ಕೃಷಿ ಮಾಡೋ ಇಂತಹ ರೈತರಿಗೆ ಸಿಗಲಿದೆ 5 ಲಕ್ಷ ಧನ ಸಹಾಯ! ಈ ರೀತಿ ಅರ್ಜಿ ಸಲ್ಲಿಸಿ

ಕೃಷಿ ಹೊಂಡ ನಿರ್ಮಾಣ, ಪಶುಗಳಿಗೆ ಶಡ್ ನಿರ್ಮಾಣಕ್ಕೆ ಪಡೆಯಿರಿ 5 ಲಕ್ಷದವರೆಗೆ ಧನ ಸಹಾಯ; ಹೀಗೆ ಅರ್ಜಿ ಸಲ್ಲಿಸಿ

Bengaluru, Karnataka, India
Edited By: Satish Raj Goravigere

ಕೃಷಿ ಕುಟುಂಬಗಳ (agriculture family) ಜೀವನೋಪಾಯಕ್ಕಾಗಿ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದ್ದು ಈ ಮೂಲಕ ಕೃಷಿಯನ್ನೇ ಮೆಚ್ಚಿಕೊಂಡು ಇರುವ ರೈತರಿಗೆ ಉಪಕಸುಬು ಮಾಡಲು ನೆರವು ನೀಡಲಾಗುವುದು

ಈ ಬಾರಿ ರಾಜ್ಯದಲ್ಲಿ ವರ್ಷದಂತೆ ಮಳೆ ಆಗಿಲ್ಲ. ಹಾಗಾಗಿ ಮಳೆಯನ್ನೇ ನಂಬಿಕೊಂಡು ಇರುವ ರೈತನ ಬೆಳೆ ಹಾನಿ (farmers lost crop) ಆಗಿದೆ. ಅಲ್ಲದೆ ಹೊಸ ವರ್ಷಕ್ಕೆ ಹೊಸ ಫಸಲು ಪಡೆಯುವುದಕ್ಕೂ ಕೂಡ ಕಷ್ಟವಾಗುತ್ತಿದೆ.

Farmer Scheme

ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ಜೀವನೋಪಾಯವನ್ನು ಒದಗಿಸಿಕೊಡಲು ಪ್ರಯತ್ನಿಸುತ್ತಿದೆ ಎನ್ನಬಹುದು.

ಉಚಿತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು! ಈ ದಾಖಲೆಗಳು ಇದ್ದವರು ಅರ್ಜಿ ಸಲ್ಲಿಸಿ

ಬರಗಾಲ ಪರಿಸ್ಥಿತಿ ನಿಯಂತ್ರಣಕ್ಕೆ ನರೇಗಾ ಯೋಜನೆ! (MGNREGA)

ಈಗಾಗಲೇ ರೈತರಿಗಾಗಿಯೇ ಜಾರಿಗೆ ಬಂದಿರುವ ನರೇಗಾ (Mahatma Gandhi National Rural employment act) ಯೋಜನೆಯ ಅಡಿಯಲ್ಲಿ ಇನ್ನಷ್ಟು ಬೆನಿಫಿಟ್ ಗಳನ್ನು ಸೇರಿಸಲಾಗಿದ್ದು ರೈತರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು.

ರಾಜ್ಯದಲ್ಲಿ ಸುಮಾರು 106 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಇಂತಹ ಸ್ಥಳದಲ್ಲಿ ವಾಸಿಸುವ ರೈತರಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲವು ಪ್ರಮುಖ ಘೋಷಣೆಯನ್ನು ಮಾಡಿದೆ.

ಉದ್ಯೋಗ ಖಾತ್ರಿ ಯೋಜನೆ! (Job guarantee scheme)

ಕೃಷಿ ಕಾರ್ಮಿಕರು (agriculture workers) ತಮ್ಮ ಜೀವನೋಪಾಯಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತ್ನಿಂದ (Gram Panchayat) 100 ದಿನಗಳವರೆಗೆ ಉದ್ಯೋಗ ಖಾತ್ರಿಯನ್ನು ಪಡೆದುಕೊಳ್ಳುತ್ತಾರೆ.

ಒಂದು ವೇಳೆ ಉದ್ಯೋಗ ಸಿಗದೇ ಇದ್ದಲ್ಲಿ ಆ ದಿನದ ಹಣವನ್ನು ಗ್ರಾಮ ಪಂಚಾಯತ್ ಮೂಲಕ ಪಡೆಯಬಹುದು. ಇದೀಗ ಕೇಂದ್ರ ಸರ್ಕಾರಕ್ಕೆ ಈ ಅವಧಿಯನ್ನು ಹೆಚ್ಚಿಸುವ ಸಲುವಾಗಿ ಮನವಿ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ನೂರು ದಿನಗಳ ಉದ್ಯೋಗ ಖಾತ್ರಿಯನ್ನು 150 ದಿನಗಳಿಗೆ ಹೆಚ್ಚಿಸಲಾಗಿದೆ.

ಅಂತೂ ಬಿಡುಗಡೆ ಆಯ್ತು 4ನೇ ಕಂತಿನ ಗೃಹಲಕ್ಷ್ಮಿ ಹಣ; ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ

Gram Panchayatನರೇಗಾ ಯೋಜನೆಯ ಅಡಿ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ!

ರಾಜ್ಯದ ರೈತರ ಸುಸ್ಥಿರ ಅಭಿವೃದ್ಧಿ ಮಂತ್ರವನ್ನು ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರ ನರೇಗಾ ಯೋಜನೆಯ ಅಡಿಯಲ್ಲಿ ಹೊಸ ಕಾರ್ಯ ಚಟುವಟಿಕೆಯನ್ನು ಅಳವಡಿಸಿದೆ. ರೈತರು ಉಪಕಸುಬು ಮಾಡಲು ಕೂಡ ನೆರವು ನೀಡಲಾಗುವುದು. ಈ ಯೋಜನೆಯ ಅಡಿಯಲ್ಲಿ ಗ್ರಾಮದಲ್ಲಿ ವಾಸಿಸುವ ಜನರು 5 ಲಕ್ಷಗಳವರೆಗೆ ವೈಯಕ್ತಿಕ ಕಾಮಗಾರಿ (facility of personal work) ಧನ ಪಡೆದುಕೊಳ್ಳಲು ಸಾಧ್ಯವಿದೆ.

ಹೊಸ ರೇಷನ್ ಕಾರ್ಡ್ ವಿತರಣೆ! ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡಿದ ಸರ್ಕಾರ

ಯಾರಿಗೆ ಸಿಗಲಿದೆ ವೈಯಕ್ತಿಕ ಕಾಮಗಾರಿ ನೆರವು?

MGNREG scheme ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಾಗಿ ಪ್ರತಿ ಕುಟುಂಬಕ್ಕೆ 2.50 ಲಕ್ಷ ರೂಪಾಯಿಗಳನ್ನು ಈ ಹಿಂದೆ ನೀಡಲಾಗುತ್ತಿತ್ತು. ಈಗ ಈ ನೆರವು ಹಣವನ್ನು 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

ಭೂ ರಹಿತ ಕೃಷಿ ಕಾರ್ಮಿಕರು, ಹಸು ಮೇಕೆ ಕುರಿ ಮೊದಲಾದ ಸಾಕು ಪ್ರಾಣಿಗಳನ್ನು ಸಾಕಿ ಸ್ವಂತ ಉದ್ಯೋಗ ನಿರ್ಮಾಣ ಮಾಡಲು ಇಚ್ಛಿಸುವವರು, ವಯಕ್ತಿಕ ಕಾಮಗಾರಿ ನೆರವು ಪಡೆದುಕೊಳ್ಳಬಹುದು.

ಸಾಕು ಪ್ರಾಣಿಗಳ ಶೆಡ್ ನಿರ್ಮಾಣ, ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ತೋಟಗಾರಿಕೆ, ಮತ್ತು ಅರಣ್ಯ ಬೆಳೆಗಳನ್ನು ಬೆಳೆಯುವುದು ಮೊದಲಾದವುಗಳಿಗೆ ವೈಯಕ್ತಿಕ ಕಾಮಗಾರಿ ನೆರವು ಪಡೆಯಲು ಅವಕಾಶವಿದೆ.

ವೈಯಕ್ತಿಕ ಕಾಮಗಾರಿ ನೆರವು ಯಾರಿಗೆ ಸಿಗಲಿದೆ?

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು (below poverty line family) , ಎಸ್ ಸಿ, ಎಸ್ ಟಿ ಪಂಗಡಕ್ಕೆ ಸೇರಿದವರು, ಮಹಿಳಾ ಪ್ರಧಾನ ಕುಟುಂಬದವರು, ದಿವ್ಯಾಂಗ ಕೃಷಿಕರು, ಭೂ ಸುಧಾರಣೆ ಮತ್ತು ವಸತಿ ಯೋಜನೆಯ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಮೊದಲಾದವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇನ್ಮುಂದೆ ಇಂತಹವರಿಗೆ ಅನ್ನಭಾಗ್ಯ ಯೋಜನೆ ಹಣ ಸಿಗೋಲ್ಲ! ಸರ್ಕಾರದ ದೃಢ ನಿರ್ಧಾರ

ವಯಕ್ತಿಕ ಕಾಮಗಾರಿ ನೆರವು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ರೈತರು ನೆರವು ಪಡೆಯಲು ಜಾಬ್ ಕಾರ್ಡ್ (job card) ಹೊಂದಿರುವುದು ಕಡ್ಡಾಯ. 18 ವರ್ಷ ಮೇಲ್ಪಟ್ಟವರು ಗ್ರಾಮ ಪಂಚಾಯತ್ ನಲ್ಲಿ ಅಗತ್ಯವಿರುವ ದಾಖಲೆಗಳನ್ನು ನೀಡಿ ಫಾರಂ 1 ಭರ್ತಿ ಮಾಡಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಜಾಬ್ ಕಾರ್ಡ್ ಪಡೆದುಕೊಳ್ಳಬಹುದು.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವ ಸಲುವಾಗಿ ಫಾರ್ಮ್ ನಂಬರ್ 6 ಅನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ.

ವೈಯಕ್ತಿಕ ಕಾಮಗಾರಿ ನೆರವನ್ನು ಯಾವ ಕಾಮಗಾರಿಗೆ ಪಡೆದುಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ಮೊತ್ತವನ್ನು ನಿಗದಿ ಪಡಿಸಲಾಗುವುದು. ಹತ್ತು ಸಾವಿರ ರೂಪಾಯಿಗಳಿಂದ 1.50 ಲಕ್ಷ ರೂಪಾಯಿಗಳ ವರೆಗೂ ಕೂಡ ನೆರವು ಪಡೆಯಬಹುದಾಗಿದೆ .ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿ.

Such Farmers will get Rs 5 lakh From This Scheme, Apply Today