ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಹೊಸ ಆದೇಶ
ಈಗಾಗಲೇ ಆಹಾರ ಇಲಾಖೆಯ (food department) ಹೊಸ ಪಡಿತರ ಚೀಟಿ (new ration card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರು ಹೊಸ ಪಡಿತರ ಚೀಟಿ ಯಾವಾಗ ಸಿಗುತ್ತದೆ ಎನ್ನುವ ಕುತೂಹಲದಲ್ಲಿ ಇದ್ದಾರೆ
ರೇಷನ್ ಕಾರ್ಡ್ ಇಂದು ಬಹಳ ಪ್ರಮುಖವಾಗಿರುವ ದಾಖಲೆ ಆಗಿರುವ ಹಿನ್ನೆಲೆಯಲ್ಲಿ ಎಲ್ಲಾ ಉಚಿತ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಬೇಕಾಗಿರುತ್ತದೆ. ಈಗ ಸುಮಾರು 2.96 ಲಕ್ಷ ಅರ್ಜಿಗಳು ಸಂದಾಯವಾಗಿದ್ದು ಈ ಅರ್ಜಿದಾರರಿಗೆ ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದೆ.
ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡೋ ರೈತರು ಆ ಭೂಮಿ ಸ್ವಂತವಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ
ಹೊಸ ಪಡಿತರ ಚೀಟಿ ವಿತರಣೆಯ ಬಗ್ಗೆ ಸೂಚನೆ! (New ration card distribution)
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ (minister K.H Muniyappa) ಈಗಾಗಲೇ ತಿಳಿಸಿರುವಂತೆ ಸದ್ಯದಲ್ಲಿಯೇ ಪರಿಶೀಲನೆ ಗೊಂಡ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು.
ಮೊದಲ ಹಂತದಲ್ಲಿ ಸುಮಾರು 20 ಸಾವಿರ ಪಡಿತರ ಚೀಟಿ ಪರಿಶೀಲನೆ ನಡೆಸಲಾಗಿದ್ದು ರಾಜ್ಯದ ಬೇರೆಬೇರೆ ಜಿಲ್ಲೆಗಳ ಫಲಾನುಭವಿಗಳಿಗೆ ಬಿಪಿಎಲ್ (BPL card) ಹಾಗೂ ಎಪಿಎಲ್ ಕಾರ್ಡ್ (APL Card) ವಿತರಣೆ ಮಾಡುವ ಬಗ್ಗೆ ತಿಳಿಸಿದ್ದಾರೆ.
ಇನ್ನು ಕೇವಲ 15 ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ ಕಾರ್ಯ ಆರಂಭವಾಗುವುದು ಎಂದು ತಿಳಿಸಲಾಗಿತ್ತು, ಆದರೆ ಇಲ್ಲಿಯವರೆಗೆ ವಿತರಣೆ ಮಾಡಿಲ್ಲ. ಆದಾಗ್ಯೂ ಪಡಿತರ ಚೀಟಿ ಬಗ್ಗೆ ಆಹಾರ ಇಲಾಖೆಯಲ್ಲಿ ಲಿಸ್ಟ್ (list) ಬಿಡುಗಡೆ ಮಾಡಿದ್ದು ಇದರಲ್ಲಿ ಹೆಸರು ಇದ್ರೆ ಅಂಥವರಿಗೆ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಸಿಗುತ್ತದೆ. ಈ ಲಿಸ್ಟ್ ನಲ್ಲಿ ನೀವು ನಿಮ್ಮ ಹೆಸರು ಇದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ನೀವು ಆರಂಭಿಸಿ ಕರ್ನಾಟಕ ಒನ್ ಸೇವಾ ಕೇಂದ್ರ; ಸರ್ಕಾರದಿಂದ ಪ್ರಾಂಚೈಸಿ ಪಡೆದು ಹಣ ಗಳಿಸಿ
ಪಡಿತರ ಚೀಟಿ ಲಿಸ್ಟ್ ಚೆಕ್ ಮಾಡುವುದು ಹೇಗೆ? ( How to check Ration card list)
*https://ahara.kar.nic.in/ ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆ ಯ ಈ ಅಧಿಕೃತ ವೆಬ್ಸೈಟ್ (official website) ಮೇಲೆ ಕ್ಲಿಕ್ ಮಾಡಿ.
*ಈ ಸೇವೆಗಳು (E- service) ಎನ್ನುವ ಆಯ್ಕೆಯನ್ನು ಕಾಣುತ್ತೀರಿ
*ನಂತರ ಎಡಭಾಗದಲ್ಲಿ ಇ ರೇಷನ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
*ಮುಂದಿನ ಹಂತದಲ್ಲಿ ಗ್ರಾಮಪಟ್ಟಿ ಎಂದು ಕ್ಲಿಕ್ ಮಾಡಿ.
ಗ್ರಾಮ ಪಟ್ಟಿಯಲ್ಲಿ ನೀವು ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಮೊದಲಾದ ವಿವರಗಳನ್ನು ನೀಡಿ go ಎಂದು ಕ್ಲಿಕ್ ಮಾಡಿದರೆ ಒಂದು ಲಿಸ್ಟ್ ಓಪನ್ ಆಗುತ್ತದೆ.
*ಆಯಾ ಗ್ರಾಮದಲ್ಲಿ ಆಯ್ಕೆಯಾದ ಪಡಿತರ ಲಿಸ್ಟ್ ಕಾಣಬಹುದು. ಇದರಲ್ಲಿ ನೀವು ಅರ್ಜಿದಾರರಾಗಿದ್ದು ನಿಮ್ಮ ಹೆಸರು ಇದ್ರೆ ಸದ್ಯದಲ್ಲಿಯೇ ನಿಮಗೆ ಹೊಸ ರೇಷನ್ ಕಾರ್ಡ್ ಸಿಗಲಿದೆ ಎಂದೇ ಅರ್ಥ.
SSLC, PUC ಮುಗಿಸಿದ ವಿದ್ಯಾರ್ಥಿಗಳಿಗೆ ಸಿಗುತ್ತೆ ಉಚಿತ ಲ್ಯಾಪ್ ಟಾಪ್! ಹೀಗೆ ಅರ್ಜಿ ಸಲ್ಲಿಸಿ
New order for those who have applied for APL, BPL ration card