ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಳ್ಳಲು ಇಂದೇ ಕೊನೆ! ಹಣ ಬಾರದವರಿಗೆ ಸೂಚನೆ

ಎಲ್ಲರಿಗೂ ತಿಳಿದಿರುವಂತೆ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಈ ಮೂಲಕ ಸರ್ಕಾರ ಪ್ರತಿ ಮನೆಯ ಹಿರಿಯ ಮಹಿಳೆಗೆ ಪ್ರತಿ ತಿಂಗಳು 2000 ಗಳನ್ನು ಉಚಿತವಾಗಿ ನೀಡುತ್ತಿದೆ. ಮನೆಯಲ್ಲಿ ಹಿರಿಯ ಮಹಿಳೆಗೆ ಸಣ್ಣಪುಟ್ಟ ತಿಂಗಳ ಖರ್ಚುಗಳನ್ನು ನಿಭಾಯಿಸಲು ಈ ಹಣ ನಿಜಕ್ಕೂ ಸಹಾಯ ಮಾಡುತ್ತಿದೆ ಎನ್ನಬಹುದು.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಸಿಗುತ್ತಿರುವುದು ಮಹಿಳೆಯರಿಗೆ ಸಂತಸದ ಸಂಗತಿ. ಅದರಲ್ಲೂ ಈಗಾಗಲೇ ನಾಲ್ಕು ಕಂತಿನ ಹಣ ಕೂಡ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಾಂತರ ಮಹಿಳೆಯರು ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಇಂತಹ ರೇಷನ್ ಕಾರ್ಡುಗಳು ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಟೇಟಸ್ ಈ ರೀತಿ ಚೆಕ್ ಮಾಡಿ
ಆದರೆ ದುರಾದೃಷ್ಟವಶಾತ್, ಸಾಕಷ್ಟು ಮಹಿಳೆಯರಿಗೆ ಇದುವರೆಗೆ ಹಣ ಬಿಡುಗಡೆ (Money Deposit) ಆಗಿಲ್ಲ. ಇದಕ್ಕೆ ಅವರ ಬ್ಯಾಂಕ್ ಖಾತೆಗೆ (Bank Account) ಆಧಾರ್ ಸೀಡಿಂಗ್ (Aadhaar seeding) ಆಗದೆ ಇರುವುದು ಮುಖ್ಯವಾಗಿರುವ ಕಾರಣವಾಗಿದೆ. ಇದರ ಜೊತೆಗೆ ಸರ್ಕಾರದ ಕಡೆಯಿಂದ ಕೆಲವು ತಾಂತ್ರಿಕ ದೋಷಗಳು (technical error) ಕೂಡ ಮಹಿಳೆಯರ ಖಾತೆಗೆ (Bank Account) ಹಣ ಬರುವುದನ್ನು ತಡೆ ಹಿಡಿದಿವೆ ಎನ್ನಬಹುದು.
ಗೃಹಲಕ್ಷ್ಮಿಯರಿಗಾಗಿ ಶಿಬಿರ (Camp for women)
ಗ್ರಾಮೀಣ ಭಾಗದಲ್ಲಿ ವಾಸಿಸುವ ಮಹಿಳೆಯರು ಸುಲಭವಾಗಿ ತಮ್ಮ ಹಣ ಬರುವಂತೆ ಮಾಡಿಕೊಳ್ಳಲು ಇರುವ ಏಕೈಕ ಮಾರ್ಗ ಇದು. ಸರ್ಕಾರ ಎಷ್ಟೇ ಪ್ರಯತ್ನಿಸಿದರು 100 % ನಷ್ಟು ಗೃಹಲಕ್ಷ್ಮಿ ಯೋಜನೆಯಲ್ಲಿ ಸಕ್ಸಸ್ ಕಾಣಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಎಲ್ಲಾ ಗೃಹಿಣಿಯರಿಗೂ ಕೂಡ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಲು ತಿಳಿಯುತ್ತಿಲ್ಲ. ಇದಕ್ಕಾಗಿ ಸರ್ಕಾರ ಈಗ ಮಹಿಳೆಯರಿಗಾಗಿ ಶಿಬಿರವನ್ನು ಗ್ರಾಮೀಣ ಮಟ್ಟದಲ್ಲಿ ನಡೆಸುತ್ತಿದೆ.
ಇಂದಿನಿಂದ ಗೃಹಲಕ್ಷ್ಮಿ ಸಮಸ್ಯೆ ಬಂದ್! ಹಣ ಸಿಗದವರಿಗೆ ಸ್ಪಾಟ್ ಅಲ್ಲೇ ಪರಿಹಾರ
ಏನಿದು ಶಿಬಿರ? (Information about Camp)
ಗ್ರಾಮ ಪಂಚಾಯತ್ (grama panchayat) ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕ್ಯಾಂಪ್ ಒಂದನ್ನು ನಡೆಸಲಾಗುತ್ತಿದೆ. ಈಗಾಗಲೇ ಸರ್ಕಾರ ತಿಳಿಸಿರುವಂತೆ ಡಿಸೆಂಬರ್ 27ರಿಂದ 29ರ ವರೆಗೆ ಮೂರು ದಿನಗಳ ಕಾಲ ಕ್ಯಾಂಪ್ ನಡೆಯಲಿದೆ. ಇಂದು ಕ್ಯಾಂಪ್ ನ ಕೊನೆಯ ದಿನವಾಗಿದ್ದು, ನೀವಿನ್ನು ಕ್ಯಾಂಪ್ ಗೆ ಹೋಗಿ ಮಾಹಿತಿ ಪಡೆದುಕೊಳ್ಳದೆ ಇದ್ದರೆ ತಕ್ಷಣ ಆ ಕೆಲಸ ಮಾಡಿ. ಮಿಸ್ ಆಗದೇ ನಿಮ್ಮ ಖಾತೆಗೂ ಕೂಡ ಗೃಹಲಕ್ಷ್ಮಿ ಹಣ ಸಂದಾಯವಾಗುತ್ತದೆ.
ಇನ್ಮುಂದೆ ಯಾರಿಗೂ ಸಿಗಲ್ಲ ಬಿಪಿಎಲ್ ಕಾರ್ಡ್; ಸರ್ಕಾರದಿಂದ ಹೊರಬಿತ್ತು ಆದೇಶ
ಗೃಹಲಕ್ಷ್ಮಿಯರಿಗಾಗಿ ನಡೆಸಲಾಗಿರುವ ಕ್ಯಾಂಪ್ ನಲ್ಲಿ ಈ ಪ್ರಯೋಜನ ಪಡೆದುಕೊಳ್ಳಿ!
ಆಧಾರ್ ಜೋಡಣೆ
ಬ್ಯಾಂಕ್ ಸಮಸ್ಯೆ
ಈ ಕೆ ವೈ ಸಿ ಅಪ್ಡೇಟ್
ಹೊಸ ಬ್ಯಾಂಕ ಖಾತೆ ಆರಂಭ.
ಶಿಬಿರದಲ್ಲಿ ಪಾಲ್ಗೊಳ್ಳಲು ಈ ದಾಖಲೆಗಳನ್ನು ತೆಗೆದುಕೊಂಡು ಹೋಗಿ! (Needed documents)
ಮಹಿಳೆಯ ಆಧಾರ್ ಕಾರ್ಡ್
ಪತಿಯ ಆಧಾರ್ ಕಾರ್ಡ್
ಪಡಿತರ ಚೀಟಿ
ಬ್ಯಾಂಕ್ ಪಾಸ್ ಬುಕ್
ಯುವ ನಿಧಿ ಯೋಜನೆಗೆ ಅಪ್ಲೈ ಮಾಡಿ ಹಣ ಪಡೆಯೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಈ ಶಿಬಿರ ಆರಂಭವಾಗಿ ಈಗಾಗಲೇ ಎರಡು ದಿನ ಕಳೆದಿದೆ. 27 ಬುಧವಾರದಿಂದ ಆರಂಭವಾದ ಶಿಬಿರ 29 ಶುಕ್ರವಾರ ಅಂದರೆ ಇಂದಿನವರೆಗೆ ನಡೆಯಲಿದೆ. ಬೆಳಿಗ್ಗೆ 9:00 ರಿಂದ ಸಂಜೆ 5:00 ವರೆಗೂ ಕ್ಯಾಂಪ್ ನಡೆಸಲಾಗುತ್ತದೆ.
ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಯಾಂಪ್ ನಡೆಯುತ್ತಿದ್ದು ಇದುವರೆಗೆ ನೀವು ಹೋಗಿ ಪ್ರಯೋಜನ ಪಡೆದುಕೊಳ್ಳದೆ ಇದ್ದರೆ, ನಿಮ್ಮ ಖಾತೆಗೂ ಹಣ ಬರಬೇಕು ಎನ್ನುವ ಕಾರಣಕ್ಕೆ ಹೋಗಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದರಿಂದ ಪರಿಹಾರ ಪಡೆದುಕೊಂಡು ನಿಮ್ಮ ಖಾತೆಗೂ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ 2000 ರೂ. ಜಮಾ ಆಗುವಂತೆ ಮಾಡಿಕೊಳ್ಳಿ.
Today is the Last Date for Get Gruha Lakshmi Scheme money Through Camp
ಏನಿದು ಶಿಬಿರ? (Information about Camp)






