ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಸಿಗುತ್ತೆ 5 ಲಕ್ಷ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಬೆನಿಫಿಟ್!

ಹೊಸ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಜನರು ಕಾದು ಕುಳಿತಿದ್ದಾರೆ. ಈಗಾಗಲೇ ಒಂದಷ್ಟು ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿದೆ.

ರಾಜ್ಯದಲ್ಲಿ ಸರ್ಕಾರದ (state government) ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪಡಿತರ ಚೀಟಿ (ration card) ಅಥವಾ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ.

ಇದೆ ಕಾರಣಕ್ಕೆ ಹೊಸ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ (antyodaya card) ಪಡೆದುಕೊಳ್ಳಲು ಜನರು ಕಾದು ಕುಳಿತಿದ್ದಾರೆ. ಈಗಾಗಲೇ ಸಲ್ಲಿಕೆ ಆಗಿರುವ ಸುಮಾರು ನಾಲ್ಕು ಲಕ್ಷ ಅರ್ಜಿಗಳಲ್ಲಿ ಒಂದಷ್ಟು ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿದೆ. ಇನ್ನು ಉಳಿದ ಮೂರು ಲಕ್ಷದಷ್ಟು ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ವಿತರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ.

ನಿಮ್ಮ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿ! 90% ವರೆಗೆ ಸಬ್ಸಿಡಿ

ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಸಿಗುತ್ತೆ 5 ಲಕ್ಷ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಬೆನಿಫಿಟ್! - Kannada News

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತೆ ಪ್ರಯೋಜನ!

ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ (below poverty line) ಗಳಿಗೆ ಅವರ ಹಸಿವನ್ನು ನೀಗಿಸುವ ಸಲುವಾಗಿ ಉಚಿತವಾಗಿ ಪಡಿತರ ವಸ್ತುಗಳನ್ನು ನೀಡಲು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ವಿತರಣೆಯನ್ನು ಆರಂಭಿಸಿತು.

ಇದರ ಜೊತೆಗೆ ಬಡತನ ರೇಖೆಗಿಂತ ಮೇಲಿರುವ ಜನರು ಎಪಿಎಲ್ ಕಾರ್ಡ್ (APL card) ಪಡೆದುಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಈ ಕಾರ್ಡ್ ಇದ್ರೆ ಉಚಿತ ರೇಷನ್ ಪಡೆಯಲು ಸಾಧ್ಯವಾಗದೆ ಇದ್ದರೂ ಸರ್ಕಾರದ ಇತರ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ರೇಷನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು! (Eligibility to get ration card)

*ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು ಮಾತ್ರ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರು.
*ಕುಟುಂಬದ ವಾರ್ಷಿಕ ಆದಾಯ 20,000ಗಳನ್ನು ಮೀರಬಾರದು.
*18 ವರ್ಷ ಮೇಲ್ಪಟ್ಟವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
*ಒಂದು ಕುಟುಂಬಕ್ಕೆ ಒಂದು ಬಿಪಿಎಲ್ ಕಾರ್ಡ್.
*ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿ ಇರಬಾರದು.
*ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಹಿಸುವ ಕುಟುಂಬದ ಯಾವುದೇ ಸದಸ್ಯ ತೆರಿಗೆ ಪಾವತಿ ಮಾಡುವವರಾಗಿರಬಾರದು.
*ನಾಲ್ಕು ಚಕ್ರದ ವೈಟ್ ಬೋರ್ಡ್ ವಾಹನ ಹೊಂದಿರಬಾರದು
ಸರ್ಕಾರದ ಈ ಕೆಲವು ಮುಖ್ಯ ಮಾನದಂಡಗಳನ್ನು ಪರಿಗಣಿಸಿ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಹೊಸ ಅಪ್ಡೇಟ್! ಈ ಪಟ್ಟಿಯಲ್ಲಿ ಹೆಸರು ಇದ್ರೆ ಮಾತ್ರ ಮುಂದಿನ ಕಂತಿನ ಹಣ

ಬೇಕಾಗಿರುವ ದಾಖಲೆಗಳು (Needed documents to get BPL ration card)

BPL Ration Cardಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ವಿಳಾಸದ ಪುರಾವೆ
ಅರ್ಜಿದಾರರ ಲೇಬರ್ ಕಾರ್ಡ್ (ಇದ್ದರೆ)
ಕುಟುಂಬದ ಗ್ರೂಪ್ ಫೋಟೋ

ಇಷ್ಟು ವಿವರಗಳನ್ನು ಹೊಂದಿರುವವರು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ಬಿಪಿಎಲ್ ಕಾರ್ಡ್ ಇದ್ರೆ ಹಲವು ಯೋಜನೆಗಳು ಉಚಿತ! (Free government schemes for BPL card holders)

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಕಿಸಾನ್ ಯೋಜನೆ ಯಂತಹ ಕೆಲವು ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಬಹಳ ಮುಖ್ಯ.

ಈ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಿಗೋಲ್ಲ ಉಚಿತ ರೇಷನ್! ಹೊಸ ವರ್ಷಕ್ಕೆ ಹೊಸ ರೂಲ್ಸ್

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಉಚಿತವಾಗಿ ಮನೆ ಕಟ್ಟಿಸಿ ಕೊಡುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas Yojana) ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು.

ಆರೋಗ್ಯ ವಿಮೆ, ಅಪಘಾತ ವಿಮೆ, ಪಿಂಚಣಿ ಸೌಲಭ್ಯ, ವೃದ್ಧಾಪ್ಯ ಮತ್ತು ವಿಧವಾ ವೇತನಗಳು ಅಷ್ಟೇ ಅಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಸೌಲಭ್ಯವು ಕೂಡ ಸಿಗುತ್ತದೆ. ಹಾಗಾಗಿ ಒಮ್ಮೆ ಬಿಪಿಎಲ್ ಕಾರ್ಡ್ ಪಡೆದುಕೊಂಡರೆ ಅಂತಹ ಕುಟುಂಬಗಳು ಸರ್ಕಾರದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? (You apply for new BPL card)

ಸರಿಯಾದ ದಾಖಲೆಗಳನ್ನು ಹೊಂದಿದ್ದರೆ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಹತ್ತಿರದ ಆಹಾರ ಇಲಾಖೆ (food department) ಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ರೈತರಿಗೆ ಸರ್ಕಾರದ ಕೃಷಿ ಭಾಗ್ಯ, ಸಿಗಲಿದೆ 90% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ

ಸ್ಥಳೀಯ ಪ್ರಾಧಿಕಾರ ಈ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಒದಗಿಸುತ್ತದೆ. ಆದರೆ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಬಿಪಿಎಲ್ ಕಾರ್ಡ್ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಸದ್ಯ ಸುಮಾರು 20 ಸಾವಿರ ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಿದ ನಂತರವಷ್ಟೇ ಹೊಸ ರೇಷನ್ ಕಾರ್ಡ್ ಅರ್ಜಿ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಈಗಾಗಲೇ ತಿಳಿಸಿದೆ.

BPL card family gets 5 lakhs and free education for children

Follow us On

FaceBook Google News

BPL card family gets 5 lakhs and free education for children