ಕೃಷಿ ಭೂಮಿ ಇಲ್ಲದ ರೈತರು ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳೋ ಅವಕಾಶ! ಅರ್ಜಿ ಸಲ್ಲಿಸಿ

Story Highlights

ಕೃಷಿ ಭೂಮಿ (agriculture land) ಇಲ್ಲದೆ ಇರುವ ರೈತರು ಸರ್ಕಾರದ ಗೋಮಾಳವನ್ನು ಸಾಗುವಳಿ ಭೂಮಿಯಾಗಿ ಪರಿವರ್ತಿಸಿಕೊಂಡು ತನ್ನ ಜೀವನೋಪಾಯಕ್ಕಾಗಿ ಈ ಭೂಮಿಯನ್ನು ಬಳಸಿಕೊಳ್ಳುತ್ತಿರಬಹುದು

ಕೃಷಿ ಭೂಮಿ (agriculture land) ಹೊಂದಿಲ್ಲದೆ ಇರುವ ರೈತರು ಸರ್ಕಾರದ ಗೋಮಾಳದಲ್ಲಿ ಕೆಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರೆ, ಆ ಅಕ್ರಮ ಜಾಗವನ್ನು ಸಕ್ರಮವಾಗಿಸಿಕೊಂಡು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸರಕಾರ ಇದೀಗ ಮತ್ತೆ ಅವಕಾಶ ನೀಡಿದೆ.

ಇದು ಬಹಳ ಹಳೆಯ ಪದ್ಧತಿ (old tradition). ಕೃಷಿ ಭೂಮಿ (agriculture land) ಇಲ್ಲದೆ ಇರುವ ರೈತರು ಸರ್ಕಾರದ ಗೋಮಾಳವನ್ನು ಸಾಗುವಳಿ ಭೂಮಿಯಾಗಿ ಪರಿವರ್ತಿಸಿಕೊಂಡು ತನ್ನ ಜೀವನೋಪಾಯಕ್ಕಾಗಿ ಈ ಭೂಮಿಯನ್ನು ಬಳಸಿಕೊಳ್ಳುತ್ತಿರಬಹುದು.

ಒಂದು ಗ್ರಾಮಕ್ಕೆ ಎಷ್ಟು ಗೋಮಾಳ (government land) ವನ್ನು ನೀಡಬೇಕು ಎನ್ನುವುದನ್ನು ಕೂಡ ಸರ್ಕಾರ ನಿರ್ಧರಿಸುತ್ತದೆ. ಸಾಗುವಳಿ ಮಾಡುತ್ತಿರುವ ಜಮೀನನ್ನು ಅಕ್ರಮ ಸಕ್ರಮ ಮಾಡಿಕೊಳ್ಳಲು ಸರಕಾರ ರೈತರಿಗೆ ಅವಕಾಶ ನೀಡಿದೆ.

ಕೃಷಿ ಮಾಡೋ ಇಂತಹ ರೈತರಿಗೆ ಸಿಗಲಿದೆ 5 ಲಕ್ಷ ಧನ ಸಹಾಯ! ಈ ರೀತಿ ಅರ್ಜಿ ಸಲ್ಲಿಸಿ

ಯಾವುದು ಸರ್ಕಾರದ ಭೂಮಿ?

ದನಕರಗಳಿಗೆ ನೀವು ಬಿಟ್ಟ ಗೋಮಾಳ ಇರಬಹುದು ಅಥವಾ ಯಾವುದೇ ಗ್ರಾಮದಲ್ಲಿ ಬಳಕೆ ಆಗದೆ ಇರುವ ಅನುಪಯುಕ್ತ ಭೂಮಿ ಇರಬಹುದು, ಇದನ್ನು ಸರ್ಕಾರದ ಭೂಮಿ ಎಂದು ಪರಿಗಣಿಸಲ್ಪಡುತ್ತದೆ.

ಭೂ ಕಂದಾಯ ನಿಯಮ 1966, 97 (1) ಪ್ರಕಾರ, ಪ್ರತಿ ಗ್ರಾಮದಲ್ಲಿ ನೂರು ಜಾನುವಾರುಗಳಿಗೆ 12 ಹೆಕ್ಟೇರ್ ಭೂಮಿಯನ್ನು ಸರ್ಕಾರ ಗೋಮಾಳವಾಗಿ ಬಿಟ್ಟಿರುತ್ತದೆ.

ಈ ರೀತಿ ಗೋಮಾಳಕ್ಕೆ ಎಂದು ಬಿಟ್ಟಿರುವ ಜಾಗ 12 ಹೆಕ್ಟರ್ಗಿಂತಲೂ ಹೆಚ್ಚಿಗೆ ಇದ್ದರೆ, ಆ ಹೆಚ್ಚುವರಿ ಜಾಗದಲ್ಲಿ ಭೂ ರಹಿತ ಕೃಷಿಕರು (landless cultivators) ಸಾಗುವಳಿ ಮಾಡಿಕೊಂಡಿದ್ದರೆ ಅದನ್ನು ಪರಿಶೀಲಿಸಿ ಅಕ್ರಮ ಸಕ್ರಮಕ್ಕೆ ಅವಕಾಶ ನೀಡಲಾಗುತ್ತದೆ. ರಾಜ್ಯ ಭೂ ಮಂಜೂರಾತಿ ಸಮಿತಿ ಫಲಾನುಭವಿಗಳ ಭೂಮಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ.

ಉಚಿತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು! ಈ ದಾಖಲೆಗಳು ಇದ್ದವರು ಅರ್ಜಿ ಸಲ್ಲಿಸಿ

Property Documentsಯಾರಿಗೆ ಸಿಗುತ್ತದೆ ಗೋಮಾಳದ ಜಮೀನು? (Who can get government land)

*ಗೋಮಾಳವನ್ನು ಹೊರತುಪಡಿಸಿ ಹೆಚ್ಚುವರಿ ಜಾಗ ಇದ್ದರೆ ಮಾತ್ರ ಆ ಜಾಗದಲ್ಲಿ ಕೃಷಿ ಚಟುವಟಿಕೆ ಮಾಡುವವರಿಗೆ ಸಕ್ರಮ ಜಮೀನು ಪತ್ರ ನೀಡಲಾಗುವುದು.

*ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳು ಗೋಮಾಳದ ಜಮೀನು ಬಳಕೆ ಮಾಡಿಕೊಳ್ಳುವಂತಿಲ್ಲ

*ಕೃಷಿ ಚಟುವಟಿಕೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸ ಮಾಡಿದರೂ ಆ ಜಮೀನು ರೈತರ ಪಾಲಾಗುವುದಿಲ್ಲ.

*ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು ಭೂ ರಹಿತ ಮಹಿಳಾ ರೈತರು ಗೋಮಾಳದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರೆ ಸುಲಭವಾಗಿ ಅರ್ಜಿ ಸಲ್ಲಿಸಿ ಹಕ್ಕು ಪತ್ರ ಪಡೆಯಬಹುದು.

ಅಂತೂ ಬಿಡುಗಡೆ ಆಯ್ತು 4ನೇ ಕಂತಿನ ಗೃಹಲಕ್ಷ್ಮಿ ಹಣ; ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ

*ಈಗಾಗಲೇ ಸ್ವಂತ ಜಮೀನು ಹೊಂದಿರುವವರು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.

ಈ ಮೇಲಿನ ನಿಬಂಧನೆಗಳನ್ನು ಒಪ್ಪಿಕೊಂಡು ಗೋಮಾಳದ ಹೆಚ್ಚುವರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರು ಅರ್ಜಿ ಸಲ್ಲಿಸಿ ಅಕ್ರಮ ಸಕ್ರಮ ಭೂ ಹಕ್ಕು ಪತ್ರ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ತಹಶೀಲ್ದಾರರ ಕಚೇರಿಗೆ ಭೇಟಿ ನೀಡಬಹುದು.

Farmers who do not have agricultural land, opportunity to own government land

Related Stories