ಡಿಸೆಂಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್ ರದ್ದಾದವರ ಹೊಸ ಲಿಸ್ಟ್ ಬಿಡುಗಡೆ! ಚೆಕ್ ಮಾಡಿಕೊಳ್ಳಿ

ಪ್ರತಿಯೊಬ್ಬ ವ್ಯಕ್ತಿಯು ತಾನು ವಾಸಿಸುವ ದೇಶಕ್ಕೆ ಸಂಬಂಧಪಟ್ಟಂತೆ ಒಂದಷ್ಟು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ (Aadhaar Card) , ಪಾನ್ ಕಾರ್ಡ್, ಓಟರ್ ಐಡಿ, ಚಾಲನಾ ಪರವಾನಿಗೆ, ಪಾಸ್ಪೋರ್ಟ್ (passport) ಮುಖ್ಯ ದಾಖಲೆಯಾಗಿದೆ.

ಈ ಪಟ್ಟಿಯಲ್ಲಿ ಪಡಿತರ ಚೀಟಿ (ration card) ಸಹ ಸೇರುತ್ತದೆ. ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಪಡಿತರ ಚೀಟಿಯು ಸಹ ಮುಖ್ಯ ದಾಖಲೆಯಾಗಿದೆ. ಆದರೆ ಈಗ ರಾಜ್ಯ ಸರ್ಕಾರವು ಹಲವು ಜನರ ಪಡಿತರ ಚೀಟಿ ರದ್ದು ಮಾಡಲು ಮುಂದಾಗಿದೆ.

ಪಡಿತರ ಚೀಟಿಯ ಆಧಾರದ ಮೇಲೆ ವ್ಯಕ್ತಿಯು ಬಡತನ ರೇಖೆಗಿಂತ ಕೆಳಗಿನವವನೋ (Below poverty line) ಅಲ್ಲವೋ ಎಂದು ತಿಳಿದುಕೊಳ್ಳಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿನವರಿಗೆ ಬಿಪಿಎಲ್ (BPL card) ಪಡಿತರ ಚೀಟಿ ನೀಡಲಾಗಿರುತ್ತದೆ.

ರೈತರಿಗೆ ಬೆಳೆ ಪರಿಹಾರ ಧನ ಬಿಡುಗಡೆ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಬಡತನ ರೇಖೆಗಿಂತ ಮೇಲಿದ್ದವರಿಗೆ ಎಎವೈ (AAY) ಪಡಿತರ ಚೀಟಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರವು (Congress government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ ಪಡಿತರ ಚೀಟಿ ಅವಶ್ಯವಾಗಿದೆ.

ಅದರಲ್ಲೂ ಗೃಹಲಕ್ಷ್ಮಿ (Gruha lakshmi scheme) ಹಾಗೂ ಅನ್ನ ಭಾಗ್ಯ ಯೋಜನೆಯ (Anna Bhagya scheme) ಲಾಭ ಪಡೆಯಲು ಪಡಿತರ ಚೀಟಿ (ration card) ಬೇಕೆ ಬೇಕು.

ಈ ಯೋಜನೆಗಳು ಪಡಿತರ ಚೀಟಿ ಆಧರಿಸಿದ ಯೋಜನೆಗಳಾಗಿವೆ. ಹಾಗಾಗಿಯೇ ಈಗ ಅದರ ಮಹತ್ವ ಅರಿವಾಗಿದೆ.

ಇದೀಗ ಅನೇಕ ಜನರು ತಮ್ಮ ವಾಸ್ತವ ವಿಚಾರ ಮರೆಮಾಚಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿಯೇ ಇಂತಹ ಕಾರ್ಡ್ಗಳನ್ನು ರದ್ದು ಪಡಿಸಲು ಸರ್ಕಾರ ಆದೇಶ ನೀಡಿದೆ.

ಯುವನಿಧಿ ಯೋಜನೆ ಹಣ ಪಡೆಯೋಕೆ ಮೊಬೈಲ್ ನಲ್ಲೇ 5 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ!

BPL Ration Card
ಈಗಾಗಲೇ ಅನರ್ಹ ರೇಶನ್ ಕಾರ್ಡ್ಗಳ ರದ್ದು ಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಈಗಾಗಲೇ ಆಹಾರ ಇಲಾಖೆ ಅಧಿಕಾರಿಗಳು (food department officers) ಪರಿಶೀಲನೆ ನಡೆಸಿ ಸುಮಾರು 4 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸಿದ್ದಾರೆ. 2023ರ ಆರಂಭದಿಂದಲೂ ಆಹಾರ ಇಲಾಖೆ ಈ ಕಾರ್ಯ ಕೈಗೊಂಡಿದೆ.

ಒಂದು ವೇಳೆ ನಿಮ್ಮ ಕಾರ್ಡ್ ಇದೇ ತಿಂಗಳು ರದ್ದಾದಲ್ಲಿ ನಿಮಗೆ ಡಿಸೆಂಬರ್ ತಿಂಗಳ ಗೃಹಲಕ್ಷಿ ಹಣ ಜಮಾ ಆಗುವುದಿಲ್ಲ. ಅಲ್ಲದೆ ಅಕ್ಕಿಯ ಬದಲು ನೀಡುವ ಹಣವೂ ಜಮಾ ಆಗುವುದಿಲ್ಲ. ಹಾಗಾದ್ರೆ ನಿಮ್ಮ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಎಂದು ನೀವು ತಿಳಿದುಕೊಳ್ಳಬಹದು. ಅದಕ್ಕೆ ಹೀಗೆ ಮಾಡಿ.

ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಳ್ಳಲು ಇಂದೇ ಕೊನೆ! ಹಣ ಬಾರದವರಿಗೆ ಸೂಚನೆ

ಪಡಿತರ ಚೀಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check ration card status)

ಮೊದಲು ನೀವು ರಾಜ್ಯ ಸರ್ಕಾರದ ಆಹಾರ ಹಾಗೂ ನಾಗರೀಕ ಪೂರೈಕೆ ಇಲಾಖೆಯ https://ahara.kar.nic.in/Home/EServices ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಲ್ಲಿ ನಿಮಗೆ ಮೂರು ಗೆರೆಗಳು ಕಾಣಿಸುತ್ತವೆ. ಅದರ ಮೇಲೆ ಕ್ಲಿಕ್ ಮಾಡಿ.

ಈಗ ನಿಮಗೆ ರದ್ದು ಮಾಡಲಾದ ಪಡಿತರ ಚೀಟಿ ಹಾಗೂ ತಡೆ ಹಿಡಿಯಲಾದ ಪಡಿತರ ಚೀಟಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿಯನ್ನು ಭರ್ತಿ ಮಾಡಿ. ಈಗ ಯಾವ ಯಾವ ಪಡಿತರ ಚೀಟಿ ರದ್ದಾಗಿದೆ ಎಂದು ನೀವು ನೋಡಬಹುದು. ಅದರಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು.

ಇಂತಹ ರೇಷನ್ ಕಾರ್ಡುಗಳು ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಟೇಟಸ್ ಈ ರೀತಿ ಚೆಕ್ ಮಾಡಿ

New list of ration card canceled, Check the list Here

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories