ಸಿಹಿ ಸುದ್ದಿ! ಕೃಷಿ ಭಾಗ್ಯ ಯೋಜನೆಯ ಹಣ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಿ ಆಯ್ಕೆಯಾಗುವ ರೈತರು ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ ಒಂದು ಎಕರೆ ವಿಸ್ತೀರ್ಣದ ಸಾಗುವಳಿ ಭೂಮಿಯನ್ನು (Agriculture Land) ಹೊಂದಿರಬೇಕು

Bengaluru, Karnataka, India
Edited By: Satish Raj Goravigere

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಪ್ರದೇಶಗಳನ್ನ ಬರಪೀಡಿತ ಪ್ರದೇಶ (Drought prone area) ಎಂದು ಗುರುತಿಸಲಾಗಿದೆ. ಈ ಬಾರಿ ಮುಂಗಾರು ಮಳೆಯ ಅಭಾವದಿಂದ ಹಲವು ಪ್ರದೇಶದಲ್ಲಿ ರೈತರು (farmers) ಸರಿಯಾಗಿ ಫಸಲು ಬೆಳೆಯಲು ಸಾಧ್ಯವಾಗುತ್ತಿಲ್ಲ

ಹೀಗಾಗಿ ಮಳೆಯಾಶ್ರಿತ ರೈತರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆ (krushi Bhagya scheme) ಯನ್ನು ಆರಂಭಿಸಿದೆ.

Crop insurance money is directly debited to the farmer's Bank account

ಇನ್ನೂ ಗ್ರಹಲಕ್ಷ್ಮಿ ಹಣ ಪಡೆಯದವರಿಗಾಗಿ ಹೊಸ ಮಾರ್ಗಸೂಚಿ ಪ್ರಕಟ! ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ 24 ಬರಪೀಡಿತ ಜಿಲ್ಲೆಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ 106 ತಾಲ್ಲೂಕುಗಳ ರೈತರಿಗೆ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಆರ್ಥಿಕ ನೆರವು (financial help) ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಫಲಾನುಭವಿ ರೈತರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು.

ಸುಸ್ಥಿರ ಕೃಷಿಗಾಗಿ ಸಹಾಯಧನ!

ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಅದರ ಉಪಯುಕ್ತವಾದ ಬಳಕೆಯ ಬಗ್ಗೆ ರೈತರಿಗೆ ತಿಳಿಸುವುದು ಹಾಗೂ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಮಳೆಯ ನೀರು ವ್ಯರ್ಥವಾಗದೇ ಇರುವ ರೀತಿಯಲ್ಲಿ ಕೃಷಿ ಹೋಂಡವನ್ನು ತೆಗೆಸಿ ಅದರಲ್ಲಿ ನೀರು ಸಂಗ್ರಹಿಸಿ ನೀರಾವರಿಗೆ ಬಳಸಿಕೊಳ್ಳುವಂತೆ ರೈತರಿಗೆ ಸಹಾಯ ನೀಡಲಾಗುವುದು.

ರೇಷನ್ ಕಾರ್ಡ್ ಅಕ್ರಮ ತಡೆಯಲು ಮಾಸ್ಟರ್ ಪ್ಲಾನ್! ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್

ಕೃಷಿ ಭಾಗ್ಯ ಯೋಜನೆ ಪ್ರಯೋಜನ ಯಾರಿಗೆ ಸಿಗಲಿದೆ?

Krushi Bhagya Yojanaಯೋಜನೆ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಲಾಗಿದೆ, ಘಟಕ ಮಾರ್ಗಸೂಚಿಯನ್ನು ಅನುಸರಿಸುವ ರೈತರಿಗೆ ಈ ಯೋಜನೆಯ ಪ್ರತಿಫಲ ಸಿಗುತ್ತದೆ. ಅರ್ಜಿ ಸಲ್ಲಿಸಿ ಆಯ್ಕೆಯಾಗುವ ರೈತರು ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ ಒಂದು ಎಕರೆ ವಿಸ್ತೀರ್ಣದ ಸಾಗುವಳಿ ಭೂಮಿಯನ್ನು (Agriculture Land) ಹೊಂದಿರಬೇಕು. ಕಳೆದ ವರ್ಷ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ಹಾಗೂ ಮತ್ತಿತರ ಪ್ರಯೋಜನ ಪಡೆದುಕೊಂಡವರು ಈಗ ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಅನ್ನಭಾಗ್ಯ ಯೋಜನೆಯ ₹680 ರೂಪಾಯಿ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಬಿಡುಗಡೆ ಆಗುವ ಸಹಾಯಧನ ಪಡೆಯಲು ಇಚ್ಚಿಸುವ ರೈತರು ಡಿಸೆಂಬರ್ 31ರ ಒಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನ ಭೇಟಿ ನೀಡಲು, ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸಿಗುವ ಸೌಲಭ್ಯಗಳು!

ಕ್ಷೇತ್ರ ಬದು ನಿರ್ಮಾಣಕ್ಕೆ ಸಹಾಯಧನ

ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ

ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ

ಕೃಷಿಹೊಂಡದ ಸುತ್ತಲೂ ತಂತಿ ಬೇಲಿ

ಹೊಂಡದಿಂದ ನೀರೆತ್ತುವ ಸಲುವಾಗಿ ಸೋಲಾರ್ ಅಥವಾ ಡೀಸೆಲ್ ಪಂಪ್ ಸೆಟ್ ಒದಗಿಸುವುದು

ನೀರನ್ನು ಬೆಳೆಗೆ ಹಾಯಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಘಟಕ ವಿತರಿಸುವುದು.

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ!

ಈ ಎಲ್ಲಾ ಯೋಜನೆಯ ಪ್ರಯೋಜನವನ್ನು ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ಪರ್ಸೆಂಟ್ ನಿಂದ 80% ವರೆಗೆ ಸಹಾಯಧನ ಸಿಕ್ಕರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90% ವರೆಗೆ ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ. ಅರ್ಹ ಫಲಾನುಭವಿ ರೈತರು ತಕ್ಷಣವೇ ಅರ್ಜಿ ಸಲ್ಲಿಸಿ, ಕೃಷಿ ಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

Application invited from eligible farmers for Krushi Bhagya Yojana