Karnataka NewsBangalore News

ಇನ್ಮುಂದೆ ಯಾರಿಗೂ ಸಿಗಲ್ಲ ಬಿಪಿಎಲ್ ಕಾರ್ಡ್; ಸರ್ಕಾರದಿಂದ ಹೊರಬಿತ್ತು ಆದೇಶ

ಇಂದು ರಾಜ್ಯ ಸರ್ಕಾರದ (state government) ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು, ಫಲಾನುಭವಿ ಆಗಬೇಕು ಎಂದರೂ ಬಿಪಿಎಲ್ (BPL card) ಕಾರ್ಡ್ ಕಡ್ಡಾಯವಾಗಿದೆ.

ಅದರಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ (ration card) ಮುಖ್ಯ ದಾಖಲೆಯಾಗಿದೆ. ಹಾಗಾಗಿ ಇದುವರೆಗೂ ಪಡಿತರ ಚೀಟಿ ಪಡೆಯದವರು ಸಹ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರು.

Ration Card

ಈಗಾಗಲೇ ಹಲವರಿಗೆ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಆದರೆ ಹೊಸ ವರ್ಷದಿಂದ ಬಿಪಿಎಲ್ ಪಡಿತರ ಚೀಟಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನರು (CM Siddaramaiah) ಹೇಳಿದ್ದಾರೆ.

ಯುವ ನಿಧಿ ಯೋಜನೆಗೆ ಅಪ್ಲೈ ಮಾಡಿ ಹಣ ಪಡೆಯೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ರಾಜ್ಯದಲ್ಲಿ ಇರುವ ಬಿಪಿಎಲ್ ಪಡಿತರ ಚೀಟಿದಾರರ ಸಂಖ್ಯೆ:

ನಮ್ಮ ರಾಜ್ಯದಲ್ಲಿ ರಾಜ್ಯದ ಜನಸಂಖ್ಯೆಯ ಶೇ.85.23 ರಷ್ಟು ಅಂದರೆ 1,13,84,605 ಪಡಿತರ ಚೀಟಿದಾರರು ಇದ್ದಾರೆ. ಅದೇ ರೀ

ತಿ ಇತರ ರಾಜ್ಯಗಳನ್ನು ನೋಡುವುದಾದರೆ,
ಗುಜರಾತ್ ರಾಜ್ಯ – 76,೦7,818 ಪಡಿತರ ಚೀಟಿದಾರರಿದ್ದಾರೆ. ಮಹಾರಾಷ್ಟ್ರ – 1,57,16,582
ತೆಲಂಗಾಣ ರಾಜ್ಯ – 54,೦7,637, ತಮಿಳುನಾಡು – 1,11,41,೦76, ಕೇರಳ – 41,28,595
ಗೋವಾ – 1,43,918, ಪಡಿತರ ಚೀಟಿ ಪಡೆದು ಅದರ ಲಾಭ ಪಡೆದುಕೊಳ್ಳುವ ಕುಟುಂಬಗಳು ಇವೆ.

ಸರ್ಕಾರಿ ಕೆಲಸ! ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ

BPL Ration Cardರಾಜ್ಯದಲ್ಲಿ ವಿತ್ತೀಯ ಕಾಯ್ದೆಯ ಉಲ್ಲಂಘನೆ ಆಗಿದೆಯೇ?

ರಾಜ್ಯದಲ್ಲಿ ಭಾರೀ ಪ್ರಮಾಣದ ವಿತ್ತೀಯ ಕೊರತೆ ಎದುರಾಗಿದೆ ಎಂದು ಹಣಕಾಸು ಸಚಿವಾಲಯ (ministry of finance) ನೀಡಿದ್ದ ಎಚ್ಚರಿಕೆಯನ್ನು ಮೀರಿ ಪಡಿತರ ಚೀಟಿದಾರರಿಗೆ 1೦ ಕೆ.ಜಿ. ಅಕ್ಕಿ ನೀಡುವಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಇದಕ್ಕೆ ಚುನಾವಣಾ ಪೂರ್ವ ನೀಡಿದ ಭರವಸೆ ಕಾರಣವಾಗಿದೆ. ಆದರೆ ಎಲ್ಲಿಯೂ ಅಕ್ಕಿ ಸಿಗದ ಕಾರಣ ಅಕ್ಕಿಯ ಬದುಲು ಹಣವನ್ನು ನೀಡಲಾಗುತ್ತಿದೆ.

ಕಾಂಗ್ರೆಸ್ ಸರ್ಕಾರವು ನಮ್ಮ ಸರ್ಕಾರವು ಕೆಲಸ ಮಾಡುತ್ತಿಲ್ಲ ಎಂದು ಜನರಿಗೆ ತೋರಿಸಲು ಕೇಂದ್ರ ಸರ್ಕಾರ (Central government) ಉದ್ದೇಶ ಪೂರ್ವಕವಾಗಿಯೇ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿದೆ. ಈ ನಡುವೆ 1೦ ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯೇ ಕಾರ್ಯಸಾಧ್ಯವಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಇನ್ನೊಂದು ವಿಶೇಷವೆಂದರೆ 14 ಬಜೆಟ್ ಮಂಡಿಸಿ ಹಣಕಾಸಿನ ವಿಚಾರದಲ್ಲಿ ಅನುಭವ ಹೊಂದಿರುವ ಸಿದ್ದರಾಮಯ್ಯನವರು ಇದೀಗ ವಿತ್ತೀಯ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎನ್ನುವುದು ಆರ್ಟಿಐ (RTI);ನಿಂದ ಬೆಳಕಿಗೆ ಬಂದಿದೆ.

ಗೃಹಲಕ್ಷ್ಮಿ ಯೋಜನೆ ಹಣ ಸಿಗದವರಿಗೆ ರಾತ್ರೋ-ರಾತ್ರಿ ಬಿಗ್ ಅಪ್ಡೇಟ್! ಹೊಸ ಆದೇಶ

ಪಡಿತರ ವಿತರಣೆಯಲ್ಲಿ ಸರ್ಕಾರ ಮಾಡಿದ್ದೇನು?:

ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅಡಿಯಲ್ಲಿ ಮೂರು ನಿಯಮಗಳನ್ನು ಪಾಲಿಸಬೇಕು. ಈ ಪೈಕಿ 2023-24 ರ ಬಜೆಟ್ನಲ್ಲಿ 2 ಮನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಆದರೆ ಈಗ ಅವರೇ ವಿತ್ತೀಯ ಕಾಯ್ದೆ ಉಲ್ಲಂಘನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಆರ್ಥಿಕ ಇಲಾಖೆ ಅಭಿಪ್ರಾಯ ಏನು?:

ಪ್ರಸ್ತುತ ವಿತ್ತೀಯ ನಿರ್ಬಂಧಗಳ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಗಳನ್ನು ಅಳವಡಿಸುವುದು ಕಷ್ಟ. ಈ ಯೋಜನೆ ಜಾರಿ ಮಾಡುವುದರಿಂದ ಭಾರೀ ಪ್ರಮಾಣದ ಪುನರಾವರ್ತಿತ ಹೊಣೆಗಾರಿಕೆ ನಿರ್ಮಾಣವಾಗುತ್ತದೆ. ಕಂದಾಯ ಮತ್ತು ಬಂಡವಾಳಗಳಲ್ಲಿ ಎಲ್ಲ ಲೆಕ್ಕ ಶೀರ್ಷಿಕೆ ಹಾಗೂ ಇಲಾಖೆಗಳಿಗೆ ಆಯವ್ಯಯ ಹಂಚಿರುವುದರಲ್ಲಿ ಭಾರೀ ಪ್ರಮಾಣದಲ್ಲಿ ಕಡಿತ ಮಾಡಬೇಕಾಗುತ್ತದೆ.

ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯವನ್ನು ದೊಡ್ಡ ಪ್ರಮಾಣದ ಆರ್ಥಿಕ ಕೊರತೆಗೆ ದೂಡಿದಂತಾಗುತ್ತದೆ. ಇದು ವಿತ್ತೀಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿತ್ತು.

ಇಂತಹವರು ಕೂಡಲೇ ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಇಲ್ಲದೆ ಇದ್ರೆ ಕಠಿಣ ಕ್ರಮ

No one will get BPL card anymore, Order out of government

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories