Kannada News Business News

ಮಹಿಳೆಯರು ಮನೆಯಲ್ಲಿ ಇದಕ್ಕಿಂತ ಹೆಚ್ಚಿನ ಚಿನ್ನ ಇಟ್ಟುಕೊಳ್ಳುವಂತಿಲ್ಲ; ಹೊಸ ರೂಲ್ಸ್

If you want a gold loan, you don't need a CIBIL score anymore

Gold Limit : ವಿವಾಹಿತ ಮಹಿಳೆಯರು (married women) ಅಪ್ಪನ ಮನೆಯಿಂದ ಕೊಟ್ಟ ಗಿಫ್ಟ್, ಗಂಡನ ಮನೆಯಲ್ಲಿ ಸಿಕ್ಕ ಉಡುಗೊರೆ (gift) ಅಂತ ಬೇಕಾದಷ್ಟು ಚಿನ್ನ (gold) ಮನೆಯಲ್ಲಿ ಇರಿಸಿಕೊಳ್ಳುವಂತಿಲ್ಲ, ಹೀಗೆನಾದ್ರೂ ಆದಾಯ ತೆರಿಗೆ ನಿಯಮವನ್ನ ಮೀರಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಂಡರೆ ಅಂತವರ ಮೇಲೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ.

ಭಾರತೀಯರು ಚಿನ್ನದ ಪ್ರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆರಿರಲಿ, ಪುರುಷರಿರಲಿ ಚಿನ್ನ ಅಂದ್ರೆ ಎಲ್ಲರೂ ಆಸಕ್ತಿ ತೋರುತ್ತಾರೆ. ಸಾಮಾನ್ಯವಾಗಿ ಭಾರತೀಯ ಪ್ರತಿ ಕುಟುಂಬದಲ್ಲಿಯೂ ಕೂಡ ಯಾವುದೇ ವಿಶೇಷ ಸಮಾರಂಭಗಳು ನಡೆದರೆ ಚಿನ್ನವನ್ನು ಖರೀದಿ (gold purchase) ಮಾಡುವವರ ಸಂಖ್ಯೆಯೇ ಹೆಚ್ಚು.

ಡಿಸೆಂಬರ್ 31ರ ಒಳಗೆ ಈ ಕೆಲಸಗಳು ಮಾಡದೇ ಇದ್ರೆ ಬಾರಿ ದಂಡ ಕಟ್ಟಬೇಕಾಗುತ್ತದೆ

ಮಹಿಳೆಯರಿಗೆ ಚಿನ್ನದ ಆಭರಣ (gold jewellery) ಅಚ್ಚು ಮೆಚ್ಚು, ಪುರುಷರು ಚಿನ್ನದ ಮೇಲೆ ಹೂಡಿಕೆ (investment ) ಮಾಡಿ ಹಣ ಉಳಿತಾಯ ಮಾಡಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ಚಿನ್ನ ಅಂದ್ರೆ ಎಲ್ಲರಿಗೂ ಇಷ್ಟವೋ ಇಷ್ಟ!

ಮಹಿಳೆಯರು ಚಿನ್ನ ಇಟ್ಟುಕೊಳ್ಳುವುದಕ್ಕೂ ಇದೆ ಮಿತಿ!

ಚಿನ್ನ ಇಷ್ಟ ಅಂತ ಮನೆಯಲ್ಲಿ ನಿಮಗೆ ಬೇಕಾದಷ್ಟು ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವಂತಿಲ್ಲ. ಅದರಲ್ಲೂ ಸರಿಯಾದ ದಾಖಲೆಗಳು ಇಲ್ಲದೆ ಇರುವ ಚಿನ್ನವನ್ನು ಯಾವುದೇ ಸಂದರ್ಭದಲ್ಲಿ ಆದಾಯ ಇಲಾಖೆ (income Tax department) ಜಪ್ತಿ ಮಾಡಬಹುದು. ಆಗ ಈ ಆದಾಯ ತೆರಿಗೆ ಇಲಾಖೆಯ ನಿಯಮಗಳನ್ನು ತಿಳಿದುಕೊಂಡು ನೀವು ನಿಮ್ಮ ಬಳಿ ಚಿನ್ನ ಸಂಗ್ರಹ ಮಾಡುವುದು ಒಳ್ಳೆಯದು.

Gold Limitಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ (Central board of director tax) ಟ್ಯಾಕ್ಸ್ ಪ್ರಕಾರ ವಿವಾಹಿತ ಮಹಿಳೆ ಹಾಗೂ ಅವಿವಾಹಿತ ಮಹಿಳೆ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಮಿತಿ ಹೇಳಲಾಗಿದೆ.

ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ, ಹೇಗಿದೆ ಗೋಲ್ಡ್ ರೇಟ್! ಇಲ್ಲಿದೆ ಪಕ್ಕಾ ಡೀಟೇಲ್ಸ್

ನೀವು ಸರಿಯಾದ ದಾಖಲೆ (documents for gold) ಹೊಂದಿದ್ರೆ ಎಷ್ಟು ಬೇಕಾದ್ರೂ ಚಿನ್ನ ಇಟ್ಟುಕೊಳ್ಳಬಹುದು, ಒಂದು ವೇಳೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿಮ್ಮನ್ನ ಪ್ರಶ್ನಿಸಿದ್ರೆ ನೀವು ಅದಕ್ಕೆ ಸರಿಯಾದ ದಾಖಲೆ ಕೊಡಲು ಸಿದ್ಧರಿರಬೇಕು, ಮನೆ ರೈಡ್ ಆದರೆ ದಾಖಲೆಗಳು ಇರುವ ಚಿನ್ನವನ್ನ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ.

ದಾಖಲೆಗಳು ಇಲ್ಲದೆ ಇದ್ದರೂ ಇಷ್ಟು ಚಿನ್ನವನ್ನ ಮಾತ್ರ ನೀವು ಇಟ್ಟುಕೊಳ್ಳಬಹುದು!

ವಿವಾಹಿತ ಮಹಿಳೆ 500 ಗ್ರಾಂ ಚಿನ್ನದವರೆಗೆ ದಾಖಲೆ ಇಲ್ಲದೆ ಇದ್ದರೂ ಚಿನ್ನ ಇಟ್ಟುಕೊಳ್ಳಬಹುದಾಗಿದೆ.

ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು

ಪುರುಷ ನೂರು ಗ್ರಾಂವರೆಗೆ ಮಾತ್ರ ಚಿನ್ನವನ್ನು ಇಟ್ಟುಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರಿಗೆ ಸಿಗುತ್ತೆ 10,000 ಪಿಂಚಣಿ; ಕೇಂದ್ರದ ಯೋಜನೆಗೆ ಅರ್ಜಿ ಸಲ್ಲಿಸಿ

ಚಿನ್ನದ ಮೇಲಿನ ತೆರಿಗೆ! (Tax On gold)

ಚಿನ್ನದ ಮೇಲೆ ಕೂಡ ಕೆಲವು ತೆರಿಗೆ ವಿಧಿಸಲಾಗುತ್ತದೆ, ಉದಾಹರಣೆಗೆ ಚಿನ್ನವನ್ನು ಖರೀದಿಸಿ ಮೂರು ವರ್ಷದ ಒಳಗೆ ಅಥವಾ ಮೂರು ವರ್ಷದ ನಂತರ ಮಾರಾಟ ಮಾಡಿದರೆ ಆದಾಯ ತೆರಿಗೆ ಸ್ಲಾಬ್ ಪ್ರಕಾರ ಟ್ಯಾಕ್ಸ್ ಪಾವತಿ ಮಾಡಬೇಕು.

ಖರೀದಿಸಿದ ಚಿನ್ನವನ್ನು ಮೂರು ವರ್ಷಗಳವರೆಗೆ ಇಟ್ಟುಕೊಂಡು ಮೂರು ವರ್ಷಗಳ ನಂತರ ಮಾರಾಟ ಮಾಡಿದರೆ ಆಗ ಆದಾಯ ತೆರಿಗೆ 20% ನಷ್ಟು ಪಾವತಿ ಮಾಡಬೇಕಾಗುತ್ತದೆ.

ಹಾಗಾಗಿ ಚಿನ್ನ ಖರೀದಿ ಮಾಡುವಾಗ ಯಾವುದೇ ಕಾರಣಕ್ಕೂ ದಾಖಲೆಗಳನ್ನು ಇಟ್ಟುಕೊಳ್ಳುವುದನ್ನು ಮಿಸ್ ಮಾಡಬೇಡಿ. ಅದೇ ರೀತಿ ಬೇರೆಯವರಿಂದ ಉಡುಗೊರೆ ತೆಗೆದುಕೊಳ್ಳುತ್ತಿದ್ದರು ಸರಿಯಾದ ದಾಖಲೆ ಕೊಟ್ಟರೆ ನಿಮ್ಮ ಬಳಿ ಚಿನ್ನ ಇಟ್ಟುಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಸರ್ಕಾರವೇ ಕೊಡುತ್ತೆ ಸ್ವಂತ ಬಿಸಿನೆಸ್ ಮಾಡಲು 10 ಲಕ್ಷ ಸಾಲ! ಈ ರೀತಿ ಅರ್ಜಿ ಸಲ್ಲಿಸಿ

cannot keep more gold than this at home, New Rules on Gold Limit