ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಗ್ಯಾರಂಟಿ ಯೋಜನೆಯೂ ಒಂದು. ಈ ಯೋಜನೆ ಆರಂಭವಾದ ತಕ್ಷಣವೇ ವಿಘ್ನ ಎದುರಾಗಿತ್ತು. ಹೇಗಿದ್ದರೂ ಕೇಂದ್ರ ಸರ್ಕಾರವು ಹೆಚ್ಚಿನ ಅಕ್ಕಿಯನ್ನು ಪೂರೈಸುತ್ತದೆ ಎನ್ನುವ ಭರವಸೆಯ ಮೇಲೆ ರಾಜ್ಯ ಸರ್ಕಾರವು ಪ್ರತಿಯೊಬ್ಬರಿಗೂ ಐದು ಕೆ.ಜಿ. ಅಕ್ಕಿ ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿತ್ತು.

ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ನಂತರ ರಾಜ್ಯ ಸರ್ಕಾರಕ್ಕೆ ಒಂದು ರೀತಿಯಲ್ಲಿ ಮುಖಭಂಗ ಉಂಟಾಗಿತ್ತು. ನಂತರ ರಾಜ್ಯ ಸರ್ಕಾರವು ದೇಶದ ಹಲವು ರಾಜ್ಯ ಸರ್ಕಾರಗಳ ಬಳಿ ಅಕ್ಕಿ ನೀಡುವಂತೆ ಮನವಿ ಮಾಡಿತ್ತು.

Do this if Annabhagya Yojana money not reached your Bank account yet

ನಿಮ್ಮ ಜಮೀನು ಒತ್ತುವರಿ ಆಗಿದೆಯಾ? ಹಾಗಾದ್ರೆ ಹೀಗೆ ಮಾಡಿ ವಾಪಸ್ ಪಡೆಯಿರಿ

ಕೊನೆಗೂ ಅಕ್ಕಿ ಸಿಗದ ಪರಿಣಾಮ ಅಕ್ಕಿ ಸಿಗುವ ವರೆಗೆ ಅಕ್ಕಿಯ ಬದಲು ಹಣವನ್ನು ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಮಾಡುವುದಾಗಿ ತಿಳಿಸಿದೆ. ಇದೀಗ ಈ ಹಣವನ್ನು ಪಡೆದುಕೊಳ್ಳಲು ಸಹ ನೀವು ಒಂದು ಕೆಲಸ ಮಾಡಬೇಕು. ಅದೇನು ಎಂದು ಈಗ ಹೇಳುತ್ತೇವೆ.

ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿ (Ration Card) ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಗೆ (Bank Account) ಆಧಾರ್ ನಂಬರ್ ಲಿಂಕ್ ಮಾಡಿಸದೆ ಇದ್ದಲ್ಲಿ ಹಾಗೂ ಇತರೇ ಯಾವುದೇ ತಾಂತ್ರಿಕ ಸಮಸ್ಯೆಗಳು ಇದ್ದಲ್ಲಿ ಡಿಸೆಂಬರ್ ತಿಂಗಳಿನಿಂದ ಅನ್ನಭಾಗ್ಯದ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಜಂಟಿ ಇಲಾಖೆಯ ನಿರ್ದೇಶಕ ಮೊಹಮದ್ ಖೈಜರ್ ಅವರು ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಹೊಸದಾಗಿ ಯಾವುದೇ ಪಡಿತರ ಚೀಟಿ ನೀಡಲಾಗುತ್ತಿಲ್ಲ. ಈಗ ಇದ್ದವರ ಪಡಿತರ ಚೀಟಿಯಲ್ಲಿ ಯಾವುದಾದರೂ ಬದಲಾವಣೆ ಇದ್ದರೆ ಮಾಡಿಸಿಕೊಳ್ಳಬಹುದಾಗಿದೆ.

ರೈತರಿಗೆ ಬೆಳೆ ಪರಿಹಾರ ಧನ ಬಿಡುಗಡೆ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಕೂಡಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ:

Annabhagya Schemeಅಂತ್ಯೊದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಕೂಡಲೇ ಬ್ಯಾಂಕ್ಗೆ ತೆರಳಿ ತಮ್ಮ ಖಾತೆಗೆ ಆಧಾರ್ ಲಿಂಕ್ (Aadhaar Card) ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡಿಸಿಕೊಳ್ಳಿ.

ಇದಷ್ಟೇ ಅಲ್ಲದೆ ನಿಮ್ಮ ಖಾತೆಯಲ್ಲಿ ಯಾವುದಾದರೂ ತಾಂತ್ರಿಕ ದೋಷ ಉಂಟಾಗಿದೆಯೇ ಎಂದು ಸಹ ನೋಡಿಕೊಳ್ಳಿ. ಯಾಕೆಂದರೆ ಯಾವುದೇ ತಾಂತ್ರಿಕ ದೋಷ ಇದ್ದರೆ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.

ಯುವನಿಧಿ ಯೋಜನೆ ಹಣ ಪಡೆಯೋಕೆ ಮೊಬೈಲ್ ನಲ್ಲೇ 5 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ!

ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಅಧಿಕ ಮುಖ್ಯಸ್ಥರ ಹೆಸರು ಇರುವುದು, ಮುಖ್ಯಸ್ಥರ ಹೆಸರೇ ಇರದಿರುವುದು, ಅಥವಾ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದು ಮಾಡಿರುವುದು, ಬ್ಯಾಂಕ್ನಲ್ಲಿ ಇ-ಕೆವೈಸಿ ಮಾಡಿಸದೆ ಇರುವುದು, ಅಲ್ಲದೆ ಕಳೆದ ಮೂರ್ನಾಲ್ಕು ತಿಂಗಳಿಂದ ಪಡಿತರ ಪಡೆಯದೇ ಇರುವುದರಿಂದ ಫಲಾನುಭವಿಯ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಗಾಗಿ ನಿಮ್ಮ ಪಡಿತರ ಚೀಟಿಯಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಕೂಡಲೇ ಬಗೆಹರಿಸಿಕೊಂಡು ಸರ್ಕಾರ ನೀಡುವ ಸೌಲಭ್ಯ ಪಡೆದುಕೊಳ್ಳಿ.

Check Annabhagya Yojana money came for the month of December