ನಿಮ್ಮ ಜಮೀನು ಒತ್ತುವರಿ ಆಗಿದೆಯಾ? ಹಾಗಾದ್ರೆ ಹೀಗೆ ಮಾಡಿ ವಾಪಸ್ ಪಡೆಯಿರಿ

ಗ್ರಾಮೀಣ ಭಾಗದಲ್ಲಿ ಹಲವರು ರೈತರ ಜಮೀನು (Agriculture Land) ಒಂದೇ ಕಡೆಯಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಅಕ್ಕಪಕ್ಕದವರು ಜಮೀನಿನ (Property) ಆಸೆಗೆ ಒತ್ತುವರಿ ಮಾಡಬಹುದು

ಗ್ರಾಮೀಣ ಭಾಗದಲ್ಲಿ ಹಲವರು ರೈತರ ಜಮೀನು (Agriculture Land) ಒಂದೇ ಕಡೆಯಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಅಕ್ಕಪಕ್ಕದವರು ಜಮೀನಿನ (Property) ಆಸೆಗೆ ಒತ್ತುವರಿ ಮಾಡಬಹುದು. ಇದು ನಿಮಗೆ ತಿಳಿದ ತಕ್ಷಣ ಆತನಿಗೆ ಬಿಟ್ಟುಕೊಡಲು ಹೇಳುತ್ತೀರಿ.

ಆದರೆ ಆತ ತನ್ನದೆ ಜಮೀನು ಎಂದು ವಾದಿಸುತ್ತಾನೆ. ಅಂತಹ ಸಂದರ್ಭದಲ್ಲಿ ನೀವು ಈ ರೀತಿ ಮಾಡಿದರೆ ನಿಮ್ಮ ಜಮೀನನ್ನು ನಿಮ್ಮ ವಶಕ್ಕೆ ಪಡೆದುಕೊಳ್ಳಬಹುದು.

ಡಿಸೆಂಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್ ರದ್ದಾದವರ ಹೊಸ ಲಿಸ್ಟ್ ಬಿಡುಗಡೆ! ಚೆಕ್ ಮಾಡಿಕೊಳ್ಳಿ

ನಿಮ್ಮ ಜಮೀನು ಒತ್ತುವರಿ ಆಗಿದೆಯಾ? ಹಾಗಾದ್ರೆ ಹೀಗೆ ಮಾಡಿ ವಾಪಸ್ ಪಡೆಯಿರಿ - Kannada News

ಸರ್ವೇಗೆ ಅರ್ಜಿ ಹಾಕಿ:

ತಮ್ಮ ಜಮೀನು ಅತಿಕ್ರಮಣ ಆಗಿದೆ ಎಂದು ತಿಳಿದಾಗ ರೈತರು ಹದ್ದುಬಸ್ತು ಮಾಡಿಕೊಡುವಂತೆ ಸರ್ವೇಗೆ ಅರ್ಜಿ ಸಲ್ಲಿಸುತ್ತಾರೆ. ಅದರಂತೆ ಸರ್ವೇ ಅಧಿಕಾರಿಗಳು ಸರ್ವೇ ಮಾಡಲು ಬಂದಾಗ ಅಕ್ಕಪಕ್ಕದವರು ತಕರಾರು ತೆಗೆಯುತ್ತಾರೆ.

ಒಂದು ವೇಳೆ ಸರ್ವೇ ಆದ ನಂತರವೇ ಅಕ್ಕಪಕ್ಕದವರು ಅತಿಕ್ರಮಣ ಮಾಡಿದ್ದರೆ, ಅದನ್ನು ತೆರವು ಮಾಡುವಂತೆ ನೀವು ಮನವಿ ಮಾಡಬಹುದು. ಆಗ ಅವರು ತೆರವು ಮಾಡಲು ಸಾಧ್ಯವಿಲ್ಲ ಎಂದು ಜಗಳಕ್ಕೆ ಬರಬಹುದು. ಇಂತಹ ಸಂದಿಗ್ದ ಸಂದರ್ಭದಲ್ಲಿ ನೀವು ಧೈರ್ಯಗೆಡಬಾರದು. ದೈರ್ಯದಿಂದ ಮುನ್ನುಗ್ಗಬೇಕು. ಈಗ ನಾವು ಹೇಳಿದ ರೀತಿ ಮಾಡಿದರೆ ಅವರು ಜಮೀನನ್ನು ಬಿಟ್ಟುಕೊಡಬೇಕಾಗುತ್ತದೆ.

ರೈತರಿಗೆ ಬೆಳೆ ಪರಿಹಾರ ಧನ ಬಿಡುಗಡೆ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಹದ್ದುಬಸ್ತು ಮಾಡಿ:

ಸರ್ಕಾರದಿಂದ ಅಧಿಕಾರಿಗಳು ಅಧಿಕೃತವಾಗಿ ಸರ್ವೇ ಮಾಡಿ ನಿಮ್ಮ ಜಮೀನಿನ ಗಡಿಗುರುತು ಮಾಡಿಕೊಡುವುದನ್ನು ಹದ್ದುಬಸ್ತು ಎಂದು ಕರೆಯಲಾಗುತ್ತದೆ. ಇದಕ್ಕಾಗಿ ರೈತನು ಆಧಾರ್ ಕಾರ್ಡ್, ಜಮೀನಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಸರ್ವೇ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ವೇಳೆ ಅಧಿಕಾರಿಗಳು ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೇಳುತ್ತಾರೆ. ಅದನ್ನು ಸರಿಯಾದ ರೀತಿಯಲ್ಲಿ ನೀಡಬೇಕು. ಇದರ ಜೊತೆ ನಿಮ್ಮ ಅಕ್ಕಪಕ್ಕದ ರೈತರ ಹೆಸರು, ವಿಳಾಸ ಮೊಬೈಲ್ ನಂಬರ್ ಸಹ ನೀಡಬೇಕಾಗುತ್ತದೆ. ಸರ್ವೇ ಮಾಡುವ ವಿಚಾರ ನಿಮ್ಮ ಜಮೀನಿನ ಅಕ್ಕಪಕ್ಕದವರಿಗೂ ತಿಳಿದರಬೇಕು. ಸರ್ವೇ ಅಧಿಕಾರಿಗಳು ಬರುವ ಸಂದರ್ಭದಲ್ಲಿ ಊರಿನ ಹಿರಿಯರನ್ನು ಆ ಸ್ಥಳಕ್ಕೆ ಕರೆಯಿಸಬೇಕು. ಅವರ ಸಮ್ಮುಖದಲ್ಲೇ ಸರ್ವೇ ಕಾರ್ಯ ನಡೆಸಬೇಕು.

ಯುವನಿಧಿ ಯೋಜನೆ ಹಣ ಪಡೆಯೋಕೆ ಮೊಬೈಲ್ ನಲ್ಲೇ 5 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ!

Property Documentsಅಕ್ಕಪಕ್ಕದ ರೈತರಿಗೆ ಅಧಿಕಾರಿಗಳು ಸಾಮಾನ್ಯವಾಗಿ ಸರ್ವೇ ಮಾಡುವ ವಿಚಾರವಾಗಿ ನೋಟಿಸ್ ನೀಡಿರುತ್ತಾರೆ. ಇದು ಕಾನೂನಿನ ದೃಷ್ಟಿಯಿಂದ ತುಂಬಾ ಒಳ್ಳೆಯದು. ನಂತರ ಸರ್ವೇ ಅಧಿಕಾರಿಗಳು ನಿಮ್ಮ ಜಮೀನ ಸಂಪೂರ್ಣ ಸರ್ವೇ ನಡೆಸಿ ಅದರ ಸಂಪೂರ್ಣ ವಿವರವನ್ನು ಚಿತ್ರ ಸಮೇತ ನಿಮಗೆ ನೀಡುತ್ತಾರೆ.

ನಿಮಗೆ ಅವಶ್ಯಕತೆಯಿದ್ದಲ್ಲಿ ಸರ್ವೇ ಆದ ವಾರದ ನಂತರ ನಾಡ ಕಚೇರಿಗೆ ತೆರಳಿ ನಿಮ್ಮ ಜಮೀನ ನಕ್ಷೆಯನ್ನು ಸಹ ಪಡೆದುಕೊಳ್ಳಬಹುದು.

ಅತಿಕ್ರಮಣ ಮಾಡಿದವರಿಗೆ ಮನವಿ ಮಾಡಿ:

ಸರ್ವೇ ಕಾರ್ಯಗಳು ನಡೆದಾದ ಬಳಿಕ ನಿಮ್ಮ ಜಮೀನನ್ನು (Property) ಅತಿಕ್ರಮಣ ಮಾಡಿಕೊಂಡವರಿಗೆ ತೆರವು ಮಾಡುವಂತೆ ಮನವಿ ಮಾಡಬೇಕು. ಈ ವೇಳೆ ಆತ ಒಪ್ಪದಿದ್ದರೆ ಊರಿನ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ನಡೆಸಬೇಕು.

ಆ ವೇಳೆ ನಿಮ್ಮ ಜಮೀನಿನ ದಾಖಲೆಗಳನ್ನು ಒದಗಿಸಿ ಅವರಿಗೆ ಮನವರಿಕೆ ಮಾಡಿಕೊಡಬೇಕು. ಕೆಲವೊಂದು ರೈತರು ಇಷ್ಟಕ್ಕೆ ಜಮೀನನ್ನು ತೆರವು ಮಾಡುತ್ತಾರೆ. ಇನ್ನು ಕೆಲವರು ತೆರವು ಮಾಡಲು ಒಪ್ಪುವುದಿಲ್ಲ.

ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಳ್ಳಲು ಇಂದೇ ಕೊನೆ! ಹಣ ಬಾರದವರಿಗೆ ಸೂಚನೆ

ಪೊಲೀಸ್ ಠಾಣೆಗೆ ದೂರು ನೀಡಿ:

ಪಂಚಾಯತಿ ನಡೆದ ನಂತರವೂ ತೆರವು ಮಾಡಲು ಒಪ್ಪದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು. ಈ ವೇಳೆಯೂ ಸಹ ಜಮೀನಿನ ದಾಖಲಾತಿಗಳನ್ನು (Property Documents) ಒದಗಿಸಬೇಕು.

ಅಲ್ಲದೆ ನೀವು ದೂರು ನೀಡಿರುವ ಕುರಿತು ರಸೀದಿಯನ್ನು ಪಡೆದುಕೊಳ್ಳಿ. ಇಷ್ಟಾದ ಮೇಲೆ ಬಹುತೇಕರು ಒತ್ತುವರಿ ಮಾಡಿದ ಜಮೀನನ್ನು ಬಿಟ್ಟುಕೊಡುತ್ತಾರೆ. ಅಲ್ಲದೆ ಮತ್ತೊಮ್ಮೆ ಸರ್ವೇ ಮಾಡಲು ಹೇಳುತ್ತಾರೆ. ಅದಕ್ಕೆ ನೀವು ಒಪ್ಪಬೇಕಾಗುತ್ತದೆ. ಹೀಗೆ ಸರಿಯಾದ ರೀತಿಯಲ್ಲಿ ಸರ್ವೇ ಮಾಡಿಸುವ ಮೂಲಕ ನೀವು ನಿಮ್ಮ ಜಮೀನನ್ನು ಪಡೆದುಕೊಳ್ಳಬಹುದು.

Is your Property encroached upon, So do this and get it back

Follow us On

FaceBook Google News

Is your Property encroached upon, So do this and get it back