ಸರ್ಕಾರವೇ ಕೊಡುತ್ತೆ ಸ್ವಂತ ಬಿಸಿನೆಸ್ ಮಾಡಲು 10 ಲಕ್ಷ ಸಾಲ! ಈ ರೀತಿ ಅರ್ಜಿ ಸಲ್ಲಿಸಿ
Loan : ಈ ಯೋಜನೆಯಡಿಯಲ್ಲಿ ಮೂರು ವಿಭಾಗಗಳನ್ನು ಮಾಡಲಾಗಿದ್ದು ಅದರ ಅಡಿಯಲ್ಲಿ ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ.
Loan Scheme : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ( PM Narendra Modi) ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ವಾಸಿಸುವ ಪ್ರತಿಯೊಂದು ವರ್ಗದ ಪ್ರತಿಯೊಬ್ಬ ವ್ಯಕ್ತಿ ಕೂಡ ಆರ್ಥಿಕವಾಗಿ ಸ್ವಾವಲಂಬನೆ (financial independence) ಹೊಂದಿರಬೇಕು ಎನ್ನುವ ಸಲುವಾಗಿ ಬೇರೆ ಬೇರೆ ರೀತಿಯ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ
ಅದರಲ್ಲೂ ಮುದ್ರಾ ಯೋಜನೆಯಂತಹ ಕೆಲವು ಯೋಜನೆಗಳು ಯುವಕರಿಗೆ ಮಹಿಳೆಯರಿಗೆ ಸಣ್ಣ ವ್ಯಾಪಾರಸ್ಥರಿಗೆ ವರದಾನವಾಗಿದೆ.
60 ವರ್ಷ ಮೇಲ್ಪಟ್ಟವರಿಗೆ ಸಿಗುತ್ತೆ 10,000 ಪಿಂಚಣಿ; ಕೇಂದ್ರದ ಯೋಜನೆಗೆ ಅರ್ಜಿ ಸಲ್ಲಿಸಿ
ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhan mantri mudra Yojana)
ನಾವು ಒಂದು ಉದ್ಯೋಗ (business) ಆರಂಭಿಸುತ್ತೇವೆ, ಹಣ ಕೊಡಿ ಎಂದರೆ ಯಾರು ಕೂಡ ಬಂಡವಾಳ (investment) ಹಾಕುವುದಿಲ್ಲ. ನೀವು ಬಂಡವಾಳಕ್ಕಾಗಿ ಹಣವನ್ನು ಹೊಂದಿಸಲು ಎಲ್ಲಾದರೂ ಸಾಲ ಮಾಡಬೇಕಾಗುತ್ತದೆ
ಹೀಗೆ ಸಾಲವು (Loan) ಸುಖಾ ಸುಮ್ಮನೆ ಸಿಗುವುದಿಲ್ಲ. ಯಾವುದೇ ಆಸ್ತಿ ಪತ್ರ (property documents) ಮನೆ ಪತ್ರ ಏನನ್ನಾದರೂ ಸರಿ ಅಡವಿಡಬೇಕು. ಆದರೆ ಎಲ್ಲರ ಬಳಿ ಅಡವಿಡಲು ಇಂತಹ ಅಮೂಲ್ಯ ವಸ್ತುಗಳು ಇಲ್ಲದೆ ಇರಬಹುದು, ಇಂತಹ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಂತಹ ಕೆಲವು ಯೋಜನೆಗಳು ಪ್ರಯೋಜನಕಾರಿ ಆಗಬಲ್ಲವು.
ಮಹಿಳೆಯರಿಗೆ ಮೋದಿ ಸರ್ಕಾರದಿಂದ ಸಿಗುತ್ತಿದೆ 2 ಲಕ್ಷ ಸಾಲ; ಸ್ವಂತ ಉದ್ಯೋಗ ಆರಂಭಿಸಿ
ಏನಿದು ಪ್ರಧಾನ ಮಂತ್ರಿ ಮುದ್ರಾ ಯೋಜನೆ?
ಯುವಕರನ್ನು ಸ್ವದ್ಯೋಗ (own business) ಮಾಡಲು ಉತ್ತೇಜಿಸುವ ಸಲುವಾಗಿ 2015 ಏಪ್ರಿಲ್ ತಿಂಗಳಿನಲ್ಲಿ ಮುದ್ರಾ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಮೂರು ವಿಭಾಗಗಳನ್ನು ಮಾಡಲಾಗಿದ್ದು ಅದರ ಅಡಿಯಲ್ಲಿ ಸಾಲ ಸೌಲಭ್ಯ (Loan Facility) ನೀಡಲಾಗುತ್ತದೆ.
ಶಿಶು ಸಾಲ – ಹೌದು ಗ್ಯಾರಂಟಿ ಇಲ್ಲದೆ ಮೊದಲ ಹಂತದಲ್ಲಿ ಸಣ್ಣ ವ್ಯಾಪಾರಿಗಳು ಅಥವಾ ಯುವಕರು ಹೊಸ ಉದ್ಯಮ ಆರಂಭಿಸಲು ಈ ಯೋಜನೆ ಅಡಿಯಲ್ಲಿ 50,000ಗಳನ್ನ ಸಾಲವಾಗಿ ಪಡೆಯಬಹುದು ನಂತರ ಎರಡನೇ ಹಂತಕ್ಕೆ ಹೋಗಬಹುದು.
ಕಿಶೋರ ಸಾಲ – ಇದರ ಅಡಿಯಲ್ಲಿ 5 ಲಕ್ಷಗಳವರೆಗೆ ಖಾತರಿ ಸಾಲ ನೀಡಲಾಗುತ್ತದೆ.
ತರುಣ್ ಸಾಲ – ಸಣ್ಣ ವ್ಯಾಪಾರಸ್ಥರು ತಮ್ಮ ಉದ್ದಿಮೆಯನ್ನು ಇನ್ನಷ್ಟು ಬೆಳೆಸಬೇಕು ಎಂದು ಯೋಚಿಸಿದ್ದರೆ ತರುಣ್ ಸಾಲದ ಅಡಿಯಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
Study Abroad: ವಿದೇಶದಲ್ಲಿ ಓದಬೇಕು ಅನ್ನೋರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ!
ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು! (Needed documents to apply)
18 ರಿಂದ 70 ವರ್ಷ ವಯಸ್ಸಿನವರು ಕೂಡ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ನೋಡುವುದಾದರೆ, ಅರ್ಜಿದಾರರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಪಾಸ್ ಪೋರ್ಟ್ ಅಳತೆಯ ಫೋಟೋ, ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ (How to apply for mudra Loan scheme)
ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಸಾಲ ಪಡೆದುಕೊಳ್ಳಲು ಬಯಸುವ ಜನರು ತಮ್ಮ ಉದ್ಯಮದ ಬಗ್ಗೆ ಅಥವಾ ತಾವು ಯಾವ ಉದ್ಯಮ ಆರಂಭಿಸಲು ಮುಂದಾಗಿದ್ದೇವೆ ಎನ್ನುವುದರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ (bank officers) ಸರಿಯಾದ ವಿವರಣೆ ನೀಡಬೇಕು
ಅದು ಅಧಿಕಾರಿಗಳಿಗೆ ಸಂಬಂಧಿಸಿದ್ದು ಎನಿಸಿದರೆ ಬ್ಯಾಂಕ್ ಕಮಿಟಿ ನಿಮ್ಮ ಪ್ರೊಪೋಸಲ್ ಅನ್ನ ಡಿಸ್ಕಸ್ ಮಾಡಿ ನಂತರ ಒಪ್ಪಿಗೆ ನೀಡುತ್ತಾರೆ. ನಿಮ್ಮ ಉದ್ಯಮದ ಆಧಾರದ ಮೇಲೆ ನಿಮಗೆ ಹತ್ತು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ವಿದೇಶಕ್ಕೆ ಹೋಗೋ ಪ್ಲಾನ್ ಇದ್ರೆ ಪ್ರಯಾಣ ವಿಮೆ ತೆಗೆದುಕೊಳ್ಳೋದು ಮರೆಯಬೇಡಿ! ಯಾಕೆ ಗೊತ್ತಾ?
ಯಾವುದೇ ರಾಷ್ಟ್ರೀಕೃತ ಬ್ಯಾಂಕ್ (nationalised bank) ನಲ್ಲಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ (loan) ಸೌಲಭ್ಯ ಸಿಗುತ್ತದೆ. ನಿಮ್ಮ ಉದ್ಯಮಕ್ಕೆ ನೀವು 25% ನಷ್ಟು ಬಂಡವಾಳ ಹೂಡಿಕೆ ಮಾಡಬೇಕು. ಹಾಗೂ ಬ್ಯಾಂಕ್ನಿಂದ 75% ನಷ್ಟು ಸಾಲ ಪಡೆಯಬಹುದು.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ನಡೆಸುವವರಿಗೆ ಸಣ್ಣ ವ್ಯಾಪಾರ ಆರಂಭಿಸುವವರಿಗೆ ಈ ಯೋಜನೆ ವರದಾನವಾಗಿದೆ, ಇನ್ನು ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು https://mudra.org.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಮಾತನಾಡಿ ನಿಮಗೆ ಸಿಗಬೇಕಾದ ಸಾಲ ಸೌಲಭ್ಯ ಪಡೆಯಬಹುದು.
Government will give 10 lakh loan to start own business, Apply like this