ಡಿಸೆಂಬರ್ 31ರ ಒಳಗೆ ಈ ಕೆಲಸಗಳು ಮಾಡದೇ ಇದ್ರೆ ಬಾರಿ ದಂಡ ಕಟ್ಟಬೇಕಾಗುತ್ತದೆ

ಬ್ಯಾಂಕ್ ನಲ್ಲಿ ನೀಡಲಾಗುವ ಕೆಲವು ಸ್ಥಿರ ಠೇವಣಿಗಳ (Fixed Deposit) ಮೇಲೆ ಉತ್ತಮ ಬಡ್ಡಿದರ ಯೋಜನೆಗಳು 2023 ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ.

ಹಿಂದಿನ ಅನಗತ್ಯ ಖರ್ಚುಗಳು (expenses) ಮುಂದಿನ ವರ್ಷಕ್ಕೆ ನಿಮಗೆ ದೊಡ್ಡ ಆರ್ಥಿಕ ಹೊರೆ ಆಗಬಹುದು. ಡಿಸೆಂಬರ್ ತಿಂಗಳು (December) ಕೊನೆಗೊಳ್ಳಲಿದೆ, ಅಂದ್ರೆ 2023ರ ಹಣಕಾಸಿನ ವರ್ಷ ಮುಗಿಯಲಿದೆ ಹಾಗಾಗಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ (financial transaction) ಇದ್ದರೂ ಅದನ್ನು ಇದೇ ಡಿಸೆಂಬರ್ 31ರ ಒಳಗೆ ಮಾಡಿ ಮುಗಿಸಿಕೊಳ್ಳಿ

ಈ ವರ್ಷದ ಕೆಲಸವನ್ನು ಹಾಗೆ ಉಳಿಸಿಕೊಂಡು ಮುಂದಿನ ವರ್ಷಕ್ಕೆ ಕಾಲಿಟ್ಟರೆ ಈ ನಿರ್ಲಕ್ಷವೇ ನಿಮಗೆ ಸಮಸ್ಯೆಯಾಗಿ ಕಾಡಬಹುದು. ಹಾಗಾದ್ರೆ ಡಿಸೆಂಬರ್ 31ರ ಒಳಗೆ ಯಾವೆಲ್ಲಾ ಪ್ರಮುಖ ಕೆಲಸಗಳನ್ನು ಮಾಡಿ ಮುಗಿಸಬೇಕು ನೋಡೋಣ.

ಮಾರುತಿ ಸುಜುಕಿ ಬಂಪರ್ ಆಫರ್, ಈ ಕಾರಿನ ಮೇಲೆ ₹65,000 ದವರೆಗೆ ರಿಯಾಯಿತಿ

ಡಿಸೆಂಬರ್ 31ರ ಒಳಗೆ ಈ ಕೆಲಸಗಳು ಮಾಡದೇ ಇದ್ರೆ ಬಾರಿ ದಂಡ ಕಟ್ಟಬೇಕಾಗುತ್ತದೆ - Kannada News

2022 23ನೇ ಸಾಲಿನ ಐಟಿಆರ್ ಫೈಲಿಂಗ್ (ITR filing) ಮಾಡಲು ಜುಲೈ 2023 ಕೊನೆಯ ದಿನಾಂಕವಾಗಿತ್ತು. ಆದರೆ ನೀವು ಈ ಕೆಲಸ ಮಾಡದೆ ಇದ್ದರೆ ಡಿಸೆಂಬರ್ 31ರ ಒಳಗೆ ವಿಳಂಬ ಶುಲ್ಕ ಪಾವತಿ ಮಾಡಿ ಐಟಿಆರ್ ಫೈಲಿಂಗ್ ಮಾಡಿ. ಇಲ್ಲವಾದರೆ ಬಾರಿ ನಷ್ಟ ಅನುಭವಿಸಬೇಕಾಗುತ್ತದೆ.

ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಡಿಮ್ಯಾಟ್ ಖಾತೆಗೆ ನಾಮ ನಿರ್ದೇಶನ ಮಾಡಲು ಡಿಸೆಂಬರ್ 31ರ ವರೆಗೆ ಅವಕಾಶವನ್ನು ನೀಡಿದೆ. ನಾಮ ನಿರ್ದೇಶನ ಮಾಡುವುದರ ಮೂಲಕ ವ್ಯಕ್ತಿ ಮೃತಪಟ್ಟರೆ ಆತನ ಖಾತೆ ನಾಮ ನಿರ್ದೇಶನಗೊಳ್ಳಲ್ಪಟ್ಟ ವ್ಯಕ್ತಿಗೆ ವರ್ಗಾವಣೆ ಆಗುತ್ತದೆ.

ಬ್ಯಾಂಕ್ ನಲ್ಲಿ ನೀಡಲಾಗುವ ಕೆಲವು ಸ್ಥಿರ ಠೇವಣಿಗಳ (Fixed Deposit) ಮೇಲೆ ಉತ್ತಮ ಬಡ್ಡಿದರ ಯೋಜನೆಗಳು 2023 ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ಉದಾಹರಣೆಗೆ ಎಸ್ ಬಿ ಐ ಬ್ಯಾಂಕ್ ನ ಅಮೃತ ಕಲಷ್ ಯೋಜನೆ, ಇಂಡಿಯನ್ ಬ್ಯಾಂಕಿನ ಇಂಡ್ ಸೂಪರ್ 400 ಹಾಗೂ ಇಂಡ್ ಸುಪ್ರೀಂ 300 ಡೇಸ್ ಸ್ಥಿರ ಠೇವಣಿ (Fixed Deposit) ಯೋಜನೆಯಲ್ಲಿ ಹೂಡಿಕೆ ಮಾಡುವುದಿದ್ದರೆ ಡಿಸೆಂಬರ್ 31ರ ಒಳಗೆ ಮಾಡಿ ಹೆಚ್ಚು ಬಡ್ಡಿ ದರವನ್ನು ಪಡೆದುಕೊಳ್ಳಿ.

ಇವು 2023ರಲ್ಲಿ ಬಿಡುಗಡೆಯಾದ ಟಾಪ್ ಎಲೆಕ್ಟ್ರಿಕ್ ಕಾರುಗಳು! ಬೆಲೆ ತುಂಬಾ ಕಡಿಮೆ

Fixed Depositಎಲ್ಲರೂ ಸಾಮಾನ್ಯವಾಗಿ ಯುಪಿಐ ಮೂಲಕವೇ ಪೇಮೆಂಟ್ ಮಾಡುತ್ತಾರೆ, ಆದರೆ ಒಂದು ವರ್ಷಗಳಿಂದಲೂ ಯುಪಿಐ ಖಾತೆ ಹೊಂದಿದ್ದು ಆ ಮೂಲಕ ಯಾವುದೇ ಹಣಕಾಸಿನ ವ್ಯವಹಾರವನ್ನು ಮಾಡದೆ ಇರುವವರು ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡದೆ ಇದ್ರೆ ಅಂತವರ ಯುಪಿಐ ಐಡಿಯನ್ನು ನಿಷ್ಕ್ರಿಯ ಗೊಳಿಸಲಾಗುವುದು ಎಂದು ಎನ್ಪಿಸಿಐ ತಿಳಿಸಿದೆ.

ಡಿಸೆಂಬರ್ 31ರ ಒಳಗೆ ಭಾರತೀಯ ಗುರುತಿನ ವಿಶಿಷ್ಟ ಪ್ರಾಧಿಕಾರ ಯುಐಡಿಎಐ ಪ್ರತಿಯೊಬ್ಬ ನಾಗರಿಕರಿಗೆ ನೀಡಿರುವ ಆಧಾರ್ ಕಾರ್ಡ್ (Aadhaar Card) ನ ನವೀಕರಣವನ್ನು ಮಾಡಿಕೊಳ್ಳಬೇಕು. ಹೆಸರು ವಿಳಾಸ ಜನ್ಮ ದಿನಾಂಕ ಹೀಗೆ ಮೊದಲಾದ ಬದಲಾವಣೆಗಳು ಅಗತ್ಯವಿದ್ದರೆ ಮಾಡಿಕೊಳ್ಳಬೇಕು. ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡದೆ ಇದ್ರೆ ನೀವು ಆಧಾರ್ ಕಾರ್ಡ್ ಬಳಸಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ.

ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ, ಹೇಗಿದೆ ಗೋಲ್ಡ್ ರೇಟ್! ಇಲ್ಲಿದೆ ಪಕ್ಕಾ ಡೀಟೇಲ್ಸ್

ಆರ್ ಬಿ ಐ ನಿಯಮದ ಪ್ರಕಾರ ಬ್ಯಾಂಕುಗಳಲ್ಲಿ ಲಾಕರ್ ಹೊಂದಿರುವವರು ಹೊಸ ತಿದ್ದುಪಡಿಗೊಂಡ ಅಥವಾ ಪರಿಷ್ಕೃತಗೊಂಡ ಒಪ್ಪಂದಕ್ಕೆ ಸಹಿ ಹಾಕಬೇಕು ಇದಕ್ಕೂ ಡಿಸೆಂಬರ್ 31 ಕೊನೆಯ ದಿನಾಂಕ ಒಂದು ವೇಳೆ ಲಾಕರ್ ಒಪ್ಪಂದಕ್ಕೆ ಸಹಿ ಹಾಕದೆ ಇದ್ದರೆ ಲಾಕರ್ ಹೊಂದಿರುವ ವ್ಯಕ್ತಿ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು.

ಹಣಕಾಸಿನ ವಹಿವಾಟಿಗೆ ಸಂಬಂಧಪಟ್ಟ ಹಾಗೆ ಈ ಎಲ್ಲಾ ಕೆಲಸಗಳು ಬಹಳ ಮುಖ್ಯವಾಗಿರುವುದರಿಂದ 31 2023 ಒಳಗೆ ಎಲ್ಲ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಿ.

If this work is not done by December 31, fine will have to be paid

Follow us On

FaceBook Google News

If this work is not done by December 31, fine will have to be paid