ಗೃಹಲಕ್ಷ್ಮಿಯರಿಗೆ ಸಿಗಲಿದೆ ₹90,000! ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ
ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ರಾಜ್ಯದಲ್ಲಿ ಮಹಿಳಾ ಸಬಲೀಕರಣ (women empowerment) ಕ್ಕೆ ತುಸು ಹೆಚ್ಚು ಗಮನವನ್ನು ನೀಡಲಾಗುತ್ತಿದೆ ಎನ್ನಬಹುದು.
ಸರ್ಕಾರದ ಬಹುತೇಕ ಎಲ್ಲಾ ಗ್ಯಾರಂಟಿ ಯೋಜನೆಗಳು (guarantee schemes) ಕೂಡ ಮಹಿಳೆಯರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತಿದೆ. ಇದರ ಜೊತೆಗೆ ಬೇರೆ ಬೇರೆ ಯೋಜನೆಗಳ ಮೂಲಕ ಸರ್ಕಾರ ಲಿಂಗ ಸಮಾನತೆ ಕಾಯ್ದುಕೊಳ್ಳುವುದು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹಿಸುತ್ತಿದೆ.
ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಸಿಗುತ್ತೆ 5 ಲಕ್ಷ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಬೆನಿಫಿಟ್!
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಮಹಿಳೆಯರೇ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಪಡಿತರ ಚೀಟಿ (Ration card) ಹೊಂದಿರುವ ಮಹಿಳೆಯರಿಗೆ ಮನೆಯ ಖರ್ಚು ನಿಭಾಯಿಸುವುದಕ್ಕಾಗಿ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಡಿಯಲ್ಲಿ ರೂ. 2000 ಗಳನ್ನು ಉಚಿತವಾಗಿ ಸರ್ಕಾರ ನೀಡುತ್ತಿದೆ.
ಇದೀಗ ಈ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಅಡಿಯಲ್ಲಿ 90 ಸಾವಿರ ರೂಪಾಯಿಗಳನ್ನು ಮಹಿಳೆಯರು ಪಡೆದುಕೊಳ್ಳಬಹುದು.
ಸರ್ಕಾರದಿಂದ ಉದ್ಯೋಗಿನಿ ಯೋಜನೆ (Udyogini scheme)
ಮಹಿಳೆಯರಿಗೆ ವಿಶೇಷವಾಗಿ ಉದ್ಯೋಗಿನಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಮಹಿಳೆಯರು ತಾವು ಸ್ವಂತ ಉದ್ಯಮ (own business) ಮಾಡಿ ಹಣ ಸಂಪಾದನೆ ಮಾಡಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ.
ಟೈಲರಿಂಗ್, ಪಾರ್ಲರ್, ಹೋಂ ಮೇಡ್ ಫುಡ್, ಪ್ರಿಂಟಿಂಗ್ ಶಾಪ್, ಅಗರಬತ್ತಿ ತಯಾರಿಕೆ ಮೊದಲಾದ ಗುಡಿ ಕೈಗಾರಿಕೆಗಳು ಮೊದಲಾದ ಉದ್ಯಮಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸರ್ಕಾರ ಧನ ಸಹಾಯ ನೀಡಲಿದೆ.
ಗೃಹಲಕ್ಷ್ಮಿ ಹೊಸ ಅಪ್ಡೇಟ್! ಈ ಪಟ್ಟಿಯಲ್ಲಿ ಹೆಸರು ಇದ್ರೆ ಮಾತ್ರ ಮುಂದಿನ ಕಂತಿನ ಹಣ
ಇಂಥವರು ಅರ್ಜಿ ಸಲ್ಲಿಸಿ! (Apply soon)
*ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
* ಕರ್ನಾಟಕದ ನಿವಾಸಿ ಆಗಿರಬೇಕು
*18ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
*ರಾಜ್ಯದ ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯರು ಅರ್ಜಿ ಸಲ್ಲಿಸಬಹುದು
*ಕುಟುಂಬದವಾರ್ಷಿಕ ಆದಾಯ 1.5 ಲಕ್ಷ ಮೀರಬಾರದು
*ಸ್ವಂತ ಉದ್ಯಮ ಮಾಡುತ್ತಿರುವುದರ ಬಗ್ಗೆ ದಾಖಲೆ ಒದಗಿಸಬೇಕು
*ಬ್ಯಾಂಕ್ ನ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿದ್ರೆ ಹೆಚ್ಚಿನ ಪ್ರಯೋಜನ ಸಿಗಲಿದೆ.
*ಅರ್ಜಿ ಸಲ್ಲಿಸುವ ಮಹಿಳೆ ಈ ಹಿಂದೆ ಸಾಲ ತೆಗೆದುಕೊಂಡು, ತೀರಿಸದೆ ಲೋನ್ ಡೀಫಾಲ್ಟರ್ ಆಗಿರಬಾರದು.
ಈ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಿಗೋಲ್ಲ ಉಚಿತ ರೇಷನ್! ಹೊಸ ವರ್ಷಕ್ಕೆ ಹೊಸ ರೂಲ್ಸ್
ಉದ್ಯೋಗಿನಿ ಯೋಜನೆಯ ಸಹಾಯಧನದ ಮೊತ್ತ (subsidy amount)
ಮೂರು ಲಕ್ಷ ರೂಪಾಯಿಗಳವರೆಗೆ ಸರ್ಕಾರ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸ್ವಂತ ಉದ್ಯಮ ಮಾಡಿಕೊಳ್ಳಲು ಸಹಾಯಧನ ನೀಡುತ್ತಿದೆ. ಸಾಮಾನ್ಯ ಮಹಿಳೆಯರಿಗೆ 90 ಸಾವಿರ ರೂಪಾಯಿಗಳವರೆಗೆ ಸಬ್ಸಿಡಿ ಸಿಗುತ್ತದೆ ಹಾಗೂ ಉಳಿದ ಹಣವನ್ನು ನಿಗದಿತ ಸಮಯದ ಒಳಗೆ ಇಎಂಐ ಮೂಲಕ ಪಾವತಿ ಮಾಡಬಹುದು.
ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 1.50 ಲಕ್ಷಗಳ ವರೆಗೆ ಸಬ್ಸಿಡಿ ಸಿಗುತ್ತದೆ. ಬೇಗ ಸಾಲ (Loan) ಹಿಂತಿರುಗಿಸಿದರೆ ಅಂತಹ ಮಹಿಳೆಯರು 5 ಲಕ್ಷ ರೂಪಾಯಿಗಳವರೆಗೂ ಸಾಲ (Loan) ಪಡೆಯಬಹುದು.
ಉದ್ಯೋಗಿನಿ ಸಹಾಯಧನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು (documents to apply)
*ಮಾಡಲು ಬಯಸುವ ಉದ್ಯೋಗದ ಬಗ್ಗೆ ವಿವರ
*ಆಧಾರ್ ಕಾರ್ಡ್
*ಆದಾಯ ಪ್ರಮಾಣ ಪತ್ರ
*ಜಾತಿ ಪ್ರಮಾಣ ಪತ್ರ
*ವಿಳಾಸದ ಪುರಾವೆ (ವಿದ್ಯುತ್ ಬಿಲ್, ಮನೆ ಕರ ರಶೀದಿ, ಗ್ಯಾಸ್ ಬಿಲ್ ಇವುಗಳಲ್ಲಿ ಯಾವುದನ್ನಾದರೂ ಒಂದನ್ನು ಒದಗಿಸಬಹುದು)
*ರೇಷನ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ
ಗೃಹಲಕ್ಷ್ಮಿ ಹಣ ಪಡೆಯೋಕೆ ಇ-ಕೆವೈಸಿ ಕಡ್ಡಾಯ; ಹಾಗಾದ್ರೆ ಮಾಡಿಸೋದು ಹೇಗೆ ಗೊತ್ತಾ?
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ (How to apply for udyogini scheme)
ಬೇರೆ ಬೇರೆ ಬ್ಯಾಂಕ್ ಗಳು (Banks) ಉದ್ಯೋಗಿನಿ ಯೋಜನೆಗೆ ಸಾಲ ಸೌಲಭ್ಯ (Loan) ನೀಡುತ್ತದೆ. ಹಾಗಾಗಿ ನೀವು ಹತ್ತಿರದ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿ ಪಡೆಯಬಹುದು. ಅಥವಾ ಆನ್ಲೈನ್ ನಲ್ಲಿ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
Another new scheme for women, Get the Benefit