ರೇಷನ್‌ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸಲು ಅವಕಾಶ! ಇಲ್ಲಿದೆ ಸುಲಭ ವಿಧಾನ

Story Highlights

ಮನೆಯ ಹೊಸ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಲು ಕೇವಲ ಎರಡು ನಿಮಿಷ ಸಾಕು, ಇಲ್ಲಿದೆ ಮಾಹಿತಿ

ಪಡಿತರ ಚೀಟಿ (ration card) ಇಂದು ಪ್ರತಿಯೊಬ್ಬ ನಾಗರಿಕನಿಗೂ ಕೂಡ ಬಹಳ ಮುಖ್ಯವಾಗಿರುವ ಗುರುತಿನ ದಾಖಲೆಯಾಗಿದೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿನವರು (below poverty line family) ರೇಷನ್ ಕಾರ್ಡ್ ಬಳಸಿಕೊಂಡು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದು ಮಾತ್ರವಲ್ಲದೆ, ಉಚಿತವಾಗಿ ಪಡಿತರ ವಸ್ತುಗಳನ್ನು ಕೂಡ ಪಡೆಯಬಹುದು.

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ (state government) ಹೊರಡಿಸಿರುವ ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ (BPL card) ಹೊಂದಿರುವುದು ಎಷ್ಟು ಮುಖ್ಯ ಎನ್ನುವುದು ನಿಮಗೆಲ್ಲ ಗೊತ್ತಿದೆ.

ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ ಎಲೆಕ್ಟ್ರಿಸಿಟಿ ಬಿಲ್ ಮತ್ತೆ ಹೆಚ್ಚಾಗುವ ಸಾಧ್ಯತೆ

ಇದೇ ಕಾರಣಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದವರು ಕೂಡ ತಮಗೆ ಯಾವಾಗ ಹೊಸ ಕಾರ್ಡ್ ಸಂದಾಯ ಮಾಡುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಒಂದು ಕುಟುಂಬಕ್ಕೆ ಒಂದು ಪಡಿತರ ಚೀಟಿಯನ್ನು ಮಾತ್ರ ವಿತರಣೆ ಮಾಡುವುದರಿಂದ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಬೇಕಾಗುತ್ತದೆ.

ಅನ್ನಭಾಗ್ಯ ಯೋಜನೆ (Annabhagya Yojana) ಯ ಉಚಿತ ಪಡಿತರ ಹಾಗೂ ಅಕ್ಕಿ ಬದಲು ನೀಡುವ ಹಣವನ್ನು ಪಡೆದುಕೊಳ್ಳಲು ನೀವು ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್ ನಲ್ಲಿ ನಮೂದಿಸಿದರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.

ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ? (How to add new members name in Ration card)

ಈಗ ಮೊದಲಿನಂತೆ ಕಚೇರಿಗಳಿಗೆ ಅಲೆದಾಡಿ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸುವ ಅಥವಾ ರೇಷನ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಆನ್ಲೈನ್ (online) ನಲ್ಲಿ ಮನೆಯಲ್ಲಿಯೇ ಕುಳಿತು ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರುಗಳ ಸೇರ್ಪಡೆ ಮಾಡಿಕೊಳ್ಳಬಹುದು.

ಕೃಷಿ ಭೂಮಿ ಇಲ್ಲದ ರೈತರು ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳೋ ಅವಕಾಶ! ಅರ್ಜಿ ಸಲ್ಲಿಸಿ

ಹೊಸ ಹೆಸರು ಸೇರ್ಪಡೆಗೆ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ! (Aadhaar Card update)

Aadhaar Card
ನಿಮ್ಮ ಮನೆಗೆ ಮದುವೆಯಾಗಿ ಸೊಸೆ ಬಂದಿದ್ದಾಳೆ ಎಂದು ಭಾವಿಸಿ. ಆಕೆಯ ಹೆಸರನ್ನು ನಿಮ್ಮ ಮನೆಯ ರೇಷನ್ ಕಾರ್ಡ್ ನಲ್ಲಿ ಸೇರಿಸಬೇಕು. ಅಂತಹ ಸಂದರ್ಭದಲ್ಲಿ ಆಕೆಯ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಬೇಕಾಗುತ್ತದೆ.

ಆಕೆಯ ತಂದೆಯ ಹೆಸರಿನ ಬದಲು ಗಂಡನ ಹೆಸರನ್ನು ಹಾಗೂ ವಿಳಾಸವನ್ನು ಹಾಕಿ ಅಪ್ಡೇಟ್ ಮಾಡಿಕೊಂಡರೆ ಆಗ ಗಂಡನ ಮನೆಯ ರೇಷನ್ ಕಾರ್ಡ್ ನಲ್ಲಿ ಆಕೆ ಸ್ಥಾನ ಪಡೆದುಕೊಳ್ಳುತ್ತಾಳೆ.

ಇನ್ನು ಮನೆಯಲ್ಲಿ ಮಗುವಿನ ಜನನವಾದರೆ (new born baby) ಆ ಮಗುವಿನ ಹೆಸರು ಸೇರಿಸಲು ಕೂಡ ಆಧಾರ್ ಕಾರ್ಡ್ ಮಾಡಿಸುವುದು ಉತ್ತಮ.

ಕೃಷಿ ಮಾಡೋ ಇಂತಹ ರೈತರಿಗೆ ಸಿಗಲಿದೆ 5 ಲಕ್ಷ ಧನ ಸಹಾಯ! ಈ ರೀತಿ ಅರ್ಜಿ ಸಲ್ಲಿಸಿ

ಆನ್ಲೈನ್ ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ? (How to add new members name in Ration card through online)

* https://ahara.kar.nic.in/Home/EServices ಆಹಾರ ಇಲಾಖೆಯ ಈ ವೆಬ್ಸೈಟ್ಗೆ ಹೋಗಿ ಎಡ ಭಾಗದಲ್ಲಿ ಕಾಣಿಸುವ ಮೂರು ಗೆರೆಗಳನ್ನು ಕ್ಲಿಕ್ ಮಾಡಿ.

*ನಂತರ ಈ ಸ್ಟೇಟಸ್ ಅಥವಾ ಈ ಸ್ಥಿತಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿದ್ರೆ ಅಮೆಂಡ್ಮೆಂಟ್ ರಿಕ್ವೆಸ್ಟ್ ಸ್ಟೇಟಸ್ (amendment request status) ಮೇಲೆ ಕ್ಲಿಕ್ ಮಾಡಿ.

*ಈಗ ನಿಮಗೆ ಬೇರೆ ಬೇರೆ ಜಿಲ್ಲೆಗಳನ್ನು ತೋರಿಸುವ ಮೂರು ಲಿಂಕ್ಗಳು ಕಾಣುತ್ತವೆ, ಆ ಲಿಂಕ್ ಗಳ ಕೆಳಗೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಂಡು ಲಿಂಕ್ ಮೇಲೆ ಕ್ಲಿಕ್ ಮಾಡಿ.

*ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.

ಇದರಲ್ಲಿ ನೀವು ಸೇರಿಸಬೇಕು ಎಂದುಕೊಂಡಿರುವ ಹೊಸ ಸದಸ್ಯರ ಹೆಸರನ್ನು ಸೇರಿಸಲು ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ.

ಉಚಿತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು! ಈ ದಾಖಲೆಗಳು ಇದ್ದವರು ಅರ್ಜಿ ಸಲ್ಲಿಸಿ

*ಯಾವ ಸದಸ್ಯರ ಹೆಸರನ್ನು ಸೇರಿಸಲು ಹೊರಟಿದ್ದೀರೋ ಅವರೊಂದಿಗೆ ನಿಮ್ಮ ಸಂಬಂಧ ಏನು ಎಂಬುದನ್ನು ನಮೂದಿಸಬೇಕು.

*ಬಳಿಕ ಹೊಸ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಅರ್ಜಿ ಸಲ್ಲಿಸಬಹುದು.

*ತಿದ್ದುಪಡಿಗೆ ಅರ್ಜಿ ಸಲ್ಲಿಸಿದ ನಂತರ ನಿಮಗೆ ಒಂದು ಸ್ವೀಕೃತಿ ಸಂಖ್ಯೆಯನ್ನು ಕೊಡಲಾಗುತ್ತದೆ.

*ಈ ಸಂಖ್ಯೆಯನ್ನು ನೀವು ಹಾಗೆ ಇಟ್ಟುಕೊಂಡರೆ ನಂತರ ತಿದ್ದುಪಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಹೊಸ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರುಗಳನ್ನು ಆಹಾರ ಇಲಾಖೆಯಿಂದ ಸೇರಿಸಲಾಗುತ್ತದೆ.

Opportunity to add new members in ration card, Easy Process

Related Stories