ಗೃಹಲಕ್ಷ್ಮಿ ಹಣ ಒಂದೇ ದಿನದಲ್ಲಿ ಜಮಾ! ಈ ಖಾತೆ ತೆರೆದವರಿಗೆ ತಕ್ಷಣ ಹಣ ಬಂದಿದೆ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಇನ್ನೂ ಬಾರದೇ ಇದ್ರೆ ಬ್ಯಾಂಕ್ ಖಾತೆಯ (Bank Account) ಬದಲಾಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (Indian post payment Bank) ಖಾತೆಯನ್ನು ತೆರೆಯಿರಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಇನ್ನೂ ಬಾರದೇ ಇದ್ರೆ ಬ್ಯಾಂಕ್ ಖಾತೆಯ (Bank Account) ಬದಲಾಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (Indian post payment Bank) ಖಾತೆಯನ್ನು ತೆರೆಯಿರಿ ಎಂದು ಈ ಹಿಂದೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು
ಅದರಂತೆ ಈಗ ಸಾಕಷ್ಟು ಜನ ಹೊಸ ಖಾತೆಯನ್ನು ತೆರೆದು ತಮ್ಮ ಖಾತೆಗೆ ಹಣ ಬಂದಿರುವ (Money Deposit) ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ ಖಾತೆಗೆ ಕೆವೈಸಿ ಕಡ್ಡಾಯ (KYC to bank account).. ಆದ್ರೆ ಎಷ್ಟೋ ಮಹಿಳೆಯರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ಕೆಲವು ತಾಂತ್ರಿಕ ದೋಷ (technical error) ಗಳಿಂದಾಗಿ ಬ್ಯಾಂಕ್ ಖಾತೆಗೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ
ಉಚಿತ ಅಕ್ಕಿ, ಗೃಹಲಕ್ಷ್ಮಿ ಹಣ ಪಡೆಯೋಕೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿ!
ಇದರಿಂದಾಗಿ ಸರ್ಕಾರದಿಂದ ಹಣ ಜಮಾ ಆಗಿದ್ದರೂ ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ಮಾತ್ರ ಹಣ ಬಂದು (Money Transfer) ಸೇರಿಲ್ಲ ಇದರಿಂದಾಗಿ ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆ ಪರಿಹರಿಸಿಕೊಂಡು ನಂತರ ಹಣ ವರ್ಗಾವಣೆ (DBT) ಮಾಡುವುದರ ಬಗ್ಗೆ ಸರ್ಕಾರ ಮಾಹಿತಿ ನೀಡಿತ್ತು.
ಪೋಸ್ಟ್ ಆಫೀಸ್ ಖಾತೆ ತೆರೆಯಿರಿ! (Post office account)
Bank account ಖಾತೆಗೆ ಕೆವೈಸಿ ಆಗುವುದು ಮಾತ್ರವಲ್ಲದೆ ರೇಷನ್ ಕಾರ್ಡ್ ಹೆಸರು ಆಧಾರ್ ಕಾರ್ಡ್ (Aadhaar Card) ಹೆಸರು ಎಲ್ಲವೂ ಮ್ಯಾಚ್ ಆಗಬೇಕು ಈ ರೀತಿ ಆಗದೆ ಇದ್ದಾಗ ಬ್ಯಾಂಕ್ ನ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಸಾಧ್ಯವಿಲ್ಲ.
ಆದರೆ ಹೊಸದಾಗಿ ಪೋಸ್ಟ್ ಆಫೀಸ್ ನಲ್ಲಿ ಖಾತೆ ಆರಂಭಿಸಿದ ಸಾಕಷ್ಟು ಮಹಿಳೆಯರಿಗೆ ಹಣ ವರ್ಗಾವಣೆ ಆಗಿದೆ. ಅದರಲ್ಲೂ ಖಾತೆ ಆರಂಭಿಸಿದ ಕೇವಲ ಒಂದು ದಿನದ ಒಳಗೆ ಹಣ ವರ್ಗಾವಣೆ ಆಗಿದೆ. ಹೀಗಾಗಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರಬೇಕು ಅಂದ್ರೆ ಅಂಚೆ ಕಚೇರಿಯಲ್ಲಿ ಹೊಸದಾಗಿ ಅಕೌಂಟ್ ಆರಂಭಿಸಿ ಎಂದು ಸಚಿವೆ ಕೂಡ ತಿಳಿಸಿದ್ದಾರೆ.
ಫ್ರೀ ಬಸ್, ಶಕ್ತಿ ಯೋಜನೆಯಲ್ಲಿ ಬದಲಾವಣೆ; ಈ ತಪ್ಪು ಮಾಡಿದ್ರೆ 500 ರೂ. ದಂಡ
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಸುಮಾರು 1.8 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಹಣ ಜಮಾ ಮಾಡಲು ಸರ್ಕಾರದಿಂದ 2500 ಕೋಟಿ ರೂಪಾಯಿಗಳು ಬಿಡುಗಡೆ ಆಗುತ್ತಿದೆ.
ಇಷ್ಟಾಗಿ ಇನ್ನೂ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಬಂದಿಲ್ಲ, ಹಾಗಾಗಿ ಹೊಸದಾಗಿ ಪೋಸ್ಟ್ ಆಫೀಸ್ ಖಾತೆ ತೆರೆಯುವ ಮೂಲಕ ಇಂಥವರ ಖಾತೆಗೂ ಹಣ ಬರುವಂತೆ ಸರ್ಕಾರ ಪ್ರಯತ್ನಿಸುತ್ತಿದೆ
ಇದಕ್ಕಾಗಿ ಅಂಗನವಾಡಿ ಸಹಾಯಕಿಯರ ನೆರವು ಪಡೆಯಲಾಗಿದ್ದು ಮಹಿಳೆಯರನ್ನು ಸ್ವತಹ ಬ್ಯಾಂಕಿಗೆ ಕರೆದುಕೊಂಡು ಹೋಗಿ ಅಥವಾ ಅಂಚೆ ಕಚೇರಿಗೆ ಕರೆದುಕೊಂಡು ಹೋಗಿ ಹೊಸ ಖಾತೆ ಆರಂಭಿಸುವುದು ಹಾಗೂ ಕೆವೈಸಿ ಮಾಡಿಸಿಕೊಡುವ ಪ್ರಕ್ರಿಯೆಯನ್ನು ಅಂಗನವಾಡಿ ಸಹಾಯಕಿಯರೇ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.
ಜಮೀನು, ಆಸ್ತಿ ಖರೀದಿ ಮಾಡುವವರಿಗೆ ಹೊಸ ನಿಯಮ! ನೋಂದಣಿಗೆ ಹೊಸ ರೂಲ್ಸ್
ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದು! (Open new account in post office)
ಮಹಿಳೆಯರಿಗೆ ಮೊದಲ ಹಾಗೂ ಎರಡನೇ ಕಂತಿನ ಹಣ ಜಮಾ ಆಗದೆ ಇದ್ದರೂ ಅಂಚೆ ಕಚೇರಿಯಲ್ಲಿ ಖಾತೆ ತೆರೆದ ನಂತರ ಮೂರನೇ ಕಂತಿನ ಹಣ ಜಮಾ ಆಗಿದೆ ಹಾಗಾಗಿ ನೀವು ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಸ್ವತಃ ನೀವೇ ಹೋಗಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬಹುದು ಅಥವಾ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಖಾತೆ ತೆರೆಯಬಹುದು.
ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದಕ್ಕೆ ಹೆಚ್ಚಿನ ದಾಖಲೆಗಳು ಕೂಡ ಬೇಡ, ಅರ್ಜಿದಾರರ ಫೋಟೋ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಇಷ್ಟಿದ್ರೆ ಸಾಕು ಕೇವಲ ಐದು ನಿಮಿಷಗಳಲ್ಲಿ ಖಾತೆ ತೆರೆಯಬಹುದು.
ಹೊಸ ಖಾತೆಯನ್ನು ತೆರೆಯುತ್ತಿದ್ದ ಹಾಗೆ ಕೆವೈಸಿ ಪ್ರಕ್ರಿಯೆಯು ಕೂಡ ಆಟೋಮೆಟಿಕ್ ಆಗಿಯೇ ನಡೆಯುತ್ತದೆ ಹಾಗಾಗಿ ಮಹಿಳೆಯರಿಗೆ ಯಾವುದೇ ತಲೆಬಿಸಿ ಇಲ್ಲದೆ ಗೃಹಲಕ್ಷ್ಮಿಯ 2,000 ಕೈಸೇರುತ್ತವೆ.
ಉಚಿತ ಮನೆ ಪಡೆದುಕೊಳ್ಳಲು ಈಗಲೇ ಅರ್ಜಿ ಹಾಕಿ! ಸರ್ಕಾರದಿಂದ ಹೊಸ ಯೋಜನೆ
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯೋ ಇಲ್ಲವೋ ಚೆಕ್ ಮಾಡಿ! (Check your DBT status)
ನೇರವಾಗಿ ಅನ್ನಭಾಗ್ಯ ಯೋಜನೆಯಂತೆ ಡಿಬಿಟಿ ಸ್ಟೇಟಸ್ ಅನ್ನು ಗೃಹಲಕ್ಷ್ಮೀ ಯೋಜನೆಯಲ್ಲಿ ಚೆಕ್ ಮಾಡಲು ಸಾಧ್ಯವಿಲ್ಲ ಆದರೆ ಸರ್ಕಾರ ಮೊಬೈಲ್ ನಲ್ಲಿ DBT Karnataka ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು ಇದರಲ್ಲಿ ನೀವು ನಿಮ್ಮ ಖಾತೆಗೆ ಜಮಾ ಆಗಿರುವ ಎಲ್ಲಾ ಡಿಬಿಟಿ ಹಣದ ಬಗ್ಗೆ ಮಾಹಿತಿ ಪಡೆಯಬಹುದು.
ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ (smartphone) ಲ್ಲಿ ಪ್ಲೇ ಸ್ಟೋರ್ ಗೆ ಹೋಗಿ, DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ.
ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಹೊಸ ಆದೇಶ
ಈ ಅಪ್ಲಿಕೇಶನ್ ತೆರೆದ ತಕ್ಷಣ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ ಅದನ್ನು ನಮೂದಿಸಿ mPin ಕ್ರಿಯೇಟ್ ಮಾಡಬೇಕು ನಂತರ ಇದೇ ಸಂಖ್ಯೆಯನ್ನು ಮತ್ತೊಮ್ಮೆ ಹಾಕಿದರೆ ಪುಟ ತೆಗೆದುಕೊಳ್ಳುತ್ತದೆ. ಬಳಿಕ ನೀವು ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ಯೋ ಇಲ್ಲವೋ ಎಂಬುದನ್ನು ಇಲ್ಲಿ ತಿಳಿಯಬಹುದಾಗಿದೆ.
Gruha Lakshmi money deposit in one day, Instant payment to who open this account