ಇಂತಹ ರೈತರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ರೂಪಾಯಿ ಪಿಂಚಣಿ; ಈ ರೀತಿ ಅರ್ಜಿ ಸಲ್ಲಿಸಿ

Story Highlights

Pension Scheme : ಪ್ರತಿ ತಿಂಗಳು 3000ಗಳನ್ನು ಪಿಂಚಣಿಯಾಗಿ ರೈತರು ಪಡೆದುಕೊಳ್ಳಬಹುದಾದ ಯೋಜನೆ ಒಂದನ್ನು ಕೇಂದ್ರದ ಮೋದಿಜಿ ಸರ್ಕಾರ ಪರಿಚಯಿಸಿದೆ.

Pension Scheme : ದೇಶದಲ್ಲಿ ರೈತರ (farmer) ಶಕ್ತಿಯನ್ನು ಹೆಚ್ಚಿಸಲು ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಬೇರೆ ಬೇರೆ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿ ಸಾಕಷ್ಟು ಫಲಾನುಭವಿ ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ ಎನ್ನಬಹುದು.

ಇದೀಗ ಪ್ರತಿ ತಿಂಗಳು 3000ಗಳನ್ನು ಪಿಂಚಣಿಯಾಗಿ ರೈತರು ಪಡೆದುಕೊಳ್ಳಬಹುದಾದ ಯೋಜನೆ ಒಂದನ್ನು ಕೇಂದ್ರದ ಮೋದಿಜಿ ಸರ್ಕಾರ ಪರಿಚಯಿಸಿದೆ.

ಇದೊಂದು ಕಾರ್ಡ್ ಇದ್ರೆ ಸಾಕು ರೈತರಿಗೆ ಸಿಗುತ್ತೆ 3 ಲಕ್ಷದವರೆಗೆ ಸುಲಭ ಸಾಲ ಸೌಲಭ್ಯ!

ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ! (Pradhanmantri Kisan man dhan scheme)

ಇತ್ತೀಚಿಗೆ ರೈತರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ ಆರಂಭಿಸಲಾಗಿದೆ. ಈ ಮೂಲಕ ಸರ್ಕಾರಿ ಹುದ್ದೆಯಲ್ಲಿ ಇರುವ ನೌಕರರು ಮಾತ್ರವಲ್ಲದೆ ರೈತರು ಕೂಡ ಪ್ರತಿ ತಿಂಗಳು ಪಿಂಚಣಿ (pension) ಪಡೆದು ಆರ್ಥಿಕ ಸಮಸ್ಯೆ ಇಲ್ಲದಂತೆ ಜೀವನ ನಡೆಸಬಹುದು.

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? ಯಾರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? (Who can apply for pension scheme)

ಕಿಸಾನ್ ಯೋಜನೆಯ ಅಡಿಯಲ್ಲಿ ರೈತರು ಹೆಸರು ನೋಂದಾಯಿಸಿಕೊಂಡಿರಬೇಕು. (ಪಿಂಚಣಿ ಯೋಜನೆ ಆರಂಭಿಸಿದ ನಂತರ ಹೆಸರನ್ನು ನೋಂದಾಯಿಸಬಹುದು)

18ರಿಂದ 40 ವರ್ಷದ ಒಳಗಿನ ರೈತರು ಅರ್ಜಿ ಸಲ್ಲಿಸಬಹುದು.

ಯಾವ ವರ್ಷದಲ್ಲಿ ಯೋಜನೆಗೆ ಹಣ ಹೂಡಿಕೆ ಮಾಡುತ್ತೀರೋ ಅದರ ಆಧಾರದ ಮೇಲೆ ಪಿಂಚಣಿ ಕೂಡ ನಿರ್ಧಾರವಾಗುತ್ತದೆ.

ಮದುವೆ ಆಗೋ ನವದಂಪತಿಗಳಿಗೆ ಈ ಯೋಜನೆಲ್ಲಿ ಸಿಗುತ್ತೆ ₹50,000 ಹಣ! ಪಡೆದುಕೊಳ್ಳಿ

Pension Schemeಅರ್ಜಿ ಸಲ್ಲಿಸುವುದು ಹೇಗೆ? (How to apply for pension scheme)

ರೈತರು ತಮ್ಮ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಪ್ರಧಾನಮಂತ್ರಿ ಮನ್ ಧನ್ ಖಾತೆಯನ್ನು ಆರಂಭಿಸಬಹುದು. ನೀವು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಬೇಕು. ಅದು ನಿಮ್ಮ ವಯಸ್ಸಿನ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಅರ್ಜಿ ಆಹ್ವಾನ! ಒಂದು ರೂಪಾಯಿ ಕೂಡ ಕಟ್ಟಬೇಕಾಗಿಲ್ಲ

ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯ ಪ್ರಯೋಜನ (Benefits of pension scheme)

ಈ ಯೋಜನೆಯಲ್ಲಿ ಪ್ರತಿ ತಿಂಗಳು 55 ರೂಪಾಯಿಗಳಿಂದ 200 ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು, ನಿಮ್ಮ ವಯಸ್ಸಿನ ಆಧಾರದ ಮೇಲೆ ಹೂಡಿಕೆಯ ಹಣ ನಿರ್ಧಾರವಾಗುತ್ತದೆ.

ಕನಿಷ್ಠ 660ಗಳಿಂದ ಗರಿಷ್ಠ 2400 ರೂಪಾಯಿಗಳನ್ನು ಪ್ರತಿ ವರ್ಷ ಹೂಡಿಕೆ ಮಾಡಬೇಕು. 60 ವರ್ಷ ಮೇಲ್ಪಟ್ಟ ಕೃಷಿಕರು ಪ್ರತಿ ತಿಂಗಳು 3000 ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ. ಒಂದು ವೇಳೆ ರೈತ ಮೃತಪಟ್ಟರೆ ಆ ಹಣವನ್ನು ಆತನ ಪತ್ನಿಗೆ ವರ್ಗಾಯಿಸಲಾಗುವುದು.

ಮಹಿಳೆಯರು ಮನೆಯಲ್ಲಿ ಇದಕ್ಕಿಂತ ಹೆಚ್ಚಿನ ಚಿನ್ನ ಇಟ್ಟುಕೊಳ್ಳುವಂತಿಲ್ಲ; ಹೊಸ ರೂಲ್ಸ್

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents needed for pension scheme)

ವಯಸ್ಸಿನ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ – ಈ ಕೆ ವೈ ಸಿ ಕಡ್ಡಾಯ
ಪಾಸ್ ಪೋರ್ಟ್ ಅಳತೆಯ ಫೋಟೋ
ವಿಳಾಸದ ಪುರಾವೆ
ಮೊಬೈಲ್ ಸಂಖ್ಯೆ.

Such farmers will get a pension of 3000 Every month

Related Stories