ಮನೆ ಬಾಡಿಗೆಗೆ ನೀಡಿರುವ ಮಾಲೀಕರಿಗೆ ಮಹತ್ವದ ಮಾಹಿತಿ! ಇಲ್ಲಿವೆ ಹೊಸ ನಿಯಮಗಳು
Rent House : ವಿದ್ಯಾಭ್ಯಾಸ ಪೂರೈಸಿದ ಹೆಚ್ಚಿನ ಜನರು ಉದ್ಯೋಗಕ್ಕಾಗಿ ನಗರಕ್ಕೆ ಬರುತ್ತಾರೆ. ಹೀಗೆ ಬಂದ ವೇಳೆ ವಾಸಿಸಲು ಮನೆ ಅವಶ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಹಣವಿದ್ದರೂ ತಕ್ಷಣಕ್ಕೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಹೋಮ್ ಲೋನ್ (Home Loan) ಪಡೆದು ಮನೆ ಮಾಡಿಕೊಳ್ಳುತ್ತೇವೆ ಅಂದರೂ ಅದಕ್ಕೆ ಸಮಯ ಬೇಕಾಗುತ್ತದೆ.
ಅಂತಹ ಸಂದರ್ಭದಲ್ಲಿ ಬಾಡಿಗೆ ಮನೆ (rented house) ಯಲ್ಲಿ ವಾಸ ಮಾಡುವುದು ಅನಿವಾರ್ಯವಾಗುತ್ತದೆ. ಅಲ್ಲದೆ ಆರ್ಥಿಕ ಸಮಸ್ಯೆಯಿಂದಲೂ ಹೆಚ್ಚಿನ ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ.
ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಅರ್ಜಿ ಆಹ್ವಾನ! ಒಂದು ರೂಪಾಯಿ ಕೂಡ ಕಟ್ಟಬೇಕಾಗಿಲ್ಲ
ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುವ ಮುನ್ನ ಮನೆಯ ಮಾಲೀಕರು ಬಾಡಿಗೆ ಕರಾರನ್ನು ಮಾಡಿಸುತ್ತಾರೆ. ಅದು 11 ತಿಂಗಳಿಗೆ. ಇದು ಏಕೆ ಗೊತ್ತಾ? ಈ ಕುರಿತು ಭಾರತೀಯ ಕಾನೂನು (Indian law) ಏನು ಹೇಳುತ್ತದೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ.
ಬಾಡಿಗೆಗೆ ಒಪ್ಪಂದ ಯಾಕೆ?
ನಮ್ಮ ದೇಶದಲ್ಲಿ ಕೋಟ್ಯಂತರ ಜನರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಾಮಾನ್ಯವಾಗಿ ಬಾಡಿಗೆ ಪಡೆಯುವ ಮುನ್ನ ಬಾಡಿಗೆ ಎಷ್ಟು? ಯಾವ ರೀತಿ ಇರಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯ. ಇದರ ಜೊತೆ ಕರಾರು ಪ್ರತಿ ಮಾಡಿಸಬೇಕಾಗುತ್ತದೆ. ಇದನ್ನು 11 ತಿಂಗಳಿಗೆ ಮಾತ್ರ ಮಾಡಿಸಲಾಗುತ್ತದೆ. ಇದರಿಂದ ಬಾಡಿಗೆದಾರರು ಹಾಗು ಮನೆಯ ಮಾಲೀಕರು ಇಬ್ಬರಿಗೂ ಅನುಕೂಲ.
11 ತಿಂಗಳಿಗೆ ಒಪ್ಪಂದ ಯಾಕೆ?
ನಮ್ಮ ದೇಶದಲ್ಲಿ ಮನೆ ಬಾಡಿಗೆಗೆ ನೀಡುವವರಿಗಾಗಿ ಸರಿಯಾದ ಕಾನೂನನ್ನು ಮಾಡಲಾಗಿದೆ. ಭಾರತೀಯ ನೋಂದಣಿ ಕಾಯ್ದೆ 1908ರ ಸೆಕ್ಷನ್ 17 (ಡಿ) ಅಡಿಯಲ್ಲಿ ಬಾಡಿಗೆಗೆ ಒಪ್ಪಂದ ಮಾಡಿಕೊಳ್ಳುವುದು ಅವಶ್ಯವಾಗಿದೆ. ಅದೂ ಸಹ ಒಂದು ವರ್ಷಕ್ಕೆ ಮಾಡಿಕೊಳ್ಳಬೇಕು ಎಂದಿದೆ.
ಬಾಡಿಗೆ ಒಪ್ಪಂದ ಅಥವಾ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸುವ ಅವಶ್ಯಕತೆ ಇರುವುದಿಲ್ಲ. ಒಂದು ವರ್ಷಕ್ಕಿಂತ ಕಡಿಮೆ ಎಂದರೆ 11 ತಿಂಗಳಿಗೆ ಮನೆಯ ಮಾಲೀಕರು ಒಪ್ಪಂದ ಮಾಡಿಕೊಳ್ಳಬಹುದಾಗಿದೆ.
ಮದುವೆ ಆಗೋ ನವದಂಪತಿಗಳಿಗೆ ಈ ಯೋಜನೆಲ್ಲಿ ಸಿಗುತ್ತೆ ₹50,000 ಹಣ! ಪಡೆದುಕೊಳ್ಳಿ
ಏನು ಹೇಳುತ್ತೆ ನಿಯಮ
ಸಣ್ಣ ತಪ್ಪಿನಿಂದಾಗಿ ಆಸ್ತಿ ಮಾಲೀಕರು (House Owner) ಅಥವಾ ಮನೆಯ ಮಾಲೀಕರು ಕಾನೂನು ಹೋರಾಟ ಮಾಡಬೇಕಾಗುತ್ತದೆ. ಇದಕ್ಕಾಗಿ ಅವರು ಸಮಯ, ಹಣ ಎರಡನ್ನು ಖರ್ಚು ಮಾಡಬೇಕಾಗುತ್ತದೆ.
ಈ ಕಾರಣದಿಂದಾಗಿಯೇ 11 ತಿಂಗಳಿಗೆ ಒಪ್ಪಂದ (11 month Rent agreement ) ಮಾಡಿಕೊಳ್ಳಲಾಗುತ್ತದೆ. ಬಾಡಿಗೆ ಟೆನೆನ್ಸಿ ಆಕ್ಟ್ ಪ್ರಕಾರ ಬಾಡಿಗೆ ವಿಚರಕ್ಕೆ ಸಂಬಂಧಪಟ್ಟಂತೆ ಜಮೀನುದಾರ ಹಾಗು ಬಾಡಿಗೆದಾರರ ನಡುವೆ ವಿವಾದ ಏರ್ಪಟ್ಟರೆ, ನಂತರ ಆ ವಿಚಾರ ಕೋರ್ಟ್ (Court) ಕಟಕಟೆಗೆ ಬಂದರೆ ನಂತರ ನ್ಯಾಯಾಲಯವು ಬಾಡಿಗೆ ನಿರ್ಧಾರ ಮಾಡುವ ಅಧಿಕಾರ ಹೊಂದಿರುತ್ತದೆ. ಇದರಿಂದ ಮಾಲೀಕರು ಹೆಚ್ಚಿನ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹50,000 ದವರೆಗೆ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ
ಒಬ್ಬ ಮನೆಯ ಮಾಲೀಕರು 11 ತಿಂಗಳ ಕರಾರು ಪತ್ರ ಮಾಡಿಸಿಕೊಂಡಲ್ಲಿ ಅವರು ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ (Registration fee) ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅದರ ಮೇಲೆ ಪಾವತಿಸಬೇಕಾದ ಸ್ಟ್ಯಾಂಪ್ ಡ್ಯೂಟಿ (stamp duty) ಕಡ್ಡಾಯವಾಗಿರುವುದಿಲ್ಲ. 11 ತಿಂಗಳವರೆಗೆ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ಕಾನೂನು ಸಹ ಒಪ್ಪಿಕೊಳ್ಳುತ್ತದೆ. ಅಲ್ಲದೆ ವಿವಾದಗಳು ಉಂಟಾದರೆ ಇದನ್ನೇ ಸಾಕ್ಷ್ಯವಾಗಿ ಪರಿಗಣಿಸಬಹುದಾಗಿದೆ.
Important information for owners who have rented a house