ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ!

ಯಾವುದೇ ರಾಷ್ಟ್ರೀಕೃತ ಬ್ಯಾಂಕು (nationalized bank) ಗಳಲ್ಲಿ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು

ದೇಶದಲ್ಲಿ ಕೃಷಿಕರು (farmers), ತಮ್ಮ ಜಮೀನಿನಲ್ಲಿ ವರ್ಷವಿಡಿ ಉಳುಮೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ಒಂದಷ್ಟು ಸಮಯ ಉಳುಮೆಗೆ ಮೀಸಲಾಗಿಟ್ಟು, ಫಸಲು ಬರುವ ಅವಧಿ ಒಳಗೆ ಕೆಲವು ಉಪ ಕಸುಬುಗಳನ್ನು ನಂಬಿಕೊಂಡಿರುತ್ತಾರೆ.

ಮಳೆ ಸರಿಯಾಗಿಬಾರದೆ ಇದ್ದರೆ ಸರಿಯಾದ ಫಸಲು (crop)ಕೂಡ ಬರುವುದಿಲ್ಲ. ಹೀಗಾಗಿ ರೈತರು ಕೇವಲ ಫಸಲನ್ನು ಮಾತ್ರ ನಂಬಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲ ಇದೇ ಕಾರಣಕ್ಕೆ ಕೆಲವು ಹೈನುಗಾರಿಕೆ, ಕುರಿ ಸಾಕಾಣಿಕೆ, ಮೇಕೆ, ಕೋಳಿ, ಹಂದಿ, ಜೇನು ಸಾಕಾಣಿಕೆ ಹೀಗೆ ಮೊದಲಾದ ಉಪಕಸುಬುಗಳನ್ನು ನಡೆಸುತ್ತಾರೆ.

ಜನವರಿಯಿಂದ ₹500 ರೂಪಾಯಿಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್! ಈ ರೀತಿ ಪಡೆದುಕೊಳ್ಳಿ

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ! - Kannada News

ಇಂತಹ ಉಪಕಸುಬುಗಳನ್ನು ಮುಖ್ಯ ಉದ್ಯಮವನ್ನಾಗಿಯೇ ಮಾಡಿಕೊಳ್ಳಲು ರೈತರಿಗೆ ಸಹಾಯ ಮಾಡಲು ಸರ್ಕಾರ ಕೆಲವು ಸಬ್ಸಿಡಿ ದರದ ಸಾಲ ಸೌಲಭ್ಯ (subsidy loan) ಗಳನ್ನು ಘೋಷಿಸಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ! (Kisan credit card scheme)

2020 21ನೇ ಸಾಲಿನಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಕೇಂದ್ರದ ಮೋದಿಜಿ ಸರ್ಕಾರ (Modi ji government) ಜಾರಿಗೆ ತಂದಿತು. ಈ ಒಂದು ಕಾರ್ಡ್ ಇರುವ ರೈತರು ಸುಲಭವಾಗಿ ಇತರ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ ಕೂಡ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಹರಿಯಾಣದಲ್ಲಿ ಮೊದಲು ಆರಂಭಿಸಲಾಯಿತು. ನಂತರ ಪ್ರತಿ ರಾಜ್ಯದಲ್ಲಿಯೂ ಈ ಸೌಲಭ್ಯ ಇದ್ದು ರೈತರು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (loan with less interest) ಪಡೆದುಕೊಳ್ಳಬಹುದು.

ಕೃಷಿ ಚಟುವಟಿಕೆಗಳಿಗಾಗಿ ಮಾತ್ರವಲ್ಲದೆ ಹೈನುಗಾರಿಕೆ ಮೀನುಗಾರಿಕೆ (fishery) ಹಾಗೂ ಇತರ ಪ್ರಾಣಿ ಸಾಕಾಣಿಕೆಗೆ ಕೂಡ ಈ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಬಹುದು.

ಮನೆ ಬಾಡಿಗೆಗೆ ನೀಡಿರುವ ಮಾಲೀಕರಿಗೆ ಮಹತ್ವದ ಮಾಹಿತಿ! ಇಲ್ಲಿವೆ ಹೊಸ ನಿಯಮಗಳು

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನ? (Benefits of KCC)

Kisan credit card schemeಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ರೆ, ರೈತರು ಸುಲಭವಾಗಿ ಹೈನುಗಾರಿಕೆ ಮೀನುಗಾರಿಕೆ, ಕುರಿ, ಕೋಳಿ, ಹಂದಿ ಮೊದಲಾದ ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ಪಡೆಯಬಹುದು.

ಈ ಕಾರ್ಡ್ ಹೊಂದಿರುವ ರೈತರಿಗೆ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡಲಾಗುವುದು, ಅದರಲ್ಲೂ 1.6ಲಕ್ಷ ರೂಪಾಯಿಗಳ ಸಾಲಕ್ಕೆ ಯಾವ ದಾಖಲೆಗಳನ್ನು ಕೂಡ ನೀಡಬೇಕಾಗಿಲ್ಲ.

ಯಾವುದೆ ಹಣಕಾಸು ಸಂಸ್ಥೆಗಳಿರಬಹುದು ಅಥವಾ ಇತರ ಬ್ಯಾಂಕುಗಳು ಇರಬಹುದು ಅಲ್ಲಿ ಸಾಲ ತೆಗೆದುಕೊಂಡರೆ ಕನಿಷ್ಠ 7% ನಷ್ಟು ಬಡ್ಡಿ ಇರುತ್ತದೆ. ಆದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ತೆಗೆದುಕೊಂಡರೆ ಕೇವಲ 4% ಬಡ್ಡಿ ದರದಲ್ಲಿ ಸರ್ಕಾರವೇ ಸಾಲ ಒದಗಿಸುತ್ತದೆ.

ಇಂತಹ ರೈತರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ರೂಪಾಯಿ ಪಿಂಚಣಿ; ಈ ರೀತಿ ಅರ್ಜಿ ಸಲ್ಲಿಸಿ

ಈ ಯೋಜನೆ ಅಡಿಯಲ್ಲಿ ಸಿಗುವ ಸಾಲ ಸೌಲಭ್ಯದ ಮೊತ್ತ ನೋಡುವುದಾದರೆ,

ಎಮ್ಮೆ ಖರೀದಿಗೆ ರೂ.60,249
ಹಸು ಖರೀದಿಗೆ ರೂ. 40,783
ಕುರಿ ಅಥವಾ ಮೇಕೆ ಸಾಕಾಣಿಕೆಗೆ ರೂ.4,063
ಮೊಟ್ಟೆ ಇಡುವ ಪ್ರತಿ ಕೋಳಿಗೆ 720ರೂ. ಸಾಲ ಕೊಡಲಾಗುವುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಯಾರು ಸಲ್ಲಿಸಬಹುದು?

ರೈತರು, ಮೀನುಗಾರಿಕೆ ಮಾಡುವವರು, ಹೈನುಗಾರಿಕೆ ಹಾಗೂ ಪಶುಸಂಗೋಪನೆಯಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸಬಹುದು. ಸದ್ಯ ಆಕ್ಸಿಸ್ ಬ್ಯಾಂಕ್ (Axis Bank) ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಹಾಗೂ ಎಸ್ ಬಿ ಐ ಬ್ಯಾಂಕು (SBI Bank) ಗಳ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.

ಇದೊಂದು ಕಾರ್ಡ್ ಇದ್ರೆ ಸಾಕು ರೈತರಿಗೆ ಸಿಗುತ್ತೆ 3 ಲಕ್ಷದವರೆಗೆ ಸುಲಭ ಸಾಲ ಸೌಲಭ್ಯ!

ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents needed to apply KCC)

ರೈತರಾಗಿದ್ದರೆ ಭೂಮಿಯ ಬಗ್ಗೆ ಮಾಹಿತಿ ಕೊಡಬೇಕು

ಪಶು ಸಂಗೋಪನೆ ಮಾಡುವವರು ವೈದ್ಯರ ಸರ್ಟಿಫಿಕೇಟ್ ನೀಡಬೇಕು

ಆಧಾರ್ ಕಾರ್ಡ್

ಬ್ಯಾಂಕ್ ಖಾತೆಯ ಮಾಹಿತಿ

ಆದಾಯ ಪ್ರಮಾಣ ಪತ್ರ

ರೇಷನ್ ಕಾರ್ಡ್ ಅಥವಾ ವೋಟರ್ ಐಡಿ

ಸ್ಥಳದ ಪುರಾವೆ

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಯಾವುದೇ ರಾಷ್ಟ್ರೀಕೃತ ಬ್ಯಾಂಕು (nationalized bank) ಗಳಲ್ಲಿ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಪಡೆದುಕೊಳ್ಳಲು ಅರ್ಜಿ ಫಾರಂ ಭರ್ತಿ ಮಾಡಿ ಸರಿಯಾದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಅಥವಾ ರೈತ ಸೇವಾ ಕೇಂದ್ರವನ್ನು ಸಂಪರ್ಕಿಸಿ.

Subsidy loan given by the government for sheep, chicken, goat and cow farming

Follow us On

FaceBook Google News

Subsidy loan given by the government for sheep, chicken, goat and cow farming