Pension Scheme : ನಿಮಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ (monthly pension) ಬೇಕು ಎನ್ನುವುದನ್ನು ನಿರ್ಧರಿಸಿಕೊಂಡು ಹೂಡಿಕೆ ಮಾಡುವುದು ಒಳ್ಳೆಯದು
Pension Scheme : ವಯಸ್ಸಾದ ನಂತರ ಯಾವುದೇ ವ್ಯಕ್ತಿ ಆರ್ಥಿಕವಾಗಿ (financial dependency) ಯಾರ ಮೇಲೂ ಕೂಡ ಅವಲಂಬಿತರಾಗಿರಬಾರದು. ಜೊತೆಗೆ ಯಾರೂ ಕೂಡ ಆರ್ಥಿಕವಾಗಿ ಸಹಾಯ ಮಾಡುವುದಿಲ್ಲ ಹಾಗಾಗಿ ನಿವೃತ್ತಿ ನಂತರದ ಬದುಕನ್ನು ಸುಂದರವಾಗಿಸಿಕೊಳ್ಳಲು ನೀವು ಈಗಿನಿಂದಲೇ ಸ್ವಲ್ಪ ಮುತುವರ್ಜಿ ವಹಿಸುವುದು ಒಳ್ಳೆಯದು.
ನೀವು ಭವಿಷ್ಯದ ದೃಷ್ಟಿಯಿಂದ ಅಥವಾ ನಿವೃತ್ತಿಯ ಬದುಕನ್ನು ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಕಳೆಯಬೇಕು ಎಂದು ಬಯಸಿ ಹೂಡಿಕೆ (Investment) ಮಾಡುವುದಿದ್ದರೆ ಕೇಂದ್ರ ಸರ್ಕಾರದ (central government) ಕೆಲವು ಪ್ರಮುಖ ಹೂಡಿಕೆ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
ಯಾಕಂದ್ರೆ ಯಾವುದೇ ರೀತಿಯ ಮಾರುಕಟ್ಟೆಯ ಅಪಾಯವಿಲ್ಲದೆ ಅತಿ ಉತ್ತಮ ಆದಾಯ ನೀಡುವಂತಹ ಯೋಜನೆಗಳು ಸರ್ಕಾರ ಜಾರಿಗೆ ತಂದಿದೆ ಅವುಗಳಲ್ಲಿ ಅಟಲ್ ಜಿ ಪೆನ್ಷನ್ ಯೋಜನೆ ಕೂಡ ಒಂದು.
ಮಹಿಳೆಯರಿಗೆ ಮೋದಿ ಸರ್ಕಾರದಿಂದ ಸಿಗುತ್ತಿದೆ 2 ಲಕ್ಷ ಸಾಲ; ಸ್ವಂತ ಉದ್ಯೋಗ ಆರಂಭಿಸಿ
ಅಟಲ್ ಜಿ ಪಿಂಚಣಿ ಯೋಜನೆ (Atal ji pension plan – APY)
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಜಿ ಪಿಂಚಣಿ ಯೋಜನೆ ಬಹಳ ಉತ್ತಮವಾಗಿರುವ ಆದಾಯವನ್ನು ನೀಡುವಂತದ್ದು ನೀವು ಎಷ್ಟು ಹೂಡಿಕೆ ಮಾಡುತ್ತೀರೋ ಅಷ್ಟೇ ತಿಂಗಳಿಗೆ ಪಿಂಚಣಿ ಪಡೆದುಕೊಳ್ಳಬಹುದು.
ಹಾಗಾಗಿ ನಿಮಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ (monthly pension) ಬೇಕು ಎನ್ನುವುದನ್ನು ನಿರ್ಧರಿಸಿಕೊಂಡು ಹೂಡಿಕೆ ಮಾಡುವುದು ಒಳ್ಳೆಯದು ಈಗಾಗಲೇ ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಕೋಟ್ಯಂತರ ಜನ ಖಾತೆ ತೆರೆದು ಹೂಡಿಕೆ ಮಾಡುತ್ತಿದ್ದಾರೆ. ನೀವು ಕೂಡ ಯೋಜನೆಯಲ್ಲಿ ತೊಡಗಿಕೊಳ್ಳಬೇಕು ಎಂದಿದ್ದರೆ ತಕ್ಷಣವೇ ಹೂಡಿಕೆ ಆರಂಭಿಸಿ.
ಆಧಾರ್ ಬಿಗ್ ಅಪ್ಡೇಟ್! ಇನ್ಮುಂದೆ ಇಂತಹವರು ಆಧಾರ್ ಕಾರ್ಡ್ ಬಳಸಲು ಸಾಧ್ಯವಿಲ್ಲ
ಅಟಲ್ ಪಿಂಚಣಿ ಯೋಜನೆಯ ಲಾಭವೇನು? (Benefits of APY)
2015ರಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಆರಂಭಿಸಲಾಯಿತು. 60 ವರ್ಷದ ನಂತರ ಪ್ರತಿ ತಿಂಗಳು ಸಾವಿರದಿಂದ 5 ಸಾವಿರ ರೂಪಾಯಿಗಳವರೆಗೆ ಪಿಂಚಣಿ ಪಡೆದುಕೊಳ್ಳಲು ಹೂಡಿಕೆ ಮಾಡಬಹುದು. ನೀವು ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ, ಅಷ್ಟೇ ದೊಡ್ಡ ಮೊತ್ತ ನಿಮಗೆ ಪ್ರತಿ ತಿಂಗಳು ಪಿಂಚಣಿಯಾಗಿ ಸಿಗಲಿದೆ.
ಪ್ರತಿ ತಿಂಗಳು 10 ಸಾವಿರ ಪಿಂಚಣಿ ಪಡೆದುಕೊಳ್ಳುವುದು ಹೇಗೆ?
ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ಹೆಚ್ಚು ಮೊತ್ತದ ಪಿಂಚಣಿ ಪಡೆದುಕೊಳ್ಳಲು ಈಗಿನಿಂದಲೇ ಹೂಡಿಕೆ ಆರಂಭಿಸಿ ನೀವು ಕೇವಲ 210ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡಿದರೆ 60 ವರ್ಷಗಳ ನಂತರ ಪ್ರತಿ ತಿಂಗಳು 5000 ಪಿಂಚಣಿ ಪಡೆಯಬಹುದು. ಇದೇ ಯೋಜನೆ ದಂಪತಿಗಳು ಆರಂಭಿಸಿದರೆ 10,000ಗಳ ಪಿಂಚಣಿ ಪಡೆಯಬಹುದಾಗಿದೆ.
ವಿದೇಶಕ್ಕೆ ಹೋಗೋ ಪ್ಲಾನ್ ಇದ್ರೆ ಪ್ರಯಾಣ ವಿಮೆ ತೆಗೆದುಕೊಳ್ಳೋದು ಮರೆಯಬೇಡಿ! ಯಾಕೆ ಗೊತ್ತಾ?
ಎಪಿವೈ ನಲ್ಲಿ ಯಾರು ಹೂಡಿಕೆ ಮಾಡಬಹುದು! (Who can invest in APY)
18 ರಿಂದ 40 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಹೂಡಿಕೆ ಮಾಡಬಹುದಾಗಿದೆ, ಈ ಹೂಡಿಕೆಯ ಅವಧಿ 20 ವರ್ಷಗಳು. ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಮಾಡಿದ್ರೆ ಹೂಡಿಕೆಯ ಮೊತ್ತ ಕಡಿಮೆ ಇರುತ್ತದೆ ಹಾಗೂ ವಯಸ್ಸು ಹೆಚ್ಚಾಗುತ್ತಿದ್ದ ಹಾಗೆ ಹೂಡಿಕೆ ಮಾಡುವ ಹಣದ ಪ್ರಮಾಣವೂ ಕೂಡ ಹೆಚ್ಚಾಗುತ್ತದೆ.
APY ಹೂಡಿಕೆ ಆರಂಭಿಸಲು ಬೇಕಾಗಿರುವ ದಾಖಲೆಗಳು
ಹೂಡಿಕೆ ಮಾಡಲು ಬಯಸುವ ಅರ್ಜಿದಾರರ ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಮೊಬೈಲ್ ಸಂಖ್ಯೆ
ಗಂಡ-ಹೆಂಡತಿ ಇಬ್ಬರೂ ಹೂಡಿಕೆ ಮಾಡುವುದಾದರೆ ಮ್ಯಾರೇಜ್ ಸರ್ಟಿಫಿಕೇಟ್ ಒದಗಿಸಿಕೊಡಬೇಕಾಗುತ್ತದೆ.
Study Abroad: ವಿದೇಶದಲ್ಲಿ ಓದಬೇಕು ಅನ್ನೋರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ!
ವಿಶೇಷ ಸೂಚನೆ!
ಹೂಡಿಕೆದಾರ ಮೃತಪಟ್ಟರೆ ಮಾತ್ರ ಈ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಹೂಡಿಕೆಯನ್ನು ಅರ್ಧದಲ್ಲಿಯೇ ನಿಲ್ಲಿಸುವಂತಿಲ್ಲ, ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮುಂದುವರೆಸಬೇಕು. ಹೂಡಿಕೆದಾರ ಮರಣ ಹೊಂದಿದರೆ ಅಥವಾ ದಂಪತಿಗಳಿಬ್ಬರೂ ಮರಣ ಹೊಂದಿದರೆ ನಾಮಿನಿಗೆ ಆ ಹಣವನ್ನು ನೀಡಲಾಗುತ್ತದೆ.
10,000 pension for those above 60 years of age, Apply for the Scheme