement) ನೀಡುವುದರ ಮೂಲಕ ವ್ಯಾಪಕವಾಗಿ ಪ್ರಚಾರ ನಡೆಸಬೇಕು. ಸಂಬಂಧಪಟ್ಟ ಅಧಿಕಾರಿಗೆಯಿಂದ ಮಹಿಳೆಯರಿಗೆ ಎಸ್ಎಂಎಸ್ ಕಳುಹಿಸಲಾಗುವುದು.

ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ ಇನ್ಮುಂದೆ ನಿಮ್ಮ ಬಳಿ ಇರಬೇಕು ಪಿಂಕ್ ಕಾರ್ಡ್!

ಕ್ಯಾಂಪ್ ಮಾಡಿರುವ ದಿನಾಂಕ ಮತ್ತು ಸ್ಥಳ!

ಮಹಿಳೆಯರ ಖಾತೆಗೆ ಹಣ ಬಾರದೆ ಇರಲು ಇರುವ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಈ ಕ್ಯಾಂಪ್ ನಡೆಸಲಾಗುವುದು. ತರಬೇತಿ ಪಡೆದುಕೊಂಡ ಸಾಕಷ್ಟು ಬೇರೆ ಬೇರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ಕ್ಯಾಂಪ್ ನಡೆಯುವ ದಿನಾಂಕ 27 ಡಿಸೆಂಬರ್ 2023 ರಿಂದ 29 ಡಿಸೆಂಬರ್ 2023ರ ವರೆಗೆ. ಈ ಮೂರು ದಿನಗಳ ಕಾಲ ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ 5:00 ವರೆಗೆ ಕ್ಯಾಂಪ್ ನಡೆಸಲಾಗುವುದು. ಹತ್ತಿರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಯಾಂಪ್ ನಡೆಯುವುದು.

ಹೆಚ್ಚಿನ ಮಹಿಳೆಯರು ಈ ಕ್ಯಾಂಪ್ ನಲ್ಲಿ ಭಾಗವಹಿಸಿ ತಮ್ಮ ಖಾತೆಗೆ (Bank Account) ಹಣ ಬಾರದೆ ಇದ್ದರೆ ಆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಕ್ಯಾಂಪ್ ಮಾಡಿದ ನಂತರ ಕ್ಯಾಂಪನ ವರದಿಯನ್ನು ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಲ್ಲಿಸಬೇಕಾಗುತ್ತದೆ.

ಬಡವರಿಗೆ ಮನೆ ಭಾಗ್ಯ! ಕೇವಲ 1 ಲಕ್ಷ ಪಾವತಿಸಿದರೆ ಸಿಗುತ್ತೆ ಸರ್ಕಾರದಿಂದ ಮನೆ

ಇನ್ನು ಮಹಿಳೆಯರು ತಮ್ಮ ಖಾತೆಗೆ ಹಣ ಬಾರದೆ ಇರುವುದಕ್ಕೆ ಗೃಹಲಕ್ಷ್ಮಿ ಅದಾಲತ್ ಮೂಲಕ ಗ್ರಾಮ ಪಂಚಾಯತ್ ನಲ್ಲಿ ದೂರು ಸಲ್ಲಿಸಲು ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ಕೈಗೊಂಡಿರುವ ಎಲ್ಲಾ ಕ್ರಮಗಳಿಂದಾಗಿ ಡಿಸೆಂಬರ್ 31 2023ರ ಒಳಗೆ ಬಹುತೇಕ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದು ಖಚಿತವಾಗಿದೆ.

New guidelines published for those who have not yet received Gruha lakshmi Scheme money

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories