ಇಂದಿನಿಂದ ಗೃಹಲಕ್ಷ್ಮಿ ಸಮಸ್ಯೆ ಬಂದ್! ಹಣ ಸಿಗದವರಿಗೆ ಸ್ಪಾಟ್ ಅಲ್ಲೇ ಪರಿಹಾರ

ಗೃಹಲಕ್ಷ್ಮಿ ಯೋಜನೆ (gruha lakshmi scheme) ಹಣ ಇನ್ನು ನಿಮ್ಮ ಖಾತೆಗೆ (Bank Account) ಬಂದಿಲ್ವಾ? ಅಥವಾ ಮೊದಲನೇ ಕಂತಿನ ಹಣ ಬಂದು ಉಳಿದ ಕಂತಿನ ಹಣ ಬರುವುದು ಇನ್ನೂ ಬಾಕಿ ಇದೆಯಾ?
ನೀವೆಷ್ಟೇ ಪ್ರಯತ್ನ ಪಟ್ಟರು ಆಧಾರ್ ಲಿಂಕ್ (Aadhar link) ಮಾಡಿಕೊಳ್ಳಲು ಸಾಧ್ಯ ಆಗ್ತಾ ಇಲ್ವಾ? ಬ್ಯಾಂಕ್ ಗೆ ಸಿಡಿಪಿಓ ಕಚೇರಿಗೆ ಅಲೆದು ಸಾಕಾಗಿದ್ಯಾ? ಇನ್ನು ಮುಂದೆ ಇದಕ್ಕೆಲ್ಲ ಫುಲ್ ಸ್ಟಾಪ್ ಇಡಿ. ಸರ್ಕಾರದ ಈ ಶಿಬಿರದಲ್ಲಿ ಇಂದಿನಿಂದಲೇ ಪಾಲ್ಗೊಳ್ಳಿ!
ಇನ್ಮುಂದೆ ಯಾರಿಗೂ ಸಿಗಲ್ಲ ಬಿಪಿಎಲ್ ಕಾರ್ಡ್; ಸರ್ಕಾರದಿಂದ ಹೊರಬಿತ್ತು ಆದೇಶ
3 ದಿನಗಳ ಗೃಹಲಕ್ಷ್ಮಿ ಶಿಬಿರ (Gruha lakshmi camp for 3 days)
ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು 2000rs.ಗಳನ್ನು ಫಲಾನುಭವಿ (beneficiary) ಮಹಿಳೆಯರ ಖಾತೆಗೆ ಸರ್ಕಾರ ಕಳೆದ ಮೂರು ನಾಲ್ಕು ತಿಂಗಳಿನಿಂದ ವರ್ಗಾವಣೆ (Money Deposit) ಮಾಡುತ್ತಿದೆ. ದುರಾದೃಷ್ಟವಶಾತ್ ಸಾಕಷ್ಟು ಮಹಿಳೆಯರ ಖಾತೆಗೆ ಇವತ್ತಿಗೂ ಕೂಡ ಒಂದೂ ಕಂತಿನ ಹಣ ಬಾರದೆ ಇದ್ದಿದ್ದು ಇದೆ. ಈಗ ಸರ್ಕಾರ ಎಚ್ಚೆತ್ತುಕೊಂಡಿದ್ದು, ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದೆ.
ಹೌದು, ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಡಿಸೆಂಬರ್ 27, 28 ಹಾಗೂ 29ನೇ ತಾರೀಖಿನಂದು ಗ್ರಾಮೀಣ ಗೃಹಲಕ್ಷ್ಮಿ ಶಿಬಿರ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಅವಶ್ಯಕತೆ ಇರುವ ಮಹಿಳೆಯರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು.
ಯುವ ನಿಧಿ ಯೋಜನೆಗೆ ಅಪ್ಲೈ ಮಾಡಿ ಹಣ ಪಡೆಯೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಗೃಹಲಕ್ಷ್ಮಿ ಶಿಬಿರದ ಪ್ರಯೋಜನ! (Why do you attend Gruha lakshmi camp)
*ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಕೊಡಲಾಗುವುದು.
*ಹೊಸ ಬ್ಯಾಂಕ್ ಖಾತೆ ತೆರೆಯಬಹುದು
*ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳಿಸುವುದು
*ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಿದ ಅರ್ಜಿ ಪರಿಶೀಲಿಸುವುದು
*ಯಾವುದೇ ತಾಂತ್ರಿಕ ದೋಷ (technical error) ಗಳಿದ್ದರೂ ಪರಿಹರಿಸಿ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಬರುವಂತೆ ಮಾಡುವುದು.
ಸರ್ಕಾರಿ ಕೆಲಸ! ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ
ಎಲ್ಲಿ ನಡೆಯುತ್ತೆ ಗೃಹಲಕ್ಷ್ಮಿ ಶಿಬಿರ!
ಗೃಹಲಕ್ಷ್ಮಿ ಶಿಬಿರ ನಡೆಯುವ ದಿನಾಂಕ – 27, 28, 29 ಡಿಸೆಂಬರ್ 2023. ಗ್ರಾಮ ಪಂಚಾಯತ್ (Gram Panchayat) ನೇತೃತ್ವದಲ್ಲಿ ಈ ಶಿಬಿರ ನಡೆಸಲಾಗುವುದು ಹಾಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ಶಿಬಿರ ಆಯೋಜನೆ ಮಾಡಲಾಗಿದೆ.
ಈ ಶಿಬಿರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಉಪಸ್ಥಿತರಿರುವುದು ಕಡ್ಡಾಯ. ಸರ್ಕಾರದ ಪ್ರತಿನಿಧಿ, ಗ್ರಾಮ ಪಂಚಾಯತ್ ಅಧಿಕಾರಿಗಳು ಇಂಡಿಯಾ ಪೋಸ್ಟ್ ಪೇಮೆಂಟ್, ಬ್ಯಾಂಕ್ ಮೊದಲಾದ ಸಂಬಂಧಪಟ್ಟ ಸಿಬ್ಬಂದಿಗಳು, Electronic Delivery of Citizen Services (EDCS) ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕಿಯರು ಮೊದಲಾದವರು ಕ್ಯಾಂಪ್ ಸ್ಥಳದಲ್ಲಿಯೇ ಇರುತ್ತಾರೆ.
ಗೃಹಲಕ್ಷ್ಮಿ ಯೋಜನೆ ಹಣ ಸಿಗದವರಿಗೆ ರಾತ್ರೋ-ರಾತ್ರಿ ಬಿಗ್ ಅಪ್ಡೇಟ್! ಹೊಸ ಆದೇಶ
ಮಹಿಳೆಯರು ಕ್ಯಾಂಪ್ಗೆ ಈ ದಾಖಲೆಗಳನ್ನು ಕೊಂಡೊಯ್ಯಿರಿ! (Documents)
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಾಗ ಕೊಟ್ಟಿರುವ ಸ್ವೀಕೃತಿ ಪ್ರತಿ (acknowledgement)
ಬ್ಯಾಂಕ್ ಖಾತೆಯ ವಿವರ
ರೇಷನ್ ಕಾರ್ಡ್
ಆಧಾರ್ ಕಾರ್ಡ್
ಮೇಲಿನ ದಾಖಲೆಗಳಿಗೆ ಲಿಂಕ್ ಆಗಿರುವ ರಿಜಿಸ್ಟರ್ಡ್ ಮೊಬೈಲ್ ( ಸಂಖ್ಯೆ)
ಅರ್ಜಿದಾರರೇ ಕ್ಯಾಂಪ್ ನಲ್ಲಿ ಭಾಗವಹಿಸಿದರೆ ಒಳ್ಳೆಯದು ಒಂದು ವೇಳೆ ಅರ್ಜಿದಾರರು ಬರಲು ಸಾಧ್ಯವಾಗದೆ ಇದ್ದರೆ, ಅವರ ಪರವಾಗಿ ಅವರ ಮನೆಯ ಸದಸ್ಯರು ಭಾಗವಹಿಸಬಹುದು. ಆದರೆ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ಹಾಗೂ ಇತರ ದಾಖಲೆಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
ಇಂತಹವರು ಕೂಡಲೇ ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಇಲ್ಲದೆ ಇದ್ರೆ ಕಠಿಣ ಕ್ರಮ
Spot solution for those who do not get Gruha Lakshmi Scheme money
ಎಲ್ಲಿ ನಡೆಯುತ್ತೆ ಗೃಹಲಕ್ಷ್ಮಿ ಶಿಬಿರ!






