ಈ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಿಗೋಲ್ಲ ಉಚಿತ ರೇಷನ್! ಹೊಸ ವರ್ಷಕ್ಕೆ ಹೊಸ ರೂಲ್ಸ್

Ration Card : ಪಡಿತರ ಚೀಟಿ ಮಹತ್ವ ಎಷ್ಟಿದೆ ಎಂಬುದು ನಿಮಗೆಲ್ಲಾ ಈಗಾಗಲೇ ತಿಳಿದಿರುತ್ತದೆ. ಯಾಕೆಂದರೆ ರಾಜ್ಯ ಸರ್ಕಾರ ಪಂಚ ಯೋಜನೆ (state government guarantee schemes) ಗಳನ್ನು ಬಿಡುಗಡೆ ಮಾಡಿದ ನಂತರ ಪ್ರತಿಯೊಂದು ಯೋಜನೆಗೂ ಕೂಡ ಜನರು ಅದರ ಲಾಭ ಪಡೆದುಕೊಳ್ಳಲು ಪಡಿತರ ಚೀಟಿ ಹೊಂದಿರುವುದು ಬಹಳ ಅತ್ಯಗತ್ಯವಾಗಿದೆ.
ಅದರಲ್ಲೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣವನ್ನು ನಿಮ್ಮ ಖಾತೆಗೆ (Bnak Account) ವರ್ಗಾವಣೆ ಮಾಡಿಸಿಕೊಳ್ಳಬೇಕಿದ್ದರೆ ರೇಷನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ.
ಗೃಹಲಕ್ಷ್ಮಿ ಹಣ ಪಡೆಯೋಕೆ ಇ-ಕೆವೈಸಿ ಕಡ್ಡಾಯ; ಹಾಗಾದ್ರೆ ಮಾಡಿಸೋದು ಹೇಗೆ ಗೊತ್ತಾ?
ರೇಷನ್ ಕಾರ್ಡ್ ನಲ್ಲಿ ಬಿಪಿಎಲ್ ಕಾರ್ಡ್ (BPL card) ಹಾಗೂ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರಿಗೆ ಉಚಿತ ರೇಶನ್ ಹಾಗೂ ಸರ್ಕಾರದ ಉಚಿತ ಯೋಜನೆಗಳ ಪ್ರಯೋಜನ ಸಿಗುತ್ತದೆ.
ಅದೇ ರೀತಿ ಎಪಿಎಲ್ ಕಾರ್ಡ್ ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ವಿತರಣೆ ಮಾಡಲಾಗುವುದು. ಒಂದು ಗುರುತಿನ ಚೀಟಿಯಂತೆ ಎಪಿಎಲ್ ಕಾರ್ಡ್ (APL Card) ಬಳಕೆ ಮಾಡಬಹುದು. ಸರ್ಕಾರದ ಹೊಸ ನಿಯಮದ ಪ್ರಕಾರ, ಬಿಪಿಎಲ್ ಕಾರ್ಡ್ ಹೊಂದಿರುವ ಸಾಕಷ್ಟು ಕುಟುಂಬಗಳು ಇನ್ನು ಮುಂದೆ ಉಚಿತ ಸರ್ಕಾರದ ಯೋಜನೆಯ ಪ್ರಯೋಜನವಾಗಲಿ ಅಥವಾ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣವನ್ನಾಗಲಿ ಪಡೆದುಕೊಳ್ಳಲು ಸಾಧ್ಯವಿಲ್ಲ.
ಇಂತಹವರಿಗೆ ಡಿಸೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಸಿಗೋದಿಲ್ಲ?
ನಾಲ್ಕು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ರದ್ದು! (BPL card cancellation)

ಸರ್ಕಾರಕ್ಕೆ ಮೇಲಿಂದ ಮೇಲೆ ಬಿಪಿಎಲ್ ಹೊಸ ಕಾರ್ಡ್ ವಿತರಣೆಗೆ ಒತ್ತಡ ಹೇರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಕ್ರಮವಾಗಿ ಯಾರು ಹೊಂದಿರುತ್ತಾರೋ ಅಂತವರನ್ನು ಗುರುತಿಸಿ ಅವರ ಕಾರ್ಡ್ ರದ್ದುಪಡಿಗೆ ಸರ್ಕಾರ ಮುಂದಾಗಿದೆ. ಆಹಾರ ಇಲಾಖೆಯ ಮಾಹಿತಿಯ ಪ್ರಕಾರ ಈಗಾಗಲೇ ಸುಮಾರು ನಾಲ್ಕು ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್ ರದ್ದಾದವರ ಹೊಸ ಲಿಸ್ಟ್ ಬಿಡುಗಡೆ! ಚೆಕ್ ಮಾಡಿಕೊಳ್ಳಿ
ಈ ತಿಂಗಳಿಂದ ಅಂದರೆ, ಹೊಸ ವರ್ಷ ಜನವರಿ ಮೊದಲನೇ ವಾರದಿಂದ ವಿತರಣೆ ಆಗುವ ಪಡಿತರ ವಸ್ತುಗಳು ನಿಮಗೆ ಸಿಕ್ಕಿಲ್ಲ (Money Deposit) ಅಥವಾ ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಮುಂದಿನ ಕಂತು ನಿಮ್ಮ ಖಾತೆಗೆ (Bank Account) ಜಮಾ ಆಗಿಲ್ಲ ಎಂದಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ಅರ್ಥ.
ರೇಷನ್ ಕಾರ್ಡ್ ರದ್ದು ಪಡಿ ಆಗಿರುವ ಬಗ್ಗೆ ಸರ್ಕಾರದ ಅಧಿಕೃತ ವೆಬ್ಸೈಟ್ (official website) ನಲ್ಲಿ ಮಾಹಿತಿ ನೀಡಲಾಗಿದೆ. ನಿಮ್ಮ ಪಡಿತರ ಚೀಟಿ ರದ್ದಾಗಿದೆಯೋ ಇಲ್ಲವೋ ಎಂಬುದನ್ನು ನೀವು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಹೇಗೆ ಎಂಬುದನ್ನು ನೋಡೋಣ.

ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ.
ಈ ಸರ್ವಿಸ್ (E- service ) ವಿಭಾಗದಲ್ಲಿ ಮೇಲ್ಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ. ಅದರ ಮೇಲೆ ನೀವು ಕ್ಲಿಕ್ ಮಾಡಿದರೆ ಎಡಭಾಗದಲ್ಲಿ ಈ ಸ್ಥಿತಿ ಎಂಬುದನ್ನು ಕಾಣಬಹುದು.
ನಂತರ ಅಲ್ಲಿ ರದ್ದುಪಡಿಸಲಾದ ಅಥವಾ ತಡೆಹಿಡಿಯಲಾದ ಪಡಿತರ ಚೀಟಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಮುಂದಿನ ಹಂತದಲ್ಲಿ ಹೊಸ ಫೋಟೋ ತೆಗೆದುಕೊಂಡಾಗ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಬೇಕು.
ಈಗ ರದ್ದಾಗಿರುವ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತದೆ. ಇದರಲ್ಲಿ ಪಡಿತರ ಕಾರ್ಡ್ ಹೊಂದಿದ್ದ ಕುಟುಂಬದ ಯಜಮಾನನ ಹೆಸರು ಹಾಗೂ ರದ್ದಾಗಿರುವುದಕ್ಕೆ ಕಾರಣವನ್ನು ಕೂಡ ನೀಡಲಾಗಿರುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಇನ್ನು ಮುಂದೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
This BPL card Families will not get free ration, New rules for a new year



