ನಿಮ್ಮ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿ! 90% ವರೆಗೆ ಸಬ್ಸಿಡಿ

Story Highlights

ರೈತರ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಕೊಡಲು ಸರ್ಕಾರದ ಹೊಸ ಯೋಜನೆ; ಸಿಗಲಿದೆ 90% ವರೆಗೆ ಸಬ್ಸಿಡಿ

ರಾಜ್ಯ ಬಜೆಟ್ (government budget 2023) ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷವಾದ ಅನುದಾನ ಮೀಸಲಿಟ್ಟಿರುವ ರಾಜ್ಯ ಸರ್ಕಾರ, ಇದೀಗ ಮಳೆಯಾಶ್ರಿತ ರೈತರ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಕೃಷಿ ಭಾಗ್ಯ (krushi Bhagya scheme) ಯೋಜನೆಯನ್ನು ಜಾರಿಗೆ ತಂದಿದೆ.

ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ರೈತರಿಗೆ ಆರು ಪ್ರಮುಖ ಘಟಕಗಳ ಮೂಲಕ ಜಮೀನಿಗೆ ನೀರಾವರಿ ಸೌಲಭ್ಯ (irrigation facility) ಒದಗಿಸಲು ಸರ್ಕಾರ ನಿರ್ಧರಿಸಿದೆ. ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಈ 6 ಪ್ರಮುಖ ಸೌಲಭ್ಯಗಳನ್ನು ರೈತರಿಗೆ ಕಲ್ಪಿಸಿಕೊಡಲಾಗುವುದು.

ಗೃಹಲಕ್ಷ್ಮಿ ಹೊಸ ಅಪ್ಡೇಟ್! ಈ ಪಟ್ಟಿಯಲ್ಲಿ ಹೆಸರು ಇದ್ರೆ ಮಾತ್ರ ಮುಂದಿನ ಕಂತಿನ ಹಣ

*ಕ್ಷೇತ್ರ ಬದು ನಿರ್ಮಾಣ
*ಕೃಷಿ ಹೊಂಡ ನಿರ್ಮಾಣ
*ನೀರು ಇಂಗದಂತೆ ಕೃಷಿ ಹೊಂಡಕ್ಕೆ ಪಾಲಿಥಿನ್ ಹೂಡಿಕೆ
*ಕೃಷಿ ಹೊಂಡಕ್ಕೆ ತಂತಿ ಬೇಲಿ ನಿರ್ಮಾಣ
*ಕೃಷಿ ಹೊಂಡ ದಿಂದ ನೀರೆತ್ತಲು ಡೀಸೆಲ್ ಅಥವಾ ಸೋಲಾರ್ ಪಂಪ್ ಸೆಟ್ ವಿತರಣೆ
*ಹನಿ ನೀರಾವರಿ ಅಥವಾ ತುಂತುರು ನೀರಾವರಿ ಘಟಕ ಸ್ಥಾಪನೆ

ಈ ಪ್ರಮುಖ ಆರು ಘಟಕಗಳನ್ನು ಸ್ಥಾಪನೆ ಮಾಡಲು ರೈತರಿಗೆ ಸಬ್ಸಿಡಿ (subsidy for unit) ನೀಡಲು ಸರ್ಕಾರ ನಿರ್ಧರಿಸಿದ್ದು, ರಾಜ್ಯದ 24 ಜಿಲ್ಲೆಗಳ 106 ಪ್ರದೇಶಗಳ ರೈತರಿಗೆ 200 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ.

ಈ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಿಗೋಲ್ಲ ಉಚಿತ ರೇಷನ್! ಹೊಸ ವರ್ಷಕ್ಕೆ ಹೊಸ ರೂಲ್ಸ್

ಪ್ಯಾಕೇಜ್ ಮಾದರಿಯ ಕೃಷಿ ಭಾಗ್ಯ ಯೋಜನೆ!

ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಆರು ಪ್ರಮುಖ ಘಟಕಗಳ ಸ್ಥಾಪನೆಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ ಪ್ಯಾಕೇಜ್ ಮಾದರಿಯಲ್ಲಿ ರೈತರಿಗೆ ಇದರ ಪ್ರಯೋಜನ ನೀಡಲು ಸರ್ಕಾರ ಅರ್ಜಿ ಆಹ್ವಾನಿಸಿದೆ.

ರಾಜ್ಯ ಸರ್ಕಾರ ಕೃಷಿ ಅಧಿಕಾರಿಗಳಿಗೆ (agriculture officers) ಈ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸೂಚಿಸಿದ್ದು, ರೈತರು ತಮ್ಮ ಜಮೀನುಗಳಿಗೆ (Agriculture Land) ಕೃಷಿ ಭಾಗ್ಯ ಯೋಜನೆಯ ಘಟಕಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕೃಷಿಯನ್ನು ಇನ್ನಷ್ಟು ಉತ್ತಮವಾಗಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

Krushi Bhagyaಎಷ್ಟು ಸಿಗಲಿದೆ ಸಹಾಯಧನ!

*ಕೃಷಿ ಹೊಂಡ ಸ್ಥಾಪನೆಗೆ, ಕ್ಷೇತ್ರ ಬದು ನಿರ್ಮಾಣಕ್ಕೆ, ಕೃಷಿ ಹೊಂಡಕ್ಕೆ ಮುಚ್ಚಲಾಗುವ ಪಾಲಿಥಿನ್ ಹೊದಿಕೆಗೆ (50 ಸಾವಿರ ರೂಪಾಯಿ ಘಟಕ ವೆಚ್ಚ) ಸಾಮಾನ್ಯ ರೈತರಿಗೆ ಶೇಕಡ 80% ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ (SC/ST) ರೈತರಿಗೆ ಶೇಕಡ 90% ನಷ್ಟು ಸಬ್ಸಿಡಿ ನೀಡಲಾಗುವುದು.

*ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ ಶೇಕಡ 40% ಹಾಗೂ ಪರಿಶಿಷ್ಟ ಜಾತಿ ಅಥವಾ ಪಂಗಡದ ರೈತರಿಗೆ ಶೇಕಡ 50% ನಷ್ಟು ಸಬ್ಸಿಡಿ ಸಿಗುತ್ತದೆ.

ರೈತರಿಗೆ ಸರ್ಕಾರದ ಕೃಷಿ ಭಾಗ್ಯ, ಸಿಗಲಿದೆ 90% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ

*ಕೃಷಿ ಹೊಂಡದಿಂದ ನೀರೆತ್ತಲು ಬೇಕಾಗಿರುವ 10HP ವರೆಗಿನ ಪಂಪ್ಸೆಟ್ (pump set) ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ ಶೇಕಡ 50% ಹಾಗೂ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಶೇಕಡ 90% ವರೆಗೆ ಸಬ್ಸಿಡಿ ಸಿಗುತ್ತದೆ.

*ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಅಳವಡಿಸಿಕೊಳ್ಳಲು ಎಲ್ಲ ರೈತರಿಗೂ 90% ವರೆಗೆ ಸಬ್ಸಿಡಿ ಸಿಗುತ್ತದೆ.

ಕೃಷಿ ಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೈತರು ಒಂದೇ ಸರ್ವೇ ನಂಬರ್ (survey number) ನಲ್ಲಿ ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕು. ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಪಡೆದ ರೈತರು ಅರ್ಜಿ ಸಲ್ಲಿಸುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಕೇಂದ್ರಗಳನ್ನು ಸಂಪರ್ಕಿಸಿ.

Apply to get irrigation facility for your agricultural land, Subsidy up to 90 Percent

Related Stories