ಪಿಯುಸಿ ಪಾಸಾಗಿದ್ರೆ ಸಿಗುತ್ತೆ ಸರ್ಕಾರಿ ನೌಕರಿ! ಅರಣ್ಯ ಇಲಾಖೆಯಿಂದ ಅರ್ಜಿ ಆಹ್ವಾನ

ಸರ್ಕಾರಿ ನೌಕರಿ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ; ಅರಣ್ಯ ಇಲಾಖೆಯಿಂದ ಅರ್ಜಿ ಆಹ್ವಾನ; ಬರೋಬ್ಬರಿ 54೦ ಹುದ್ದೆ ಭರ್ತಿಗೆ ನಿರ್ಧಾರ

ವಿದ್ಯಾಭ್ಯಾಸದ ನಂತರ ಹಲವರು ಉದ್ಯೋಗ (Job) ಸಿಗದೆ ಪರದಾಡುತ್ತಿರುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಮಸ್ಯೆಯಿಂದ ಹೆಚ್ಚಿಗೆ ಓದಲು ಸಮಸ್ಯೆ ಆಗಿರುತ್ತದೆ. ಹೆಚ್ಚಿನವರು ಪಿಯುಸಿ (PUC) ವರೆಗೆ ಓದಿ ನಂತರ ಓದನ್ನು ನಿಲ್ಲಿಸಿರುತ್ತಾರೆ.

ಇದೀಗ ರಾಜ್ಯ ಸರ್ಕಾರವು ಅರಣ್ಯ ಇಲಾಖೆಯ (forest department) 54೦ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದಾರೆ. ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು, ಸಂಬಳ ಎಷ್ಟು ಕೊಡುತ್ತಾರೆ? ಅರ್ಜಿ ಸಲ್ಲಿಸೋದು ಹೇಗೆ ಇವೆ ಮುಂತಾದ ವಿಚಾರಗಳ ಕುರಿತು ಈಗ ತಿಳಿದುಕೊಳ್ಳೋಣ.

ಇಂದಿನಿಂದ ಗೃಹಲಕ್ಷ್ಮಿ ಸಮಸ್ಯೆ ಬಂದ್! ಹಣ ಸಿಗದವರಿಗೆ ಸ್ಪಾಟ್ ಅಲ್ಲೇ ಪರಿಹಾರ

ಪಿಯುಸಿ ಪಾಸಾಗಿದ್ರೆ ಸಿಗುತ್ತೆ ಸರ್ಕಾರಿ ನೌಕರಿ! ಅರಣ್ಯ ಇಲಾಖೆಯಿಂದ ಅರ್ಜಿ ಆಹ್ವಾನ - Kannada News

ಕರ್ನಾಟಕದ ಅರಣ್ಯ ಇಲಾಖೆಯಿಂದ ನೇಮಕಾತಿ (forest department recruitment)

ಕರ್ನಾಟಕದ ಅರಣ್ಯ ಇಲಾಖೆಯಿಂದ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರಣ್ಯ ಗಸ್ತು ಪಾಲರ (forest beat guard) ಹುದ್ದೆಗಾಗಿ ನೇಮಕಾತಿ ನಡೆಯುತ್ತಿದೆ. ಒಟ್ಟು 54೦ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ನೇಮಕ ಗೊಂಡವರನ್ನು ರಾಜ್ಯದ ಯಾವುದೇ ಭಾಗಕ್ಕೆ ನೇಮಿಸಬಹುದಾಗಿದೆ.

ಸಂಬಳ ಎಷ್ಟು?: (salary)

ಅರಣ್ಯ ಗಸ್ತು ಪಾಲಕರ ಅಥವಾ ಅರಣ್ಯ ರಕ್ಷಕ ಹುದ್ದೆಗೆ ನೇಮಕಾತಿ ಆಗುವವರಿಗೆ 18,6೦೦ ರೂ. ನಿಂದ 32,6೦೦ ರೂ. ವರೆಗೆ ಸಂಬಳ ಹಾಗೂ ಪಿಂಚಣಿ (pension) ಸೌಲಭ್ಯ, ವಿಶೇಷ ಭತ್ಯೆ (special allowance) ಗಳನ್ನು ನೀಡಲಾಗುತ್ತದೆ.

ಎಷ್ಟು ಓದಿರಬೇಕು: (education qualification)

ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ದ್ವಿತೀಯ ಪಿಯುಸಿ (2nd PUC) ಇಲ್ಲವೆ ತತ್ಸಮಾನ ವಿದ್ಯಾಭ್ಯಾಸ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟವರು ಹಾಗೂ 27 ವರ್ಷದ ಕೆಳಗಿನವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ಕ್ಕೆ ಸೇರಿರುವವರಿಗೆ 5 ವರ್ಷಗಳ ವಿನಾಯತಿ ಇದೆ. ಹಿಂದುಳಿದ ವರ್ಗಗಳಿಗೆ ಸೇರಿರುವವರಿಗೆ ಮೂರು ವರ್ಷಗಳ ಸಡಿಲಿಕೆ ಮಾಡಲಾಗಿದೆ.

ಇನ್ಮುಂದೆ ಯಾರಿಗೂ ಸಿಗಲ್ಲ ಬಿಪಿಎಲ್ ಕಾರ್ಡ್; ಸರ್ಕಾರದಿಂದ ಹೊರಬಿತ್ತು ಆದೇಶ

Jobಅರ್ಜಿ ಶುಲ್ಕ ಎಷ್ಟು? (Application fee)

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಗೆ 12೦ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ 7೦ ರೂ, ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಪುರುಷ ಅಭ್ಯರ್ಥಿಗಳಿಗೆ 22೦ ರೂ., ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಮಹಿಳಾ ಅಭ್ಯರ್ಥಿಗಳಿಗೆ 12೦ ರೂ. ನಿಗದಿ ಪಡಿಸಲಾಗಿದೆ.

ಯುವ ನಿಧಿ ಯೋಜನೆಗೆ ಅಪ್ಲೈ ಮಾಡಿ ಹಣ ಪಡೆಯೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: (needed documents to apply)

ಅಭ್ಯರ್ಥಿಯ ಇತ್ತಿಚಿನ ಭಾವಚಿತ್ರ ಹಾಗೂ ಸಹಿ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ, ಆಧಾರ್ ಕಾರ್ಡ್, ಶೈಕ್ಷಣಿಕ ಅಂಕಪಟ್ಟಿ ಹಾಗೂ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗ್ರಾಮೀಣ ಭಾಗದ ಅಭ್ಯರ್ಥಿ ಪ್ರಮಾಣ ಪತ್ರ ಹಾಗೂ ಕನ್ನಡ ಮಾಧ್ಯಮ ಪ್ರಮಾಣ ಪತ್ರ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ? (How to apply)

ಅರಣ್ಯ ಇಲಾಖೆಯ ವೆಬ್ಸೈಟ್ಗೆ https://kfdrecruitment.in/ ಭೇಟಿ ನೀಡಿದರೆ ಅಲ್ಲಿ ನಿಮಗೆ ಅರ್ಜಿ ಫಾರಂ ಕಾಣುತ್ತದೆ. ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. ಹಾಗೂ ಅಲ್ಲಿ ಕೇಳಲಾಗಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ನಂತರ ಆನ್ಲೈನ್ ಮೂಲಕವೇ ಅರ್ಜಿ ಶುಲ್ಕ ಭರ್ತಿ ಮಾಡಿ ಇ-ರಸಿದಿ ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಕೆ ಆದ ಬಳಿಕ ನಿಮಗೆ ಸ್ವಿಕೃತಿ ಪ್ರತಿ (acknowledgement) ನೀಡಲಾಗುತ್ತದೆ.

ಸರ್ಕಾರಿ ಕೆಲಸ! ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ

ಆಯ್ಕೆ ಹೇಗೆ? (Selection process)

ನೀವು ಅರಣ್ಯ ಗಸ್ತು ಪಾಲಕರಾಗಿ ಆಯ್ಕೆಯಾಗಲು ಮೊದಲು ಲಿಖಿತ ಪರೀಕ್ಷೆ ಇರುತ್ತದೆ. ಇದಾದ ಬಳಿಕ ದೈಹಿಕ ಪರೀಕ್ಷೆ, ಸಂದರ್ಶನ ಮಾಡಲಾಗುತ್ತದೆ. ಈ ವೇಳೆಯೇ ನಿಮ್ಮ ದಾಖಲಾತಿಗಳ ಪರಿಶೀಲನೆ ನಡೆಯುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last date to apply) ಡಿಸೆಂಬರ್ 30, 2023. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಜನವರಿ 5, 2024.

If you pass PUC, you will get a government job from Forest Department

Follow us On

FaceBook Google News

If you pass PUC, you will get a government job from Forest Department