ನೀವು ಆರಂಭಿಸಿ ಕರ್ನಾಟಕ ಒನ್ ಸೇವಾ ಕೇಂದ್ರ; ಸರ್ಕಾರದಿಂದ ಪ್ರಾಂಚೈಸಿ ಪಡೆದು ಹಣ ಗಳಿಸಿ

ಸರ್ಕಾರದ ಕಡೆಯಿಂದ ಪ್ರಾಂಚೈಸಿ (franchise) ಕೊಡಲಾಗುವುದು. ಹಾಗಾದ್ರೆ ಈ ಪ್ರಾಂಚೈಸಿ ಪಡೆದುಕೊಳ್ಳುವುದು ಹೇಗೆ ಬೇಕಾಗಿರುವ ಅರ್ಹತೆಗಳೇನು? ಇಲ್ಲಿದೆ ವಿವರ

ರಾಜ್ಯ ಸರ್ಕಾರ (state government) ಅಥವಾ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸುವುದು ಅಥವಾ ಮಾಹಿತಿ ಪಡೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಸಾಮಾನ್ಯವಾಗಿ ಗ್ರಾಮದಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲು ಪ್ರತಿ ಗ್ರಾಮದಲ್ಲಿಯೂ ಗ್ರಾಮ ಒನ್ (grama one) ಕೇಂದ್ರಗಳನ್ನು ಆರಂಭಿಸಲಾಗಿದೆ ಅದೇ ರೀತಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವಾಸಿಸುವವರಿಗೆ ಬೆಂಗಳೂರು ಒನ್ (Bengaluru one) ಕೇಂದ್ರ ಇದೆ. ಇಷ್ಟು ಮಾತ್ರ ಅಲ್ಲದೆ ಪಟ್ಟಣ ಪ್ರದೇಶದಲ್ಲಿ ಹಾಗೂ ತಾಲೂಕು ಒನ್ ಆರಂಭಿಸಲಾಗಿದೆ.

SSLC, PUC ಮುಗಿಸಿದ ವಿದ್ಯಾರ್ಥಿಗಳಿಗೆ ಸಿಗುತ್ತೆ ಉಚಿತ ಲ್ಯಾಪ್ ಟಾಪ್! ಹೀಗೆ ಅರ್ಜಿ ಸಲ್ಲಿಸಿ

ನೀವು ಆರಂಭಿಸಿ ಕರ್ನಾಟಕ ಒನ್ ಸೇವಾ ಕೇಂದ್ರ; ಸರ್ಕಾರದಿಂದ ಪ್ರಾಂಚೈಸಿ ಪಡೆದು ಹಣ ಗಳಿಸಿ - Kannada News

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳು (government schemes) ಹೆಚ್ಚಾಗಿ ಬಿಡುಗಡೆ ಆಗುತ್ತಿರುವುದರಿಂದ ಜನರು ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು, ಹೀಗಾಗಿ ಸೇವಾ ಕೇಂದ್ರಗಳ ಬೇಡಿಕೆಯು ಹೆಚ್ಚಾಗಿದ್ದು ಹೆಚ್ಚಿನ ಸೇವಾ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಇದರ ಜೊತೆಗೆ ನಿರುದ್ಯೋಗಿ ಯುವಕರಿಗೂ ಒಂದು ಸೂಪರ್ ಆಗಿರುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ. ಯಾರು ಗ್ರಾಮ ಒನ್ ಆರಂಭಿಸಲು ಬಯಸುತ್ತಾರೋ ಅಂತವರಿಗೆ ಸರ್ಕಾರದ ಕಡೆಯಿಂದ ಪ್ರಾಂಚೈಸಿ (franchise) ಕೊಡಲಾಗುವುದು. ಹಾಗಾದ್ರೆ ಈ ಪ್ರಾಂಚೈಸಿ ಪಡೆದುಕೊಳ್ಳುವುದು ಹೇಗೆ ಬೇಕಾಗಿರುವ ಅರ್ಹತೆಗಳೇನು? ಇಲ್ಲಿದೆ ವಿವರ.

ಕರ್ನಾಟಕ ಒನ್ ಪ್ರಾಂಚೈಸಿ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು! (Eligibilities to get Karnataka one franchise)

18 ವರ್ಷ ಆಗಿರಬೇಕು

ಕರ್ನಾಟಕದ ನಿವಾಸಿ ಆಗಿರಬೇಕು

ಕನಿಷ್ಠ 10ನೇ ತರಗತಿ ತೇರ್ಗಡೆ ಹೊಂದಿರಬೇಕು ಹೆಚ್ಚು ಶಿಕ್ಷಣ ಹೊಂದಿರುವವರಿಗೆ ಮೊದಲ ಆದ್ಯತೆ

ಕಂಪ್ಯೂಟರ್ ಜ್ಞಾನವಿರಬೇಕು

ಕನ್ನಡ ಭಾಷೆಯಲ್ಲಿ ಪರಿಣಿತಿ ಹೊಂದಿರಬೇಕು ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಗೊತ್ತಿರಬೇಕು.

ಯಾವುದೇ ಸಾಮಾಜಿಕ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎನ್ನುವುದಕ್ಕೆ ಪೊಲೀಸ್ ದೃಢೀಕರಣ ಪ್ರಮಾಣಪತ್ರ ಸಲ್ಲಿಸಬೇಕು.

ಕರ್ನಾಟಕ ಒನ್ ಆರಂಭಿಸುವ ಸ್ಥಳಕ್ಕೆ ನೀರು ಹಾಗೂ ರಸ್ತೆ ಸಂಪರ್ಕ ಇರಬೇಕು.

ಸಿಹಿ ಸುದ್ದಿ! ಕೃಷಿ ಭಾಗ್ಯ ಯೋಜನೆಯ ಹಣ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನ

ಕರ್ನಾಟಕ ಒನ್ ಆರಂಭಿಸಲು ಯಾವ ಪರಿಕರಗಳು ಬೇಕು? (Needed materials to start Karnataka one)

Karnataka One Seva Kendra franchise ಕಂಪ್ಯೂಟರ್ (Computer)

ಪ್ರಿಂಟರ್ (Printer)

ಫಿಂಗರ್ ಪ್ರಿಂಟ್ ಸ್ಕ್ಯಾನರ್ (Finger Print Scanner)

ವೆಬ್ ಕ್ಯಾಮೆರಾ (Web Camera)

ಇಂಟರ್ನೆಟ್ ಕನೆಕ್ಷನ್ (Internet Connection)

ಇವಿಷ್ಟು ಮುಖ್ಯವಾಗಿರುವ ಪರಿಕರಗಳು.

ಇನ್ನೂ ಗ್ರಹಲಕ್ಷ್ಮಿ ಹಣ ಪಡೆಯದವರಿಗಾಗಿ ಹೊಸ ಮಾರ್ಗಸೂಚಿ ಪ್ರಕಟ! ಇಲ್ಲಿದೆ ಮಾಹಿತಿ

ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು! (Documents)

ಪ್ಯಾನ್ ಕಾರ್ಡ್ (Pan Card)

ಆಧಾರ್ ಕಾರ್ಡ್ (Aadhaar Card)

ಬ್ಯಾಂಕ್ ಖಾತೆಯ ವಿವರ (Bank Account Details)

ಮೊಬೈಲ್ ಸಂಖ್ಯೆ (Mobile Number)

ಇ-ಮೇಲ್ ಐಡಿ (Email ID)

ವಿಳಾಸದ ಪ್ರೂಫ್ (Address Proof)

ಶಿಕ್ಷಣದ ಬಗ್ಗೆ ಮಾಹಿತಿ (Education Details)

ಇವಿಷ್ಟು ಮೂಲಭೂತ ದಾಖಲೆಗಳಾಗಿದ್ದು ಹೆಚ್ಚಿನ ದಾಖಲೆಗಳು ಬೇಕಿದ್ದಲ್ಲಿ ನೀವು ವೆಬ್ಸೈಟ್ನಲ್ಲಿ ತಿಳಿದುಕೊಳ್ಳಬಹುದು.

ರೇಷನ್ ಕಾರ್ಡ್ ಅಕ್ರಮ ತಡೆಯಲು ಮಾಸ್ಟರ್ ಪ್ಲಾನ್! ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್

ಅರ್ಜಿ ಸಲ್ಲಿಸುವುದು ಹೇಗೆ? (How to apply)

https://www.karnatakaone.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಫ್ರಾಂಚೈಸಿ ಆರಂಭಿಸಲು ಹೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ನಂತರ ನಿಮ್ಮ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು. ಯಾವ ಯಾವ ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಆರಂಭಿಸುವುದಕ್ಕೆ ಸಾಧ್ಯವಿದೆ ಎಂಬುದನ್ನು ಓದಿಕೊಂಡು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ.

ನಿಮ್ಮ ಅರ್ಜಿ ಸಲ್ಲಿಕೆ ಪೂರ್ಣವಾಗಬೇಕಾದರೆ 100 ರೂಪಾಯಿಗಳು ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ ಆನ್ಲೈನ್ ಪೇಮೆಂಟ್ (online payment) ಮೂಲಕ ಪಾವತಿಸಿ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ರಶೀದಿ ಅಥವಾ ಸ್ವೀಕೃತಿ ಪತ್ರ ಪಡೆಯುವುದನ್ನು ಮರೆಯಬೇಡಿ.

ಅನ್ನಭಾಗ್ಯ ಯೋಜನೆಯ ₹680 ರೂಪಾಯಿ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ! (Last date to apply)

ಕರ್ನಾಟಕ ಒನ್ ಫ್ರಾಂಚೈಸಿ ಪಡೆದುಕೊಳ್ಳಲು 19 ಡಿಸೆಂಬರ್ 2023 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 2, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಗೆ ಕರೆ (contact number) ಮಾಡಿ 080 – 49203888 ಅಥವಾ 8904085030

start Karnataka One Seva Kendra, Get a franchise from government and earn money

Follow us On

FaceBook Google News