ಯುವನಿಧಿ ಯೋಜನೆ ಹಣ ಪಡೆಯೋಕೆ ಮೊಬೈಲ್ ನಲ್ಲೇ 5 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ!

ಯುವ ನಿಧಿ ಯೋಜನೆಯ (Yuva Nidhi scheme) ಮೂಲಕ ರಾಜ್ಯದಲ್ಲಿ ವಾಸಿಸುವ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ (unemployment allowance) ವನ್ನು ನೀಡಲಾಗುತ್ತಿದೆ.

ರಾಜ್ಯ ಸರ್ಕಾರ (central government) ಈ ಮೊದಲೇ ತಿಳಿಸಿರುವಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಕೊನೆಯದಾಗಿ ಯುವ ನಿಧಿ ಯೋಜನೆಯ (Yuva Nidhi scheme) ಮೂಲಕ ರಾಜ್ಯದಲ್ಲಿ ವಾಸಿಸುವ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ (unemployment allowance) ವನ್ನು ನೀಡಲಾಗುತ್ತಿದೆ.

ಪದವಿ ತೇರ್ಗಡೆ ಹೊಂದಿದ್ದು, ಕೆಲಸ ಸಿಗದೇ ಇರುವವರಿಗೆ 3,000 ಹಾಗೂ ಡಿಪ್ಲೋಮಾ ತೇರ್ಗಡೆ ಹೊಂದಿದ್ದು, ಕೆಲಸ ಸಿಗದೇ ಇರುವವರಿಗೆ 1,500 ರೂಪಾಯಿಗಳನ್ನು ಪ್ರತಿ ತಿಂಗಳು ಇನ್ನು ಮುಂದೆ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ. ಈ ಯೋಜನೆ ಮುಂದಿನ ಎರಡು ವರ್ಷಗಳ ವರೆಗೆ ಚಾಲ್ತಿಯಲ್ಲಿ ಇರುತ್ತದೆ.

ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಳ್ಳಲು ಇಂದೇ ಕೊನೆ! ಹಣ ಬಾರದವರಿಗೆ ಸೂಚನೆ

ಯುವನಿಧಿ ಯೋಜನೆ ಹಣ ಪಡೆಯೋಕೆ ಮೊಬೈಲ್ ನಲ್ಲೇ 5 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ! - Kannada News

ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸ ಬಹುದು. ಮೊಬೈಲ್ (mobile) ನಲ್ಲಿ ಕೆಲವೇ ಕ್ಷಣಗಳಲ್ಲಿ ಯುವ ನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ನೋಡೋಣ!

ಮೊಬೈಲ್ ನಲ್ಲಿಯೇ ಯೋಜನೆಗೆ ಅರ್ಜಿ! (Application can be submitted on mobile)

*ಮೊದಲನೇದಾಗಿ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಬ್ರೌಸರ್ (Google browser) ಓಪನ್ ಮಾಡಿ.

*ನಂತರ https://sevasindhugs.karnataka.gov.in/ ಈ ವೆಬ್ ಸೈಟ್ ಲಿಂಕ್ ಅನ್ನು ಗೂಗಲ್ ವೆಬ್ ಬ್ರೌಸರ್ ಒಳಗಡೆ ನಮೂದಿಸಿ (ಕಾಫಿ ಅಂಡ್ ಪೇಸ್ಟ್ ಮಾಡಿ)

*ಈಗ ರಾಜ್ಯ ಸರ್ಕಾರದ ಅಧಿಕೃತ ಸೇವಾ ಸಿಂಧು ವೆಬ್ ಪೋರ್ಟಲ್ (seva Sindhu web portal) ತೆರೆದುಕೊಳ್ಳುತ್ತದೆ.

*ಮುಖಪುಟದಲ್ಲಿ ನಿಮಗೆ ಐದು ಯೋಜನೆಗಳ ಹೆಸರು ಕಾಣಿಸುತ್ತದೆ ಅವುಗಳಲ್ಲಿ ಕೊನೆಯ ಯುವ ನಿಧಿ ಯೋಜನೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇಂತಹ ರೇಷನ್ ಕಾರ್ಡುಗಳು ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಟೇಟಸ್ ಈ ರೀತಿ ಚೆಕ್ ಮಾಡಿ

*ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಒಂದು ವೇಳೆ ಯೂಸರ್ ಐಡಿ ಪಾಸ್ವರ್ಡ್ (user ID password)ಇಲ್ಲದೆ ಇದ್ದರೆ ನೀವು ರಿಜಿಸ್ಟ್ರೇಷನ್ (registration) ಎಂಬುದನ್ನು ಆಯ್ಕೆ ಮಾಡಿ ನಿಮ್ಮ ಆಧಾರ್ ನಂಬರ್ ಹಾಗೂ ಕ್ಯಾಪ್ಚಾ ನಂಬರ್ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ.

*ರಿಜಿಸ್ಟ್ರೇಷನ್ ಆದ ಬಳಿಕ ನೀವು ಲಾಗಿನ್ ಆಗಬೇಕು.

Yuva Nidhi Yojana - Yuva Nidhi Scheme*ಲಾಗಿನ್ (login) ಆದ ನಂತರ ಸ್ವಯಂ ಘೋಷಣ ವಿವರಗಳನ್ನು ಕಾಣಬಹುದು ಅವುಗಳನ್ನು ಓದಿ ಅರ್ಥ ಮಾಡಿಕೊಂಡು ನಂತರ ನೀವು ಸರ್ಕಾರದ ಮಾನದಂಡದೊಳಗೆ ಬರುವವರಾಗಿದ್ದರೆ ನಿಮ್ಮ ವಯಕ್ತಿಕ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

*Aadhar authentication ಎನ್ನುವ ಮಾಹಿತಿ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಈಗ ಕೆ ವೈ ಸಿ ಪುಟ ತೆಗೆದುಕೊಳ್ಳುತ್ತದೆ.

*ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿದ್ರೆ ಒಂದು ಓಟಿಪಿ ಕಳುಹಿಸಲಾಗುತ್ತದೆ ಅದನ್ನು ಮೇಲೆ ಕಾಣಿಸುವ ಬಾಕ್ಸ್ ನಲ್ಲಿ ಹಾಕಬೇಕು. ಈಗ ನೀವು ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ.

ಇಂದಿನಿಂದ ಗೃಹಲಕ್ಷ್ಮಿ ಸಮಸ್ಯೆ ಬಂದ್! ಹಣ ಸಿಗದವರಿಗೆ ಸ್ಪಾಟ್ ಅಲ್ಲೇ ಪರಿಹಾರ

*ಈ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ನೀವು ವಿದ್ಯಾರ್ಥಿಗಳು (Are you student) ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

*ಈಗ ನೀವು ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡಬೇಕು ಹಾಗೂ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು.

*ಎಲ್ಲ ಕೆಲಸಗಳು ಪೂರ್ಣಗೊಂಡ ನಂತರ ಸಬ್ಮಿಟ್ ಎಂದು ಕ್ಲಿಕ್ ಮಾಡಿ ಕೊನೆಯಲ್ಲಿ ಸ್ವೀಕೃತಿ ಪ್ರತಿ (acknowledgement copy) ಯನ್ನು ಡೌನ್ಲೋಡ್ ಮಾಡಿಕೊಳ್ಳಿ.

ಜನವರಿ 12, 2024 ರಿಂದ ಮೊದಲ ಕಂತಿನ ಹಣ ಫಲಾನುಭವಿ ಅಭ್ಯರ್ಥಿಗಳ ಖಾತೆಗೆ ವರ್ಗಾವಣೆ ಆಗಲಿದೆ. ಎರಡು ವರ್ಷಗಳ ಅವಧಿಯ ಒಳಗೆ ನಿಮಗೆ ಉದ್ಯೋಗ ದೊರೆತರೂ ಅದನ್ನು ಸರ್ಕಾರದ ಗಮನಕ್ಕೆ ತರಬೇಕು.

ಇನ್ಮುಂದೆ ಯಾರಿಗೂ ಸಿಗಲ್ಲ ಬಿಪಿಎಲ್ ಕಾರ್ಡ್; ಸರ್ಕಾರದಿಂದ ಹೊರಬಿತ್ತು ಆದೇಶ

Apply in 5 minutes on mobile to get Yuva Nidhi scheme money

Follow us On

FaceBook Google News

Apply in 5 minutes on mobile to get Yuva Nidhi scheme money